opp reno 11 5G smart phone

Oppo Mobile – ಬೆಂಕಿ ಕಾಮೆರಾ ಇರುವ ಹೊಸ ಒಪ್ಪೋದ ಹೊಸ ಮೊಬೈಲ್ ಬಿಡುಗಡೆ, ಇಲ್ಲಿದೆ ಮಾಹಿತಿ

Categories:
WhatsApp Group Telegram Group

ಇಂದು ಜಗತ್ತು ಸ್ಮಾರ್ಟ್ ಫೋನ್ ನಲ್ಲಿ ಮುಳುಗಿ ಹೋಗಿದೆ. ಹೌದು, ನಾವು ಪ್ರತಿಯೊಂದು ಕೆಲಸವನ್ನು ಕೂಡ ಸ್ಮಾರ್ಟ್ ಫೋನ್ ( Smartphone ) ನಲ್ಲಿ ಕ್ಷಣ ಮಾತ್ರದಲ್ಲಿ ಮಾಡಿ ಮುಗಿಸುತ್ತೇವೆ. ಸ್ಮಾರ್ಟ್ ಫೋನ್ ಗಳು ನಮ್ಮ ಜೀವನದ ಒಂದು ಭಾಗವಾಗಿವೆ. ಹಾಗೆಯೇ ಇಂದು ಮಾರುಕಟ್ಟೆಗೆ ಒಂದಕ್ಕಿಂತ ಒಂದು ಹೊಸ ಸ್ಮಾರ್ಟ್ ಫೋನ್ ಗಳು ಲಗ್ಗೆ ಇಡುತ್ತಿವೆ. ಮೊಬೈಲ್ ಫೋನ್ ಗಳ ಜಗತ್ತಿನಲ್ಲಿ ಇಂದು ಬಹುದೊಡ್ಡ ಪೈಪೋಟಿ ( Competitions ) ನಡೆದಿದೆ. ಜನಪ್ರಿಯ ಮೊಬೈಲ್ ಕಂಪೆನಿಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಇದೀಗ ಒಪ್ಪೋ ಕಂಪೆನಿಯು ( Oppo Company ) ತನ್ನ ರೇನೋ ಸಿರೀಸ್ ನ ಹೊಸ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಆ ಒಂದು ಸ್ಮಾರ್ಟ್ ಫೋನ್ ನ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಒಪ್ಪೋ ರೆನೋ 11 5 ಜಿ ( Oppo Reno 11 5G ) ಸ್ಮಾರ್ಟ್ ಫೋನ್ ಅನ್ನು ಇದೀಗ ಭಾರತದಲ್ಲಿ ಬಿಡುಗಡೆ ಮಾಡಲು ಕಂಪೆನಿಯು ನಿರ್ಧರಿಸಿದೆ. ಹಾಗಾದರೆ ಈ ಸ್ಮಾರ್ಟ್ ಫೋನ್ ನ ಫೀಚರ್ಸ್ ಗಳ ಬಗ್ಗೆ ತಿಳಿದು ಕೊಳ್ಳೋಣ ಬನ್ನಿ.

ಡಿಸ್ಪ್ಲೇ ( Display ) :

Oppo Reno 11 5G

ರೆನೋ 11 5G ಡ್ಯುಯಲ್ 3D ಬಾಗಿದ ವಿನ್ಯಾಸವನ್ನು ಹೊಂದಿದೆ, ಅಂದರೆ ಅದು ಬದಿಗಳಲ್ಲಿ ಕಡಿಮೆಯಾಗುತ್ತದೆ. ಇದು7.99mm ತೆಳುವಾಗಿದೆ.
ಇದು ಪ್ರೀಮಿಯಂ ಹಾಗೂ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ ಆಗಿದ್ದು, 2412 x 1080 ಪಿಕ್ಸೆಲ್‌ಗಳ ರೆಸಲ್ಯೂಶನ್, 120Hz ರಿಫ್ರೆಶ್ ದರ ಮತ್ತು 1600 ನಿಟ್‌ಗಳ ಗರಿಷ್ಠ ಹೊಳಪು ಹೊಂದಿರುವ 6.7-ಇಂಚಿನ ಪೂರ್ಣ HD+ AMOLED ಡಿಸ್‌ಪ್ಲೇಯನ್ನು ಒಳಗೊಂಡಿವೆ.

whatss

ಪ್ರೊಸೆಸರ್ ( Processor ) :

Oppo Reno 11 5G ಸರಣಿಯು ಇತ್ತೀಚಿನ Android 14 ಆಪರೇಟಿಂಗ್ ಸಿಸ್ಟಮ್ ಅನ್ನು ಆಧರಿಸಿ ಕಂಪನಿಯ ಸ್ವಂತ ಕಸ್ಟಮ್ ಸ್ಕಿನ್, ColorOS 14 ನಲ್ಲಿ ಕಾರ್ಯನಿರ್ವಹಿಸುತ್ತದೆ. ಫೋನ್‌ಗಳು ವೈ-ಫೈ 6, ಎನ್‌ಎಫ್‌ಸಿ, ಬ್ಲೂಟೂತ್ 5.3, ಜಿಪಿಎಸ್ ಮತ್ತು ಟೈಪ್-ಸಿ ಪೋರ್ಟ್ ಸೇರಿದಂತೆ ಅಗತ್ಯವಿರುವ ಎಲ್ಲಾ ಸಂಪರ್ಕ ಆಯ್ಕೆಗಳನ್ನು ಸಹ ಹೊಂದಿವೆ.

ಕ್ಯಾಮೆರಾ ( Camera ) :

Oppo Reno 11 5G ಫೋನ್‌ OIS ಗೆ ಬೆಂಬಲದೊಂದಿಗೆ 50MP ಪ್ರಾಥಮಿಕ ಸಂವೇದಕದೊಂದಿಗೆ ಟ್ರಿಪಲ್ ಹಿಂಬದಿಯ ಕ್ಯಾಮೆರಾ ( Triple Back side camera ) ಸೆಟಪ್ ಹೊಂದಿವೆ. ಹಾಗೆಯೇ 32MP ಟೆಲಿಫೋಟೋ ಲೆನ್ಸ್ ( Telephoto Lense ) ಮತ್ತು 112° FOV ಜೊತೆಗೆ 8MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಅನ್ನು ಒಳಗೊಂಡಿವೆ. ಸೆಲ್ಫಿ ಮತ್ತು ವೀಡಿಯೊ ಕರೆ ಅಗತ್ಯಗಳನ್ನು ಪೂರೈಸಲು ಮುಂಭಾಗದಲ್ಲಿ 32MP Sony IMX709 ಸಂವೇದಕವನ್ನು ನೀಡಲಾಗಿದೆ.

ಬ್ಯಾಟರಿ ಮತ್ತು ಪ್ಯಾಕ್ ಅಪ್ ( Battery and Packup ) :

Reno 11 ದೊಡ್ಡ 4,700 mAh ಬ್ಯಾಟರಿಯನ್ನು ಹೊಂದಿದೆ, ಇದನ್ನು 67W ಚಾರ್ಜರ್ ಮೂಲಕ ವೇಗವಾಗಿ ಚಾರ್ಜ್ ಮಾಡಬಹುದು.

ಸ್ಟೋರೇಜ್ ( Storage ) :

ಈ ಸ್ಮಾರ್ಟ್‌ಫೋನ್ 8GB ಯ LPDDR4x RAM ಮತ್ತು 256GB ವರೆಗಿನ UFS2.2 ಸಂಗ್ರಹಣೆಯೊಂದಿಗೆ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಲಭ್ಯವಿರುತ್ತದೆ.

ಈ ಸ್ಮಾರ್ಟ್ ಫೋನ್ ನ ವೈಶಿಷ್ಟ್ಯತೆಗಳು ( Features ) :

Oppo Reno 115G ಮೀಡಿಯಾ ಟೆಕ್ ಡೈಮೆನ್ಸಿಟಿ 7050 ಚಿಪ್‌ಸೆಟ್‌ನಿಂದ ARM Mali-G68 MC4 GPU ನೊಂದಿಗೆ ಗ್ರಾಫಿಕ್ಸ್-ತೀವ್ರ ಕಾರ್ಯಗಳಿಗಾಗಿ ಜೋಡಿಸಲ್ಪಟ್ಟಿದೆ.

Oppo Reno 11 ಬೆಲೆ ( Price ) :

ಒಪ್ಪೋ ರೆನೋ11 5G ಬೆಲೆ ವಿಚಾರಕ್ಕೆ ಬಂದರೆ 8GB+128GB ವೇರಿಯಂಟ್‌ ಫೋನ್‌ಗೆ 29,999 ರೂ.ಗಳು ಮತ್ತು 8GB+256GB ವೇರಿಯಂಟ್‌ಗೆ 31,999 ರೂ.ಗಳನ್ನು ನಿಗದಿ ಮಾಡಲಾಗಿದೆ. ಈ ಫೋನ್‌ ಅನ್ನು ಜನವರಿ 25, 2024 ರಿಂದ ಮಾರಾಟ ಮಾಡಲಾಗುತ್ತಿದೆ. ಇದನ್ನು ಫ್ಲಿಪ್‌ಕಾರ್ಟ್, ಒಪ್ಪೋ ಇ-ಸ್ಟೋರ್ ಮತ್ತು ಪ್ರಮುಖ ರಿಟೇಲರ್‌ ಸ್ಟೋರ್‌ಗಳಲ್ಲಿ ಖರೀದಿ ಮಾಡಬಹುದಾಗಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

ಈ ಸ್ಮಾರ್ಟ್‌ಫೋನ್‌ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories