Vivo Scholarship ವಿವೋ ಸ್ಕಾಲರ್ಶಿಪ್ scaled

ವಿದ್ಯಾರ್ಥಿನಿಯರಿಗೆ Vivo ಸ್ಕಾಲರ್‌ಶಿಪ್: ವಾರ್ಷಿಕ ₹60,000 ಆರ್ಥಿಕ ನೆರವು, ಇಂದೇ ಅರ್ಜಿ ಸಲ್ಲಿಸಿ

ಹೆಣ್ಣುಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ವಿವೊ ಇಂಡಿಯಾ (Vivo India) ‘ಕನ್ಯಾಜ್ಞಾನ್ ಸ್ಕಾಲರ್‌ಶಿಪ್ 2025-26 ಪ್ರಕಟಿಸಿದ್ದು, ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ವಾರ್ಷಿಕ 60,000 ರೂ. ಸಿಗಲಿದೆ. ಅರ್ಹತೆ ಮತ್ತು ಅರ್ಜಿ ಸಲ್ಲಿಕೆ ವಿವರ ಇಲ್ಲಿದೆ.

ಸ್ಕಾಲರ್‌ಶಿಪ್ ಮುಖ್ಯಾಂಶಗಳು (Top Highlights)

  • ಯೋಜನೆಯ ಹೆಸರು: ವಿವೊ ಕನ್ಯಾಜ್ಞಾನ್ ಸ್ಕಾಲರ್‌ಶಿಪ್ 2025-26 (vivo KanyaGyaan Scholarship).
  • ವಿದ್ಯಾರ್ಥಿವೇತನದ ಮೊತ್ತ: ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ಸತತ 3 ವರ್ಷಗಳ ಕಾಲ ವಾರ್ಷಿಕ ₹60,000 ಆರ್ಥಿಕ ನೆರವು ಸಿಗಲಿದೆ.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11-ಮೇ-2026.

ದಾವಣಗೆರೆ: ಆರ್ಥಿಕವಾಗಿ ಹಿಂದುಳಿದಿರುವ, ಆದರೆ ಓದಿನಲ್ಲಿ ಮುಂದಿರುವ ಪ್ರತಿಭಾವಂತ ಹೆಣ್ಣುಮಕ್ಕಳ ಉನ್ನತ ವ್ಯಾಸಂಗಕ್ಕೆ ನೆರವಾಗುವ ನಿಟ್ಟಿನಲ್ಲಿ ಸ್ಮಾರ್ಟ್‌ಫೋನ್ ದೈತ್ಯ ವಿವೊ ಇಂಡಿಯಾ (vivo India) ಭರ್ಜರಿ ಸಿಹಿಸುದ್ದಿ ನೀಡಿದೆ. ತನ್ನ ಸಿಎಸ್‌ಆರ್ (CSR) ಉಪಕ್ರಮದ ಅಡಿಯಲ್ಲಿ ವಿವೊ ಕನ್ಯಾಜ್ಞಾನ್ ಸ್ಕಾಲರ್‌ಶಿಪ್ ಪ್ರೋಗ್ರಾಂ 2025-26 ಅನ್ನು ಘೋಷಿಸಿದ್ದು, ಅರ್ಹ ವಿದ್ಯಾರ್ಥಿನಿಯರಿಂದ ಅರ್ಜಿ ಆಹ್ವಾನಿಸಿದೆ.

ವಿಜ್ಞಾನ ಮತ್ತು ತಂತ್ರಜ್ಞಾನ (STEM) ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಲು ಬಯಸುವ ಯುವತಿಯರಿಗೆ ಯಾವುದೇ ಆರ್ಥಿಕ ಅಡೆತಡೆಗಳಿಲ್ಲದೆ ಶಿಕ್ಷಣ ಮುಂದುವರಿಸಲು ವಾರ್ಷಿಕ ₹60,000 ಗಳ ಬೃಹತ್ ಮೊತ್ತವನ್ನು ಈ ಸ್ಕಾಲರ್‌ಶಿಪ್ ಅಡಿ ನೀಡಲಾಗುತ್ತದೆ. ಯಾರೆಲ್ಲಾ ಅರ್ಜಿ ಸಲ್ಲಿಸಬಹುದು? ಏನೆಲ್ಲಾ ದಾಖಲೆಗಳು ಬೇಕು? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಯಾರಿಗೆ ಈ ಸ್ಕಾಲರ್‌ಶಿಪ್ ಸಿಗಲಿದೆ? (Eligibility Criteria)

ಈ ವಿದ್ಯಾರ್ಥಿವೇತನವು ಕೇವಲ ಹೆಣ್ಣುಮಕ್ಕಳಿಗೆ ಮಾತ್ರ ಮೀಸಲಾಗಿದ್ದು, ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು:

  1. ವ್ಯಾಸಂಗ: ಪ್ರಸ್ತುತ ಬಿ.ಟೆಕ್ (B.Tech), ಬಿ.ಇ (B.E), ಬಿ.ಎಸ್ಸಿ (B.Sc), ಬಿಸಿಎ (BCA), ಎಂಬಿಬಿಎಸ್ (MBBS) ನಂತಹ STEM (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತ) ಪದವಿ ಕೋರ್ಸ್‌ಗಳ ಮೊದಲನೇ ಅಥವಾ ಎರಡನೇ ವರ್ಷದಲ್ಲಿ ಓದುತ್ತಿರಬೇಕು. (ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ).
  2. ಅಂಕಗಳು: ವಿದ್ಯಾರ್ಥಿನಿಯು 10ನೇ ತರಗತಿ, 12ನೇ ತರಗತಿ ಹಾಗೂ ಹಿಂದಿನ ಸೆಮಿಸ್ಟರ್‌ನಲ್ಲಿ ಕನಿಷ್ಠ 70% ಅಂಕಗಳನ್ನು ಗಳಿಸಿರಬೇಕು.
  3. ಆದಾಯ ಮಿತಿ: ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ 5 ಲಕ್ಷ ರೂಪಾಯಿಗಳಿಗಿಂತ ಕಡಿಮೆ ಇರಬೇಕು.
  4. ಷರತ್ತು: ಈಗಾಗಲೇ ಸರ್ಕಾರದಿಂದ ಅಥವಾ ಬೇರೆ ಸಂಸ್ಥೆಗಳಿಂದ ಸಂಪೂರ್ಣ ಸ್ಕಾಲರ್‌ಶಿಪ್ ಪಡೆಯುತ್ತಿರುವವರು ಇದಕ್ಕೆ ಅರ್ಹರಾಗಿರುವುದಿಲ್ಲ.

(ಸೂಚನೆ: ಸಿಂಗಲ್ ಪೇರೆಂಟ್, ಅನಾಥ ಮಕ್ಕಳು, ಎಸ್‌ಸಿ/ಎಸ್‌ಟಿ (SC/ST) ಹಾಗೂ ಕ್ರೀಡಾಪಟುಗಳಿಗೆ ಆಯ್ಕೆಯಲ್ಲಿ ವಿಶೇಷ ಆದ್ಯತೆ ನೀಡಲಾಗುತ್ತದೆ).

vivo womens day banner 16X9 02

Image Credit: vivonewsroom

ವಿದ್ಯಾರ್ಥಿವೇತನದ ಲಾಭಗಳು (Benefits)

  • ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ವಾರ್ಷಿಕ 60,000 ರೂಪಾಯಿಗಳ ನಿಗದಿತ ವಿದ್ಯಾರ್ಥಿವೇತನ ಸಿಗಲಿದೆ.
  • ಈ ಮೊತ್ತವನ್ನು ಕಾಲೇಜು ಶುಲ್ಕ, ಹಾಸ್ಟೆಲ್ ಖರ್ಚು, ಲ್ಯಾಪ್‌ಟಾಪ್ (Laptop) ಖರೀದಿ, ಸಾರಿಗೆ ಮತ್ತು ಊಟದ ವೆಚ್ಚಗಳಿಗೆ ಬಳಸಿಕೊಳ್ಳಬಹುದು. (ಇದಕ್ಕಾಗಿ ಸೂಕ್ತ ಬಿಲ್‌ಗಳನ್ನು ಒದಗಿಸಬೇಕಾಗುತ್ತದೆ).

ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು (Required Documents)

  1. ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋ.
  2. ಸರ್ಕಾರಿ ಗುರುತಿನ ಚೀಟಿ (ಆಧಾರ್, ಪಾನ್ ಕಾರ್ಡ್ ಅಥವಾ ವೋಟರ್ ಐಡಿ).
  3. ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ಕಾಲೇಜಿನ ಐಡಿ ಕಾರ್ಡ್ (ID Card) ಅಥವಾ ಪ್ರವೇಶ ಪತ್ರ.
  4. ಹಿಂದಿನ ವರ್ಷದ/ಸೆಮಿಸ್ಟರ್‌ನ ಅಂಕಪಟ್ಟಿ (Marksheet).
  5. ಆದಾಯ ಪ್ರಮಾಣಪತ್ರ (Income Certificate).
  6. ವಿದ್ಯಾರ್ಥಿನಿಯ ಅಥವಾ ಪೋಷಕರ ಜಂಟಿ ಬ್ಯಾಂಕ್ ಖಾತೆಯ ಪಾಸ್‌ಬುಕ್ ಪ್ರತಿ.
  7. ಕಾಲೇಜಿನ ಸಂಪೂರ್ಣ ಶುಲ್ಕದ ವಿವರ (Fee Structure).
  8. ಜಾತಿ ಪ್ರಮಾಣಪತ್ರ
  9. ಪ್ರಬಂಧ (Essay): “ನಾನು ಈ ಕ್ಷೇತ್ರವನ್ನು ಏಕೆ ಆಯ್ಕೆ ಮಾಡಿಕೊಂಡಿದ್ದೇನೆ ಮತ್ತು ಈ ಸ್ಕಾಲರ್‌ಶಿಪ್ ನನಗೆ ಹೇಗೆ ಸಹಾಯ ಮಾಡುತ್ತದೆ” ಎಂಬ ಬಗ್ಗೆ 200 ಪದಗಳ ಕಿರು ಪ್ರಬಂಧ ಬರೆಯಬೇಕು.

ವಿದ್ಯಾರ್ಥಿನಿಯರ ಗಮನಕ್ಕೆ – ‘Needs of Public’ ಎಕ್ಸ್‌ಕ್ಲೂಸಿವ್ ಪ್ರಬಂಧ ಮಾದರಿ:

‘ವಿವೊ ಕನ್ಯಾಜ್ಞಾನ್ ಸ್ಕಾಲರ್‌ಶಿಪ್’ಗೆ ಅರ್ಜಿ ಸಲ್ಲಿಸುವಾಗ “ನಾನು ಈ ಕ್ಷೇತ್ರವನ್ನು ಏಕೆ ಆಯ್ಕೆ ಮಾಡಿಕೊಂಡಿದ್ದೇನೆ ಮತ್ತು ಈ ಆರ್ಥಿಕ ನೆರವು ನನಗೆ ಹೇಗೆ ಸಹಾಯ ಮಾಡುತ್ತದೆ” ಎಂಬ ವಿಷಯದ ಕುರಿತು 200 ಪದಗಳ ಪ್ರಬಂಧ (Personal Statement) ಬರೆಯುವುದು ಕಡ್ಡಾಯವಾಗಿದೆ. ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಅನುಕೂಲವಾಗಲೆಂದು, ನಮ್ಮ ‘Needs of Public’ ತಂಡವು ವಿಶೇಷವಾಗಿ ಸಿದ್ಧಪಡಿಸಿದ ಅತ್ಯುತ್ತಮ ಇಂಗ್ಲಿಷ್ ಪ್ರಬಂಧದ ಮಾದರಿ ಕೆಳಗಿದೆ. ಕೆಂಪು ಬಣ್ಣದಲ್ಲಿರುವ ಜಾಗದಲ್ಲಿ ನಿಮ್ಮ ಕೋರ್ಸ್ ಹೆಸರನ್ನು ಸೇರಿಸಿ, ಇದನ್ನು ನೇರವಾಗಿ ನಿಮ್ಮ ಅರ್ಜಿಯಲ್ಲಿ ಬಳಸಿಕೊಳ್ಳಬಹುದು.

Personal Statement / Essay

Growing up, I was always fascinated by how science and technology can solve real-world problems. This deep curiosity drove me to pursue a degree in [Insert your course, e.g., Computer Science Engineering / B.Sc Mathematics]. I firmly believe that STEM is not just about complex equations or machinery; it is a powerful tool to bridge societal gaps and build sustainable solutions. I chose this field because I want to be a creator of technology, not just a consumer.

However, coming from a financially constrained background, funding my higher education has been a constant struggle for my family. The vivo KanyaGyaan Scholarship will be a life-changing opportunity for me. It will completely lift the financial burden of my tuition fees, books, and resources, allowing me to focus entirely on academic excellence rather than financial stress.

Beyond my personal growth, this support will empower me to make a tangible impact on society. My ultimate goal is to develop affordable technological solutions for rural communities. By supporting my education today, vivo India is investing in a future female innovator dedicated to giving back to society. I am eager to leverage this platform to make my community proud.

Word Count: 195 Words

ಅರ್ಜಿ ಸಲ್ಲಿಸುವುದು ಹೇಗೆ? (How to Apply)

ಅರ್ಹ ವಿದ್ಯಾರ್ಥಿನಿಯರು ಆನ್‌ಲೈನ್ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದು:

Step 1: Buddy4Study ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

vivo kanya scholarship 2026

Step 2: ಅಲ್ಲಿರುವ ‘vivo KanyaGyaan Scholarship Program 2025-26’ ಲಿಂಕ್ ಮೇಲೆ ಕ್ಲಿಕ್ ಮಾಡಿ.

Step 3: ನಿಮ್ಮ ಇಮೇಲ್ ಅಥವಾ ಮೊಬೈಲ್ ಸಂಖ್ಯೆ ಬಳಸಿ ಲಾಗಿನ್ ಆಗಿ (ಖಾತೆ ಇಲ್ಲದಿದ್ದರೆ ಹೊಸದಾಗಿ Sign up ಮಾಡಿ).

vivo kanya scholarship 2026 1

Step 4: Start Application ಮೇಲೆ ಕ್ಲಿಕ್ ಮಾಡಿ, ನಿಮ್ಮ ಸಂಪೂರ್ಣ ಮಾಹಿತಿ ಭರ್ತಿ ಮಾಡಿ.

Step 5: ಮೇಲೆ ತಿಳಿಸಿದ ಎಲ್ಲಾ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.

Step 6: ಕೊನೆಯದಾಗಿ ಒಮ್ಮೆ ಪರಿಶೀಲಿಸಿ (Preview) ‘Submit’ ಬಟನ್ ಕ್ಲಿಕ್ ಮಾಡಿ.

ವರದಿ: ಕೃಷ್ಣಸಾಗರಿ- ನೀಡ್ಸ್ ಆಫ್ ಪಬ್ಲಿಕ್, ದಾವಣಗೆರೆ

Needs of Public Request

ಗ್ರಾಮೀಣ ಭಾಗದ ಎಷ್ಟೋ ಪ್ರತಿಭಾವಂತ ಹೆಣ್ಣುಮಕ್ಕಳಿಗೆ ಆರ್ಥಿಕ ಸಮಸ್ಯೆಯಿಂದಾಗಿ ಉನ್ನತ ಶಿಕ್ಷಣ ಮೊಟಕುಗೊಳ್ಳುತ್ತಿದೆ. ವಿವೊ (Vivo) ಸಂಸ್ಥೆಯು ನೀಡುತ್ತಿರುವ ಈ ಅತ್ಯಮೂಲ್ಯವಾದ ವಿದ್ಯಾರ್ಥಿವೇತನದ ಮಾಹಿತಿಯನ್ನು ನಿಮ್ಮ ಸ್ನೇಹಿತರು, ಸಂಬಂಧಿಕರು ಹಾಗೂ ಕಾಲೇಜು ವಾಟ್ಸಾಪ್ ಗ್ರೂಪ್‌ಗಳಲ್ಲಿ ತಪ್ಪದೇ ಶೇರ್ (Share) ಮಾಡಿ. ನಿಮ್ಮ ಒಂದು ಶೇರ್, ಒಬ್ಬ ವಿದ್ಯಾರ್ಥಿನಿಯ ಭವಿಷ್ಯವನ್ನು ರೂಪಿಸಬಹುದು!

    WhatsApp Group Join Now
    Telegram Group Join Now

    Popular Categories