Crop Insurance- ಈ ರೈತರ ಖಾತೆಗೆ ಮಧ್ಯಂತರ ಬೆಳೆ ವಿಮೆ ಜಮಾ ಆಗಿದೆ, ಮೊಬೈಲ್ ನಲ್ಲೆ ಹೀಗೆ ಚೆಕ್ ಮಾಡಿ

crop insurance

ಬರದಿಂದಾಗಿ ನೊಂದಿರುವಂತಹ ಜಿಲ್ಲೆಯ ಒಟ್ಟು 63, 566 ರೈತರಿಗೆ ಪ್ರಧಾನ ಮಂತ್ರಿ ಫಸಲ್ ಭಿಮಾ (ವಿಮಾ) ಯೋಜನೆ ಅಡಿಯಲ್ಲಿ 50.298 ಕೋಟಿ ರೂ.ಗಳ ಮಧ್ಯಂತರ ವಿಮೆ ಮಂಜೂರಾಗಿದೆ. ಮಳೆ ಕೊರತೆಯಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಬೆಳೆ ಹಾನಿ ಉಂಟಾಗಿ ಬರ ಪರಿಸ್ಥಿತಿ ನಿರ್ಮಾಣವಾಗಿರುವ ಸಂಗತಿ ನಿಮಗೆಲ್ಲ ತಿಳಿದೇ ಇದೆ. ಇಂತಹ ಪರಿಸ್ಥಿತಿಯನ್ನು ಎದುರಿಸಲು ರೈತರಿಗೆ ಸ್ವಲ್ಪಮಟ್ಟಿಗೆ ಸಹಾಯವಾಗಲೆಂದು ಮಧ್ಯಂತರ ವಿಮೆ ಮಂಜೂರು ಮಾಡಲಾಗಿದೆ. ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ವರದಿಯನ್ನು ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ರೈತರ ಖಾತೆಗೆ ಮಧ್ಯಂತರ ಬೆಳೆ ವಿಮೆ: crop insurance amount

ಬೆಳೆಗಳಿಗೆ ಬೆಳೆ ವಿಮೆ ಪ್ರಿಮಿಯಂ ಅನ್ನು ಪಾವತಿ ಮಾಡಿ ಬೆಳೆ ವಿಮಾ ಮಾಡಿಕೊಂಡಿರುವ ರೈತರು ತಾವು ಸಲ್ಲಿಸದ ಅರ್ಜಿ ಯಶಸ್ವಿಯಾಗಿ ಸಲ್ಲಿಕೆಯಾಗಿದೆಯೇ? ಅಥವಾ ಸಲ್ಲಿಕೆಯಾದ ಅರ್ಜಿ ಯಾವ ಹಂತದಲ್ಲಿದೆ ಎಂದು ತಮ್ಮ ಮೊಬೈಲ್ ಮೂಲಕವೇ ತಿಳಿದು ಕೊಳ್ಳಬಹುದು. ಅದು ಹೇಗೆ ಎಂದು ತಿಳಿದು ಕೊಳ್ಳೋಣ ಬನ್ನಿ.

ಬೆಳೆ ವಿಮೆ ಕಟ್ಟಿರುವ ರೈತರು ಸಂರಕ್ಷಣೆ ( Samrakshane – Website ) ವೆಬ್ ಸೈಟ್ ಗೆ ಭೇಟಿ ನೀಡಿ ತಾವು ಸಲ್ಲಿಸಿದ ಅರ್ಜಿ ಕುರಿತು ಅಥವಾ ಹಣ ಸಲ್ಲಿಕೆಯಾಗುರುವ ಬಗ್ಗೆ, ಅಷ್ಟೇ ಅಲ್ಲದೆ ಇನ್ನಿತರ ಸಂಪೂರ್ಣ ಮಾಹಿತಿಯನ್ನು ತಿಳಿಯಬವುದಾಗಿದೆ.

whatss

ಮಧ್ಯಂತರ ಬೆಳೆ ವಿಮೆ ಹಣದ ಸ್ಟೇಟಸ್ ಚೆಕ್ ಮಾಡುವ ವಿಧಾನ ಇಲ್ಲಿದೆ

ಹಂತ 1 : ಮೊದಲಿಗೆ ಈ ಕೆಳಗಿನ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿ

https://samrakshane.karnataka.gov.in/

c1

ಹಂತ 2 : ನಂತರ ಈ ವರ್ಷವನ್ನು ಆಯ್ಕೆ ಮಾಡಿ ‘2023-24’ ಮತ್ತು ಸೀಸನ್ ‘kharif’ ಎಂದು ಆಯ್ಕೆ ಮಾಡಿ ನಂತರ ‘ಮುಂದೆ/ Go’ ಮೇಲೆ ಕ್ಲಿಕ್ ಮಾಡಿ.

ಇದಾದ ನಂತರದ Farmer ಕಾಲಂನಲ್ಲಿ “Check status.” ಮೇಲೆ ಕ್ಲಿಕ್ ಮಾಡಿ

c2

ಹಂತ 3 : ನಂತರ ಇಲ್ಲಿ ಪ್ರೊಪೋಸಲ್ ಐಡಿ, ಮೊಬೈಲ್ ನಂಬರ್ ಅಥವಾ ಆಧಾರ್ ಸಂಖ್ಯೆ ಹಾಕಿ, ಕೊಟ್ಟಿರುವ ಕ್ಯಾಪ್ಚ ಎಂಟರ್ ಮಾಡಿ ,ಸರ್ಚ್ ಮೇಲೆ ಕ್ಲಿಕ್ ಮಾಡಿ

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

c3

ಪುಟದಲ್ಲಿ ಅರ್ಜಿದಾರರ ಬೆಳೆ ವಿಮೆ ಅರ್ಜಿಯ ಸಂಪೂರ್ಣ ವಿವರ ತೋರಿಸುತ್ತದೆ. ಇದೇ ಪೇಜ್ ನಲ್ಲಿ “GramaOne Payment Successful Approved by Bank and Forwarded to insurance Co. “ ಎಂದು ತೋರಿಸಿದರೆ ಮಾತ್ರ ನಿಮ್ಮ ಬೆಳೆ ವಿಮಾ ಅರ್ಜಿ ಯಶ್ವವಿಯಾಗಿ ಸಲ್ಲಿಕೆ ಅಗಿದೆ ಎಂದು ಒಂದು ವೇಳೆ “ಬೆಳೆ ನೋಂದಣಿಯು ಪ್ರಗತಿಯಲ್ಲಿದೆ/Data Entry In Progress” ಎಂದು ಅಥವಾ “No date found” ಎಂದು ತೋರಿಸಿದರೆ ನಿಮ್ಮ ಅರ್ಜಿ ಸಲ್ಲಿಕೆಯಾಗಿಲ್ಲ ಎಂದು ತೋರಿಸುತ್ತದೆ.

c4

ಹಂತ 4 : Proposal ID ಯ ಕೊನೆಯಲ್ಲಿ ಕಾಣುವ select ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ view details ಮೇಲೆ ಕ್ಲಿಕ್ ಮಾಡಿದರೆ ಅರ್ಜಿದಾರರ ಮಾಹಿತಿ ತೋರಿಸುತ್ತದೆ ರೈತನ ಸರ್ವೆ ನಂಬರ್, ಒಟ್ಟೂ ಬೆಳೆ ವಿಮೆ ಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಇಲ್ಲಿ ದೊರೆಯುತ್ತದೆ.

c5

ಇದಿಷ್ಟು ಮುಗಿದ ನಂತರ ಪ್ರತಿ ಒಬ್ಬ ರೈತನ ಬೆಳೆ ವಿಮೆ ಎಷ್ಟು ಜಮಾ ಅಗಿದೆ ಎಂದು ಕೂಡ ತಿಳಿಯಬಹುದಾಗಿದೆ. ವೆಬ್ ಸೈಟ್ ನ ಮೊದಲನೇ ಪುಟದ ಕೊನೆಯಲ್ಲಿ UTR details ಎಂದು ತೋರಿಸುತ್ತದೆ ಅಲ್ಲಿ ನೀಡಿದ ಬ್ಯಾಂಕ್ ವಿವರದ ಮೇಲೆ ಕ್ಲಿಕ್ ಮಾಡಿದರೆ ಬೆಳೆ ವಿಮೆಯ ಎಷ್ಟು ಹಣ ಜಮಾ ಅಗಿದೆ ಮತ್ತು ಬ್ಯಾಂಕ್ ಖಾತೆ, ಜಮಾ ಅದ ದಿನಾಂಕದ ವಿವರವನ್ನು ತೋರಿಸುತ್ತದೆ.

ಯಾವ ಜಿಲ್ಲೆಗಳಲ್ಲಿ ಎಷ್ಟು ಹಣ ಜಮಾ ಅಗಿದೆ?

ಈಗಾಗಲೇ ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಮಧ್ಯಂತರ ಬೆಳೆ ವಿಮೆ ರೈತರ ಖಾತೆಗೆ DBT ಮೂಲಕ ಖಾತೆಗೆ ಜಮಾ ಆಗಿದೆ. ಅಳ್ನಾವರ ತಾಲೂಕಿನ 3,052 ಜನ ರೈತರಿಗೆ 1.82 ಕೋಟಿ ರೂ.ಗಳ, ಅಣ್ಣಿಗೇರಿ ತಾಲೂಕಿನ 6,044 ಜನ ರೈತರಿಗೆ 6.45 ಕೋಟಿ ರೂ. ಗಳ, ಧಾರವಾಡ 9,978 ಜನ ರೈತರಿಗೆ 6.575 ಕೋಟಿ ರೂ. ಗಳ, ಹುಬ್ಬಳ್ಳಿ ತಾಲೂಕಿನ 9,472 ಜನ ರೈತರಿಗೆ 9.12 ಕೋಟಿ ರೂ. ಗಳ, ಹುಬ್ಬಳ್ಳಿ ನಗರ ತಾಲೂಕಿನ 301 ಜನ ರೈತರಿಗೆ 36.5 ಲಕ್ಷ ರೂ.ಗಳ, ಕಲಘಟಗಿ ತಾಲೂಕಿನ 15,248 ಜನ ರೈತರಿಗೆ 9.731 ಕೋಟಿ ರೂ. ಗಳ ಮತ್ತು ನವಲಗುಂದ ತಾಲೂಕಿನ 5,286 ಜನ ರೈತರಿಗೆ 5.282 ಕೋಟಿ ರೂ. ಗಳ ಮಧ್ಯಂತರ ವಿಮಾ ಪರಿಹಾರ ಜಮಾವಣೆಯಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

tel share transformed

ಯಾವ ಬೆಳೆಗೆ ವಿಮೆ ಹಣ ?

ಭತ್ತ(Paddy), ಮೆಕ್ಕೆಜೋಳ(Maize), ಹತ್ತಿ( Cotton), ಈರುಳ್ಳಿ(Onion), ಕೆಂಪು ಮೆಣಸಿನಕಾಯಿ ( red chillies), ಆಲೂಗಡ್ಡೆ (Potato) ಬೆಳೆಗಳಿಗೆ ನೊಂದಾಯಿಕೊಂಡ ರೈತರಿಗೆ ಮಧ್ಯಂತರ ವಿಮೆ Interim Crop Insurance ಜಮಾವಣೆ ಆರಂಭವಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.

ಧಾರವಾಡ ಜಿಲ್ಲೆಯ 1,11,057 ಜನ ರೈತರು ಈ ಯೋಜನೆಯಡಿ ವಿವಿಧ ಬೆಳೆಗಳಿಗೆ ನೋಂದಾಯಿಸಿಕೊಂಡಿರುತ್ತಾರೆ. ಒಟ್ಟು 1,05,065 ಹೆಕ್ಟೇರ್​ನಷ್ಟು ಬೆಳೆ ಪ್ರದೇಶ ವಿಮೆ ಯೋಜನೆಗೆ ಒಳಪಟ್ಟಿತ್ತು. ಪ್ರಕೃತಿ ವಿಕೋಪಗಳಿಂದ ಯಾವುದೇ ಅಧಿಸೂಚಿತ ಬೆಳೆ ವಿಫಲವಾದ ಪಕ್ಷದಲ್ಲಿ ರೈತರಿಗೆ ವಿಮಾ ರಕ್ಷಣೆ, ಆರ್ಥಿಕ ಬೆಂಬಲ ಮತ್ತು ಕೃಷಿ ಆದಾಯ ಸ್ಥಿರವಾಗಿರುವಂತೆ ಮಾಡಲು ನೆರವಾಗುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ.

ಇನ್ನೇನು ಮುಂದಿನ ದಿನಗಳಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ರೈತರಿಗೂ ಮಧ್ಯಂತರ ಬೆಳೆ ವಿಮೆ ಬಿಡುಗಡೆಯಾಗಲಿದೆ. ಕ್ವೀಕ್ ಅಪ್ಡೇಟ್ಗಳಿಗಾಗಿ ನಮ್ಮ ಟೆಲಿಗ್ರಾಂ ಮತ್ತು ವಾಟ್ಸಾಪ್ ಚಾನೆಲ್ ಗೆ ಈಗಲೇ ಜಾಯಿನ್ ಆಗಿ.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!