Bigg Boss Kannada – ಸಂಗೀತ ಜೊತೆಗಿನ ಕಿತ್ತಾಟ ಯಾವಾಗ್ಲೂ ಇದೇ..! ಕಾರಣ ತಿಳಿಸಿದ ವಿನಯ್

biggboss kannada 10

ಕನ್ನಡದ ಬಹು ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ( Big boss ) ಸೀಸನ್ 10 ಶುರು ವಾಗಿ ಹಲವು ದಿನಗಳಾಯ್ತು. ಇದೀಗ ಬಿಗ್ ಬಾಸ್ ಒಂದು ಹೊಸ ತಿರುವನ್ನು ಕಂಡಿದೆ. ಅಷ್ಟೇ ಅಲ್ಲದೆ ಬಿಗ್ ಬಾಸ್ ಮನೆಯೊಳಗೆ ಕಿತ್ತಾಟ ಜಗಳ ನಡೆಯುತ್ತಿದ್ದು ವೀಕ್ಷಕರಲ್ಲಿ ಅಚ್ಚರಿ ಮೂಡಿಸಿದೆ. ಹಾಗೆಯೇ ಈ ಸೀಸನ್ ನಲ್ಲಿ ಪ್ರತಿ ಟಾಸ್ಕ್ ನಲ್ಲಿ ಜಗಳವೇ ಜಗಳ. ಮನೆಯೊಳಗೆ ಈಗಾಗಲೇ ಎರಡು ತಂಡಗಳಾಗಿವೆ. ಇದು ಸ್ಪರ್ಧಿಗಳ ನಡುವೆ ಬಿರುಕು ಬಿಡಲು ಕಾರಣವಾಗಿದೆ.ಈಗ ಸದ್ಯಕ್ಕೆ ವಿನಯ್ ( Vinay) ಮತ್ತು ಸಂಗೀತ ( Sangeetha ) ನಡುವೆ ಜಗಳ ಅಂದರೆ ಮಾತಿನ ಚಕಮಕಿ ನಡೆದಿದೆ. ಇವರಿಬ್ಬರ ಜಗಳ ಹೇಗೆಂದರೆ ತಾವು ಮೊದಲಿಂದಲೂ ಇದ್ದ ಕೆಲಸ ಕಾರ್ಯಗಳ ನಡುವೆ ಆದ ಸಂಗತಿಯನ್ನು ಮಾತಿನ ನಡುವೆ ಸೇರಿಸಿಕೊಂಡಿದ್ದಾರೆ. ಹಾಗಾಗಿ ಈ ಸೀಸನ್ ನಲ್ಲಿ ಅವರ ಜಗಳ ಪ್ರತಿದಿನವೂ ನೆಡೆಯುತ್ತಲೇ ಇರುತ್ತದೆ. ಈಗ ಯಾವ ವಿಷಯಕ್ಕೆ ಜಗಳ ಆಡಿದ್ದಾರೆ ತಿಳಿದುಕೊಳ್ಳಬೇಕೇ ಹಾಗಿದ್ದಲ್ಲಿ ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ವಿನಯ್ ಹಾಗೂ ಸಂಗೀತ ಕಿತ್ತಾಟಕ್ಕೆ ಕಾರಣ ತಿಳಿಸಿದ ವಿನಯ್ :

biggboss

ವಿನಯ್ ಹಾಗೂ ಸಂಗೀತ ‘ಹರ ಹರ ಮಹದೇವ’ ( Hara Hara Mahadeva ) ಧಾರಾವಾಹಿಯಲ್ಲಿ ( serial ) ಶಿವ ( Shiva ) ಹಾಗೂ ಪಾರ್ವತಿ ( Parvathi ) ಪಾತ್ರ ಮಾಡಿದ್ದರು. ಇನ್ನು ನೋಡುವುದಾದರೆ ಒಂದೇ ಧಾರಾವಾಹಿಯಲ್ಲಿ ನಟಿಸಿದ್ದರಿಂದ ಒಳ್ಳೆಯ ಫ್ರೆಂಡ್ ಶಿಪ್ ಬೆಳೆದಿರುತ್ತದೆ. ಹಾಗೆಯೇ ಬಿಗ್ ಬಾಸ್ ಮನೆಯಲ್ಲಿ ಇವರ ನಡುವಿನ ಭಾಂಧವ್ಯ ಚೆನ್ನಾಗಿ ಇರುತ್ತದೆ ಎಂದು ಭಾವಿಸಿದರೆ ಅದು ನಿಜವಾಗಿಲ್ಲ ಇವರ ಮಧ್ಯೆ ಕಿತ್ತಾಟ ಜಗಳ ಶುರುವಾಗಿದೆ.

ಪ್ರತಿ ದಿನ ಬಿಗ್ ಬಾಸ್ (Bigg Boss) ಮನೆಯಲ್ಲಿ ವಿನಯ್ ಗೌಡ ಹಾಗೂ ಸಂಗೀತಾ ಮಧ್ಯೆ ಕಿತ್ತಾಟ ನಡೆಯುತ್ತಲೇ ಇದೆ. ಒಂದೇ ಧಾರಾವಾಹಿಯಲ್ಲಿ ನಟಿಸಿದರೂ ಇವರಿಬ್ಬರು ಪರಸ್ಪರ ಕಿತ್ತಾಡಿಕೊಳ್ಳುತ್ತಿದ್ದಾರೆ. ಇದು ವೀಕ್ಷಕರಿಗೆ ಅಚ್ಚರಿ ಮೂಡಿಸಿದೆ. ಇವರ ಮಧ್ಯೆ ಇಷ್ಟೊಂದು ಕಿತ್ತಾಟ ಏಕೆ ಎಂಬುದು ಅನೇಕರ ಪ್ರಶ್ನೆ ಆಗಿತದೆ. ಇದಕ್ಕೆ ವಿನಯ್ ಕಡೆಯಿಂದ ಉತ್ತರ ಸಿಕ್ಕಿದೆ. ಅವರು ಈ ಕಿತ್ತಾಟಕ್ಕೆ ಕಾರಣವಾಗಿರೋ ವಿಚಾರ ಯಾವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ – Gruhalakshmi Status – ಎರಡನೇ ಕಂತಿನ 2000/- ಹಣ ಜಮಾ, ಹಣ ಬರದೆ ಇದ್ದವರು ಈ ಆಪ್ ನಲ್ಲಿ ಚೆಕ್ ಮಾಡಿ.

ಇವರಿಬ್ಬರ ಕಿತ್ತಾಟ ಈಗಿನದಲ್ಲ – ವಿನಯ್

hara hara

ಮೊದಲ ವಾರದಿಂದಲೇ ಇವರು ಕಚ್ಚಾಡಿಕೊಂಡರು. ಈ ವಾರವಂತೂ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು ಇವರ ಜಗಳ. ಹಾಗೆಯೇ ಇದರ ಬಗ್ಗೆ ವರ್ತೂರು ಸಂತೋಷ್(varthur santhosh) ಗೆ ಅವರಿಗೆ ಪ್ರಶ್ನೆ ಕೇಳೇ ಬಿಟ್ಟರು.
ಅದೇನೆಂದರೆ, ಅಣ್ಣ ನೀವಿಬ್ಬರೂ ಒಂದೇ ಧಾರಾವಾಹಿಯಲ್ಲಿ ನಟಿಸಿದವರು. ಆದರೂ ಯಾಕಿಷ್ಟು ಕಿತ್ತಾಟ? ಧಾರಾವಾಹಿಯಲ್ಲಿ ನಟಿಸುವಾಗಲೇ ನಿಮ್ಮ ಮಧ್ಯೆ ವೈರುಧ್ಯ ಇತ್ತೇ’ ಎಂದು ವಿನಯ್ ಗೆ ವರ್ತೂರು ಸಂತೋಷ್ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಉತ್ತರುಸಿದ ವಿನಯ್ , ಹೌದು ಇತ್ತು, ಅವಳಿಗೆ ಯಾವಾಗಲೂ ನನಗಿಂತ ಚೆನ್ನಾಗಿ ಆ್ಯಕ್ಟ್ ಮಾಡಬೇಕು, ನನಗಿಂತ ಉತ್ತಮವಾಗಿರಬೇಕು ಎಂದುಕೊಳ್ಳುತ್ತಾಳೆ’ ಎಂದಿದ್ದಾರೆ. ಇದೇ ಇಬ್ಬರೂ ಜಗಳಕ್ಕೆ ಕಾರಣ ಎಂಬುದನ್ನು ಅವರು ತಿಳಿಸಿದ್ದಾರೆ.

ಅಷ್ಟೇ ಅಲ್ಲದೆ ಬಿಗ್ ಬಾಸ್ ಮನೆಯಲ್ಲಿ ವಿನಯ್ ಅವರು ಎಲ್ಲರಿಗೂ ಏಕವಚನ ಕೊಟ್ಟು ಮಾತನಾಡಿಸುತ್ತಾರೆ. ಇದು ಅನೇಕ ವೀಕ್ಷಕರಿಗೆ ಇಷ್ಟ ಆಗುತ್ತಿಲ್ಲ. ಮುಂದೆ ಸಂಗೀತ ಮತ್ತು ವಿನಯ್ ಪರಸ್ಪರ ಒಂದಾಗುತ್ತಾರೋ ಎಂದು ಕಾದು ನೋಡಬೇಕು.

ಇದನ್ನೂ ಓದಿ – SC/ST ವರ್ಗದವರಿಗೆ ಸಾಲ & ಸಬ್ಸಿಡಿ ಯೋಜನೆಗಳಿಗೆ ಅರ್ಜಿ ಆಹ್ವಾನ, ನಿಮ್ಮ ಅರ್ಜಿ ಹೀಗೆ ಸಲ್ಲಿಸಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!