Picsart 24 02 11 16 17 10 098 scaled

ಕರ್ನಾಟಕ ಒನ್ ಫ್ರಾಂಚೈಸಿಗೆ ಅರ್ಜಿ ಆಹ್ವಾನ! ನಿಮ್ಮ ಊರಲ್ಲೇ ಫ್ರಾಂಚೈಸಿ ಪಡೆಯಿರಿ

WhatsApp Group Telegram Group

ಕರ್ನಾಟಕ ಒನ್ ಪೋರ್ಟಲ್ ಒಂದು ಆನ್‌ಲೈನ್ ಪ್ಲಾಟ್‌ಫಾರ್ಮ್ ಆಗಿದ್ದು(Online flatform), ಇದು ಒಂದೇ ಪೋರ್ಟಲ್ ಅಡಿಯಲ್ಲಿ ನಾಗರಿಕ-ಕೇಂದ್ರಿತ ಸೇವೆಗಳನ್ನು ಸುಲಭಗೊಳಿಸಲು ಕರ್ನಾಟಕ ಸರ್ಕಾರದಿಂದ ಸ್ಥಾಪಿಸಲ್ಪಟ್ಟಿದೆ. ಕರ್ನಾಟಕ ಸರ್ಕಾರವು(Karnataka government) ನೀಡುವ ಎಲ್ಲಾ ಸೇವೆಗಳನ್ನು ಪ್ರವೇಶಿಸಲು ಜನರು ಪೋರ್ಟಲ್‌ನಲ್ಲಿ (portal) ನೋಂದಾಯಿಸಿಕೊಳ್ಳಬಹುದು. ಈ ಸೇವೆಗಳನ್ನು ಕರ್ನಾಟಕ ಸರ್ಕಾರವು ಒದಗಿಸುವ ಸರ್ಕಾರದಿಂದ ನಾಗರಿಕರಿಗೆ (G2C) ಸೌಲಭ್ಯಗಳ ಅಡಿಯಲ್ಲಿ ಸಂಯೋಜಿಸಲಾಗಿದೆ. ಕರ್ನಾಟಕ ಒನ್ ಯೋಜನೆಯು(Karnataka One Yojana) ಯಾವುದೇ ಸಮಯದಲ್ಲಿ, ಎಲ್ಲಿಯಾದರೂ, ನಾಗರಿಕ-ಕೇಂದ್ರಿತ ಸೇವೆಗಳಿಗೆ ಒಂದೇ ಇಂಟರ್ಫೇಸ್ ಅನ್ನು ರಚಿಸುವ ಗುರಿಯನ್ನು ಹೊಂದಿದೆ. ವಿವಿಧ ವಿತರಣಾ ಚಾನೆಲ್‌ಗಳು ಮತ್ತು ಐಟಿ ಸಂಪನ್ಮೂಲಗಳನ್ನು ಬಳಸಿಕೊಂಡು ಸಮಗ್ರ, ಪ್ರಾಯೋಗಿಕ, ಸುರಕ್ಷಿತ, ಸುಸ್ಥಿರ ಮತ್ತು ನಾಗರಿಕ ಸ್ನೇಹಿ ರೀತಿಯಲ್ಲಿ ಈ ಸೌಲಭ್ಯಗಳನ್ನು ಸರ್ಕಾರ ಮತ್ತು ಖಾಸಗಿ ವ್ಯವಹಾರಗಳು ಒದಗಿಸುತ್ತವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ಒನ್ ನಿಂದ ಪಡೆಯಬಹುದಾದ ಸೇವೆಗಳು :

ಕರ್ನಾಟಕ ಒನ್ ರಾಜ್ಯ ಸರ್ಕಾರದ ಬಹು ಸೇವೆಗಳನ್ನು ಒದಗಿಸುತ್ತದೆ. ಸಾಮಾನ್ಯ ನಿವಾಸಿಗಳಿಗೆ ಈ ವೆಬ್ ಗೇಟ್‌ವೇ ಮೂಲಕ ಕೆಳಗಿನ ಸೇವೆಗಳು ಲಭ್ಯವಿವೆ.

ಆಧಾರ್‌ಗಾಗಿ ಸೇವೆಗಳು
ಆಯುಷ್ಮಾನ್ ಭಾರತ್ (ಆರೋಗ್ಯ ಇಲಾಖೆ ಸೇವೆ)
ಚುನಾವಣಾ ಆಯೋಗಗಳಿಗೆ ಸೇವೆಗಳು
ನಾಡಕಚೇರಿ (ಕಂದಾಯ ಇಲಾಖೆ)
ಫ್ಯಾನ್‌ಗಳು, ಟ್ಯೂಬ್‌ಗಳು ಮತ್ತು ಬಲ್ಬ್‌ಗಳ ಮಾರಾಟ
ಇ-ಸ್ಟಾಂಪಿಂಗ್
ಪುರಸಭೆಯ ಸಹಯೋಗ ಸೇವೆಗಳು
ಆಹಾರ ಆಧಾರಿತ ಸೇವೆಗಳು
ನಾಗರಿಕ ಸರಬರಾಜು
ಎಕ್ಸೈಡ್ ಜೀವ ವಿಮಾ ಪ್ರೀಮಿಯಂ ಪಾವತಿ (ವಿಮೆ)
ಸಾರಿಗೆ
ನಗರಾಭಿವೃದ್ಧಿ ಪ್ರಾಧಿಕಾರ (BUDA ಗಾಗಿ ಶುಲ್ಕ ವಿತರಣೆ)
ಸರ್ಕಾರಿ ಇಲಾಖೆಯ ಅರ್ಜಿ ನಮೂನೆ ಬಿಡುಗಡೆ
ಉದ್ಯೋಗ ಎಚ್ಚರಿಕೆಗಳಿಗಾಗಿ ನೋಂದಣಿ
ಪೊಲೀಸ್ ಇಲಾಖೆ ಒದಗಿಸುವ ಸೇವೆಗಳು
ಉಪಯುಕ್ತತೆಗಳು (ವಿದ್ಯುತ್, ನೀರು ಮತ್ತು ದೂರವಾಣಿ)
ಪಾಸ್ಪೋರ್ಟ್ ನೆರವು
ಹೆಚ್ಚುವರಿ ಮೂರನೇ ವ್ಯಕ್ತಿಯ ಸೇವೆಗಳು

whatss

ಕರ್ನಾಟಕ ಒನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನ:

ಇದೀಗ ರಾಜ್ಯದಲ್ಲಿ ಒಟ್ಟು 135ಕ್ಕೂ ಹೆಚ್ಚಿನ ಕರ್ನಾಟಕ ಒನ್ ಕೇಂದ್ರ (Karnataka one kendra) ಆರಂಭಿಸಲು ಸರ್ಕಾರ ನಿರ್ಧರಿಸಿದೆ. ನೀವು ಕೂಡಾ ಏನಾದರೂ ನಿಮ್ಮ ಸ್ವಂತ ದುಡಿಮೆಗಾಗಿ ಬಯಸುತ್ತಿದ್ದರೆ, ಕರ್ನಾಟಕ ಒನ್ ಫ್ರಾಂಚೈಸಿ (Karnataka one franchise) ಅನ್ನು ಪಡೆದುಕೊಳ್ಳುವುದು ಉತ್ತಮ ಬೆಳೆವಣಿಗೆಗೆ ಆಯ್ಕೆ ಎಂದು ಹೇಳಬಹುದು.

ಯಾವುದೇ ದೂರದ ತಾಲೂಕು ಅಥವಾ ಜಿಲ್ಲಾ ಆಡಳಿತ ಕಚೇರಿಗೆ ಹೋಗದೆ ಸ್ಥಳೀಯ ಸೇವಾ ಕೇಂದ್ರದಲ್ಲಿ ಸರ್ಕಾರಿ ಸೇವೆ ಪಡೆದುಕೊಳ್ಳಲು ಇಂದು ಅವಕಾಶ ಮಾಡಿಕೊಡಲಾಗಿದೆ. ಇದೀಗ 135 ಕರ್ನಾಟಕ ವನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನಿಸಲಾಗಿದ್ದು ಆಸಕ್ತರು ಫ್ರಾಂಚೈಸಿ(Franchise) ಪಡೆದುಕೊಳ್ಳಬಹುದು.

ಫ್ರಾಂಚೈಸಿ ಪಡೆದುಕೊಳ್ಳಲು ಯಾರೆಲ್ಲಾ ಅರ್ಹರುಎಂದು ತಿಳಿಯಲು ಕೆಳಗಿನ ನೀಡಿರುವ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ತಿಳಿಯಿರಿ?:

ಭಾರತೀಯ ಪ್ರಜೆ (citizen of India) ಆಗಿರುವ ಕರ್ನಾಟಕದ ನಿವಾಸಿ ಆಗಿರುವ ಯಾರಾದರೂ ಅರ್ಜಿ ಸಲ್ಲಿಸಬಹುದು.

ಯಾವುದೇ ಕಂಪನಿ (any other company) ಅಥವಾ ಎನ್‌ಜಿಓ (NGO) ಪಾಲುದಾರಿಕೆ ಮೂಲಕ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ.

ಡಿಪ್ಲೋಮೋ(Diploma), ಐಟಿಐ (ITI) ಅಥವಾ ತತ್ಸಮಾನ ತಾಂತ್ರಿಕ ಕೋರ್ಸ್ ಗಳಲ್ಲಿ ಉತ್ತೀರ್ಣರಾಗಿರಬೇಕು. ಹೆಚ್ಚಿನ ವಿದ್ಯಾರ್ಹತೆ ಪಡೆದುಕೊಂಡಿರುವವರಿಗೆ ಮೊದಲ ಆದ್ಯತೆ.

ಅರ್ಜಿದಾರನಿಗೆ ಕನ್ನಡ (Kannada) ಮತ್ತು ಇಂಗ್ಲೀಷ್(English) ಎರಡು ಭಾಷೆಯನ್ನು (two languages) ಓದಲು ಬರೆಯಲು ಹಾಗೂ ಕಂಪ್ಯೂಟರ್ನಲ್ಲಿ ಟೈಪ್ (computer typing)ಮಾಡಲು ಗೊತ್ತಿರಬೇಕು. ಜೊತೆಗೆ ಕಂಪ್ಯೂಟರ್ ಜ್ಞಾನ (Computer knowledge)ಹೊಂದಿರಬೇಕು.

ಫ್ರಾಂಚೈಸಿ ಪಡೆಯಲು ಬೇಕಾಗಿರುವ ದಾಖಲೆಗಳು:

ವಿದ್ಯಾರ್ಹತೆ ಪ್ರಮಾಣ ಪತ್ರ
ಆಧಾರ್ ಕಾರ್ಡ್
ಪ್ಯಾನ್ ಕಾರ್ಡ್
ಬ್ಯಾಂಕ್ ಖಾತೆಯ ವಿವರ
ಮೊಬೈಲ್ ಸಂಖ್ಯೆ
ಪಾಸ್ ಪೋರ್ಟ್ ಅಳತೆಯ ಫೋಟೋ
ಅರ್ಜಿ ಶುಲ್ಕ 100 ರೂ.ಗಳು

ಕರ್ನಾಟಕ ಒನ್ ಕೇಂದ್ರ ಫ್ರಾಂಚೈಸಿಗೆ ಅರ್ಜಿ ಸಲ್ಲಿಸುವ ವಿಧಾನ:

ಕರ್ನಾಟಕ ಒನ್ ಫ್ರಾಂಚೈಸಿ ಪಡೆದುಕೊಳ್ಳಲು https://karnatakaone.gov.in/ ಈ ವೆಬ್ ಸೈಟಿಗೆ ಭೇಟಿ ನೀಡಿ.
ಅಗತ್ಯ ಇರುವ ಎಲ್ಲ ಮಾಹಿತಿ ಮತ್ತು ದಾಖಲೆಗಳನ್ನು ಭರ್ತಿ ಮಾಡಿ.
ಅರ್ಜಿ ಶುಲ್ಕವನ್ನು ಕ್ರೆಡಿಟ್ ಕಾರ್ಡ್(credit card) ಅಥವಾ ಡೆಬಿಟ್ ಕಾರ್ಡ್ (debit card), ನೆಟ್ ಬ್ಯಾಂಕಿಂಗ್ (net banking)ಮೂಲಕ ಪಾವತಿ ಮಾಡಬಹುದು.
ಶುಲ್ಕ ಪಾವತಿ ಮಾಡಿದ ನಂತರ ನಿಮ್ಮ ಅರ್ಜಿ ಸ್ವೀಕಾರಗೊಳ್ಳುತ್ತದೆ.
ಅರ್ಜಿಯ ಸ್ಥಿತಿ ತಿಳಿದುಕೊಳ್ಳಲು ಅರ್ಜಿ ಸಲ್ಲಿಸಿದ ನಂತರ ಸ್ವೀಕೃತಿ (acknowledgement) ಪ್ರತಿಯನ್ನು ಪಡೆದುಕೊಳ್ಳಿ. ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories