ಸ್ಯಾಮ್ ಸಂಗ್ (Samsung) ದೇಶದಲ್ಲಿ ತನ್ನದೇ ಆದ ಬ್ರಾಂಡ್ ಅನ್ನು ನಿರೂಪಿಸಿಕೊಂಡಿದೆ. ಸ್ಯಾಮ್‌ಸಂಗ್ ಸ್ಮಾರ್ಟ್ ಫೋನ್‌ಗಳೆಂದರೆ (Samsung Smart phones) ಯಾರಿಗೆ ಇಷ್ಟಾ ಇಲ್ಲಾ ಹೇಳಿ. ಸ್ಯಾಮ್‌ಸಂಗ್ ಫೋನ್‌ಗಳು (Samsung phones) ದೀರ್ಘ ಬಾಳಿಕೆ ಹಾಗೂ ಅತ್ಯುತ್ತಮ ಕಾರ್ಯಕ್ಷಮತೆಗೆ ಹೆಸರುವಾಸಿ ಪಡೆದು ಕೊಂಡಿದೆ. ಸ್ಯಾಮ್‌ಸಂಗ್ ಫೋನ್ ಗಳು ಭಾರತದಲ್ಲಿ ಹೆಚ್ಚಿನ ಮೆಚ್ಚುಗೆಯನ್ನು ಪಡೆದುಕೊಂಡಿದೆ ಮತ್ತು ಈ ಕಾರಣಕ್ಕೆ ಭಾರತವೂ ಸ್ಯಾಮ್‌ಸಂಗ್ ಅನ್ನು ಉತ್ತಮ ಸ್ಥಾನದಲ್ಲಿ ಇರುವಂತೆ ಮಾಡಿದೆ. ಅದರಲ್ಲೂ ಇತ್ತೀಚಿನ ದಿನಮನಗಳಲ್ಲಿ ಸ್ಯಾಮ್‌ಸಂಗ್ ಫೋನ್ ಪ್ರಿಯರು ಹೆಚ್ಚಾಗಿದ್ದಾರೆ. ಅದರ ಜೊತೆಗೆ ಅಷ್ಟೇ ಹೆಚ್ಚು ಮಾರಾಟ ಕೂಡಾ ಆಗುತ್ತಿವೆ ಎಂದು ನಾವು ತಿಳಿಯಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಸ್ಯಾಮ್‌ಸಂಗ್ ಗ್ಯಾಲಕ್ಸಿ A25 5G ಸ್ಮಾರ್ಟ್‌ಫೋನ್(Samsung galaxy A25 5G smart phone )

ಇದೀಗ ಈ ನಡುವೆ ಸ್ಯಾಮ್‌ಸಂಗ್ ಕಂಪನಿಯು ಹೊಸ ಸ್ಯಾಮ್‌ಸಂಗ್ ಗ್ಯಾಲಕ್ಸಿ A25 5G ಸ್ಮಾರ್ಟ್‌ಫೋನ್(Samsung galaxy A25 5G smart phone ) ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಾಪ್ ಅನ್ನು ಒಳಗೊಂಡಿದೆ. ಇದು Exynos 1280 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಪಡೆದುಕೊಂಡಿದೆ ಎಂದು ತಿಳಿದು ಬಂದಿದೆ. ಹಾಗಾದರೆ ಈ ಸ್ಯಾಮ್ ಸಂಗ್ ಗ್ಯಾಲಕ್ಸಿ ಸ್ಮಾರ್ಟ್‌ಫೋನ್ ಕುರಿತು ಸಂಪೂರ್ಣವಾಗಿ ಯಾವೆಲ್ಲಾ ಫೀಚರ್ಸ್ ಹೊಂದಿದೆ ಎಂದು ತಿಳಿಯೋಣ ಬನ್ನಿ.
ಮೊದಲನೆಯದಾಗಿ, ಡಿಸ್ಪ್ಲೇ (Display) ಬಗ್ಗೆ ಮಾಹಿತಿಯನ್ನು ತಿಳಿಯುವುದಾದರೆ,
ಸ್ಯಾಮ್‌ಸಂಗ್ ಗ್ಯಾಲಕ್ಸಿ A25 5G ಸ್ಮಾರ್ಟ್‌ಫೋನ್ 6.5 ಇಂಚಿನ FHD+ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಸೂಪರ್ ಅಮೋಲೆಡ್ ಡಿಸ್‌ಪ್ಲೇ (Super AMOLED display) ಆಗಿದ್ದು, 1,080×2,408px ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು (Screen resolution)ಹೊಂದಿದೆ. ಇನ್ನು ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ (Refresh rate) ಹೊಂದಿದೆ. ಇದರ ಜೊತೆಗೆ 1,000Nits ಗರಿಷ್ಠ ಬ್ರೈಟ್‌ನೆಸ್ ಲೆವೆಲ್ (Brightness level) ಅನ್ನು ನೀಡುತ್ತದೆ.
ಇದರ ಜೊತೆಗೆ ಈ ಸ್ಮಾರ್ಟ್‌ಫೋನ್ ಎಕ್ಸಿನೋಸ್(Exynos) 1280 SoC ಪ್ರೊಸೆಸರ್ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ 13(Android 13) ಆಧಾರಿತ One UI 5 ನಲ್ಲಿ ಕಾರ್ಯನಿರ್ವಹಿಸಲಿದೆ.
ಕ್ಯಾಮೆರಾ (Camera):
ಸ್ಯಾಮ್‌ಸಂಗ್ ಗ್ಯಾಲಕ್ಸಿ A25 5G ಸ್ಮಾರ್ಟ್‌ಫೋನ್ ಟ್ರಿಪಲ್ ರಿಪರ್ ಕ್ಯಾಮೆರಾ ಸೆಟಪ್ (Triple rear camera setup) ಅನ್ನು ಹೊಂದಿದೆ. 50MP ಮುಖ್ಯ ಕ್ಯಾಮೆರಾ (Main camera)ಹೊಂದಿದೆ. ಎರಡನೇ ಕ್ಯಾಮೆರಾ 8MP ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ(ultra wide angle camera) ಮತ್ತು ಮೂರನೇ ಕ್ಯಾಮೆರಾ 2MP ಸೆನ್ಸಾರ್ ಒಳಗೊಂಡಿದೆ. ಮತ್ತು ಇವುಗಳ ಜೊತೆಗೆ ಒಂದೇ ಮುಂಭಾಗದ ಸೆಲ್ಫಿ ಮತ್ತು ವೀಡಿಯೋಗಾಗೀ 13MP ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು(Selfie camera) ಹೊಂದಿದೆ.
ಸ್ಟೋರೇಜ್ (Storage)
ಈ ಸ್ಮಾರ್ಟ್ ಫೋನ್ ಎರಡು ರೂಪಾಂತರದ ಆಯ್ಕಗಳಲ್ಲಿಲಭ್ಯವಾಗುತ್ತವೆ.
8GB RAM ಜೊತೆಗೆ 128 GB ಮತ್ತು 256GB ಇಂಟರ್ನಲ್ ಸ್ಟೋರೇಜ್ (Internal Storage) ಸಾಮರ್ಥ್ಯವನ್ನು ಪಡೆದುಕೊಂಡಿದೆ.
ಬ್ಯಾಟರಿ ಮತ್ತು ಇತರೆ ಸೌಲಭ್ಯ(Battery and other connectivity features):
ಈ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು (battery) ಹೊಂದಿದೆ. ಇದು 25W ವೇಗದ ಚಾರ್ಜಿಂಗ್ (Fast charging) ಬೆಂಬಲಿಸಲಿದೆ.
ಇನ್ನು ಇತರೆ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, Wi-Fi, ಬ್ಲೂಟೂತ್, GPS, 3.5mm ಹೆಡ್‌ಫೋನ್ ಜ್ಯಾಕ್ ಮತ್ತು USB ಟೈಪ್-C ಪೋರ್ಟ್ ಸೇರಿದೆ. ಇದಲ್ಲದೆ ಡಾಲ್ಬಿ ಅಟ್ಮಾಸ್ ತಂತ್ರಜ್ಞಾನದೊಂದಿಗೆ ಸ್ಪೀಕರ್‌ಗಳನ್ನು ಹೊಂದಿದೆ. ಇದರೊಂದಿಗೆ ಅಕ್ಸೆಲೆರೊಮೀಟರ್‌ಗಳು, ಗೈರೊ ಸೆನ್ಸಾರ್, ಲೈಟ್ ಸೆನ್ಸಾರ್ ಮತ್ತು ವರ್ಚುವಲ್ ಪ್ರಾಕ್ಸಿಮಿಟಿ ಸೆನ್ಸಾರ್ ಒಳಗೊಂಡಿದೆ ಎಂದು ಹೇಳಬಹುದು.

ಈ ಫೋನಿನ ಬೆಲೆ :
ಇನ್ನೂ ಕೊನೆಯದಾಗಿ ಸ್ಯಾಮ್‌ಸಂಗ್ ಗ್ಯಾಲಕ್ಸಿ A25 5G ಸ್ಮಾರ್ಟ್‌ಫೋನ್ ಬೆಲೆ ಮತ್ತು ಲಭ್ಯತೆ (Price)
ಬಗ್ಗೆ ನೋಡುವುದಾದರೆ,ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ A25 5G ಸ್ಮಾರ್ಟ್‌ಫೋನ್ 8GB + 128GB ಸ್ಟೋರೇಜ್ (Storage) ಆಯ್ಕೆಯು 26,999ರೂ ಬೆಲೆಯನ್ನು ಹೊಂದಿದೆ.
ಇನ್ನು 8GB + 256GB ಸ್ಟೋರೇಜ್ (Storage) ಆಯ್ಕೆಯು 29,999ರೂ ಬೆಲೆಯಲ್ಲಿ ಲಭ್ಯವಾಗಲಿದೆ.
ಇದನ್ನು SBI ಕಾರ್ಡ್‌ಗಳನ್ನು ಬಳಸಿಕೊಂಡು ಖರೀದಿಸುವ ಗ್ರಾಹಕರಿಗೆ 3,000 ರಿಯಾಯಿತಿ (Offer)ಕೂಡ ದೊರೆಯಲಿದೆ.
ಈ ಸ್ಮಾರ್ಟ್ ಫೋನ್ ಫೋನ್,
ತಿಳಿ ನೀಲಿ,
ತಿಳಿ ಕಪ್ಪು,
ನೀಲಿ ಮತ್ತು
ಹಳದಿ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ ಎಂದು ತಿಳಿದು ಬಂದಿದೆ.
ನೀವೂ ಕೂಡಾ ಈ ಸ್ಯಾಮ್‌ಸಂಗ್ ಗ್ಯಾಲಕ್ಸಿ A25 5G ಸ್ಮಾರ್ಟ್ ಫೋನ್ ( Samsung Galaxy A25 5G) ಅನ್ನು ಉತ್ತಮ ರಿಯಾಯಿತಿ ದರದಲ್ಲಿ ಖರೀದಿ ಮಾಡಿ ನಿಮ್ಮದಾಗಿಸಿಕೊಳ್ಳಿ.ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಸ್ಮಾರ್ಟ್‌ಫೋನ್‌ನ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ
ಈ ಮಾಹಿತಿಗಳನ್ನು ಓದಿ
- ರೆಡ್ಮಿಯ ಮತ್ತೊಂದು ಮೊಬೈಲ್ ಮಾರುಕಟ್ಟೆಗೆ ಗ್ರಾಂಡ್ ಎಂಟ್ರಿ, ಏನಿದರ ವಿಶೇಷತೆ?
- ಹೊಸ ಐಟೆಲ್ ಫೋನ್ ಎಂಟ್ರಿ..! ಇಷ್ಟು ಕಮ್ಮಿ ಬೆಲೆಗೆ 5G ಮೊಬೈಲ್ ಯಾರೂ ಕೊಡಲ್ಲ.
- ಬರೀ 10 ಸಾವಿರದೊಳಗೆ ಸಿಗುತ್ತಿದೆ ಹೊಸ ಲಾವಾ 5G ಮೊಬೈಲ್, ಚೈನಾ ಮೊಬೈಲ್ಸ್ ಗೆ ಟಕ್ಕರ್
- 50 ಮೆಗಾಪಿಕ್ಸೆಲ್ ಕ್ಯಾಮೆರಾದೊಂದಿಗೆ, ಕಡಿಮೆ ಬೆಲೆಯ ಬೆಸ್ಟ್ 5G ಫೋನ್ ಬಿಡುಗಡೆ !
- 6000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ನುಬಿಯಾ Z60 ಅಲ್ಟ್ರಾ ಫೋನ್ ಅನಾವರಣ!
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group





