ಕೇಂದ್ರದಿಂದ ಭರ್ಜರಿ ಆಫರ್ , ಬರೀ 29 ರೂ. ಗೆ ಕೆಜಿ ಅಕ್ಕಿ, ಖರೀದಿಗೆ ಮುಗಿಬಿದ್ದ ಜನ, ಇಲ್ಲಿ ಖರೀದಿಸಿ.

bharat akki

ದಿನನಿತ್ಯದ ಅಡುಗೆ ಬಳಕೆಯಲ್ಲಿ ಅಕ್ಕಿ(Rice)ಯು ಮಹತ್ವದ ಪಾತ್ರವನ್ನು ವಹಿಸುತ್ತದೆ. ಆದರೆ ಇತ್ತೀಚೆಗೆ ಎಲ್ಲಾ ದಿನಸಿ ಸಾಮಾನುಗಳ ಬೆಲೆ ಗಗನಕ್ಕೇರಿದೆ. ಒಳ್ಳೆಯ ಗುಣಮಟ್ಟದ ಅಕ್ಕಿಯನ್ನು ಖರೀದಿಸಲು ಸಾಮಾನ್ಯ ಜನರಿಗೆ ಅಸಾಧ್ಯ ಎನ್ನುವಂತ ಸ್ಥಿತಿ ಬಂದಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರವು ಒಂದು ಉತ್ತಮ ಯೋಜನೆಯನ್ನು ಜಾರಿಗೆ ತಂದಿದೆ. ಅದುವೇ, ಕಡಿಮೆ ಬೆಲೆಯಲ್ಲಿ ಭಾರತ್ ಬ್ರ್ಯಾಂಡ್ ಅಕ್ಕಿ ವಿತರಣ ಯೋಜನೆ. ಭಾರತ್ ಬ್ರಾಂಡ್ ಅಕ್ಕಿ ಒಂದು ಉತ್ತಮ ಗುಣಮಟ್ಟದ ಅಕ್ಕಿಯಾಗಿದೆ, ಇದು ಕೇವಲ 29 ರೂಗಳಿಗೆ ದೊರೆಯುತ್ತದೆ. ಈ ಮಾಹಿತಿಯ ಬಗ್ಗೆ ಸಂಪೂರ್ಣವಾದ ವಿವರವನ್ನು ಪಡೆಯಲು ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಭಾರತ್ ಬ್ರಾಂಡ್ ಅಕ್ಕಿ ವಿತರಣೆಗೆ ಅಧಿಕೃತ ಚಾಲನೆ:

ಇದೇ ಫೆಬ್ರವರಿ 6 ರಂದು ಭಾರತ ಬ್ರಾಂಡ್ ಅಕ್ಕಿ ವಿತರಣೆಯ ಯೋಜನೆಗೆ ಚಾಲನೆ ದೊರೆಯಿತು. ಜನರಿಗೆ ಕಡಿಮೆ ಬೆಲೆಯಲ್ಲಿ ಅಕ್ಕಿಯನ್ನು ನೀಡುವ ಉದ್ದೇಶದಿಂದ ಜಾರಿಗೊಂಡಿರುವ ಈ ಯೋಜನೆಯ ಅಡಿಯಲ್ಲಿ ಮೊಬೈಲ್ ಅಕ್ಕಿ ವ್ಯಾನ್ ಗಳು ಕೂಡ ಉದ್ಘಾಟನೆಗೊಂಡಿದೆ. ಬೆಂಗಳೂರಿನಲ್ಲಿ 5 ಕಡೆ ಈ ಮೊಬೈಲ್ ವ್ಯಾನ್ಗಳ ಸೇವೆ ದೊರೆಯುತ್ತಿದೆ. ಅಷ್ಟೇ ಅಲ್ಲದೆ ಕರ್ನಾಟಕದ ರಾಜ್ಯಾದ್ಯಂತ ಒಟ್ಟು 25 ಮೊಬೈಲ್ ವ್ಯಾನ್ ಗಳು ಸಂಚಾರ ನಡೆಸಿ ಅಕ್ಕಿಯನ್ನು ವಿತರಣೆ ಮಾಡಲು ಮುಂದಾಗಿದೆ. ಮುಂದಿನ ನಾಲ್ಕು ದಿನಗಳು ಆನ್ಲೈನ್ ಆಪ್ ಗಳಲ್ಲೂ ಕೂಡ ಈ 29 ರೂಗಳ ಅಕ್ಕಿ ಮನೆಗೆ ಡೆಲಿವರಿ ಆಗಲಿದೆ. ಎಲ್ಲಾ ರಿಲಯನ್ಸ್ ಮಾರ್ಟ್ ಗಳಲ್ಲಿಯೂ ಈ ಅಕ್ಕಿ ದೊರೆಯುತ್ತದೆ ಎಂದು ನಫೆಡ್ ಮುಖ್ಯಸ್ಥೆ ಜ್ಯೋತಿ ಪಾಟೀಲ್ ಮಾಹಿತಿಯನ್ನು ನೀಡಿದ್ದಾರೆ.

ಭಾರತ್ ಬ್ರ್ಯಾಂಡ್ ಅಕ್ಕಿ ಈಗ ಗ್ರಾಹಕರ ಮನೆ ಬಾಗಿಲಿಗೆ:

ಈ ಉತ್ತಮವಾದ ಬೆಳೆಯ ಅಕ್ಕಿಯಿಂದಾಗಿ ಗಗನಕ್ಕೇರಿದ ಬೆಲೆಗಳಿಗೆ ಕಡಿವಾಣವಾಗಲಿದೆ ! ದಿನಸಿ, ಧಾನ್ಯಗಳ ಬೆಲೆ ಏರಿಕೆ, ಜನರ ಜೀವನವನ್ನು ಕಂಗೆಡಿಸಿದೆ. ಈ ಹಣದುಬ್ಬರದ ಕಾವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಒಂದು ಉತ್ತಮ ಕ್ರಮ ಕೈಗೊಂಡಿದೆ. ಈಗಾಗಲೇ ಭಾರತ್ ಬ್ರ್ಯಾಂಡ್ ಗೋಧಿ ಮತ್ತು ಬೇಳೆ ಕಾಳುಗಳನ್ನು ಮಾರಾಟ ಮಾಡುತ್ತಿರುವ ಸರ್ಕಾರ, ಈಗ ಅಕ್ಕಿಯನ್ನೂ ಈ ಯೋಜನೆಯಡಿ ಒಳಗೊಂಡಿದೆ.
ಕೇಂದ್ರ ಸರ್ಕಾರದಿಂದ ʼಭಾರತ್ ಅಟ್ಟಾ(Bharat atta)ʼ ಮತ್ತು ʼಭಾರತ್ ದಾಲ್(Bharat daal) ʼ ಯೋಜನೆಗೆ ಬೆಂಗಳೂರಿನ ಜನರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. 2023ರ ಆಗಸ್ಟ್‌ನಿಂದ 2024ರ ಜನವರಿವರೆಗೆ, ನಗರದಲ್ಲಿ 2,81,572 ಕೆ.ಜಿ ಭಾರತ್ ದಾಲ್ ಮತ್ತು 1,22,190 ಕೆ.ಜಿ ಭಾರತ್ ಅಟ್ಟಾ ಮಾರಾಟವಾಗಿದೆ. ಇದೀಗ ಭಾರತ್ ಬ್ರಾಂಡ್ ಅಡಿಯಲ್ಲಿ ಅಕ್ಕಿಯನ್ನು ಮಾರಾಟ ಮಾಡಲು ಸರ್ಕಾರ ನಿರ್ಧರಿಸಿದೆ. ಈ ಯೋಜನೆಯಡಿ, ಉತ್ತಮ ಗುಣಮಟ್ಟದ ಅಕ್ಕಿಯನ್ನು ಕಡಿಮೆ ದರದಲ್ಲಿ ಗ್ರಾಹಕರಿಗೆ ಒದಗಿಸಲಾಗುವುದು.

ಕ್ವಾಲಿಟಿ ಸೂಪರ್ ಎಂದ ಜನ :

ಕೇಂದ್ರದಿಂದ ಅಕ್ಕಿಯ ಸಂಚಾರಿ ವ್ಯಾನ್ ವಿಧಾನಸೌಧದ ಮುಂಭಾಗ ನಿಂತ ಕೂಡಲೇ ಅಕ್ಕಿ ಕೊಳ್ಳಲು ಜನರು ನಾ ಮುಂದು ತಾ ಮುಂದು ಎಂದು ಮುಗಿಬಿದ್ದಿದ್ದಾರೆ. ಅಕ್ಕಿ ಚೀಲ ಖರೀದಿಗೆ ಫುಲ್ ಡಿಮ್ಯಾಂಡ್ ಹಿನ್ನೆಲೆ ಕೇವಲ 30 ನಿಮಿಷಕ್ಕೆ 1 ಟನ್ ಅಕ್ಕಿ ಖರೀದಿ ಆಗಿದೆ. ವಿಶೇಷ ಎಂದರೆ ಜನರು ಅಲ್ಲೇ ಅಕ್ಕಿಯ ಚೀಲವನ್ನು ಓಪನ್ ಮಾಡಿ ಕ್ವಾಲಿಟಿ ಹೇಗಿದೆ ಎಂದು ಟೆಸ್ಟ್ ಮಾಡಿದ್ದಾರೆ. ಕ್ವಾಲಿಟಿ ಸೂಪರ್ ಇದೆ ಎಂದು ಜನರು ಮೋದಿ ನಮಗೆ 29 ರೂ ಗಳಿಗೆ ಅಕ್ಕಿ ನೀಡುತ್ತಿರುವುದು ಒಂದು ಖುಷಿಯ ವಿಷಯ, ಗಿಫ್ಟ್ ಇದ್ದಂತೆ ಎಂದು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

whatss

 

ಬೆಂಗಳೂರಿನಲ್ಲಿ ಮನೆ ಮನೆಗೆ ವಿತರಣೆ:

ಬೆಂಗಳೂರಿನಲ್ಲಿ, ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟದ (ಎನ್‌ಸಿಸಿಎಫ್) ಮೂಲಕ ಈ ಅಕ್ಕಿಯನ್ನು ಮಾರಾಟ ಮಾಡಲಾಗುವುದು. ಫೆಬ್ರವರಿ 6 ರಿಂದ ಯಶವಂತಪುರದ ಎನ್‌ಸಿಸಿಎಫ್‌ನ ಮುಖ್ಯ ಗೋಡಾನಿನಿಂದ 50 ಏರಿಯಾಗಳಿಗೆ ಮೊಬೈಲ್ ವ್ಯಾನ್ ಮೂಲಕ ಮನೆ ಮನೆಗೆ ಅಕ್ಕಿ ವಿತರಣೆ ಮಾಡಲಾಗುವುದು.
ಈಗ ಭಾರತ್ ಬ್ರಾಂಡ್‌ನ ಅಕ್ಕಿ ಖರೀದಿಸೋದು ತುಂಬಾ ಸುಲಭ. ಅಮೇಜಾನ್(Amazon), ಫ್ಲಿಪ್‌ಕಾರ್ಟ್‌(Flipkart)ನಂತಹ ಆನ್‌ಲೈನ್(online) ಶಾಪಿಂಗ್ ಆಪ್‌ಗಳಲ್ಲಿ ಲಭ್ಯವಿರುವುದರಿಂದ, ಕೆಲವೇ ಕ್ಲಿಕ್‌ಗಳಲ್ಲಿ ನಿಮ್ಮ ಮನೆ ಬಾಗಿಲಿಗೆ ಅಕ್ಕಿ ತಲುಪಲಿದೆ.

ಬೆಂಗಳೂರಿನ ಯಾವ ಪ್ರದೇಶಗಳಲ್ಲಿ ಅಕ್ಕಿ ಸಿಗುತ್ತದೆ?:

50 ಕ್ಕೂ ಹೆಚ್ಚು ಪ್ರದೇಶಗಳಲ್ಲಿ ವ್ಯಾನ್ ಮೂಲಕ ಮನೆ ಮನೆಗೆ ಭಾರತ್ ಬ್ರಾಂಡ್ ಅಕ್ಕಿ ತಲುಪಿಸಲಾಗುತ್ತಿದೆ.
ಬಸವೇಶ್ವರ ನಗರ, ದೀಪಾಂಜಲಿ ನಗರ, ಮಹಾಕ್ಷ್ಮಿ ಲೇಔಟ್, ಗಾಯತ್ರಿ ನಗರ, ನಾಗಸಂದ್ರ, ಅಬ್ಬಿಗೆರೆ, ಚಿಕ್ಕಬಣ್ಣಾವರ, ಥಣಿಸಂದ್ರ, ಹೆಸರಘಟ್ಟ, ಯಲಹಂಕ, ಮಾಗಡಿ ರೋಡ್, ಕೊಡಿಗೆಹಳ್ಳಿ, ಶೇಷಾದ್ರಿಪುರಂ, ಸಂಜಯ್ ನಗರ, ಜಕ್ಕೂರು, ಬನಶಂಕರಿ, ಕುಮಾರಸ್ವಾಮಿ ಲೇಔಟ್, ಜೆ.ಸಿ. ನಗರ, ಡೈರಿ ಸರ್ಕಲ್, ಕೊಡಿಗೆಹಳ್ಳಿ ಸೇರಿದಂತೆ
ನಿಮ್ಮ ಹತ್ತಿರದ ಅಕ್ಕಿ ಮಾರಾಟಗಾರರಿಂದ ಅಗತ್ಯವಿರುವಷ್ಟು ಅಕ್ಕಿ ಖರೀದಿಸಿ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!