ಮೊನ್ನೆ ಅಷ್ಟೇ ವಾಹನಗಳಿಗೆ ಹೊಸದಾಗಿ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ( HSRP Number Plate ) ಹಾಕಿಸಬೇಕು ಅಂತಾ ಹೇಳಿದ್ದ ಸರ್ಕಾರ, ಇದೀಗ ಮತ್ತೊಂದು ಹೊಸ ಕಾನೂನು ಜಾರಿಗೆ ತಂದಿದೆ. ಅದರ ಬಗ್ಗೆ ಮಾಹಿತಿ ಈ ಕೆಳಗಿನಂತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಡಿಎಲ್ (Driving License) ಹಾಗೂ ಆರ್‌ಸಿಗೆ (Registration Certificate) ಹೊಸ ರೂಪ
ಡಿಜಿಟಲ್ ತಂತ್ರಜ್ಞಾನವು ( Digital Technology ) ಈಗ ಎಲ್ಲಾ ಕಡೆ ಆವರಿಸಿದೆ. ಹಾಗೆಯೇ ಇದೀಗ ಸರ್ಕಾರ ಸಾರಿಗೆ ವ್ಯವಸ್ಥೆಯಲ್ಲಿ ಇರುವ ಹಲವು ಕಾರ್ಡ್ ಗಳನ್ನು ಸ್ಮಾರ್ಟ್ ಕಾರ್ಡ್ ( Smart Card ) ಮಾಡುವ ಹಂತದಲ್ಲಿದೆ. ಡಿಎಲ್ ಹಾಗೂ ಆರ್‌ಸಿಗೆ ಹೊಸ ರೂಪ ನೀಡಲು ಸರ್ಕಾರ ನಿರ್ಧರಿಸಿದೆ. ಹೊಸ ರೂಪ ಕೊಡುತ್ತಿರುವ ಈ ಹೊಸ ಕಾರ್ಡ್ ಯಾವ ಮಾದರಿಯಲ್ಲಿ ಇರಲಿದೆ ? ಮತ್ತು ಈ ಹೊಸ ಸ್ಮಾರ್ಟ್ ಕಾರ್ಡ್‌ನಿಂದ ಏನೆಲ್ಲಾ ಪ್ರಯೋಜನ ಇದೆ ಎಂದು ನೋಡುವುದಾದರೆ.
ದೇಶದಲ್ಲಿ ಡಿಎಲ್ ( DL ) ಹಾಗೂ ಆರ್ ಸಿ ( RC ) ಕಾರ್ಡ್ ಗಳು ಒಂದೇ ರೀತಿ ಇರಬೇಕು ಎಂಬುವುದು ಸರ್ಕಾರದ ಆಶಯ. ಅದಕ್ಕಾಗಿ ವಾಹನ ಚಾಲನಾ ಪರವಾನಗಿ ಹಾಗೂ ವಾಹನಗಳ ನೋಂದಣಿ ಪ್ರಮಾಣ ಪತ್ರದಲ್ಲಿ ಇರುವ ಎಲ್ಲಾ ರೀತಿಯ ಪ್ರಾಬ್ಲಮ್ ಗಳನ್ನು ಸರಿ ಪಡೆಸಬೇಕು ಎಂದು ನಿರ್ಧರಿಸಿದೆ. ಇದಕ್ಕಾಗಿ ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಈ ಕಾರ್ಡ್ ಗಳನ್ನು ಸ್ಮಾರ್ಟ್ ಕಾರ್ಡ್ ಮಾಡಲು ನಿರ್ಧರಿಸಿದೆ.
ಈ ಹೊಸ ಮಾದರಿಯ ಸ್ಮಾರ್ಟ್ ಕಾರ್ಡ್ ಗಳಲ್ಲಿ ಕ್ಯೂ ಆರ್ ಕೋಡ್ ( QR Code ) :
ಈಗಾಗಲೇ ನಿಮ್ಮ ಡಿಎಲ್ ಹಾಗೂ ಆರ್‌ಸಿ ಕಾರ್ಡ್‌ಗಳಲ್ಲಿ ಚಿಪ್ ( Chip ) ಇದೆ. ಈ ಹೊಸ ಮಾದರಿಯ ಸ್ಮಾರ್ಟ್ ಕಾರ್ಡ್‌ಗಳಲ್ಲಿ ಕ್ಯು ಆರ್ ಕೋಡ್ ಇರುವುದು ಒಂದು ವಿಶಿಷ್ಟತೆ ಆಗಿದೆ. ಈ ಕ್ಯೂ ಆರ್ ಕೋಡ್ ನಿಂದ ಪೊಲೀಸರು ಅಥವಾ ಆರ್‌ಟಿಒ ( RTO ) ತಪಾಸಣೆ ವೇಳೆ ವಾಹನದ ದೃಢೀಕರಣ ಹಾಗೂ ವಾಹನ ಮಾಲೀಕರ ಎಲ್ಲ ಮಾಹಿತಿಯನ್ನು ಒಂದೇ ಫಾರ್ಮ್ ನಲ್ಲಿ ನೋಡಲು ಸಹಾಯವಾಗುತ್ತದೆ. ಶೀಘ್ರದಲ್ಲೇ ಈ ಯೋಜನೆ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.
ಹೊಸ ಡಿಎಲ್ ಮತ್ತು ಆರ್ ಸಿ ಕಾರ್ಡ್ ನಲ್ಲಿ ಏನೆಲ್ಲ ವಿಶಿಷ್ಟತೆಗಳು ಇರುತ್ತವೆ ?

ಹೊಸ ಡಿಎಲ್‌ನ ಮುಂಭಾಗದಲ್ಲಿ ಕಾರ್ಡ್ ಮಾಲೀಕರ ಹೆಸರು, ಫೋಟೋ, ಅಡ್ರೆಸ್, ಹುಟ್ಟಿದ ದಿನಾಂಕ, ರಕ್ತದ ಗುಂಪು ಸೇರಿದಂತೆ ಹಲವು ವಿವರಗಳು ಇರುತ್ತವೆ. ಇನ್ನು ಡಿಎಲ್‌ನ ಹಿಂಭಾಗದಲ್ಲಿ ನಿಮ್ಮ ಮೊಬೈಲ್ ನಂಬರ್, ಯಾವೆಲ್ಲಾ ಮಾದರಿಯ ವಾಹನ ಚಲಾಯಿಸಲು ಅನುಮತಿ ಇದೆ ಎನ್ನುವ ವಿವರ ಇರುತ್ತದೆ. ಇನ್ನು ಈ ಎಲ್ಲಾ ವಿಷಯಗಳೂ ಚಿಪ್‌ಗಳಲ್ಲಿ ಇರುವ ಜೊತೆಯಲ್ಲೇ ಕ್ಯೂ ಆರ್ ಕೋಡ್‌ನಲ್ಲೂ ಇರಲಿದೆ. ಅಷ್ಟೇ ಅಲ್ಲದೆ ತುರ್ತು ಸಂಪರ್ಕ ಸಂಖ್ಯೆ ಕೂಡಾ ಇರುತ್ತದೆ ಎಂದು ಸರ್ಕಾರ ತಿಳಿಸಿದೆ.
ಹಾಗೆಯೇ ಹೊಸ ಆರ್‌ಸಿ ಕಾರ್ಡ್ ಮುಂಭಾಗದಲ್ಲಿ ವಾಹನದ ನೋಂದಣಿ ಸಂಖ್ಯೆ, ನೋಂದಣಿ ಆದ ದಿನಾಂಕ, ಕಾರ್ಡ್ ಅಂತ್ಯ ಆಗುವ ದಿನಾಂಕ, ಚಾಸಿಸ್ ಸಂಖ್ಯೆ, ಎಂಜಿನ್ ಸಂಖ್ಯೆ ಜೊತೆಯಲ್ಲೇ ವಾಹನಗಳ ಟ್ರ್ಯಾಕಿಂಗ್ ಸಿಸ್ಟಂ ಕೂಡಾ ಅಳವಡಿಕೆ ಮಾಡಲಾಗಿರುತ್ತೆ. ಇನ್ನು ಆರ್‌ಸಿ ಕಾರ್ಡ್‌ನ ಹಿಂಭಾಗದಲ್ಲಿ ವಾಹನ ತಯಾರಕರ ಹೆಸರು, ವಾಹನದ ಮಾದರಿ, ಸೀಟುಗಳ ಸಾಮರ್ಥ್ಯ ಸೇರಿದಂತೆ ಹಲವು ಅಂಶಗಳನ್ನು ಒಳಗೊಂಡಿರುತ್ತದೆ.
ಈ ಸ್ಮಾರ್ಟ್ ಕಾರ್ಡ್ ಗಳಿಗೆ ಹೊಸ ರೂಪ ನೀಡುವ ಉದ್ದೇಶ ( Purpose ) :
ಪೊಲೀಸರು ಅಥವಾ ಆರ್‌ಟಿಒ ಸಿಬ್ಬಂದಿ ಡಿಎಲ್ ಸ್ಮಾರ್ಟ್ ಕಾರ್ಡ್ ಅನ್ನು ತಮ್ಮ ಮೊಬೈಲ್‌ನಲ್ಲಿ ಒಮ್ಮೆ ಸ್ಕ್ಯಾನ್ ಮಾಡಿದ ಕೂಡಲೇ ಆ ವ್ಯಕ್ತಿಯ ಎಲ್ಲ ಮಾಹಿತಿ ಅವರಿಗೆ ಲಭ್ಯ ಆಗುತ್ತದೆ. ಈ ಒಂದು ಕಾರಣಕ್ಕಾಗಿ ಸ್ಮಾರ್ಟ್ ಕಾರ್ಡ್‌ನಲ್ಲಿ ತಂತ್ರಜ್ಞಾನ ಅಳವಡಿಕೆ ಮಾಡಲಾಗಿದೆ. ಇನ್ನು ಈಗಾಗಲೇ ವಿತರಣೆ ಮಾಡಲಾಗುತ್ತಿರುವ ಆರ್‌ಸಿ ಕಾರ್ಡ್‌ಗಳಲ್ಲಿ ಚಿಪ್ ಇದೆ ಹಾಗೆಯೇ ಅದರ ಜೊತೆಯಲ್ಲೇ ವಾಹನದ ಎಲ್ಲಾ ಮಾಹಿತಿ ಕೂಡ ಇದೆ. ಈ ಒಂದು ಹೊಸ ಸ್ಮಾರ್ಟ್ ಕಾರ್ಡ್ ನಲ್ಲೂ ಈ ಎಲ್ಲ ಮಾಹಿತಿಗಳು ಹೊಸ ರೂಪದಲ್ಲಿ ಇರುತ್ತವೆ. ಅದರ ಜೊತೆಯಲ್ಲೇ ಹೆಚ್ಚಿನ ಮಾಹಿತಿ ಸೇರ್ಪಡೆ ಮಾಡಲಾಗಿರುತ್ತೆ. ಮತ್ತು ಕ್ಯೂ ಆರ್ ಕೋಡ್ ಕೂಡಾ ಇರುತ್ತದೆ ಎಂದು ಸರ್ಕಾರ ತಿಳಿಸಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group








