ಬೆಂಗಳೂರು: ಕರ್ನಾಟಕ ಸರ್ಕಾರವು ಗ್ರಾಮೀಣ ರೈತರು ಮತ್ತು ಪಶುಪಾಲಕರಿಗಾಗಿ ಕುರಿ ಮತ್ತು ಮೇಕೆ ಸಾಕಾಣಿಕೆಗೆ (Sheep and Goat Farming) ದೊಡ್ಡ ಪ್ರಮಾಣದ ಆರ್ಥಿಕ ನೆರವು ನೀಡಲು ಹೊಸ ಯೋಜನೆಯನ್ನು ಘೋಷಿಸಿದೆ. ಈ ಯೋಜನೆಯಡಿಯಲ್ಲಿ ಪಶುಗಳಿಗೆ ಶೆಡ್ ನಿರ್ಮಾಣ, ವಿಮಾ ರಕ್ಷಣೆ ಮತ್ತು ವೈಜ್ಞಾನಿಕ ತರಬೇತಿ ಸೌಲಭ್ಯಗಳನ್ನು ಒದಗಿಸಲಾಗುವುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಯೋಜನೆಯ ಪ್ರಮುಖ ಅಂಶಗಳು:
ಶೆಡ್ ನಿರ್ಮಾಣಕ್ಕೆ 5 ಲಕ್ಷ ರೂ. ಸಹಾಯಧನ: ಕುರಿ ಮತ್ತು ಮೇಕೆಗಳಿಗೆ ಸುರಕ್ಷಿತವಾದ ವಸತಿ ಸೌಲಭ್ಯ ಕಲ್ಪಿಸಲು ಈ ನೆರವು ನೀಡಲಾಗುವುದು.
ವಿಮಾ ಮತ್ತು ಪರಿಹಾರ ಯೋಜನೆ: ವಲಸೆ ಕುರಿಗಾರರಿಗೆ 5 ಲಕ್ಷ ರೂ. ವಿಮಾ ಪರಿಹಾರ. ಪಶುಗಳ ಅಕಾಲಿಕ ಮರಣದ ಸಂದರ್ಭದಲ್ಲಿ 3,500 ರೂ. ರಿಂದ 5,000 ರೂ. ವರೆಗೆ ನೆರವು.
ಉಚಿತ ತರಬೇತಿ ಮತ್ತು ವೈದ್ಯಕೀಯ ಸಹಾಯ: ಕುರಿ-ಮೇಕೆ ಸಾಕಾಣಿಕೆಯ ವೈಜ್ಞಾನಿಕ ವಿಧಾನಗಳ ತರಬೇತಿ. ಉಚಿತ ಲಸಿಕೆಗಳು, ಜಂತುನಾಶಕ ಔಷಧಿಗಳು ಮತ್ತು ತೂಕ ಮಾಪನ ಯಂತ್ರಗಳ ವಿತರಣೆ.
ವಿಶೇಷ ಯೋಜನೆಗಳು:
- “10+1 ಘಟಕ” ಯೋಜನೆ: ಹಿಂದುಳಿದ ವರ್ಗದವರಿಗೆ 10 ಕುರಿ/ಮೇಕೆ + 1 ಟಗರು ಉಚಿತವಾಗಿ ನೀಡಲಾಗುವುದು.
- “ಅಮೃತ ಸ್ವಾಭಿಮಾನಿ ಯೋಜನೆ”: 20 ಕುರಿ/ಮೇಕೆ + 1 ಟಗರು ಘಟಕಕ್ಕೆ 1.75 ಲಕ್ಷ ರೂ. ಸಹಾಯಧನ.
ಅರ್ಜಿ ಸಲ್ಲಿಸುವ ವಿಧಾನ:
- ಅರ್ಹತೆ: ಗ್ರಾಮೀಣ, ಆದಿವಾಸಿ ಮತ್ತು ಸಣ್ಣ ರೈತರು.
- ಅರ್ಜಿ ಪ್ರಕ್ರಿಯೆ: kswdcl.karnataka.gov.in ವೆಬ್ಸೈಟ್ನಲ್ಲಿ ಆನ್‌ಲೈನ್ ಅರ್ಜಿ ಸಲ್ಲಿಸಿ.
- ಅಗತ್ಯ ದಾಖಲೆಗಳು: ಆಧಾರ್ ಕಾರ್ಡ್, ಜಮೀನು ದಾಖಲೆಗಳು, ಬ್ಯಾಂಕ್ ಖಾತೆ ವಿವರ ಮತ್ತು ಪಶುಪಾಲನೆ ಸಂಬಂಧಿತ ದಾಖಲೆಗಳು.
ಯೋಜನೆಯ ಪ್ರಯೋಜನಗಳು:
- ಬರಪ್ರದೇಶಗಳ ರೈತರಿಗೆ ಹೆಚ್ಚಿನ ಆದಾಯದ ಮೂಲ.
- ಪಶುಗಳ ಆರೋಗ್ಯ ಮತ್ತು ಉತ್ಪಾದಕತೆಯಲ್ಲಿ ಸುಧಾರಣೆ.
- ರಾಜ್ಯದಲ್ಲಿ ಪಶುಪಾಲನೆಯನ್ನು ಉತ್ತೇಜಿಸುವುದು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.