ರೈತರಿಗೆ ಜೀವಿತಾವಧಿ ಪಿಂಚಣಿ ಭದ್ರತೆ – ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ ಸಂಪೂರ್ಣ ಮಾಹಿತಿ
ಭಾರತವನ್ನು “ಅನ್ನದಾತರ ದೇಶ” ಎಂದು ಕರೆಯಲು ಕಾರಣವೇ ನಮ್ಮ ರೈತರು. ಅವರು ಬೆಳೆದ ಧಾನ್ಯ, ಹಣ್ಣು, ತರಕಾರಿ, ಹೂವು ಇವೆಲ್ಲವೂ ನಮ್ಮ ಆಹಾರದಿಂದ ಹಿಡಿದು ರಾಷ್ಟ್ರದ ಆರ್ಥಿಕತೆ(Nation economic)ಯವರೆಗೆ ಅವಿಭಾಜ್ಯ ಭಾಗ. ಆದರೆ ವಿಷಾದಕರ ಸಂಗತಿ ಏನೆಂದರೆ, ಸರ್ಕಾರಿ ಅಥವಾ ಸಂಘಟಿತ ವಲಯದ ನೌಕರರಿಗೆ ದೊರೆಯುವ ನಿವೃತ್ತಿ ಭದ್ರತೆ ಮತ್ತು ಪಿಂಚಣಿ ಸೌಲಭ್ಯಗಳು, ಜೀವನವಿಡೀ ದುಡಿದ ರೈತನಿಗೆ ವಿರಳ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ವೃದ್ಧಾಪ್ಯದಲ್ಲಿ ಶಾರೀರಿಕ ಶಕ್ತಿ ಕುಂದಿದಾಗ ಕೃಷಿ ಕೆಲಸ (Agriculture) ಮುಂದುವರಿಸಲು ಅಸಾಧ್ಯವಾಗಬಹುದು. ಇದರ ಜೊತೆಗೆ ಮಾರುಕಟ್ಟೆಯ ಅನಿಶ್ಚಿತತೆ, ಬೆಲೆ ಇಳಿಕೆ, ಪ್ರಕೃತಿ ವಿಕೋಪ ಮುಂತಾದವುಗಳು ರೈತರ ಬದುಕನ್ನು ಇನ್ನಷ್ಟು ಅಸ್ಥಿರಗೊಳಿಸುತ್ತವೆ. ಇಂತಹ ಸಮಯದಲ್ಲಿ ತಿಂಗಳಿಗೆ ಸ್ಥಿರ ಆದಾಯವಿರುವುದು ಒಂದು ದೊಡ್ಡ ಭದ್ರತೆ.
ಈ ವಾಸ್ತವಿಕತೆಯನ್ನು ಮನಗಂಡು, ಕೇಂದ್ರ ಸರ್ಕಾರವು (Central government) 2019ರಲ್ಲಿ ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ (PM-KMY) ಎಂಬ ಹೆಸರಿನಲ್ಲಿ ರೈತರಿಗಾಗಿ ವಿಶೇಷ ಪಿಂಚಣಿ ಯೋಜನೆ ಪರಿಚಯಿಸಿತು. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸಾಮಾಜಿಕ ಭದ್ರತೆಯ(Social Safety) ವಲಯ ಒದಗಿಸುವುದು ಇದರ ಉದ್ದೇಶ. ಯೋಜನೆಯಡಿ 60 ವರ್ಷ ವಯಸ್ಸಿನ ನಂತರ ಪ್ರತಿಮಾಸ ₹3,000 ಪಿಂಚಣಿ ಲಭ್ಯವಾಗುತ್ತದೆ ಅಂದರೆ ವರ್ಷಕ್ಕೆ ₹36,000 ನಿಶ್ಚಿತ ಆದಾಯ.
ಯೋಜನೆಯ ವಿವರ:
ಸ್ವಯಂಪ್ರೇರಿತ, ಕೊಡುಗೆ ಆಧಾರಿತ ಪಿಂಚಣಿ ಯೋಜನೆ.
ಪಿಂಚಣಿ ಮೊತ್ತ: ತಿಂಗಳಿಗೆ ₹3,000 (ವರ್ಷಕ್ಕೆ ₹36,000).
ಅರ್ಹರು: ಕೇವಲ ಸಣ್ಣ ಮತ್ತು ಅತಿ ಸಣ್ಣ ರೈತರು (2 ಹೆಕ್ಟೇರ್ ವರೆಗೆ ಭೂಮಿ).
ನೋಂದಣಿ ವಯಸ್ಸು: 18 – 40 ವರ್ಷ
ಕೊಡುಗೆ ಮೊತ್ತ: ತಿಂಗಳಿಗೆ ₹55 ರಿಂದ ₹200 (ವಯಸ್ಸಿನ ಆಧಾರದಲ್ಲಿ).
ಸರ್ಕಾರಿ ವಂತಿಕೆ: ರೈತ ನೀಡಿದಷ್ಟೇ ಮೊತ್ತವನ್ನು ಕೇಂದ್ರ ಸರ್ಕಾರವೂ ನೀಡುತ್ತದೆ.
ಯೋಜನೆಯ ಪ್ರಮುಖ ವೈಶಿಷ್ಟ್ಯಗಳು (Feature’s) ಏನು?:
1. ಸ್ವಯಂಪ್ರೇರಿತ ಸೇರ್ಪಡೆ : ರೈತರು ತಮ್ಮ ಸೌಲಭ್ಯಕ್ಕೆ ಅನುಗುಣವಾಗಿ ಯೋಜನೆಗೆ ಸೇರ್ಪಡೆಯಾಗಬಹುದು.
2. ಕೊಡುಗೆ ಆಧಾರಿತ ವ್ಯವಸ್ಥೆ : ರೈತರ ಮಾಸಿಕ ಕೊಡುಗೆಗೆ ಸಮಾನ ಮೊತ್ತವನ್ನು ಸರ್ಕಾರ (Government) ನೀಡುತ್ತದೆ.
3. ನಿಶ್ಚಿತ ಪಿಂಚಣಿ ಭದ್ರತೆ : 60 ವರ್ಷ ವಯಸ್ಸಿನ ನಂತರ ಜೀವಿತಾವಧಿ ಪ್ರತಿ ತಿಂಗಳು ₹3,000.
4. ಕುಟುಂಬಕ್ಕೆ ಭದ್ರತೆ : ರೈತ ಮರಣ ಹೊಂದಿದರೆ, ಸಂಗಾತಿ ಯೋಜನೆ ಮುಂದುವರಿಸಲು ಅಥವಾ ಬಡ್ಡಿ ಸಮೇತ ಮೊತ್ತ ಪಡೆಯಲು ಅವಕಾಶ.
ರೈತರಿಗೆ ದೊರೆಯುವ ಪ್ರಮುಖ ಪ್ರಯೋಜನಗಳು ಯಾವುವು?:
ವೃದ್ಧಾಪ್ಯದಲ್ಲಿ ದೈನಂದಿನ ಖರ್ಚಿಗೆ ಸ್ಥಿರ ಆದಾಯ.
ಕನಿಷ್ಠ ₹55 ಪ್ರತಿ ತಿಂಗಳು.
ಇಳಿವಯಸ್ಸಿನಲ್ಲಿ ಯಾರ ಮೇಲೂ ಅವಲಂಬಿತರಾಗದಂತೆ ನೆರವು.
ಸಂಗಾತಿಗೂ ಪಿಂಚಣಿ ಹಕ್ಕು.
ಈ ಯೋಜನೆಗೆ ಅರ್ಜಿ (Apllication) ಸಲ್ಲಿಸಲು ಬೇಕಾದ ಅರ್ಹತಾ ಮಾನದಂಡಗಳು ಏನು?:
ಭೂಮಿ: 2 ಹೆಕ್ಟೇರ್‌ವರೆಗೆ (ಸುಮಾರು 5 ಎಕರೆ) ಕೃಷಿ ಭೂಮಿ ಹೊಂದಿರುವ ರೈತರು.
ವಯಸ್ಸು: 18 – 40 ವರ್ಷ.
ಅಗತ್ಯ ದಾಖಲೆಗಳು(Important Documents): ಆಧಾರ್ ಕಾರ್ಡ್, ಉಳಿತಾಯ ಬ್ಯಾಂಕ್ ಖಾತೆ, ಭೂ ದಾಖಲೆಗಳು.
ನೋಂದಣಿ ಪ್ರಕ್ರಿಯೆ ಯಾವರೀತಿ ಇರುತ್ತದೆ?:
1. ಆನ್‌ಲೈನ್ (Online) ನೋಂದಣಿ ಮಾಡುವುದು ಹೇಗೆ?
ಅಧಿಕೃತ ಪೋರ್ಟಲ್: www.pmkmy.gov.in
“ಸ್ವಯಂ ದಾಖಲಾತಿ” ಆಯ್ಕೆಮಾಡಿ.
ನಂತರ ಮೊಬೈಲ್ OTP ಪರಿಶೀಲನೆ.
ವೈಯಕ್ತಿಕ, ಬ್ಯಾಂಕ್ ಹಾಗೂ ಭೂ ವಿವರಗಳನ್ನು ನಮೂದಿಸಿ.
ಕೊಡುಗೆ ಪಾವತಿ ವಿಧಾನ ಆಯ್ಕೆ ಮಾಡಿ ಅರ್ಜಿ ಸಲ್ಲಿಸಿ
2. ಸಾಮಾನ್ಯ ಸೇವಾ ಕೇಂದ್ರ (CSC) ಮೂಲಕ ನೋಂದಣಿ ಮಾಡುವುದು ಹೇಗೆ?
ಹತ್ತಿರದ CSC/VLE ಕಚೇರಿಗೆ ಭೇಟಿ ನೀಡಿ.
ಅಗತ್ಯ ದಾಖಲೆಗಳನ್ನು ಸಲ್ಲಿಸಿ.
ನೋಂದಣಿ ಪೂರ್ಣಗೊಂಡ ನಂತರ PMKMY ಕಾರ್ಡ್ ಪಡೆಯಿರಿ.
ಕೊಡುಗೆ ಮತ್ತು ಸರ್ಕಾರಿ ವಂತಿಕೆ ಯಾವರೀತಿ ಇರುತ್ತದೆ?:
ಮಾಸಿಕ ಕೊಡುಗೆ: 18 ವರ್ಷ ವಯಸ್ಸಿನವರಿಗೆ ₹55 ರೂ –40 ವರ್ಷ ವಯಸ್ಸಿನವರಿಗೆ ₹200ರೂ ಪ್ರತಿ ತಿಂಗಳು.
ಸರ್ಕಾರಿ ವಂತಿಕೆ: ರೈತ ಕೊಡುಗೆಯಷ್ಟೇ ಸರ್ಕಾರ ನೀಡುತ್ತದೆ.
ಪಾವತಿ ಅವಧಿ: 60 ವರ್ಷ ವಯಸ್ಸು ತಲುಪುವವರೆಗೆ.
ಯೋಜನೆಯಿಂದ ನಿರ್ಗಮನ ಅಥವಾ ಮರಣದ ಬಳಿಕದ ನಿಯಮಗಳು (Rules) ಹೇಗೆ ಇರುತ್ತವೆ?:
ನಿರ್ಗಮನ: ಪಾವತಿಸಿದ ಮೊತ್ತ + ಬಡ್ಡಿ ಮರುಪಾವತಿ.
ರೈತ ಮರಣ: ಸಂಗಾತಿಗೆ ಮುಂದುವರಿಸಲು ಅವಕಾಶ ಅಥವಾ ಮೊತ್ತ + ಬಡ್ಡಿ ಮರುಪಾವತಿ.
ಸಂಗಾತಿ ಮರಣ: ಇಬ್ಬರೂ ಮರಣ ಹೊಂದಿದರೆ, ನಿಧಿ ಪಿಂಚಣಿ ನಿಧಿಗೆ ಹಿಂದಿರುಗುತ್ತದೆ.
ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು(Documents) ಯಾವುವು?:
ರೈತ ಮತ್ತು ಸಂಗಾತಿಯ ಹೆಸರು, ಜನ್ಮ ದಿನಾಂಕ.
ಬ್ಯಾಂಕ್ ಖಾತೆ ಸಂಖ್ಯೆ ಮತ್ತು IFSC/MICR ಕೋಡ್.
ಮೊಬೈಲ್ ಸಂಖ್ಯೆ.
ಆಧಾರ್ ಸಂಖ್ಯೆ.
ಭೂ ದಾಖಲೆಗಳು.
ಒಟ್ಟಾರೆಯಾಗಿ, ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ (Pradhan Mantri Kisan Maan dhan) ರೈತರಿಗಾಗಿ ಜೀವನಪರ್ಯಂತ ಆರ್ಥಿಕ ಭದ್ರತೆಯನ್ನು ಒದಗಿಸುವ ಮಹತ್ವದ ಹೆಜ್ಜೆ. ಕಡಿಮೆ ಕೊಡುಗೆಯ ಮೂಲಕ, ವೃದ್ಧಾಪ್ಯದಲ್ಲಿ ಸ್ಥಿರ ಆದಾಯವನ್ನು ಖಚಿತಪಡಿಸಿಕೊಳ್ಳಬಹುದು. ಹೀಗಾಗಿ, ರೈತರು ಇಂದಿನಿಂದಲೇ ನೋಂದಾಯಿಸಿ, ನಾಳೆಯ ಭದ್ರತೆಯನ್ನು ಕಟ್ಟಿಕೊಳ್ಳುವುದು ಅವಶ್ಯಕ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




