these upi id ban from dec

UPI Payment: ಡಿಸೆಂಬರ್‌ 31ರಿಂದ ಈ ಜನರ ಗೂಗಲ್ ಪೇ, ಫೋನ್ ಪೇ & ಪೆಟಿಎಂ ಖಾತೆಗಳು ಬಂದ್..!

WhatsApp Group Telegram Group

ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಪೇಮೆಂಟ್ ಗಳು ಹೆಚ್ಚಾಗಿವೆ. ಹೌದು, ಇವಾಗ ಯಾರು ಕೂಡ ತಮ್ಮ ಜೇಬಲ್ಲಿ ದುಡ್ಡು ಇಟ್ಟುಕೊಂಡು ಓಡಾಡುತ್ತಿಲ್ಲ. ಅದರ ಬದಲಿಗೆ ಮೊಬೈಲ್ ಫೋನ್ ಇರುತ್ತದೆ. ಹಾಗಾಗಿ ಡಿಜಿಟಲ್‌ ಪೇಮೆಂಟ್‌ (Digital Payment)ನ ಪ್ರಮಾಣ ಹೆಚ್ಚಾಗಿದೆ. ಅದರಲ್ಲೂ ಏಕೀಕೃತ ಪಾವತಿ ವ್ಯವಸ್ಥೆ ಅಂದರೆ UPI (Unified Payments Interface) ಡಿಜಿಟಲ್‌ ವಹಿವಾಟು ಜಾಸ್ತಿ ಆಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

UPI ಐಡಿಗಳು ಏಕೆ ಬ್ಯಾನ್ ಆಗುತ್ತದೆ?:

ಆದರೆ ಇದೀಗ ರಾಷ್ಟ್ರೀಯ ಪಾವತಿಗಳ ನಿಗಮ (ಎನ್‌ಪಿಸಿಐ) ನಿಮ್ಮ UPI ಐಡಿಗಳನ್ನು ನಿಷ್ಕ್ರಿಯಗೊಳಿಸುವ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಅದರ ಬಗ್ಗೆ ಮಾಹಿತಿ ತಿಳಿದು ಕೊಳ್ಳೋಣ ಬನ್ನಿ.
ನಿಮ್ಮ ಎಲ್ಲಾ ಬ್ಯಾಂಕ್‌ಗಳು ಮತ್ತು ಗೂಗಲ್‌ ಪೇ(Google pay) ಹಾಗೂ ಫೋನ್‌ ಪೇ(phone pay) ನಲ್ಲಿ ಒಂದು ವರ್ಷದಿಂದ ಯಾವುದೇ ವಹಿವಾಟು ನಡೆಸದೆ ಇದ್ದಲ್ಲಿ ಅಂತಹ UPI ಐಡಿಗಳನ್ನು ಬ್ಯಾನ್ ಅಥವಾ ನಿರ್ಬಂಧಿಸುತ್ತಾರೆ ಎಂದು ತಿಳಿದು ಬಂದಿದೆ. ಹೌದು ಅದಕ್ಕಾಗಿ ಡಿಸೆಂಬರ್ 31 ರ ನಂತರ, 2023ರ ವರ್ಷದಲ್ಲಿ ಯಾವುದೇ ವಹಿವಾಟು ಮಾಡದ ಐಡಿಗಳನ್ನು NPCI ನಿರ್ಬಂಧಿಸುತ್ತದೆ ಎಂದು ಕೂಡ ತಿಳಿಸಿದ್ದಾರೆ.

tel share transformed

UPI ಐಡಿ ಮತ್ತು ಹಲವು ಯೋಗ್ಯ ವಲ್ಲದ ನಿಷ್ಕ್ರಿಯವಾದ ಕ್ಲೈಂಟ್‌ಗಳ ಲಿಂಕ್ ಗಳನ್ನು ನಿಮ್ಮ ಮೊಬೈಲ್ ಫೋನ್ ನ ಸಂಖ್ಯೆಗೆ ಹೊಂದಿರುತ್ತದೆ. ಅದಕ್ಕಾಗಿ NPCI ಯ ಮಾರ್ಗಸೂಚಿಗೆ ತಕ್ಕಂತೆ ಎಲ್ಲಾ ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ಗಳು ಮತ್ತು PSP ಬ್ಯಾಂಕ್‌ಗಳು ಚೆಕ್ ಮಾಡುತ್ತಿವೆ. ಹಾಗೆಯೇ ನಿಮ್ಮ UPI ಐಡಿಯೊಂದಿಗೆ ಯಾವುದೇ ಕ್ರೆಡಿಟ್ ಅಥವಾ ಡೆಬಿಟ್ ಮಾಡದಿದ್ದರೆ ಅಂತಹ ಐಡಿಗಳನ್ನು ಕ್ಲೋಸ್‌ ಮಾಡಲಾಗುತ್ತದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಡಿಸೆಂಬರ್ 31 ರವರೆಗೆ ಕಾಲಾವಕಾಶ :

ಈ UPI ಐಡಿಗಳನ್ನು ಗುರುತಿಸಲು ಬ್ಯಾಂಕ್‌ಗಳು ಮತ್ತು ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ಗಳಿಗೆ NPCI ಡಿಸೆಂಬರ್ 31 ರವರೆಗೆ ಕಾಲಾವಕಾಶ ನೀಡಿದೆ. ನಿಮ್ಮ UPI ಐಡಿಯನ್ನು ನಿಷ್ಕ್ರಿಯಗೊಳಿಸುವ ಮೊದಲು ನಿಮ್ಮ ಸಂಬಂಧಿತ ಬ್ಯಾಂಕ್‌ಗಳು ನಿಮಗೆ ಇಮೇಲ್ ಅಥವಾ ಸಂದೇಶದ ಮೂಲಕ ನೋಟಿಫಿಕೇಷನ್‌ ಕಳುಹಿಸುತ್ತವೆ ಎಂದು ತಿಳಿದು ಬಂದಿದೆ.

whatss

ಇದರ ಮುಖ್ಯ ಉದ್ದೇಶ :

UPI ಐಡಿ ಯಿಂದ ಹಲವಾರು ತೊಂದರೆಗಳು ಕಾಣಿಸಿಕೊಂಡು ಬ್ಯಾಂಕ್ ಅಥವಾ ಉಳಿದ ಹಣದ ವಹಿವಾಟಿಗೆ ಬಹಳ ತೊಂದರೆ ಉಂಟಾಗಿದೆ. ಮತ್ತು ತಪ್ಪಾದ ವಹಿವಾಟಿನ ಸಾಧ್ಯತೆಯು ಗಮನಾರ್ಹವಾಗಿ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಇಂತಹ ಪ್ರಕರಣಗಳನ್ನು ತಡೆಯಲು ರಾಷ್ಟ್ರೀಯ ಪಾವತಿಗಳ ನಿಗಮ (ಎನ್‌ಪಿಸಿಐ) ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

WhatsApp Group Join Now
Telegram Group Join Now

Popular Categories