ಗೃಹಲಕ್ಷ್ಮಿ 6ನೇ ಕಂತಿನ ಕಾತರ: ಯಾಕೆ ಇಷ್ಟು ತಡ? ಕಾರಣ ಇಲ್ಲಿದೆ.
ಗೃಹಲಕ್ಷ್ಮಿ ಯೋಜನೆ( Gruhalaxmi yojana)ಯ ಲಾಭ ಪಡೆಯುತ್ತಿರುವ ಮಹಿಳೆಯರೇ, ನಿಮ್ಮ 6 ನೇ ಕಂತಿನ ಹಣ ಖಾತೆಗೆ ಹಣ ಜಮಾ ಆಗಿಲ್ಲವೇ? ನಿಮ್ಮ ಬ್ಯಾಂಕ್ ಖಾತೆ(Bank Account) ಯ ತ್ವರಿತ ಪರಿಶೀಲನೆ ಮಾಡಿರಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಮಹಿಳೆಯರಿಗೆ ಸಬಲೀಕರಣ ಉದ್ದೇಶದಿಂದ ರಾಜ್ಯ ಸರ್ಕಾರ(state government) ಜಾರಿಗೆ ತಂದಿರುವ ಗೃಹ ಲಕ್ಷ್ಮಿ ಯೋಜನೆ ಒಂದು. ಈ ಯೋಜನೆಯಡಿ, ಮನೆಯ ಯಜಮಾನಿಗೆ ಪ್ರತಿ ತಿಂಗಳು ₹2,000/- ನೀಡಲಾಗುತ್ತದೆ. ಆದರೆ, ಈ ಯೋಜನೆ ಆರಂಭದಿಂದಲೂ ಕೆಲವು ಸವಾಲುಗಳನ್ನು ಎದುರಿಸುತ್ತಿದೆ. ಎಲ್ಲಾ ಅರ್ಹ ಅರ್ಜಿದಾರರಿಗೆ ಈ ಯೋಜನೆಯ ಲಾಭ ತಲುಪಿಸಲು ರಾಜ್ಯ ಸರ್ಕಾರ ಇನ್ನೂ ಶ್ರಮಿಸುತ್ತಿದೆ. ಇಲ್ಲಿಯವರೆಗೆ 5 ಕಂತುಗಳ ಹಣ ಜಮಾ ಮಾಡಲಾಗಿದೆ. 6ನೇ ಕಂತಿನ ಹಣ ಫೆಬ್ರವರಿ ತಿಂಗಳಿನಲ್ಲಿ ಜಮಾ ಆಗುವ ನಿರೀಕ್ಷೆಯಿದೆ. ಕೆಲವರಿಗೆ ಇನ್ನೂ ಹಣ ಜಮಾ ಆಗಿಲ್ಲ ಎಂದು ತಿಳಿದು ಖೇದವಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಯಾವ ಕೆಲಸ ಮಾಡಿದರೆ ಜಮಾ ಆಗುತ್ತದೆ ಎನ್ನುವ ಮಾಹಿತಿ ಇಲ್ಲಿದೆ.
ಗೃಹಲಕ್ಷ್ಮಿ ಯೋಜನೆ: ಖಾತೆ ಪರಿಶೀಲನೆ
ನಿಮ್ಮ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿಲ್ಲದಿದ್ದರೆ, ಈ ಕೆಳಗಿನ ಕ್ರಮಗಳನ್ನು ಅನುಸರಿಸಿ ನಿಮ್ಮ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿ:
ಆಧಾರ್ ಲಿಂಕ್(Aadhar link) :
ನಿಮ್ಮ ಬ್ಯಾಂಕ್ ಖಾತೆಯನ್ನು ಆಧಾರ್ ಜೊತೆಗೆ ಲಿಂಕ್ ಮಾಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಖಾತೆ ಲಿಂಕ್ ಮಾಡಿಲ್ಲದಿದ್ದರೆ, ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಲಿಂಕ್ ಮಾಡಿಸಿ.
ಖಾತೆ ವಿವರಗಳು:
ನಿಮ್ಮ ಗೃಹಲಕ್ಷ್ಮಿ ಯೋಜನೆ ಅರ್ಜಿಯಲ್ಲಿ ನೀಡಿದ ಬ್ಯಾಂಕ್ ಖಾತೆಯ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ಖಾತೆ ಸಂಖ್ಯೆ, IFSC ಕೋಡ್, ಖಾತೆದಾರರ ಹೆಸರು ಯಾವುದೇ ತಪ್ಪಿಲ್ಲದೆ ಖಚಿತಪಡಿಸಿಕೊಳ್ಳಿ.
ಖಾತೆ ಸ್ಥಿತಿ:
ನಿಮ್ಮ ಬ್ಯಾಂಕ್ ಖಾತೆ ಸಕ್ರಿಯವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಖಾತೆ ನಿಷ್ಕ್ರಿಯವಾಗಿದ್ದರೆ, ಅದನ್ನು ಪುನಃ ಸಕ್ರಿಯಗೊಳಿಸಲು ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಿ.
ಬ್ಯಾಂಕ್ ಖಾತೆ(Bank account) ಇಲ್ಲದಿದ್ದರೆ:
ನಿಮ್ಮ ಬಳಿ ಬ್ಯಾಂಕ್ ಖಾತೆ ಇಲ್ಲದಿದ್ದರೆ, ನಿಮ್ಮ ಮನೆ ಬಳಿಯಿರುವ ಅಂಚೆ ಕಚೇರಿ(Post office) ಯಲ್ಲಿ ಖಾತೆ ತೆರೆಯಿರಿ. ಖಾತೆ ತೆರೆದ ನಂತರ, ಅದನ್ನು ಗೃಹಲಕ್ಷ್ಮಿ ಯೋಜನೆಗೆ ಲಿಂಕ್ ಮಾಡಿ.
ನಿಮ್ಮ ಗೃಹ ಲಕ್ಷ್ಮಿ ಯೋಜನೆ ಖಾತೆಗೆ ಹಣ ಜಮಾ ಆಗಿದೆಯೇ ಎಂದು ಪರಿಶೀಲಿಸಲು ಕೆಲವು ಮಾರ್ಗಗಳಿವೆ. ನೀವು https://kanaja.karnataka.gov.in/ ಕಣಜ ವೆಬ್ಸೈಟ್(Kanaj website) ಅಥವಾ ಸರ್ಕಾರದ ಅಧಿಕೃತ ವೆಬ್ಸೈಟ್ಗೆ(Official Website) ಗೆ ಭೇಟಿ ನೀಡಿ.’ಗೃಹ ಲಕ್ಷ್ಮಿ ಯೋಜನೆ’ ಎಂದು ಹುಡುಕಿ. ನಿಮ್ಮ ರೇಶನ್ ಕಾರ್ಡ್ (Ration Card) ನಂಬರ್ ಮತ್ತು ಇತರ ಅಗತ್ಯವಿರುವ ವಿವರಗಳನ್ನು ನಮೂದಿಸಿ, ‘ಸಲ್ಲಿಸು’ ಕ್ಲಿಕ್ ಮಾಡಿ.
ನಿಮ್ಮ ಖಾತೆಗೆ ಜಮಾ ಆಗಿರುವ ಹಣದ ವಿವರಗಳನ್ನು ನೀವು ನೋಡಬಹುದು.
ಗೃಹ ಲಕ್ಷ್ಮಿ ಯೋಜನೆ: 6ನೇ ಕಂತಿನ ಹಣ ಫೆಬ್ರವರಿಯಲ್ಲಿ
ಗೃಹ ಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣ ಫೆಬ್ರವರಿ ತಿಂಗಳ ಎರಡನೇ ವಾರದಲ್ಲಿ(February 2nd Week) ಜಮಾ ಆಗುವ ಸಾಧ್ಯತೆಗಳಿವೆ. ಈ ಯೋಜನೆಯ ಉದ್ದೇಶ ಫಲಾನುಭವಿಗಳಿಗೆ ಸಕಾಲದಲ್ಲಿ ಹಣವನ್ನು ತಲುಪಿಸುವುದಾಗಿದೆ.
ಎಲ್ಲಾ ಅರ್ಜಿದಾರರಿಗೂ 6ನೇ ಕಂತಿನ ಹಣ ಸಿಗುವಂತೆ ಖಚಿತಪಡಿಸಿಕೊಳ್ಳಲು, ಗ್ರಾಮ ಮಟ್ಟದಲ್ಲಿ ಗ್ರಾಮ ಪಂಚಾಯತ್ ಅಧಿಕಾರಿಗಳ ನೇತೃತ್ವದಲ್ಲಿ ಕ್ಯಾಂಪ್‌ಗಳನ್ನು(Gram panchyat camps) ಆಯೋಜಿಸಲಾಗುವುದು. ಈ ಕ್ಯಾಂಪ್‌ಗಳಲ್ಲಿ, ಫಲಾನುಭವಿಗಳು ತಮ್ಮ ಖಾತೆಗೆ ಹಣ ಜಮಾ ಆಗದಿದ್ದರೆ ಅಥವಾ ಇತರ ಯಾವುದೇ ಸಮಸ್ಯೆಗಳಿದ್ದರೆ ಅಧಿಕಾರಿಗಳನ್ನು ಭೇಟಿ ಮಾಡಿ ದೂರು ನೀಡಬಹುದು. ಅಧಿಕಾರಿಗಳು ಫಲಾನುಭವಿಗಳ ಸಮಸ್ಯೆಗಳನ್ನು ಪರಿಶೀಲಿಸಿ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುತ್ತಾರೆ.
5ನೇ ಕಂತಿನ ಹಣ ಪಡೆಯದ ಫಲಾನುಭವಿಗಳಿಗೆ:
5ನೇ ಕಂತಿನ ಹಣ ಇನ್ನೂ ಜಮಾ ಆಗದಿದ್ದರೆ, ಫಲಾನುಭವಿಗಳು ಗ್ರಾಮ ಪಂಚಾಯತ್ ಕ್ಯಾಂಪ್‌ಗಳನ್ನು ಭೇಟಿ ಮಾಡಿ ಅಧಿಕಾರಿಗಳನ್ನು ಭೇಟಿ ಮಾಡಿ ಸಮಸ್ಯೆಯನ್ನು ತಿಳಿಸಬೇಕು.
ಅಧಿಕಾರಿಗಳು ಸಮಸ್ಯೆಯ ಮೂಲ ಕಾರಣವನ್ನು ಪತ್ತೆಹಚ್ಚಿ ಖಾತೆಗೆ ಹಣ ಜಮಾ ಆಗುವಂತೆ ಕ್ರಮ ಕೈಗೊಳ್ಳುತ್ತಾರೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ಕೇಂದ್ರದಿಂದ ಭರ್ಜರಿ ಆಫರ್ , ಬರೀ 29 ರೂ. ಗೆ ಕೆಜಿ ಅಕ್ಕಿ, ಖರೀದಿಗೆ ಮುಗಿಬಿದ್ದ ಜನ, ಇಲ್ಲಿ ಖರೀದಿಸಿ.
- ಸ್ವಂತ ಮನೆ ಇಲ್ಲದವರಿಗೆ ಗುಡ್ ನ್ಯೂಸ್, ಈ ಬ್ಯಾಂಕುಗಳಲ್ಲಿ ಸಿಗುತ್ತಿದೆ ಕಮ್ಮಿ ಬಡ್ಡಿ ದರದಲ್ಲಿ ಗೃಹಸಾಲ
- ಮಹಿಳೆಯರಿಗೆ ಗುಡ್ ನ್ಯೂಸ್! ಉಚಿತ ಗ್ಯಾಸ್ ಸಂಪರ್ಕಕ್ಕೆ ಅರ್ಜಿ ಆಹ್ವಾನ
- ಇನ್ನೂ ಮುಂದೆ 2000/- ರೂ. ಇವರಿಗೆ ಬರುವುದಿಲ್ಲ, ಜನವರಿ ತಿಂಗಳ ಅಕ್ರಮ ಬಿಪಿಎಲ್ ಕಾರ್ಡ್ ಪತ್ತೆ, ರದ್ದಾದ ಪಟ್ಟಿ ಬಿಡುಗಡೆ.!
- ರೈತರ ಖಾತೆಗೆ ಬರ ಪರಿಹಾರದ ಮೊದಲನೇ ಕಂತಿನ ಹಣ ₹2000 ಜಮಾ, ಸ್ಟೇಟಸ್ ಹೀಗೆ ಚೆಕ್ ಮಾಡಿ
- ಬೆಳೆಹಾನಿ ಪರಿಹಾರದ ಹಣ ಇನ್ನೂ ಬಂದಿಲ್ವಾ? ಆಧಾರ್ ಲಿಂಕ್ ಆಗದೇ ಇರುವ ಪಟ್ಟಿ ಬಿಡುಗಡೆ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group






