ಹೊಸ ನಿಯಮದಂತೆ, ಈಗ ರೈಲಿನಲ್ಲಿ ವೈಟಿಂಗ್ ಟಿಕೆಟ್ ಮೂಲಕ ಪ್ರಯಾಣಿಸಲು ಸಾಧ್ಯವಿಲ್ಲ. ಹೌದು, ರೈಲು ಪ್ರಯಾಣವು(train journey) ಅತ್ಯಂತ ಜನಪ್ರಿಯವಾದ ಪ್ರಯಾಣ ಮಾರ್ಗವಾಗಿದೆ. ಆದರೆ, ಕೆಲವೊಮ್ಮೆ ರೈಲು ಪ್ರಯಾಣದ ವೇಳೆ ಸಮಸ್ಯೆಗಳು ಕಾಡುತ್ತವೆ. ಅವುಗಳಲ್ಲಿ ಒಂದು ಸಮಸ್ಯೆ ಎಂದರೆ ರಿಸರ್ವ್ ಬೋಗಿಯಲ್ಲಿ ವೈಟಿಂಗ್ ಪಟ್ಟಿ(waiting list), ವೈಟಿಂಗ್ ಟಿಕೆಟ್(Waiting ticket) ಪ್ರಯಾಣಿಕರು ರಿಸರ್ವ್ ಬೋಗಿಯಲ್ಲಿ ಸೇರಿಕೊಳ್ಳುವುದು ಇನ್ನಿತರೇ ಪ್ರಯಾಣಿಕರಿಗೆ ತೊಂದರೆ ಮಾಡುತ್ತದೆ. ಆದರೆ ಈಗ ವೈಟಿಂಗ್ ಲಿಸ್ಟ್ ಪ್ರಯಾಣಿಕರು ಕಂಡು ಬಂದಲ್ಲಿ ದೂರು ಸಲ್ಲಿಸಬಹುದು. ಈ ಹೊಸ ವಿಚಾರದ ಕುರಿತು ಇನ್ನಷ್ಟು ಮಹಿತಿಯನ್ನು ಪಡೆಯಲು ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ರೈಲ್ವೆ ಪ್ರಯಾಣದಲ್ಲಿ ಹೊಸ ನಿಯಮ :
ರೈಲ್ವೆಯು ಪ್ರಪಂಚದ ಅತ್ಯಂತ ಪ್ರಮುಖ ಮತ್ತು ಹಳೆಯ ಸಾರಿಗೆ ವಿಧಾನಗಳಲ್ಲಿ ಒಂದಾಗಿದೆ. ನಗರಗಳು, ದೇಶಗಳು ಮತ್ತು ಖಂಡಗಳ ಅಭಿವೃದ್ಧಿಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ದೂರದ ಪ್ರಯಾಣಕ್ಕೆ ರೈಲ್ವೆ ಕೂಡ ಜನಪ್ರಿಯ ಆಯ್ಕೆಯಾಗಿದೆ. ಟ್ರಾಫಿಕ್ ಅಥವಾ ವಿಮಾನ ನಿಲ್ದಾಣಗಳ ಬಗ್ಗೆ ಚಿಂತಿಸದೆ ದೂರದವರೆಗೆ ಪ್ರಯಾಣಿಸಲು ಆರಾಮದಾಯಕ ಮತ್ತು ಅನುಕೂಲಕರ ಮಾರ್ಗವನ್ನು ರೈಲುಗಳು ನೀಡುತ್ತವೆ.
ರೈಲು ಪ್ರಯಾಣವು ಅತ್ಯಂತ ಜನಪ್ರಿಯವಾದ ಪ್ರಯಾಣ ಮಾರ್ಗವಾಗಿದೆ. ಆದರೆ, ಕೆಲವೊಮ್ಮೆ ರೈಲು ಪ್ರಯಾಣದ ವೇಳೆ ಸಮಸ್ಯೆಗಳು ಕಾಡುತ್ತವೆ. ಅವುಗಳಲ್ಲಿ ಒಂದು ಸಮಸ್ಯೆ ಎಂದರೆ ರಿಸರ್ವ್ ಬೋಗಿಯಲ್ಲಿ ವೈಟಿಂಗ್ ಟಿಕೆಟ್ ಪ್ರಯಾಣಿಕರು. ರೈಲು ಟಿಕೆಟ್‌ಗಳನ್ನು ಆನ್‌ಲೈನ್(Online) ನಲ್ಲಿ ಅಥವಾ ಟಿಕೆಟ್ ಕೌಂಟರ್(Ticket Counter)ನಲ್ಲಿ ಮುಂಚಿತವಾಗಿ ಕಾಯ್ದಿರಿಸಿದಾಗ, ಆ ಟಿಕೆಟ್‌ಗಳನ್ನು ಖರೀದಿಸಿದವರಿಗೆ ಮಾತ್ರ ಆ ಬೋಗಿ ಖಾಲಿ ಇರುತ್ತದೆ. ಆದರೆ, ಕೆಲವೊಮ್ಮೆ ಬೇಡಿಕೆ ಹೆಚ್ಚಾದರೆ, ಆ ಬೋಗಿ ತುಂಬಿಹೋಗುತ್ತದೆ.
ಇ-ಟಿಕೆಟ್ ವೈಟಿಂಗ್ ಲಿಸ್ಟ್‌ನಲ್ಲಿದ್ದರೆ, ಅದು ರೈಲು ಹೊರಡುವ ಮೊದಲು ಆಟೋಮ್ಯಾಟಿಕ್ ಆಗಿ ರದ್ದಾಗುತ್ತದೆ. ಆದರೆ, ಕೌಂಟರ್‌ನಿಂದ ಟಿಕೆಟ್ ಮಾಡಿಸಿದರೆ, ಅದು ರದ್ದಾಗುವುದಿಲ್ಲ. ಈ ಕಾರಣದಿಂದಾಗಿ, ಕೆಲವರು ವೈಟಿಂಗ್ ಲಿಸ್ಟ್ ಟಿಕೆಟ್ ಹೊಂದಿದ್ದರೂ ಸಹ, ರಿಸರ್ವ್ಡ್ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದರು. ಆದರೆ, ಇನ್ನು ಮುಂದೆ ಹಾಗೆ ಮಾಡಲು ಸಾಧ್ಯವಾಗುವುದಿಲ್ಲ. ಇದಕ್ಕೆ ಪರಿಹಾರವಾಗಿ ಒಂದು ಹೊಸ ಅಪ್ಲಿಕೇಶನ್(New application) ತಯಾರಿಯಲ್ಲಿದೆ,ಈ ಅಪ್ಲಿಕೇಶನ್ ಕುರಿತು ಇನ್ನು ಹೆಚ್ಚಿನ ವಿವರ ಕೆಳಕಂಡತಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ರೈಲ್ವೆಯಲ್ಲಿ ವೈಟಿಂಗ್ ಟಿಕೆಟ್ ಹಿಡಿದುಕೊಂಡು ಕಾಯ್ದಿರಿಸಿದ ಬೋಗಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರ ಬಗ್ಗೆ ದೂರು ಸಲ್ಲಿಸಲು ಹೊಸ ಆಪ್ಲಿಕೆಶನ್ (Application) ಬಂದಿದೆ. ಈ ಆಪ್ಲಿಕೆಶನ್ ಇನ್ನೂ ಟೆಸ್ಟಿಂಗ್ ಹಂತದಲ್ಲಿದೆ. ಟೆಸ್ಟಿಂಗ್ ಯಶಸ್ವಿಯಾದ ನಂತರ, ಪ್ರಯಾಣಿಕರು Google ಮತ್ತು Apple Play ಅಪ್ಲಿಕೇಶನ್ ಮೂಲಕ ದೂರು ಸಲ್ಲಿಸಬಹುದು. ರೈಲ್ವೆ ಮಂಡಳಿಗೆ ವೈಟಿಂಗ್ ಟಿಕೆಟ್ ಹೊಂದಿರುವವರು ಕಾಯ್ದಿರಿಸಿದ ಬೋಗಿಯಲ್ಲಿ ಪ್ರಯಾಣಿಸುತ್ತಾರೆ ಎಂಬ ದೂರುಗಳು ಹೆಚ್ಚಾಗಿ ಬರುತ್ತಿವೆ. ಇದರಿಂದಾಗಿ ಇತರ ಪ್ರಯಾಣಿಕರು ತೊಂದರೆ ಅನುಭವಿಸುತ್ತಾರೆ. ಕೆಲವು ಪ್ರಕರಣಗಳಲ್ಲಿ ದೂರು ನೀಡಿದರೂ ತಕ್ಷಣ ಪರಿಹಾರ ಸಿಗುತ್ತಿಲ್ಲ. ಈ ಹೊಸ ಆಪ್ಲಿಕೆಶನ್ ಬಳಸಿಕೊಂಡು ದೂರು ಸಲ್ಲಿಸಿದರೆ, ದೂರುಗಳು ತಕ್ಷಣ ಪರಿಹಾರವಾಗುವ ಸಾಧ್ಯತೆ ಹೆಚ್ಚು.
ಈ ಅಪ್ಲಿಕೇಶನ್ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಈ ಕೆಳಗಿನ ಹಂತಗಳಲ್ಲಿ ವಿವರಿಸಬಹುದು:
ಈ ಅಪ್ಲಿಕೇಶನ್ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಈ ಕೆಳಗಿನ ಹಂತಗಳಲ್ಲಿ ವಿವರಿಸಬಹುದು:
ರೈಲು ನಿಲ್ದಾಣದಿಂದ ನಿರ್ಗಮಿಸಿದ ನಂತರ, ಟಿಟಿಇ ತಮ್ಮ ಹ್ಯಾಂಡ್ ಹೆಲ್ಡ್ ಡಿವೈಸ್ ಮೂಲಕ ಕಾಯ್ದಿರಿಸಿದ ಮತ್ತು ಕಾಯ್ದಿರಿಸದ ಆಸನಗಳ ಡೇಟಾವನ್ನು ಫೀಡ್ ಮಾಡುತ್ತಾರೆ.
ಪ್ರಯಾಣಿಕರು ಆ್ಯಪ್‌ನಲ್ಲಿ ರೈಲು ಸಂಖ್ಯೆ ಮತ್ತು ಕೋಚ್ ಅನ್ನು ನಮೂದಿಸುತ್ತಾರೆ.
ಆ್ಯಪ್ ಬೋಗಿಯ ಸೀಟ್ ಬರ್ತ್ ರಿಸರ್ವೇಶನ್ ಲೇಔಟ್ ಅನ್ನು ಪ್ರದರ್ಶಿಸುತ್ತದೆ.
ಬೋಗಿಯಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚು ಜನರು ಇದ್ದರೆ, ಪ್ರಯಾಣಿಕರು ಆ್ಯಪ್ ಮೂಲಕ ದೂರು ನೀಡಬಹುದು.
ದೂರು ದಾಖಲಾದ ತಕ್ಷಣ, ಸಂಪೂರ್ಣ ಮಾಹಿತಿಯು ಸ್ವಯಂಚಾಲಿತವಾಗಿ ಸೆಂಟ್ರಲೈಸ್ಡ್ ಸಿಸ್ಟಮ್‌ಗೆ ಹೋಗುತ್ತದೆ.
ಸೆಂಟ್ರಲೈಸ್ಡ್ ಸಿಸ್ಟಮ್ ಟಿಟಿಇಗೆ ಅಲರ್ಟ್ ಮಾಡುತ್ತದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group








