ರಾಜ್ಯದಲ್ಲಿ ಮುಂಗಾರು ಮಳೆಯ ಅಬ್ಬರದಿಂದಾಗಿ ಬಹುತೇಕ ಪ್ರಮುಖ ಜಲಾಶಯಗಳು ಈಗಾಗಲೇ ಭರ್ತಿಯಾಗಿವೆ. ಕೆಲವೇ ಕೆಲವು ಡ್ಯಾಮ್‌ಗಳು ಮಾತ್ರ ತುಂಬುವ ಹಂತದಲ್ಲಿವೆ. ಈ ಹಿನ್ನೆಲೆಯಲ್ಲಿ, ಅಕ್ಟೋಬರ್ 13ರ ಬೆಂಗಳೂರು, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳ ಜೀವನಾಡಿಯಾಗಿರುವ ಕೃಷ್ಣರಾಜ ಸಾಗರ (KRS) ಸೇರಿದಂತೆ ರಾಜ್ಯದ ಇತರ ಮುಖ್ಯ ಅಣೆಕಟ್ಟುಗಳ ನೀರಿನ ಮಟ್ಟದ ಇತ್ತೀಚಿನ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಮುಂಗಾರು ಮಳೆ ಆರ್ಭಟದಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೆರೆಕಟ್ಟೆಗಳು ಮತ್ತು ನದಿಗಳು ತುಂಬಿ ಹರಿಯುತ್ತಿವೆ. ಅದೇ ರೀತಿ, ಪ್ರಮುಖ ಜಲಾಶಯಗಳು ಕೂಡ ಭರ್ತಿಯಾಗಿರುವುದು ರೈತರಲ್ಲಿ ಸಂತಸ ತಂದಿದೆ. ಇದರಿಂದಾಗಿ ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳಿಗೆ ಮುಂದಿನ ದಿನಗಳಲ್ಲಿ ನೀರಿನ ಕೊರತೆ ಎದುರಾಗುವುದಿಲ್ಲ. ಪ್ರಸ್ತುತ ರಾಜ್ಯದಲ್ಲಿ ಮಳೆ ಪ್ರಮಾಣ ತಗ್ಗಿದ್ದು, ಅಲ್ಲಲ್ಲಿ ಮಾತ್ರ ಮಳೆ ಮುಂದುವರೆದಿದೆ. ಹಾಗಿದ್ದರೆ, ಈಗ ಡ್ಯಾಮ್‌ಗಳಲ್ಲಿ ನೀರಿನ ಮಟ್ಟ ಎಷ್ಟಿದೆ ಎಂಬ ವಿವರ ಇಲ್ಲಿದೆ:
ಕೆಆರ್‌ಎಸ್ ಜಲಾಶಯ (ಕೃಷ್ಣರಾಜ ಸಾಗರ)
ಗರಿಷ್ಠ ಮಟ್ಟ: 124.80 ಅಡಿ
ಇಂದಿನ ಮಟ್ಟ: 124.70 ಅಡಿ
ಒಟ್ಟು ಸಾಮರ್ಥ್ಯ: 49.45 ಟಿಎಂಸಿ
ಒಳಹರಿವು: 14,205 ಕ್ಯೂಸೆಕ್
ಹೊರಹರಿವು: 7,164 ಕ್ಯೂಸೆಕ್
ಕಬಿನಿ ಜಲಾಶಯ
ಗರಿಷ್ಠ ಮಟ್ಟ: 2,284 ಅಡಿ
ಇಂದಿನ ಮಟ್ಟ: 2,283.9 ಅಡಿ
ಒಳಹರಿವು: 2,300 ಕ್ಯೂಸೆಕ್
ಹೊರಹರಿವು: 900 ಕ್ಯೂಸೆಕ್
ಆಲಮಟ್ಟಿ ಜಲಾಶಯ
ಗರಿಷ್ಠ ಮಟ್ಟ: 519.60 ಮೀಟರ್
ಇಂದಿನ ಮಟ್ಟ: 519.60 ಮೀಟರ್
ಒಟ್ಟು ಸಾಮರ್ಥ್ಯ: 123.8 ಟಿಎಂಸಿ
ಒಳಹರಿವು: 20,960 ಕ್ಯೂಸೆಕ್
ಹೊರಹರಿವು: 20,960 ಕ್ಯೂಸೆಕ್
ತುಂಗಭದ್ರಾ ಜಲಾಶಯ
ಗರಿಷ್ಠ ಮಟ್ಟ: 1,633 ಅಡಿ
ಇಂದಿನ ಮಟ್ಟ: 1,620.1 ಅಡಿ
ಒಟ್ಟು ಸಾಮರ್ಥ್ಯ: 105.79 ಟಿಎಂಸಿ
ಒಳಹರಿವು: 14,533 ಕ್ಯೂಸೆಕ್
ಹೊರಹರಿವು: 10,376 ಕ್ಯೂಸೆಕ್
ಮಲಪ್ರಭಾ ಜಲಾಶಯ
ಗರಿಷ್ಠ ಮಟ್ಟ: 2,079.50 ಅಡಿ
ಇಂದಿನ ಮಟ್ಟ: 2,079.50 ಅಡಿ
ಒಟ್ಟು ಸಾಮರ್ಥ್ಯ: 49.45 ಟಿಎಂಸಿ
ಒಳಹರಿವು: 394 ಕ್ಯೂಸೆಕ್
ಹೊರಹರಿವು: 394 ಕ್ಯೂಸೆಕ್
ಲಿಂಗನಮಕ್ಕಿ ಜಲಾಶಯ
ಗರಿಷ್ಠ ಮಟ್ಟ: 1,819 ಅಡಿ
ಇಂದಿನ ಮಟ್ಟ: 1,815.95 ಅಡಿ
ಒಟ್ಟು ಸಾಮರ್ಥ್ಯ: 151.75 ಟಿಎಂಸಿ
ಒಳಹರಿವು: 2,465 ಕ್ಯೂಸೆಕ್
ಹೊರಹರಿವು: 6,004 ಕ್ಯೂಸೆಕ್
ಭದ್ರಾ ಜಲಾಶಯ
ಗರಿಷ್ಠ ಮಟ್ಟ: 186 ಅಡಿ
ಇಂದಿನ ಮಟ್ಟ: 184.1 ಅಡಿ
ಒಟ್ಟು ಸಾಮರ್ಥ್ಯ: 71.54 ಟಿಎಂಸಿ
ಒಳಹರಿವು: 3,204 ಕ್ಯೂಸೆಕ್
ಹೊರಹರಿವು: 3,204 ಕ್ಯೂಸೆಕ್
ಘಟಪ್ರಭಾ ಜಲಾಶಯ
ಗರಿಷ್ಠ ಮಟ್ಟ: 2,175 ಅಡಿ
ಇಂದಿನ ಮಟ್ಟ: 2,174.80 ಅಡಿ
ಒಟ್ಟು ಸಾಮರ್ಥ್ಯ: 51 ಟಿಎಂಸಿ
ಒಳಹರಿವು: 1,459 ಕ್ಯೂಸೆಕ್
ಹೊರಹರಿವು: 1,778 ಕ್ಯೂಸೆಕ್
ಹೇಮಾವತಿ ಜಲಾಶಯ
ಗರಿಷ್ಠ ಮಟ್ಟ: 2,922 ಅಡಿ
ಇಂದಿನ ಮಟ್ಟ: 2,917.32 ಅಡಿ
ಒಟ್ಟು ಸಾಮರ್ಥ್ಯ: 37.10 ಟಿಎಂಸಿ
ಒಳಹರಿವು: 8,407 ಕ್ಯೂಸೆಕ್
ಹೊರಹರಿವು: 6,610 ಕ್ಯೂಸೆಕ್
ಹಾರಂಗಿ ಜಲಾಶಯ
ಗರಿಷ್ಠ ಮಟ್ಟ: 2,859 ಅಡಿ
ಇಂದಿನ ಮಟ್ಟ: 2,857.91 ಅಡಿ
ಒಟ್ಟು ಸಾಮರ್ಥ್ಯ: 8.5 ಟಿಎಂಸಿ
ಒಳಹರಿವು: 1,783 ಕ್ಯೂಸೆಕ್
ಹೊರಹರಿವು: 1,050 ಕ್ಯೂಸೆಕ್
Kavitha holds a Master’s degree in Computer Applications (MCA) and has a deep interest in technology. Leveraging her academic background, she writes articles on science and technology, simplifying complex technical topics for general readers. Her work focuses on making cutting-edge advancements in tech accessible and engaging.


WhatsApp Group




