ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಸ್ಥಾನವೇ ಮನುಷ್ಯರ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಗ್ರಹಗಳು ಕಾಲಕಾಲಕ್ಕೆ ತಮ್ಮ ಸ್ಥಾನ ಬದಲಾಯಿಸುವುದರಿಂದ ಶುಭ ಮತ್ತು ಅಶುಭ ಯೋಗಗಳು ಸೃಷ್ಟಿಯಾಗುತ್ತವೆ. ಈ ಯೋಗಗಳು ಕೆಲವು ರಾಶಿಯವರ ಪ್ರೇಮ ಜೀವನದಲ್ಲಿ ಹೊಸ ಬದಲಾವಣೆಗಳನ್ನು ತರಲಿದ್ದರೆ, ಇನ್ನು ಕೆಲವರ ದಾಂಪತ್ಯ ಜೀವನಕ್ಕೆ ನೆಮ್ಮದಿ ಮತ್ತು ಸಂತೋಷವನ್ನು ಕರುಣಿಸಲಿವೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈ ವಾರ ಶುಕ್ರ ಮತ್ತು ಬುಧ ಗ್ರಹಗಳ ಸ್ಥಾನದಿಂದ ಲಕ್ಷ್ಮೀ ನಾರಾಯಣ ಯೋಗ ರೂಪುಗೊಳ್ಳುವ ಸಾಧ್ಯತೆ ಇದೆ. ಬುಧನ ಸಂಚಾರದಿಂದ ವಾರದ ಕೊನೆಯಲ್ಲಿ ಬುಧಾದಿತ್ಯ ಯೋಗ ಮತ್ತು ರಾಹು-ಗುರುವಿನ ನವಮ-ಪಂಚಮ ಯೋಗವೂ ಸೃಷ್ಟಿಯಾಗಲಿದೆ. ಹಾಗಾದರೆ, ಈ ಶುಭ ಯೋಗಗಳು ನಿಮ್ಮ ಪ್ರೇಮ ಜೀವನದ ಮೇಲೆ ಯಾವ ರೀತಿಯ ಪ್ರಭಾವ ಬೀರಬಹುದು? ಆಗಸ್ಟ್ 25 ರಿಂದ 31ರ ವರೆಗಿನ ವಾರದಲ್ಲಿ 12 ರಾಶಿಗಳ ಪ್ರೇಮ ಭವಿಷ್ಯ ಹೇಗಿರಬಹುದು ಎಂದು ಈಗ ತಿಳಿಯೋಣ.
ಮೇಷ (Aries)

ಈ ವಾರ ಮೇಷ ರಾಶಿಯವರ ಪ್ರೇಮ ಜೀವನ ಆಹ್ಲಾದಕರ ಮತ್ತು ರೋಮ್ಯಾಂಟಿಕ್ ಆಗಿರಬಹುದು. ಶುಕ್ರ ಮತ್ತು ಬುಧನ ಸಂಯೋಗವು ನಿಮ್ಮ ಜೀವನದಲ್ಲಿ ನೆಮ್ಮದಿ ತರುವುದು. ನಿಮ್ಮ ಮಧುರ ಮಾತುಗಳಿಂದ ನಿಮ್ಮ ಪ್ರೇಮಿಯ ಹೃದಯವನ್ನು ಗೆಲ್ಲುವ ಸಾಧ್ಯತೆ ಇದೆ. ವಾರದ ಮಧ್ಯಭಾಗದಲ್ಲಿ ಸ್ವಲ್ಪ ಉದ್ವಿಗ್ನತೆ ಇರಬಹುದು, ಆದರೆ ವಾರದ ಕೊನೆ ಭಾಗ ನಿಮಗೆ ಅನುಕೂಲಕರವಾಗಿ ಮಾರ್ಪಡಬಹುದು. ಪ್ರೇಮಿಯೊಂದಿಗೆ ಪ್ರಣಯ ಪ್ರವಾಸಕ್ಕೆ ಯೋಜನೆ ಮಾಡುವ ಸಾಧ್ಯತೆಗಳೂ ಇವೆ.
ವೃಷಭ (Taurus)

ವೃಷಭ ರಾಶಿಯವರಿಗೆ ಈ ವಾರ ಪ್ರೇಮ ಸಂಬಂಧಗಳ ವಿಷಯದಲ್ಲಿ ಅನುಕೂಲಕರವಾಗಿದೆ. ನಿಮ್ಮ ನಡುವೆ ಇದ್ದ ಯಾವುದೇ ಉದ್ವಿಗ್ನತೆ ದೂರವಾಗಲಿದೆ. ಅವಿವಾಹಿತರ ವಿವಾಹದ ಮಾತುಕತೆಗಳು ಮುಂದುವರೆಯಲಿರುವುದು. ದಾಂಪತ್ಯ ಜೀವನದಲ್ಲಿ ತಾಳ್ಮೆ ಮತ್ತು ಸಂಯಮದಿಂದ ವರ್ತಿಸುವುದು ಉತ್ತಮ. ಜಗಳ ಮತ್ತು ವಾದಗಳಿಂದ ದೂರವಿರಲು ಪ್ರಯತ್ನಿಸಿ. ಮಕ್ಕಳಿಗೆ ಸಂಬಂಧಿಸಿದ ವಿಷಯದಲ್ಲಿ ಸ್ವಲ್ಪ ಚಿಂತೆ ಇರಬಹುದು.
ಮಿಥುನ (Gemini)

ಈ ವಾರ ಮಿಥುನ ರಾಶಿಯವರಿಗೆ ಸಕಾರಾತ್ಮಕ ಶಕ್ತಿಯಿಂದ ಕೂಡಿರಲಿದೆ. ಪ್ರೇಮ ಜೀವನದಲ್ಲಿ ಆಳವಾದ ಪ್ರೀತಿ ಮತ್ತು ಬೆಂಬಲವಿರುವುದು. ವಾರದ ಮಧ್ಯಭಾಗದಲ್ಲಿ ಕೆಲಸದ ಒತ್ತಡದಿಂದಾಗಿ ಪ್ರೇಮಿಗೆ ಸಮಯ ಕೊಡುವುದು ಸ್ವಲ್ಪ ಕಷ್ಟಕರವಾಗಬಹುದು. ಇತರರ ಮಾತುಗಳ ಆಧಾರದ ಮೇಲೆ ಯಾವುದೇ ಊಹೆಗಳನ್ನು ಮಾಡುವುದನ್ನು ತಡೆಗಟ್ಟುವುದು ಒಳ್ಳೆಯದು. ಕುಟುಂಬದ ಬೆಂಬಲ ನಿಮ್ಮ ಪ್ರೇಮ ಜೀವನಕ್ಕೆ ಶಕ್ತಿ ನೀಡಬಹುದು.
ಕರ್ಕಾಟಕ (Cancer)

ಈ ವಾರ ನಕ್ಷತ್ರಗಳು ಕರ್ಕಾಟಕ ರಾಶಿಯವರಿಗೆ ಕೋಪವನ್ನು ನಿಯಂತ್ರಿಸಲು ಸೂಚಿಸುತ್ತವೆ. ವಾರದ ಆರಂಭದಲ್ಲಿ ಪ್ರೇಮಿಯೊಂದಿಗೆ ಉದ್ವಿಗ್ನತೆ ಉಂಟಾಗಬಹುದು, ಆದರೆ ವಾರದ ಮಧ್ಯಭಾಗದಿಂದ ಪರಿಸ್ಥಿತಿ ಸುಧಾರಿಸಲು ಪ್ರಾರಂಭವಾಗಬಹುದು. ಹಿರಿಯರ ಮಾರ್ಗದರ್ಶನ ಈ ವಿಷಯದಲ್ಲಿ ನಿಮಗೆ ಉಪಯುಕ್ತವಾಗಬಹುದು. ವಾರದ ಕೊನೆಯಲ್ಲಿ ಆರ್ಥಿಕ ಲಾಭ ಮತ್ತು ಮಾನಸಿಕ ಸಂತೋಷದ ಅವಕಾಶಗಳಿವೆ.
ಸಿಂಹ (Leo)

ಆಗಸ್ಟ್ ಕೊನೆಯ ವಾರ ಸಿಂಹ ರಾಶಿಯವರಿಗೆ ಸಾಂತ್ವನ ಮತ್ತು ಸಂತೋಷವನ್ನು ತರಲಿದೆ. ಕುಟುಂಬದೊಂದಿಗೆ ಧಾರ್ಮಿಕ ಅಥವಾ ಶುಭ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶ ಸಿಗಬಹುದು. ನಿಮ್ಮ ಪ್ರೇಮ ಸಂಬಂಧ ಬಲಪಡೆಯುವುದು. ನಿಮ್ಮ ಪ್ರೇಮಿಯಿಂದ ಆಶ್ಚರ್ಯಕರ ಉಡುಗೊರೆಗಳನ್ನು ಪಡೆಯುವ ಸಂಭವವೂ ಇದೆ. ನಿಮ್ಮ ಸಂಬಂಧದ ಬಗ್ಗೆ ಕುಟುಂಬಕ್ಕೆ ತಿಳಿಸುವ ಉತ್ತಮ ಸಮಯ ಇದಾಗಿರಬಹುದು.
ಕನ್ಯಾ (Virgo)

ಕನ್ಯಾ ರಾಶಿಯವರ ಪ್ರೇಮ ಜೀವನಕ್ಕೆ ಈ ವಾರ ಅನುಕೂಲಕರವಾಗಿದೆ. ನಿಮ್ಮ ಸಂಬಂಧದಲ್ಲಿ ಪ್ರೀತಿ ಮತ್ತು ಸಾಮರಸ್ಯವಿರುವುದು. ಸಂಬಂಧಿಕರ ಬೆಂಬಲ ನಿಮಗೆ ಧನಾತ್ಮಕವಾಗಿರುವುದು. ವಾರದ ಮಧ್ಯಭಾಗದಲ್ಲಿ ಕೆಲಸದ ಒತ್ತಡ ಹೆಚ್ಚಾಗಿ, ಪ್ರೀತಿಯ ಜೀವನಕ್ಕೆ ಸಮಯ ಕೊಡಲು ಸಾಧ್ಯವಾಗದಿರಬಹುದು. ಆದರೆ, ವಾರದ ಕೊನೆ ಭಾಗದಲ್ಲಿ ಪರಿಸ್ಥಿತಿ ಸುಧಾರಿಸಿ, ಪ್ರೇಮಿಯೊಂದಿಗೆ ಪ್ರವಾಸಕ್ಕೆ ಹೋಗುವ ಅವಕಾಶವೂ ಒದಗಬಹುದು.
ತುಲಾ (Libra)

ತುಲಾ ರಾಶಿಯವರ ಪ್ರೀತಿ ಮತ್ತು ಕುಟುಂಬ ಜೀವನ ಈ ವಾರ ನೆಮ್ಮದಿಯಿಂದ ಕೂಡಿರಲಿದೆ. ನಿಮ್ಮ ಕೆಲವು ಸಮಸ್ಯೆಗಳಿಗೆ ಪರಿಹಾರ ಸಿಗುವುದರಿಂದ ನೀವು ನಿಟ್ಟುಸಿರು ಬಿಡಬಹುದು. ಪ್ರೇಮ ಜೀವನದಲ್ಲಿ ಪರಸ್ಪರ ತಿಳುವಳಿಕೆ ಹೆಚ್ಚಾಗುವುದು. ವಾರದ ಕೊನೆಯಲ್ಲಿ ನಿಮ್ಮ ಜೀವನವನ್ನು ರೋಮ್ಯಾಂಟಿಕ್ ಆಗಿ ಮಾಡಲು ಹಲವು ಅವಕಾಶಗಳು ಲಭ್ಯವಿರಬಹುದು. ದೂರದ ಸಂಬಂಧಿಕರಿಂದ ಸ್ವಲ್ಪ ಅಸಮಾಧಾನ ಉಂಟಾಗಬಹುದು.
ವೃಶ್ಚಿಕ (Scorpio)

ವೃಶ್ಚಿಕ ರಾಶಿಯವರಿಗೆ ಈ ವಾರ ಅತ್ಯಂತ ಶುಭವಾಗಿದೆ. ವಾರದ ಆರಂಭದಲ್ಲಿ ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಂಡರೆ, ಪ್ರೀತಿ ಮತ್ತು ಸಮೃದ್ಧಿಯ ಶುಭ ಸಂದರ್ಭಗಳು ರೂಪುಗೊಳ್ಳಬಹುದು. ವಾರದ ಕೊನೆಯಲ್ಲಿ ಪರಿಸ್ಥಿತಿಗಳು ಇನ್ನೂ ಸಕಾರಾತ್ಮಕವಾಗಿ ಬದಲಾಗುವ ಸಾಧ್ಯತೆ ಇದೆ. ನಿಮ್ಮ ಸಂಗಾತಿಯೊಂದಿಗೆ ಬಂಧುಗಳನ್ನು ಭೇಟಿ ಮಾಡಲು ಹೋಗಬಹುದು. ಪ್ರೇಮಿಯಿಂದ ಆಶ್ಚರ್ಯಕರ ಸುದ್ದಿ ಬರಲಿದೆ.
ಧನು (Sagittarius)

ಈ ವಾರ ನಿಮ್ಮ ಜೀವನದಲ್ಲಿ ಪ್ರೀತಿ ಮತ್ತು ಶಾಂತಿ ಉಳಿಯುವ ಸೂಚನೆ ಇದೆ. ತಾಳ್ಮೆಯಿಂದ ನಿರ್ಧಾರಗಳನ್ನು ತೆಗೆದುಕೊಂಡರೆ, ಪರಿಸ್ಥಿತಿ ನಿಮ್ಮ ಅನುಕೂಲಕ್ಕೆ ಇರಬಹುದು. ವಾರದ ಕೊನೆಯಲ್ಲಿ ಸ್ವಲ್ಪ ಕಷ್ಟಕರ ಸಮಯ ಮತ್ತು ಮನಸ್ಸಿನ ದುಃಖವಿರಬಹುದು. ಮಗುವಿನ ಆರೋಗ್ಯದ ಬಗ್ಗೆ ಚಿಂತೆ ಇರಬಹುದು. ಕೆಲಸದಲ್ಲಿ ತಂದೆ ಮತ್ತು ಅಣ್ಣನ ಬೆಂಬಲ ನಿಮಗೆ ಲಭ್ಯವಾಗಬಹುದು.
ಮಕರ (Capricorn)

ಮಕರ ರಾಶಿಯವರಿಗೆ ಈ ವಾರ ಆಹ್ಲಾದಕರವಾಗಿರಲಿದೆ. ನಿಮ್ಮ ಸಂಬಂಧದಲ್ಲಿ ಸಾಮರಸ್ಯ ಮತ್ತು ಸಮನ್ವಯವನ್ನು ಅನುಭವಿಸುವಿರಿ. ತಂದೆ ಮತ್ತು ಹಿರಿಯರ ಬೆಂಬಲ ನಿಮಗೆ ದೊರಕಬಹುದು. ಕುಟುಂಬದಲ್ಲಿ ಶುಭ ಕಾರ್ಯಕ್ರಮಗಳು ನಡೆಯಬಹುದು. ವಾರದ ಕೊನೆಯಲ್ಲಿ ದಾಂಪತ್ಯ ಜೀವನದಲ್ಲಿ ಪ್ರೀತಿ ಹೆಚ್ಚಾಗಿ, ಸಂಬಂಧಿಕರನ್ನು ಭೇಟಿ ಮಾಡುವ ಸಾಧತೆ ಇದೆ. ಮಕ್ಕಳ ಆರೋಗ್ಯದ ಕಡೆ ಗಮನ ನೀಡುವ ಅಗತ್ಯವಿದೆ.
ಕುಂಭ (Aquarius)

ವಾರದ ಆರಂಭದಲ್ಲಿ ನಿಮ್ಮ ದಾಂಪತ್ಯ ಜೀವನದಲ್ಲಿ ಉತ್ತಮ ಸಾಮರಸ್ಯವಿರುವ ಸಾಧ್ಯತೆ ಇದೆ. ಆದರೆ, ವಾರದ ಮಧ್ಯಭಾಗದಲ್ಲಿ ಪರಿಸ್ಥಿತಿ ಸ್ವಲ್ಪ ಜಟಿಲವಾಗಬಹುದು ಮತ್ತು ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ವಾರದ ಕೊನೆಯಲ್ಲಿ ನಿಮಗೆ ಆಶ್ಚರ್ಯಕರ ಉಡುಗೊರೆ ಸಿಕ್ಕುವ ಸಂಭವವಿದೆ. ಕೆಲವು ಸಮಸ್ಯೆಗಳಿಗೆ ಪರಿಹಾರ ಸಿಗುವುದರಿಂದ ನೀವು ನೆಮ್ಮದಿ ಪಡೆಯುವಿರಿ.
ಮೀನ (Pisces)

ಮೀನ ರಾಶಿಯವರ ಪ್ರೇಮ ಜೀವನಕ್ಕೆ ಈ ವಾರ ಬಹಳ ಶುಭವಾಗಿದೆ. ವಾರದ ಆರಂಭದಲ್ಲೇ ದಾಂಪತ್ಯ ಜೀವನದಲ್ಲಿ ಸಂತೋಷದ ಫಲಿತಾಂಶಗಳು ದೊರಕಲಿವೆ. ಈ ವಾರ ನಿಮ್ಮ ಪ್ರೇಮ ಜೀವನ ಪ್ರಣಯಮಯವಾಗಿರುವುದು. ವಾರದ ಕೊನೆಯಲ್ಲಿ ಕೆಲವು ಸಂತೋಷದ ಸುದ್ದಿಗಳನ್ನು ಪಡೆಯುವಿರಿ. ಮಕ್ಕಳಿಂದ ಸಂತೋಷ ಲಭ್ಯವಾಗಬಹುದು. ಅವಿವಾಹಿತರ ವಿವಾಹದ ಮಾತುಕತೆಗಳು ಮುನ್ನಡೆಯಲಿರುವುದು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.