WhatsApp Image 2025 08 18 at 23.38.42 5064311d

Dharshan: ಪರಪ್ಪನ ಅಗ್ರಹಾರದ ಜೈಲಲ್ಲಿ ಗಂಟೆಗಟ್ಟಲೆ ಕಾಯ್ದ ಕೊನೆಗೂ ದರ್ಶನ್ ಭೇಟಿಯಾದ ವಿಜಯಲಕ್ಷ್ಮಿ.

Categories:
WhatsApp Group Telegram Group

ನಟ ದರ್ಶನ್ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಬಾರಿಗೆ ಪರಪ್ಪನ ಅಗ್ರಹಾರ ಜೈಲಿಗೆ ಸೇರಿದ್ದಾರೆ. ಸುಪ್ರೀಂ ಕೋರ್ಟ್‌ನಿಂದ ಜಾಮೀನು ರದ್ದಾದ ಬೆನ್ನಲ್ಲೇ ದರ್ಶನ್ ಮತ್ತೆ ಜೈಲು ಸೇರಿದ್ದಾರೆ. ಸೋಮವಾರ, ತಮ್ಮ ಪತಿಯನ್ನು ಭೇಟಿಯಾಗಲು ತೆರಳಿದ್ದ ವಿಜಯಲಕ್ಷ್ಮಿ, ಗಂಟೆಗಟ್ಟಲೆ ಕಾಯ್ದು ಭೇಟಿಯಾಗಿದ್ದಾರೆ.

ಈ ಹಿಂದೆ ದರ್ಶನ್ ಜೈಲಿನಲ್ಲಿದ್ದಾಗ ವಿಶೇಷ ಸೌಲಭ್ಯಗಳನ್ನು ಪಡೆಯುತ್ತಿದ್ದರು. ವಿಜಯಲಕ್ಷ್ಮಿ ಮತ್ತು ಕುಟುಂಬದವರು ವಿಶೇಷ ಪ್ರವೇಶದ ಮೂಲಕ ಸುಲಭವಾಗಿ ಭೇಟಿಯಾಗುತ್ತಿದ್ದರು. ಆಗ ಕೇವಲ ಐದು ನಿಮಿಷ ಕಾದರೆ ದರ್ಶನ್ ಭೇಟಿಯಾಗುತ್ತಿದ್ದರು. ಆದರೆ ಈ ಬಾರಿ ಸುಪ್ರೀಂ ಕೋರ್ಟ್‌ನ ಕಟ್ಟುನಿಟ್ಟಾದ ಆದೇಶದಿಂದಾಗಿ ದರ್ಶನ್‌ಗೆ ವಿಶೇಷ ಸೌಲಭ್ಯಗಳು ನಿಂತಿವೆ.

ಸೋಮವಾರ, ವಿಜಯಲಕ್ಷ್ಮಿ ದರ್ಶನ್‌ರನ್ನು ಭೇಟಿಯಾಗಲು ಜೈಲಿಗೆ ತೆರಳಿದ್ದರು. ಸುಮಾರು ಎರಡೂವರೆ ಗಂಟೆ ಕಾದ ಬಳಿಕ ಸಾಮಾನ್ಯ ಪ್ರವೇಶದ ಮೂಲಕ ಕಬ್ಬಿಣದ ಜಾಲರಿಯಿಂದ ದರ್ಶನ್ ಜೊತೆ ಮಾತನಾಡಿದರು. ಜೈಲಿನಲ್ಲಿನ ದರ್ಶನ್‌ರ ಪರಿಸ್ಥಿತಿ ಮತ್ತು ತಮ್ಮ ಅನುಭವವನ್ನು ನೆನೆದು ವಿಜಯಲಕ್ಷ್ಮಿ ಭಾವುಕರಾಗಿ ಹೊರಬಂದಿದ್ದಾರೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

WhatsApp Group Join Now
Telegram Group Join Now

Popular Categories