ರಾಜ್ಯದ ಎಲ್ಲಾ ನಾಗರಿಕರನ್ನು ಒಳಗೊಂಡ ಸಮಗ್ರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7 ರ ವರೆಗೆ ನಡೆಯಲಿದೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಈ ಮಹತ್ವದ ಯೋಜನೆಯನ್ನು ಕೈಗೊಳ್ಳಲಿದ್ದು, ಪ್ರತಿ ಕುಟುಂಬವೂ ತಪ್ಪದೇ ಭಾಗವಹಿಸುವಂತೆ ಸರ್ಕಾರವು ನಾಗರಿಕರನ್ನು ಕೋರಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಸಮೀಕ್ಷೆಯ ಹಿನ್ನೆಲೆ ಮತ್ತು ಉದ್ದೇಶ:
ರಾಜ್ಯ ಸರ್ಕಾರದ ನಿರ್ದೇಶನದಡಿಯಲ್ಲಿ, ಶಾಶ್ವತ ಹಿಂದುಳಿದ ವರ್ಗಗಳ ಆಯೋಗವು ಈ ಸಮೀಕ್ಷೆಯನ್ನು ನಡೆಸುತ್ತಿದೆ. ಈ ಪ್ರಕ್ರಿಯೆಯಲ್ಲಿ, ಗಣತಿದಾರರು ನೇರವಾಗಿ ನಿಮ್ಮ ನಿವಾಸಕ್ಕೆ ಭೇಟಿ ನೀಡಲಿದ್ದಾರೆ. ಸಮೀಕ್ಷೆಯ ಮೂಲಕ ಸರ್ಕಾರಕ್ಕೆ ರಾಜ್ಯದ ವಿವಿಧ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಯ ಸ್ಪಷ್ಟ ಚಿತ್ರಣ ಸಿಗುವುದರಿಂದ, ಇದು ಭವಿಷ್ಯದ ಕಲ್ಯಾಣಕಾರಿ ಯೋಜನೆಗಳ ರೂಪರೇಖೆ ನಿರ್ಧರಿಸಲು ಅತ್ಯಗತ್ಯವಾಗಿದೆ. ಸಮೀಕ್ಷೆಗೆ ಮುಂಚಿತವಾಗಿಯೇ ನಿಮಗೆ ವಿತರಣೆಯಾಗಿರಬಹುದಾದ ಮಾದರಿ ಪ್ರಶ್ನಾವಳಿಯನ್ನು ಪರಿಶೀಲಿಸಿ, ಅಗತ್ಯ ದಾಖಲೆಗಳನ್ನು ಸಿದ್ಧಗೊಳಿಸಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೂಚಿಸಿದೆ.
ಸಮೀಕ್ಷೆಯಲ್ಲಿ ಉಳ್ಳ ಪ್ರಮುಖ ವಿವರಗಳು:
ಗಣತಿದಾರರು ಕೇಳಲಿರುವ 60ಕ್ಕೂ ಹೆಚ್ಚು ಪ್ರಶ್ನೆಗಳು ಕುಟುಂಬದ ಮೂಲಭೂತ ಮಾಹಿತಿಯಿಂದ ಆರಂಭವಾಗಿ, ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಯ ವಿವರಗಳನ್ನು ಒಳಗೊಂಡಿರುತ್ತವೆ. ಈ ಮಾಹಿತಿಗಳು ಸರ್ಕಾರಿ ಯೋಜನೆಗಳ ಲಾಭಗಳು ಸರಿಯಾದ ಜನರನ್ನು ತಲುಪುವಂತೆ ಮಾಡುತ್ತದೆ. ಪ್ರಮುಖ ವಿವರಗಳು ಈ ಕೆಳಗಿನಂತಿವೆ:
ವೈಯಕ್ತಿಕ ಮಾಹಿತಿ: ಮನೆಯ ಮುಖ್ಯಸ್ಥ, ತಂದೆ-ತಾಯಿಯ ಹೆಸರು, ಕುಲನಾಮ, ಸಂಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ.
ದಾಖಲೆಗಳ ವಿವರ: ರೇಷನ್ ಕಾರ್ಡ್, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಸಂಖ್ಯೆ.
ಕುಟುಂಬದ ವಿವರ: ಒಟ್ಟು ಸದಸ್ಯರು, ಧರ್ಮ, ಜಾತಿ/ಉಪಜಾತಿ, ಜಾತಿ ವರ್ಗ (SC/ST/OBC/ಸಾಮಾನ್ಯ/ಇತರೆ), ಜಾತಿ ಪ್ರಮಾಣಪತ್ರದ ವಿವರ.
ಶೈಕ್ಷಣಿಕ ಮಾಹಿತಿ: ಪ್ರತಿ ಸದಸ್ಯರ ವಯಸ್ಸು, ಜನ್ಮದಿನಾಂಕ, ಲಿಂಗ, ವಿದ್ಯಾಭ್ಯಾಸದ ಮಟ್ಟ, ಮನೆಯಲ್ಲಿ ಓದಲು ಬಲ್ಲವರ ಸಂಖ್ಯೆ, ಮಕ್ಕಳ ಶಾಲೆಯ ಪ್ರಕಾರ (ಸರ್ಕಾರಿ/ಖಾಸಗಿ), ಶಾಲೆ ಬಿಟ್ಟವರಿದ್ದರೆ ಅದರ ಮಾಹಿತಿ.
ಆರ್ಥಿಕ ಸ್ಥಿತಿ: ಮನೆಯ ಮುಖ್ಯ ಉದ್ಯೋಗ, ಉದ್ಯೋಗದಲ್ಲಿರುವವರ ಸಂಖ್ಯೆ, ಕೆಲಸದ ಪ್ರಕಾರ, ನಿರುದ್ಯೋಗದ ಮಾಹಿತಿ, ದಿನಸಿ ಮತ್ತು ತಿಂಗಳ ಆದಾಯ-ಖರ್ಚು, ಸಾಲದ ವಿವರ, BPL ಕಾರ್ಡ್ ಇರುವುದೇ, ಪಿಂಚಣಿ.
ಆಸ್ತಿ ಮತ್ತು ಮೂಲಸೌಕರ್ಯ: ಒಟ್ಟು ಜಮೀನಿನ ವಿವರ, ಮನೆಯ ಸ್ವತ್ತು (ಸ್ವಂತ/ಬಾಡಿಗೆ), ಮನೆಯ ಪ್ರಕಾರ (ಕಚ್ಚಾ/ಪಕ್ಕಾ), ವಿದ್ಯುತ್, ಕುಡಿಯುವ ನೀರಿನ ಮೂಲ, ಶೌಚಾಲಯ, ಕೊಠಡಿಗಳ ಸಂಖ್ಯೆ, ಇಂಟರ್ನೆಟ್ ಸೌಲಭ್ಯ, ವಾಹನಗಳ ಲಭ್ಯತೆ.
ಸರ್ಕಾರಿ ಯೋಜನೆಗಳ ಲಾಭ: ರೇಷನ್ ಸಬ್ಸಿಡಿ, ವಸತಿ ಯೋಜನೆ, ವಿದ್ಯಾರ್ಥಿವೇತನ, ಮೀಸಲಾತಿ, ಆರೋಗ್ಯ ಯೋಜನೆಗಳಿಂದ ಲಾಭ ಪಡೆಯುತ್ತಿದ್ದರೆಯೇ ಎಂಬ ಮಾಹಿತಿ.
ವಿಶೇಷ ಕುಟುಂಬ ವಿವರ: ಮನೆಯಲ್ಲಿ ವಿಧವೆ, ಅಂಗವಿಕಲರು, ಹಿರಿಯ ನಾಗರಿಕರು (60+ ವರ್ಷ), 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು 18-35 ವರ್ಷ ವಯಸ್ಸಿನ ಯುವಕರ ಸಂಖ್ಯೆ.
ಸಾಮಾಜಿಕ ಭಾಗವಹಿಸ: ಯಾವುದೇ ಸಾಮಾಜಿಕ ಸಂಘ/ಸಂಸ್ಥೆಯ ಸದಸ್ಯತ್ವ, ನೋಂದಾಯಿತ ಮತದಾರರ ಸಂಖ್ಯೆ, ಮತದಾನದ ಚಾಲನೆ.
ಅನುಭವಗಳು ಮತ್ತು ನಿರೀಕ್ಷೆಗಳು: ಜಾತಿ ಆಧಾರಿತ ಬೇಧಭಾವ ಅನುಭವಿಸಿದ್ದರೆಯೇ ಮತ್ತು ಈ ಸಮೀಕ್ಷೆಯಿಂದ ನಿಮಗೆ ಏನು ಪ್ರಯೋಜನ ನಿರೀಕ್ಷಿಸುತ್ತೀರಿ ಎಂಬ ಅಭಿಪ್ರಾಯ.
ನಿಮ್ಮ ಸಹಕಾರ ಅತ್ಯಗತ್ಯ:
ಈ ಸಮೀಕ್ಷೆಯು ರಾಜ್ಯದ ಯೋಜನೆಗಳನ್ನು ಹೆಚ್ಚು ಪಾರದರ್ಶಕವಾಗಿ ಮತ್ತು ಪರಿಣಾಮಕಾರಿಯಾಗಿ ರೂಪಿಸಲು ನೆರವಾಗುವುದರಿಂದ, ಪ್ರತಿ ನಾಗರಿಕರ ಸಹಕಾರ ಅತ್ಯವಶ್ಯಕವಾಗಿದೆ. ಗಣತಿದಾರರು ಕೇಳುವ ಎಲ್ಲಾ ಪ್ರಶ್ನೆಗಳಿಗೆ ಸರಿಯಾದ ಮತ್ತು ಪೂರ್ಣ ಮಾಹಿತಿ ಒದಗಿಸುವ ಮೂಲಕ ನೀವೂ ರಾಜ್ಯದ ಅಭಿವೃದ್ಧಿಯ ಭಾಗಿಯಾಗಬಹುದು. ಯಾವುದೇ ಸಂದೇಹ ಅಥವಾ ಸಹಾಯದ ಅವಶ್ಯಕತೆ ಇದ್ದರೆ, ಸ್ಥಳೀಯ ಆಡಳಿತ ಅಧಿಕಾರಿಗಳನ್ನು ಸಂಪರ್ಕಿಸಬಹುದು.



ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Kavitha holds a Master’s degree in Computer Applications (MCA) and has a deep interest in technology. Leveraging her academic background, she writes articles on science and technology, simplifying complex technical topics for general readers. Her work focuses on making cutting-edge advancements in tech accessible and engaging.


WhatsApp Group




