Ration Card: ಹೊಸ ರೇಷನ್‌ ಕಾರ್ಡ್‌ ಸಲ್ಲಿಕೆಗೆ ಈ 3 ದಾಖಲೆಗಳು ಕಡ್ಡಾಯ! ಇಲ್ಲಿದೆ ಡೀಟೇಲ್ಸ್

ration card 2

ಕಳೆದ ವಿಧಾನಸಭಾ ಚುನಾವಣೆಯ ಹೊಸ ಪಡಿತರ ಚೀಟಿ ವಿತರಣೆ ನಿಲ್ಲಿಸಲಾಗಿತ್ತು. ಸುಮಾರು ಎರಡು ವರ್ಷಗಳಿಂದ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಹಲವಾರು ಗ್ರಾಹಕರು ಕಾಯುತ್ತಿದ್ದಾರೆ. ಕಳೆದ ಒಂದೂವರೆ ವರ್ಷಗಳ ಹಿಂದೆ ಅಂದರೆ 2023ರ ಮೇ ತಿಂಗಳಿನಲ್ಲಿ ವಿಧಾನಸಭಾ ಚುನಾವಣೆ (Vidhan sabha election) ನಡೆದಿತ್ತು. ಈ ಚುನಾವಣೆಗೆ ತಯಾರಿ ಮಾಡಿಕೊಳ್ಳುವ ಹಿನ್ನೆಲೆಯಲ್ಲಿ ಪಡಿತರ ಚೀಟಿಗಳ ವಿತರಣೆ ಮತ್ತು ಹೊಸ ಅರ್ಜಿಗಳು ಹಾಗೂ ತಿದ್ದುಪಡಿ ಕೆಲಸಗಳನ್ನು ಸ್ಥಗಿತಗಿತಗೊಳಿಸಲಾಗಿತ್ತು.

ಇನ್ನು ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ (Congress government) ಅಧಿಕಾರಕ್ಕೆ ಬಂದ ಕಾರಣ ಅಷ್ಟೇನೂ ಗಮನವನ್ನು ಕೊಡಲಿಲ್ಲ. ಆದರೆ ಜನಗಳ ಒತ್ತಾಸೆಯ ಮೇರೆಗೆ ಮತ್ತೆ ಅರ್ಜಿ ಆಹ್ವಾನಿಸಲು ಮುಂದಾಗಿದೆ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿ & ನ್ಯೂಸ್ ಅಲರ್ಟ್ ಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. 

ಈ ಮೂರು ದಾಖಲೆಗಳು ಕಡ್ಡಾಯ

ರಾಜ್ಯದಲ್ಲಿ ಹಲವು ಜನ ಹೊಸ ಪಡಿತರ ಚೀಟಿಗೆ  (BPL Ration Card)  ಅರ್ಜಿ ಹಾಕಲು ಕಾಯುತ್ತಿರುವುದರಿಂದ ಸಾಮಾನ್ಯವಾಗಿ ಸರ್ವರ್ ತೊಂದರೆ ಕಾಣಿಸಿಕೊಳ್ಳಬಹುದು, ಹಾಗಾಗಿ ಅಗತ್ಯ ದಾಖಲೆಗಳನ್ನು ನೀವು ಮೊದಲೇ ರೆಡಿಮಾಡಿಕೊಂಡು ಮೊದಲು ಅರ್ಜಿ ಸಲ್ಲಿಸಲು ಪ್ರಯತ್ನ ಮಾಡಿ. ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಕೇವಲ ಮೂರು ದಾಖಲೆಗಳು ಸಾಕು, ಮನೆಯ ಎಲ್ಲಾ ಸದಸ್ಯರ ಆಧಾರ್ ಕಾರ್ಡ್, ನಿಮ್ಮ ಕುಟುಂಬದ ಎಲ್ಲಾ ಸದಸ್ಯರ ಪೈಕಿ ಒಬ್ಬರ ಆದಾಯ ಪ್ರಮಾಣ ಪತ್ರ, ಮತ್ತು ಮನೆಯಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗು ಇದ್ದರೆ ಅದರ ಜನ್ಮ ದಾಖಲೆಯ ಪ್ರಮಾಣ ಪತ್ರ ಬೇಕಾಗುತ್ತದೆ. ಮತ್ತು ನಿಮ್ಮ ಎಲ್ಲಾ ಸದಸ್ಯರ ಆಧಾರ್ ಕಾರ್ಡ ಗೆ ಕಡ್ಡಾಯವಾಗಿ ಮೊಬೈಲ್ ನಂಬರ್ ಲಿಂಕ್ ಆಗಿರಬೇಕು. ಮತ್ತು ನಿಮ್ಮ ಆಧಾರ್ ಕಾರ್ಡ್ ಹತ್ತು ವರ್ಷಕ್ಕಿಂತ ಹಳೆಯದಾಗಿದ್ರೆ ಕೂಡಲೇ ಅದನ್ನು ಸಹಿತ ಅಪ್ಡೇಟ್ ಮಾಡಿಸಿಕೊಳ್ಳಿ, ಕೆಲವೊಮ್ಮೆ ಆಧಾರ್ ಕಾರ್ಡ್ ಅಪ್ಡೇಟ್ ಆಗದೇ ಇದ್ದಲ್ಲಿ ಸಮಸ್ಯೆ ಆಗಬಹುದು.

whatss

ಇವರಿಗೆ ಮಾತ್ರ ಸಿಗಲಿದೆ ರೇಷನ್ ಕಾರ್ಡ್

  • ಕರ್ನಾಟಕದಲ್ಲಿ ಖಾಯಂ ನಿವಾಸಿಯಾಗಿರಬೇಕು,
  • ಹೊಸದಾಗಿ ಮದುವೆಯಾದ ದಂಪತಿ ಹೊಸ ಪಡಿತರ (ration card) ಚೀಟಿಗೆ ಅರ್ಜಿ ಸಲ್ಲಿಸಬಹುದು,
  • ರಾಜ್ಯದಲ್ಲಿ ಈಗಾಗಲೇ ಪಡಿತರ ಚೀಟಿ ಹೊಂದಿರದ ಕುಟುಂಬಗಳು ಅರ್ಹರಾಗಿರುತ್ತಾರೆ,
  • ಬಿಪಿಎಲ್ ಕಾರ್ಡ್ ಪಡೆದುಕೊಳ್ಳುವುದಿದ್ದರೆ ಬಡತನ ರೇಖೆಗಿಂತ (below poverty line)ಕೆಳಗಿನವರು ಆಗಿರಬೇಕು,
  • ನಿಮ್ಮ ಆದಾಯ ಒಂದು ಲಕ್ಷ ರೂಪಾಯಿಗಳಿಗಿಂತ ಕಡಿಮೆ ಇದ್ದರೆ ಬಿಪಿಎಲ್ ಹಾಗೂ ಅದಕ್ಕಿಂತ ಜಾಸ್ತಿ ಇದ್ದರೆ ಎಪಿಎಲ್ ಕಾರ್ಡ್ ಪಡೆದುಕೊಳ್ಳಬಹುದಾಗಿದೆ.

ಅರ್ಜಿ ಸಲ್ಲಿಸುವುದು ಹೇಗೆ:

 ಗ್ರಾಮ ಒನ್(Gram one), ಬೆಂಗಳೂರು ಒನ್(Bengaluru one) , ಮತ್ತು ಇತರ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು. ಆನ್ಲೈನ್ (Online) ಮೂಲಕ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು. ಆನ್ಲೈನ್ ಪೋರ್ಟಲ್ ನಿರ್ದಿಷ್ಟ ಸಮಯದಲ್ಲಿ ಮಾತ್ರ ತೆರೆದಿರುತ್ತದೆ. ಸೇವಾ ಕೇಂದ್ರದ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡು ಅರ್ಜಿ ಸಲ್ಲಿಸಿ.

ಸೂಚನೆ : ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಬಯೋಮೆಟ್ರಿಕ್ ಡಿವೈಸ್ ಅವಶ್ಯಕತೆ ಇದ್ದು ಸ್ವತಃ ನೀವೇ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ, ಹಾಗಾಗಿ ಸುಳ್ಳು ಸುದ್ದಿಗಳಿಗೆ ಕಿವಿಗೊಡದೆ ಹತ್ತಿರದ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!