Vivo Y200 5G- ಕಮ್ಮಿ ಬೆಲೆಗೆ ವಿವೋ ದ ಮತ್ತೊಂದು 5G ಮೊಬೈಲ್ ಬಿಡುಗಡೆ, ಬೆಲೆ ಎಷ್ಟು ಗೊತ್ತಾ??

vivo Y200 smartphone

Vivo ಮೊಬೈಲ್ ಕಂಪೆನಿ ಭಾರತದ ಮಾರುಕಟ್ಟೆಯಲ್ಲಿ ತನ್ನದೇ ಆದ ವಿಶಿಷ್ಟತೆಯಿಂದ ಬಹಳಷ್ಟು ಗ್ರಾಹಕರನ್ನು ಹೊಂದಿದೆ. ಹೌದು, vivo ಕಂಪೆನಿ ಯು ಇದೀಗ ಮತ್ತೊಂದು ಹೊಸ ಬಜೆಟ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಈ ತಿಂಗಳ ಕೊನೆಯಲ್ಲಿ ಔರಾ ರಿಂಗ್ ಲೈಟ್‌ ಎಂಬ ಹೊಸ ಆವಿಷ್ಕಾರದೊಂದಿಗೆ Y200 ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುವುದಾಗಿ ಕಂಪನಿಯು ಘೋಷಿಸಿದೆ. ಇದರ ಬಗ್ಗೆ ಪೂರ್ಣ ಮಾಹಿತಿಬೇಕೇ ಹಾಗಿದ್ದಲ್ಲಿ ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ವಿವೋ(vivo) Y200 ಸ್ಮಾರ್ಟ್‌ಫೋನ್ 2023:

Vivo ಕಂಪೆನಿ ಯು ಅಕ್ಟೋಬರ್ 23 ರಂದು ಭಾರತದಲ್ಲಿ Y200 ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ ಫೋನ್ ನಲ್ಲಿ ಹಲವಾರು ವಿಶೇಷತೆಗಳು ಇದ್ದು ಗ್ರಾಹಕರನ್ನು ತನ್ನತ್ತ ಸೆಳೆಯುವಂತೆ ಮಾಡುತ್ತಿದೆ. ಈ ಫೋನ್ ನಲ್ಲಿ ಅತೀ ಉತ್ತಮ ಕ್ಯಾಮೆರಾಗಳು ಮತ್ತು Vivo V29 Pro ಅನ್ನು ಹೋಲುವ ಔರಾ ರಿಂಗ್ ಲೈಟ್ ಅನ್ನು ನೀಡಲಾಗಿದೆ.

ಭಾರತದ ವಿವೋ ಕಂಪನಿಯು ತನ್ನ Y – ಸರಣಿಯ ಅಡಿಯಲ್ಲಿ ವಿವೋ Y200 (Vivo Y200) ಇದು Y100 ನ ಮುಂದಿನ ಸಿರೀಸ್ ಆಗಿದೆ. ಈ ಸ್ಮಾರ್ಟ್ ಫೋನ್ ನ ವಿಶೇಷತೆಗಳನ್ನು ನೋಡೋಣ ಬನ್ನಿ.

ಡಿಸ್ ಪ್ಲೇ ( Display ) :
ವಿವೋ Y200 ಸ್ಮಾರ್ಟ್ ಫೋನ್ 2400 × 1080 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 6.67-ಇಂಚಿನ FHD+ AMOLED ಡಿಸ್ಪ್ಲೇ ಹೊಂದಿದೆ. 120Hz ರಿಫ್ರೆಶ್ ದರ, 800 nits ಬ್ರೈಟ್ ನೆಸ್ ಕೂಡ ಇದರಲ್ಲಿದೆ.

ಪ್ರೊಸೆಸರ್ ( proccessor ) :
ಈ ಫೋನ್ ಅಡ್ರಿನೊ GPU ಜೊತೆಗೆ ಕ್ವಾಲ್ಕಂ ಸ್ನಾಪ್ ಡ್ರಾಗನ್ 4 Gen 1 6nm ಪ್ರೊಸೆಸರ್ ಹೊಂದಿದೆ.

ರ್ಯಾಮ್ ಮತ್ತು ಸ್ಟೋರೇಜ್ ( Ram and Storage ) :
8GB LPDDR4x RAM ಮತ್ತು 128GB UFS 2.2 ಸ್ಟೋರೇಜ್‌ ಮತ್ತು ಮೈಕ್ರೋ SD ಕಾರ್ಡ್ ಅನ್ನು ಹೊಂದಿದೆ.

ಓಎಸ್( OS ) :
ಆಂಡ್ರಾಯ್ಡ್ 13 ಫನ್‌ಟಚ್ ಓಎಸ್ 13 ಅನ್ನು ಹೊಂದಿದೆ.

ಕ್ಯಾಮೆರಾ( Cemera ) :

f/1.79 ದ್ಯುತಿರಂಧ್ರದೊಂದಿಗೆ 64MP ಪ್ರಾಥಮಿಕ ಕ್ಯಾಮೆರಾ ಮತ್ತು f/2.4 ದ್ಯುತಿರಂಧ್ರದೊಂದಿಗೆ 2MP ಕ್ಯಾಮೆರಾ ಮತ್ತು ಮುಂಭಾಗ f/2.0 ದ್ಯುತಿರಂಧ್ರದೊಂದಿಗೆ 16MP ಸೆಲ್ಫಿ ಶೂಟರ್ ಇದೆ. ಅಷ್ಟೇ ಅಲ್ಲದೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಕೂಡ ಇದೆ.

ಬ್ಯಾಟರಿ( Battery ) :

44W ಫಾಸ್ಟ್ ಚಾರ್ಜಿಂಗ್ ಜೊತೆಗೆ 4800mAh ಬ್ಯಾಟರಿ ಇದೆ. ಸಂಪರ್ಕ ಆಯ್ಕೆಯಲ್ಲಿ 5G, ಡ್ಯುಯಲ್ 4G VoLTE, Wi-Fi 802.11 ac, ಬ್ಲೂಟೂತ್ 5.1, GPS, ಮತ್ತು USB ಟೈಪ್-C ಪೋರ್ಟ್ ಇದೆ.

ಬಣ್ಣ, ಬೆಲೆ(price) ಹಾಗೂ ಲಭ್ಯತೆ :

ಈ ಸ್ಮಾರ್ಟ್ ಫೋನ್‌ ಗೋಲ್ಡನ್-ಇಶ್ ಬಣ್ಣವನ್ನು ಹೊಂದಿದೆ. ಭಾರತದಲ್ಲಿ Vivo Y200 5G ಬೆಲೆ ₹21,999 ರಿಂದ ಪ್ರಾರಂಭವಾಗುತ್ತದೆ. ಇದು ಅಕ್ಟೋಬರ್ 25, 2023 ರಂತೆ ಭಾರತದಲ್ಲಿ Amazon ನಲ್ಲಿ ಕಡಿಮೆ ಬೆಲೆಗೆ ಲಭ್ಯವಿದೆ. ಇದು Snapdragon 4 Gen 1 ಪ್ರೊಸೆಸರ್‌ ಹೊಂದಿದೆ ಎಂದು ತಿಳಿದು ಬಂದಿದೆ.
ಈ ಎಲ್ಲ ವಿಶೇಷತೆಗಳು ಉಳ್ಳ ಸ್ಮಾರ್ಟ್ ಫೋನ್ ಗೆ ಕಾಯುತ್ತಿದ್ದರೆ ಮಾರುಕಟ್ಟೆಯಲ್ಲಿ ಆದಷ್ಟು ಬೇಗ ಈ ಸ್ಮಾರ್ಟ್ ಫೋನ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು.

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!