amruth and vande bharat new trains

Vande Bharat : ಕರ್ನಾಟಕದಲ್ಲಿ ಮೊದಲ ಬಾರಿಗೆ ಅಮೃತ ಭಾರತ್ ಸಂಚಾರ! ಜೊತೆಗೆ 2 ವಂದೇ ಭಾರತ್ ರೈಲಿಗೆ ಚಾಲನೆ

WhatsApp Group Telegram Group

ಎಲ್ಲ ಸಾರ್ವಜನಿಕರಿಗೆ ಸಿಹಿ ಸುದ್ದಿ ತಿಳಿದು ಬಂದಿದೆ. ಹೌದು, ಎಲ್ಲ ಕಡೆಗಳಲ್ಲಿ ಪ್ರಯಾಣ ಬೆಳೆಸಲು ಬಸ್ ಮತ್ತು ರೈಲಿನ ಅವಶ್ಯಕತೆ ಬಹಳ ಇದೆ. ಹಾಗೆಯೇ ಈಗ ತಿಳಿದು ಬಂದ ಮಾಹಿತಿಯ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 30ರಂದು 2 ಅಮೃತ್ ಭಾರತ್ ಹಾಗೂ 6 ವಂದೇ ಭಾರತ್ ರೈಲುಗಳನ್ನು ( Vande Bhaarath Train ) ಲೋಕಾರ್ಪಣೆಗೊಳಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕದಲ್ಲಿ ಮೊದಲ ಬಾರಿಗೆ ಅಮೃತ್ ಭಾರತ್ ರೈಲಿನ ( Amruth Bharath Train ) ಸಂಚಾರ :

Amrith bharat

ಈ ಹಿಂದೆ ಅಮೃತ್ ಭಾರತ್ ರೈಲನ್ನು ವಂದೇ ಸಾಧಾರಣ್ (Vande Sadharan) ಎಂದು ಕರೆಯಲಾಗುತ್ತಿತ್ತು. ಈಗ ಇದೆ ಮೊದಲ ಬಾರಿಗೆ ಕರ್ನಾಟಕದಲ್ಲಿ ಅಮೃತ್ ರೈಲಿನ ಸಂಚಾರಕ್ಕೆ ಚಾಲನೆ ದೊರೆಯಲಿದೆ. ಇನ್ನು ಈ ಅಮೃತ್ ಭಾರತ್‌ ರೈಲುವೊಂದನ್ನು ಅಭಿವೃದ್ಧಿಪಡಿಸಲು ರೈಲ್ವೆ ಇಲಾಖೆಯು ರೂ.65 ಕೋಟಿ ಖರ್ಚು ಮಾಡುತ್ತಿದೆ ಎಂದು ಅಂದಾಜಿಸಲಾಗಿದೆ. ಮತ್ತು ಇನ್ನೊಂದು ಮುಖ್ಯ ವಿಷಯ ಎಂದರೆ ಈ ರೈಲಿನಲ್ಲಿ ಸುಮಾರು 1,800 ಮಂದಿ ಆರಾಮದಾಯವಾಗಿ ಪ್ರಯಾಣಿಸಬಹುದಾಗಿದೆ.

ಅಮೃತ್ ಭಾರತ್ ರೈಲುಗಳ ಸಂಚಾರಕ್ಕೆ ಚಾಲನೆ :

ಹೊಸ ರೈಲು ನಿಲ್ದಾಣ ಹಾಗೂ ಮರ್ಯಾದಾ ಪುರುಷೋತ್ತಮ ಶ್ರೀರಾಮ ವಿಮಾನ ನಿಲ್ದಾಣ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ( PM Narendra Modi ) ಅವರು ಡಿ.30ಕ್ಕೆ ಅಯೋಧ್ಯೆಗೆ ಭೇಟಿ ನೀಡುವ ನಿರೀಕ್ಷೆಯಿದೆ ಅಂದು ಪಶ್ಚಿಮ ಬಂಗಾಳದ ಮಾಲ್ಡಾ (Malda) – ಬೆಂಗಳೂರು (Bengaluru) ಮತ್ತು ದೆಹಲಿ (Delhi) – ದರ್ಬಂಗಾ (Darbhanga) ಮಧ್ಯೆ ಸಂಚರಿಸಲಿರುವ ಅಮೃತ್ ಭಾರತ್ ರೈಲುಗಳ ಸಂಚಾರಕ್ಕೆ ಚಾಲನೆ ನೀಡಲಿದ್ದಾರೆ.

whatss

6 ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳ ಲೋಕಾರ್ಪಣೆ :

ತಮಿಳುನಾಡಿನ ಕೊಯಮತ್ತೂರು (Coimbatore) – ಬೆಂಗಳೂರು (Bengaluru)
ಮಂಗಳೂರು (Mangaluru) – ಗೋವಾದ ಮಡ್‌ಗಾಂವ್‌ (Madgaon)
ಅಯೋಧ್ಯೆ – ಆನಂದವಿಹಾರ್
ನವದೆಹಲಿ – ವೈಷ್ಣೋದೇವಿ
ಅಮೃತಸರ – ನವದೆಹಲಿ
ಹಾಗೂ ಜಲ್ನಾ – ಮುಂಬೈ ನಡುವೆ ಸಂಚರಿಸಲಿರುವ 6 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆ ಮಾಡಿದ್ದಾರೆ.

ಈ ಅಮೃತ್ ಭಾರತ್ ರೈಲಿನ ವಿನ್ಯಾಸ :

ಅಮೃತ್ ಭಾರತ್‌ ಗರಿಷ್ಠ ವೇಗಮಿತಿಯನ್ನು ಗಂಟೆಗೆ 130 ಕಿಮೀ.ಗೆ ಸೀಮಿತಗೊಳಿಸಬಹುದು.

ಈ ರೈಲಿನ ವಿನ್ಯಾಸದ ಬಗ್ಗೆ ಹೇಳುದಾದರೆ, ಇದರ ಮುಂಭಾಗ – ಹಿಂಭಾಗ ಎಂಜಿನ್ ಅನ್ನು ಹೊಂದಿದೆ.
ದ್ವಿತೀಯ ದರ್ಜೆಯ ಸ್ಲೀಪರ್ ಕೋಚ್‌ ಹಾಗೂ ಕಾಯ್ದಿರಿಸದ ಕೋಚ್‌ಗಳನ್ನು ಒಳಗೊಂಡಿದೆ.
ಇದರಲ್ಲಿ ಹವಾನಿಯಂತ್ರಿತ ( AC ) ವ್ಯವಸ್ಥೆ ಇರಲಿದೆ.
ಇದರಲ್ಲಿ ಸ್ವಯಂ ಚಾಲಿತ ಬಾಗಿಲುಗಳು ಇರುವುದಿಲ್ಲ.
ಸಿಸಿಟಿವಿ, ಮೊಬೈಲ್ ಚಾರ್ಜಿಂಗ್ ಪಾಯಿಂಟ್‌, ಎಲ್‌ಇಡಿ ಲೈಟ್ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳು ಇರಲಿವೆ.
ಕಡಿಮೆ ಖರ್ಚಿನ ಅಮೃತ್ ಭಾರತ್‌ ರೈಲುಗಳನ್ನು ಹಗಲು – ರಾತ್ರಿ ಸಂಚಾರಕ್ಕೆ ಬಳಕೆ ಮಾಡುವಂತೆ ವಿನ್ಯಾಸ ಮಾಡಲಾಗಿದೆ.
22 ಕೋಚ್‌ಗಳನ್ನು ಹೊಂದಿರುವ ಈ ರೈಲು 800 ಕಿಲೋಮೀಟರ್‌ಗಳಿಗಿಂತ ಹೆಚ್ಚು ದೂರವನ್ನು ಕ್ರಮಿಸಬಲ್ಲದು.

tel share transformed

ಮಂಗಳೂರು ಮತ್ತು ಮಡ್‌ಗಾಂವ್‌ ನಡುವೆ ಸಂಚರಿಸುವ ವಂದೇ ಭಾರತ್ ರೈಲಿಗೂ ಚಾಲನೆ :

ಹೌದು, ಮಂಗಳೂರು ಸೆಂಟ್ರಲ್ (Mangaluru Central) – ಮಡ್‌ಗಾಂವ್‌ (Madgaon) ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೂ ಡಿಸೆಂಬರ್ 30 ರಂದೇ ಚಾಲನೆ ದೊರೆಯಲಿದೆ ಎಂದು ತಿಳಿದು ಬಂದಿದೆ.

ಇನ್ನು ಈ ರೈಲಿನ ಸಂಚಾರದ ವೇಳಾ ಪಟ್ಟಿ ಹೀಗಿದೆ :

ಮಂಗಳೂರಿನಿಂದ ಬೆಳಗ್ಗೆ 8.30ಕ್ಕೆ ಹೊರಡುವ ಈ ರೈಲು ಮಧ್ಯಾಹ್ನ 1.05ಕ್ಕೆ ಮಡಗಾಂವ್ (ಗೋವಾ) ತಲುಪಲಿದೆ. ಅಲ್ಲಿಂದ ಸಂಜೆ 6.10ಕ್ಕೆ ಸಂಚಾರವನ್ನು ಆರಂಭಿಸಿ, ರಾತ್ರಿ 10.45ಕ್ಕೆ ಮಂಗಳೂರು ಸೆಂಟ್ರಲ್‌ಗೆ ಬರಲಿದೆ.

ಸುಮಾರು 320 ಕಿ.ಮೀ ದೂರವನ್ನು ವಂದೇ ಭಾರತ್ ಎಕ್ಸ್‌ಪ್ರೆಸ್ ಬೇಗನೇ ಕ್ರಮಿಸಲಿದ್ದು, ಮಾರ್ಗ ಮಧ್ಯೆ ಉಡುಪಿ (Udupi) ಮತ್ತು ಕಾರವಾರ (Karwar)ದಲ್ಲಿ ನಿಲುಗಡೆ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.

ಬೆಂಗಳೂರು ಮತ್ತು ಕೊಯಮತ್ತೂರು ನಡುವೆಯು ವಂದೇ ಭಾರತ್ ರೈಲು ಸಂಚಾರ :

ಇನ್ನು ಬೆಂಗಳೂರು (Bengaluru) ಮತ್ತು ಕೊಯಮತ್ತೂರು (Coimbatore) ಮಧ್ಯೆಯೂ ವಂದೇ ಭಾರತ್ ಎಕ್ಸ್‌ಪ್ರೆಸ್ ಲೋಕಾರ್ಪಣೆಯಾಗಲಿದೆ ಎಂದು ತಿಳಿದು ಬಂದಿದೆ. ಈ ರೈಲು 8 ಕೋಚ್‌ಗಳನ್ನು ಒಳಗೊಂಡಿರಲಿದೆ. ಇವೆರೆಡು ನಗರಗಳ ನಡುವೆ ಕೇವಲ 5 ಗಂಟೆಗಳಲ್ಲಿ ಸಂಚರಿಸಲಿದೆ.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories