ಅಮುಲ್ ಫ್ರಾಂಚೈಸಿ ಪಡೆಯಲು ಅವಕಾಶ, ಪ್ರತಿ ತಿಂಗಳಿಗೆ ₹60,000 ಲಾಭ ಗಳಿಸುವ ಆಫರ್!

Picsart 25 05 23 00 11 46 807

WhatsApp Group Telegram Group

ಒಂದೂವರೆ ಲಕ್ಷ ಹಣವಿದ್ದರೆ ಸಾಕು! ಅಮುಲ್ ಫ್ರಾಂಚೈಸಿ ಮೂಲಕ ತಿಂಗಳಿಗೆ ₹60,000 ಲಾಭ ಗಳಿಸುವ ಅವಕಾಶ!

ಈ ದಿನಗಳಲ್ಲಿ ಉದ್ಯೋಗವನ್ನು ನಿರೀಕ್ಷಿಸುವುದಕ್ಕಿಂತ ಸ್ವತಂತ್ರವಾಗಿ ಉದ್ಯಮ ಆರಂಭಿಸುವ ಆಸಕ್ತಿ ಯುವಜನತೆಯಲ್ಲಿ ಹೆಚ್ಚುತ್ತಿದೆ. ಆದರೆ, ದೊಡ್ಡ ಹೂಡಿಕೆ, ವ್ಯಾಪಾರದ ಜ್ಞಾನ ಮತ್ತು ತಾಂತ್ರಿಕ (Knowledge and technology) ಸಹಾಯದ ಕೊರತೆಯು ಅವರನ್ನು ಹಿಂದೆ ಉಳಿಯುವಂತೆ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ, ಕಡಿಮೆ ಹೂಡಿಕೆಯಲ್ಲಿ ಹೆಚ್ಚು ಲಾಭ ನೀಡುವ, ವಿಶ್ವಾಸಾರ್ಹ ಬ್ರ್ಯಾಂಡ್‌ನ(Brand) ಸಹಕಾರದೊಂದಿಗೆ ಆರಂಭಿಸಬಹುದಾದ ವ್ಯವಹಾರ ಮಾದರಿಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಹಾಗಿದ್ದರೆ ಕಡಿಮೆ ಹೂಡಿಕೆಯಲ್ಲಿ ಹೆಚ್ಚು ಲಾಭ ನೀಡುವ ವ್ಯವಹಾರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೌದು, ಇಂತ ಒಂದು ಆಕರ್ಷಕ ಅವಕಾಶವನ್ನು ಅಮುಲ್ ನೀಡುತ್ತಿದೆ. “ಟೇಸ್ಟ್ ಆಫ್ ಇಂಡಿಯಾ” (Taste of India) ಎಂದೇ ಖ್ಯಾತಿ ಪಡೆದಿರುವ ಅಮುಲ್ ಬ್ರ್ಯಾಂಡ್, ಇಂದಿನ ದಿನಗಳಲ್ಲಿ ಕೇವಲ ದೈನಂದಿನ ಹಾಲು ಉತ್ಪನ್ನಗಳ ಪೂರೈಕೆದಾರರಷ್ಟೇ ಅಲ್ಲದೇ, ಸಾವಿರಾರು ಸಣ್ಣ ಉದ್ಯಮಿಗಳಿಗೆ (Small employer’s) ಬದುಕು ಕಟ್ಟಿಕೊಡುವ ಮೂಲವಾಗುತ್ತಿದೆ.

ಅಮುಲ್ ಫ್ರಾಂಚೈಸಿ(Amul Franchise) :

ಕಡಿಮೆ ಹೂಡಿಕೆಯಲ್ಲಿ ಹೆಚ್ಚು ಲಾಭ
ಅಮುಲ್ ಫ್ರಾಂಚೈಸಿ ಆರಂಭಿಸಲು ₹1.5 ಲಕ್ಷದಿಂದ ₹6 ಲಕ್ಷದವರೆಗೆ ಹೂಡಿಕೆ ಮಾಡಬೇಕಾಗುತ್ತದೆ. ಈ ವೆಚ್ಚದಲ್ಲಿ,
ಅಂಗಡಿಯ ಅಲಂಕಾರ.
ಫ್ರೀಜರ್‌ಗಳು (Freezers) ಮತ್ತು ಇತರ ಉಪಕರಣಗಳು.
ಬದ್ಧತಾ ಠೇವಣಿಯ ಬಗ್ಗೆ ಗಮನ ಹರಿಸಬೇಕು.

ವಿಶೇಷವಾಗಿ ಗಮನಿಸಬೇಕಾದ ಅಂಶವೆಂದರೆ, ಅಮುಲ್ ಯಾವುದೇ ರಾಯಭಾರಿ ಶುಲ್ಕ (royalty fee) ಅಥವಾ ಲಾಭದ ಪಾಲನ್ನು ಕೇಳುವುದಿಲ್ಲ. ನೀವು ಮಾಡುವ ಲಾಭ ಸಂಪೂರ್ಣವಾಗಿ ನಿಮ್ಮದಾಗಿರುತ್ತದೆ.

ವ್ಯಾಪಾರದ ಮಾದರಿಗಳು: ನಿಮ್ಮ ಬಜೆಟ್‌ಗೆ (Budget) ಅನುಗುಣವಾಗಿ ಆಯ್ಕೆ

1. ಅಮುಲ್ ಆದ್ಯತಾ ಔಟ್‌ಲೆಟ್ / ಕಿಯೋಸ್ಕ್ (Preferred Outlet / Kiosk),
ಜಾಗದ ಅಗತ್ಯತೆ: 100-150 ಚದರ ಅಡಿ.
ಹೂಡಿಕೆ: ₹1.5 ರಿಂದ ₹2 ಲಕ್ಷ.
ಲಾಭಾಂಶ: ಅಮುಲ್ ಉತ್ಪನ್ನಗಳ ಮಾರಾಟದಲ್ಲಿ ಶೇಕಡಾ 20 ರಿಂದ 50ರಷ್ಟು ಲಾಭ.

2. ಅಮುಲ್ ಐಸ್ ಕ್ರೀಮ್ ಸ್ಕೂಪಿಂಗ್ ಪಾರ್ಲರ್ (Scooping Parlour):
ಜಾಗದ ಅಗತ್ಯತೆ: ಹೆಚ್ಚು ಸಂಚಾರವಿರುವ ಪ್ರದೇಶ (ಬೆಸ್ಟ್: ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ).
ಹೂಡಿಕೆ: ₹4 ರಿಂದ ₹6 ಲಕ್ಷ.
ಭದ್ರತಾ ಠೇವಣಿ: ₹50,000 (ಮರುಪಾವತಿ ಆಗದು)
ಲಾಭಾಂಶ: ಐಸ್ ಕ್ರೀಮ್, ಪಿಜ್ಜಾ, ಸ್ಯಾಂಡ್‌ವಿಚ್‌ ಮಾರಾಟದಲ್ಲಿ ಶೇಕಡಾ 50ರಷ್ಟು ಲಾಭ.

ಅಮುಲ್ ಫ್ರಾಂಚೈಸಿಯ ಆಕರ್ಷಕ ಅಂಶಗಳು ಯಾವುವು?:

ಬ್ರ್ಯಾಂಡfranchise)(Brand trust) :
ಅಮುಲ್ ಭಾರತದ ನಂಬಿಕಾರ್ಹ ಹಾಲು ಉತ್ಪನ್ನ ಬ್ರ್ಯಾಂಡ್. ಅದರಲ್ಲೂ ಗ್ರಾಹಕರಿಗೆ ಇವೆಲ್ಲಾ ತಕ್ಷಣದ ಆಕರ್ಷಣೆಯ ಕೇಂದ್ರ.
ಹೂಡಿಕೆಗೆ (Investment) ಅನುಗುಣವಾದ ವೇದಿಕೆ:
ಬಡಾವಣೆಗಳಲ್ಲಿ ಅಥವಾ ನಗರಗಳ ವ್ಯಾಪಾರದ ಕೇಂದ್ರಗಳಲ್ಲಿ ಸಹ ಇಂತಹ ಔಟ್‌ಲೆಟ್‌ಗಳು ಯಶಸ್ವಿಯಾಗಿವೆ.
ತಾಂತ್ರಿಕ ಬೆಂಬಲ(Technology help) :
ಉಚಿತ ತರಬೇತಿ, ಸೈನ್‌ಬೋರ್ಡ್‌, ಉಪಕರಣಗಳ ರಿಯಾಯಿತಿ ಅಮುಲ್‌ನಿಂದಲೇ ಸಿಗುತ್ತದೆ.

ಹಾಗಿದ್ದರೆ ಆದಾಯದ ಸಾಧ್ಯತೆ ಎಷ್ಟಿರುತ್ತದೆ?:

ಡೀಲರ್‌ಗಳ ಪ್ರಕಾರ, ಸಣ್ಣ ಕಿಯೋಸ್ಕ್‌ಗಳಿಂದ ತಿಂಗಳಿಗೆ ₹10,000 ಗಳಿಸಬಹುದಾದರೆ, ದೊಡ್ಡ ಸ್ಕೂಪಿಂಗ್ (Scooping) ಪಾರ್ಲರ್‌ಗಳಿಂದ ₹60,000 ಅಥವಾ ಹೆಚ್ಚು ಲಾಭ ಗಳಿಸುವುದು ಸಾಧ್ಯ. ಕೆಲ ಪಾರ್ಲರ್‌ಗಳು ತಿಂಗಳಿಗೆ ₹5 ರಿಂದ ₹10 ಲಕ್ಷವರೆಗೆ ಮಾರಾಟ ಮಾಡುತ್ತಿರುವ ವರದಿಗಳೂ ಇವೆ.

ಅಮುಲ್ ಫ್ರಾಂಚೈಸಿ ಪ್ರಾರಂಭಿಸಲು ಹೇಗೆ ಅರ್ಜಿ ಸಲ್ಲಿಸಬೇಕು?:

ಅಮುಲ್ ವ್ಯವಹಾರ ಪ್ರಾರಂಭಿಸಲು ಯಾವುದೇ ವಿಶೇಷ ಪದವಿ ಅಥವಾ ಉದ್ಯಮ ಅನುಭವದ ಅಗತ್ಯವಿಲ್ಲ. ಧೈರ್ಯ, ಸಮಯ, ಶ್ರಮ ಮತ್ತು ಪ್ರಾಮಾಣಿಕ ಹೂಡಿಕೆ ಇದ್ದರೆ ಸಾಕು. ಅರ್ಜಿ (Apllication) ಸಲ್ಲಿಸಲು ಅಮುಲ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ ನೇರವಾಗಿ ಅವರ ಮಾರ್ಕೆಟಿಂಗ್ ಅಧಿಕಾರಿಗಳೊಂದಿಗೆ ಸಂಪರ್ಕಿಸಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ನಿಮ್ಮಲ್ಲಿ ಧೈರ್ಯ ಮತ್ತು ₹1.5 ಲಕ್ಷ ಹಣವಿದ್ದರೆ, ನೀವು ಅಮುಲ್ ಫ್ರಾಂಚೈಸಿಯ(Amul franchise) ಮೂಲಕ ನಿಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಬಹುದು. ಭಾರತದಲ್ಲಿ ದಿನನಿತ್ಯದ ಉಪಯೋಗದ ಉತ್ಪನ್ನಗಳಾದ ಹಾಲು, ಮೊಸರು, ಐಸ್ ಕ್ರೀಮ್ ಮಾರಾಟದಿಂದ ಲಾಭಗಳಿಸುವ ಅವಕಾಶವನ್ನು ನೀವು ಪಡೆಯಬಹುದು.

ಹೆಚ್ಚಿನ ಮಾಹಿತಿಗೆ: www.amul.com

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!