TVS iQube: ಬರೋಬ್ಬರಿ 100 ಕಿ.ಮೀ ಮೈಲೇಜ್ ಕೊಡುವ ಟಿವಿಎಸ್ ಐಕ್ಯೂಬ್ ಖರೀದಿಗೆ ಮುಗಿಬಿದ್ದ ಜನ!

iquabe

ಎಲೆಕ್ಟ್ರಿಕ್ ಸ್ಕೂಟರ್(electric vehicle) ಕ್ರಾಂತಿಯ ಭಾಗ TVS iQube, ಭಾರತೀಯ ದ್ವಿಚಕ್ರ ವಾಹನ ದೈತ್ಯ TVS ಮೋಟಾರ್ ಕಂಪನಿಯಿಂದ ಬಂದ ಕ್ರಾಂತಿಕಾರಿ ಎಲೆಕ್ಟ್ರಿಕ್ ಸ್ಕೂಟರ್ 2023ರ ಏಪ್ರಿಲ್‌ ತಿಂಗಳ 306,224 ಯುನಿಟ್‌ಗಳಿಗೆ ಹೋಲಿಸಿದರೆ, ಈ ಬಾರಿ 383,615 ಯುನಿಟ್‌ ವಾಹನಗಳನ್ನು ಮಾರಾಟ ಮಾಡಿದ್ದು, ಶೇಕಡ 25% ಬೆಳವಣಿಗೆ ಕಂಡಿದೆ. ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳನ್ನು ಮಾರುವಲ್ಲಿ ಉತ್ತಮವಾದ ಪ್ರಗತಿಯನ್ನು ಸಾಧಿಸಿದೆ. TVS iQube ಯ ವಿನ್ಯಾಸ, ವೈಶಿಷ್ಟ್ಯಗಳು, ಕಾರ್ಯಕ್ಷಮತೆ ಮತ್ತು EV ಮಾರುಕಟ್ಟೆಯಲ್ಲಿನ ಪ್ರಭಾವದ ಒಂದು ಸಂಕ್ಷಿಪ್ತ ಮಾಹಿತಿ ಇಲ್ಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಟಿವಿಎಸ್ ಐಕ್ಯೂಬ್ (TVS iQube) e – ಸ್ಕೂಟರ್:
TVS iQube s
TVS iQube ಖರೀದಿಗೆ ಮುಗಿಬಿದ್ದ ಜನ

ಟಿವಿಎಸ್ ಮೋಟಾರ್ ಏಪ್ರಿಲ್ 2024ರ ಮಾರಾಟದ ಕುರಿತ ವಿವರವನ್ನು ಬುಧವಾರ ಪ್ರಕಟಿಸಿದ್ದು, ಈ ಏಪ್ರಿಲ್‌ನಲ್ಲಿ 374,592 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟಗೊಳಿಸುವ ಮೂಲಕ ಶೇಕಡ 27% ಪ್ರಗತಿಯನ್ನು ಸಾಧಿಸಿದೆ. ಅದೇ 2023ರ ಏಪ್ರಿಲ್‌ ತಿಂಗಳಲ್ಲಿ 294,786 ಯುನಿಟ್‌ಗಳನ್ನು ಮಾರಿತ್ತು. ಇದು ದೇಶ – ವಿದೇಶದಲ್ಲಿ ಮಾರಾಟ ಮಾಡಿದ ಒಟ್ಟಾರೆ ದ್ವಿಚಕ್ರ ವಾಹನಗಳ ಸಂಖ್ಯೆಯಾಗಿದೆ.

iqube
ಕಾರ್ಯಕ್ಷಮತೆ ಮತ್ತು ವ್ಯಾಪ್ತಿ:

ಟಿವಿಎಸ್ ಐಕ್ಯೂಬ್ (TVS iQube)3.04 ಕೆಡಬ್ಲ್ಯೂಹೆಚ್ ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಪಡೆದಿದ್ದು, 140 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸಬಲ್ಲ 4.4 ಕೆಡಬ್ಲ್ಯೂ ಹಬ್ ಮೌಂಟೆಡ್ ಮೋಟಾರ್ ಒಳಗೊಂಡಿದೆ. ಸಂಪೂರ್ಣ ಚಾರ್ಜ್ ನಲ್ಲಿ 100 ಕಿ.ಮೀ ರೇಂಜ್ (ಮೈಲೇಜ್) ನೀಡುತ್ತದೆ. ಈ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಗಂಟೆಗೆ 75 ಕಿಲೋಮೀಟರ್ ಗರಿಷ್ಠ ವೇಗವನ್ನು ಪಡೆಯಲಿದ್ದು, ಕೇವಲ 4 ಗಂಟೆ 30 ನಿಮಿಷದಲ್ಲಿ ಇದರ ಬ್ಯಾಟರಿ 0-80% ಚಾರ್ಜ್ ಆಗುತ್ತವೆ.  ತ್ವರಿತ ವೇಗ ಮತ್ತು ಸ್ವೀಕಾರಾರ್ಹ ಶ್ರೇಣಿಯೊಂದಿಗೆ, iQube ಸಣ್ಣ ಪ್ರಯಾಣಗಳಿಗೆ ಸೂಕ್ತವಾಗಿದೆ. ನಗರದಲ್ಲಿ ಚಲಿಸಲು ಒಂದು ಸುಲಭ ಮತ್ತು ಪರಿಸರ ಸ್ನೇಹಿ ಮಾರ್ಗವನ್ನು ನೀಡುತ್ತದೆ.

titanim grey IQ
ಚಾರ್ಜಿಂಗ್ ಮತ್ತು ಸಂಪರ್ಕ:

TVS iQube ಚಾರ್ಜ್ ಮಾಡುವುದು ತುಂಬಾ ಸುಲಭ(easy to charge). ಮನೆಯಲ್ಲಿ(Home) ಅಥವಾ ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್‌ಗಳಲ್ಲಿ(Public charging stations) ಚಾರ್ಜ್ ಮಾಡಲು ಪೋರ್ಟಬಲ್ ಚಾರ್ಜರ್(Portable Charger) ಬಳಸಬಹುದು. ಸ್ಕೂಟರ್‌ನ TFT ಟಚ್‌ಸ್ಕ್ರೀನ್ ಡಿಸ್‌ಪ್ಲೇ (Touchscreen display) ಬ್ಯಾಟರಿ ಸ್ಥಿತಿ (battery condition), ವಾಹನದ ಸ್ಥಿತಿ (Vehicle condition) ಮತ್ತು ನ್ಯಾವಿಗೇಷನ್(Navigation) ಮಾಹಿತಿಯನ್ನು ತೋರಿಸುತ್ತದೆ. ಇದು ಸ್ಮಾರ್ಟ್ಫೋನ್ ಸಂಪರ್ಕವನ್ನು(smartphone connection) ಬೆಂಬಲಿಸುತ್ತದೆ, ಸ್ಮಾರ್ಟ್‌ಫೋನ್ ಅಪ್ಲಿಕೇಶನ್(Smart phone Applications) ಮೂಲಕ ಹೆಚ್ಚುವರಿ ವೈಶಿಷ್ಟ್ಯಗಳನ್ನು ಪ್ರವೇಶಿಸಬಹುದು.

ಬೆಲೆ ಮತ್ತು ಲಭ್ಯತೆ:

ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಟಿವಿಎಸ್ ಐಕ್ಯೂಬ್ (TVS iQube) ಎಲೆಕ್ಟ್ರಿಕ್ ಸ್ಕೂಟರ್, ರೂ.1.37 ಲಕ್ಷದಿಂದ ರೂ.1.46 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. TVS iQube, ಭವಿಷ್ಯದ ವಿನ್ಯಾಸ, ಸುಧಾರಿತ ವೈಶಿಷ್ಟ್ಯಗಳು ಮತ್ತು ಸ್ಪರ್ಧಾತ್ಮಕ ಬೆಲೆಯೊಂದಿಗೆ, ಕಾರ್ಯಕ್ಷಮತೆ, ಶ್ರೇಣಿ ಮತ್ತು ತಂತ್ರಜ್ಞಾನದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸುವ ಮೂಲಕ EV ಮಾರುಕಟ್ಟೆಯಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ಉಂಟುಮಾಡಲು ಸಿದ್ಧವಾಗಿದೆ.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!