ಮುಖ್ಯಾಂಶಗಳು (Highlights)
- ✔ ಮದುವೆ ಸೀಸನ್‌ನಲ್ಲಿ ಗ್ರಾಹಕರಿಗೆ ಬಂಪರ್; ಚಿನ್ನದ ಬೆಲೆಯಲ್ಲಿ ಸತತ ಇಳಿಕೆ.
- ✔ ಮಾರ್ಚ್ 1ನೇ ತಾರೀಖಿನಿಂದ ಇಲ್ಲಿಯವರೆಗೆ 10 ಗ್ರಾಂ ಚಿನ್ನಕ್ಕೆ ಬರೋಬ್ಬರಿ ₹10,000 ಇಳಿಕೆ!
- ✔ ಬೆಂಗಳೂರಿನಲ್ಲಿ ಇಂದು 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಗ್ರಾಂಗೆ ₹14,869 ಕ್ಕೆ ಕುಸಿತ.
ಮನೆಯಲ್ಲಿ ಮದುವೆ ಕಾರ್ಯಗಳಿವೆಯಾ? ಅಥವಾ ಕಷ್ಟಪಟ್ಟು ಕೂಡಿಟ್ಟ ಉಳಿತಾಯದ ಹಣದಲ್ಲಿ ಹೆಣ್ಣುಮಕ್ಕಳಿಗೆ ಒಂದಷ್ಟು ಆಭರಣ ಖರೀದಿಸಿಡಬೇಕು ಎಂದು ಕಾಯುತ್ತಿದ್ದೀರಾ? ಹಾಗಿದ್ದರೆ ನಿಮಗೆ ಭರ್ಜರಿ ಸಿಹಿಸುದ್ದಿ ಕಾದಿದೆ! ಹೌದು, ಮದುವೆ ಸೀಸನ್ ಶುರುವಾಗುತ್ತಿರುವಂತೆಯೇ ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ ಕಂಡಿದ್ದು, ಚಿನ್ನದ ಪ್ರಿಯರಿಗೆ ಬಂಪರ್ ಅವಕಾಶ ಒದಗಿಬಂದಿದೆ.
ಕಳೆದ ಕೆಲವು ತಿಂಗಳುಗಳಿಂದ ಗಗನಕ್ಕೇರಿದ್ದ ಚಿನ್ನದ ಬೆಲೆ ಇದೀಗ ದಿಢೀರ್ ಇಳಿಕೆಯ ಹಾದಿ ಹಿಡಿದಿದೆ. ಇದು ಮದುವೆಗೆ ಚಿನ್ನ ಖರೀದಿಸುವವರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಕೇವಲ 12 ದಿನಗಳಲ್ಲಿ ₹10,000 ಕುಸಿತ! ಬೆಂಗಳೂರು ಮಾರುಕಟ್ಟೆಯ ಅಂಕಿ-ಅಂಶಗಳನ್ನು ಗಮನಿಸಿದರೆ, ಚಿನ್ನದ ಬೆಲೆ ಎಷ್ಟು ದೊಡ್ಡ ಮಟ್ಟದಲ್ಲಿ ಕುಸಿದಿದೆ ಎಂಬುದು ಸ್ಪಷ್ಟವಾಗುತ್ತದೆ. ಮಾರ್ಚ್ 1, 2026 ರಂದು 10 ಗ್ರಾಂ (22 ಕ್ಯಾರೆಟ್) ಚಿನ್ನದ ಬೆಲೆ ₹1,58,650 ಇತ್ತು. ಆದರೆ ಇಂದು (ಮಾರ್ಚ್ 13) ಅದೇ 10 ಗ್ರಾಂ ಚಿನ್ನದ ಬೆಲೆ ₹1,48,690 ಕ್ಕೆ ಬಂದು ನಿಂತಿದೆ. ಅಂದರೆ, ಕೇವಲ 12 ದಿನಗಳಲ್ಲಿ 10 ಗ್ರಾಂ ಚಿನ್ನದ ಮೇಲೆ ಬರೋಬ್ಬರಿ ₹9,960 (ಸುಮಾರು ಹತ್ತು ಸಾವಿರ ರೂಪಾಯಿ) ಇಳಿಕೆಯಾಗಿದೆ!
ಚಿನ್ನ-ಬೆಳ್ಳಿ ಬೆಲೆ ಇಂದು, ಮಾರ್ಚ್ 13, 2026: Gold Price Today
ಇಂದು ಬೆಳಿಗ್ಗೆ 7:00AM ಗಂಟೆಗೆ ನಾವು ಚಿನ್ನದ ಮಾರುಕಟ್ಟೆ ದರ ಪರಿಶೀಲಿಸಿದ ಪ್ರಕಾರ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ:₹1,62,210 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: ₹1,48,690 ರೂ. ಬೆಳ್ಳಿ ಬೆಲೆ 1 ಕೆಜಿ: ₹2,79,900

ಕರ್ನಾಟಕದಲ್ಲಿ ಚಿನ್ನದ ಬೆಲೆ ಎಷ್ಟಿದೆ?:
ಒಂದು ಗ್ರಾಂ ಚಿನ್ನ (1GM)
18 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ₹12,166
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ₹14,869
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ₹16,221
ಎಂಟು ಗ್ರಾಂ ಚಿನ್ನ (8GM)
18 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ₹97,328
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ₹1,18,960
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ₹1,29,768
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಹತ್ತು ಗ್ರಾಂ ಚಿನ್ನ (10GM)
18 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ₹1,21,660
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ₹1,48,690
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ₹1,62,210
ನೂರು ಗ್ರಾಂ ಚಿನ್ನ (100GM)
18 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ₹12,16,600
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ₹14,86,900
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ₹16,22,100
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ (1 ಗ್ರಾಂ)ನ ಬೆಲೆ
| ನಗರ | ಇಂದು 22K |
|---|---|
| ಚೆನ್ನೈ | ₹16,330 |
| ಮುಂಬೈ | ₹16,221 |
| ದೆಹಲಿ | ₹16,236 |
| ಕೋಲ್ಕತ್ತಾ | ₹16,221 |
| ಬೆಂಗಳೂರು | ₹16,221 |
| ಹೈದರಾಬಾದ್ | ₹16,221 |
| ಕೇರಳ | ₹16,221 |
| ಪುಣೆ | ₹16,221 |
| ವಡೋದರಾ | ₹16,226 |
| ಅಹಮದಾಬಾದ್ | ₹16,226 |
ವಿವಿಧ ನಗರಗಳಲ್ಲಿ ಬೆಳ್ಳಿ ದರ (1 ಕೆಜಿ)
| ನಗರ | 1 ಕೆಜಿ |
|---|---|
| ಚೆನ್ನೈ | ₹2,89,900 |
| ಮುಂಬೈ | ₹2,79,900 |
| ದೆಹಲಿ | ₹2,79,900 |
| ಕೋಲ್ಕತ್ತಾ | ₹2,79,900 |
| ಬೆಂಗಳೂರು | ₹2,79,900 |
| ಹೈದರಾಬಾದ್ | ₹2,89,900 |
| ಕೇರಳ | ₹2,89,900 |
| ಪುಣೆ | ₹2,79,900 |
| ವಡೋದರಾ | ₹2,79,900 |
| ಅಹಮದಾಬಾದ್ | ₹2,79,900 |
(ಗಮನಿಸಿ: ಈ ದರಗಳು ಕೇವಲ ಸೂಚಿತ ಬೆಲೆಗಳಾಗಿದ್ದು, ಇದರಲ್ಲಿ ಜಿಎಸ್‌ಟಿ (GST) ಮತ್ತು ಮೇಕಿಂಗ್ ಚಾರ್ಜ್‌ಗಳು (Making Charges) ಸೇರಿರುವುದಿಲ್ಲ. ಜ್ಯುವೆಲ್ಲರಿಯಿಂದ ಜ್ಯುವೆಲ್ಲರಿಗೆ ಅಲ್ಪ ಬದಲಾವಣೆ ಇರಬಹುದು.)
ಮದುವೆಗೆ ಅಂತ ಒಟ್ಟಿಗೆ ಹೆಚ್ಚು ಚಿನ್ನ ಖರೀದಿಸುವವರು ಅಂಗಡಿಯವರ ಜೊತೆ ಮೇಕಿಂಗ್ ಚಾರ್ಜಸ್ ಬಗ್ಗೆ ಯಾವುದೇ ಮುಜುಗರವಿಲ್ಲದೆ ಚೌಕಾಸಿ (Bargain) ಮಾಡಿ. ಎಷ್ಟೋ ಕಡೆ ಮೇಕಿಂಗ್ ಚಾರ್ಜ್‌ಗಳಲ್ಲಿ ದೊಡ್ಡ ರಿಯಾಯಿತಿ ಸಿಗುತ್ತದೆ. ಮತ್ತು ಎಷ್ಟೇ ಪರಿಚಯದ ಅಂಗಡಿಯಾದರೂ 6 ಅಂಕಿಯ ‘HUID’ ಹಾಲ್‌ಮಾರ್ಕ್ ಮುದ್ರೆ ಇರುವ ಚಿನ್ನವನ್ನೇ ಖರೀದಿಸಿ. ಇದು ಭವಿಷ್ಯದಲ್ಲಿ ನೀವು ಚಿನ್ನ ಮಾರಾಟ ಮಾಡುವಾಗ ಅಥವಾ ಅಡಮಾನ ಇಡುವಾಗ ಮೋಸ ಹೋಗದಂತೆ ಕಾಪಾಡುತ್ತದೆ.
ಜನರು ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು (FAQs)
ಪ್ರಶ್ನೆ 1: ಆಭರಣ ಖರೀದಿಸಲು ಇದು ಸರಿಯಾದ ಸಮಯವೇ?
ಉತ್ತರ: ಖಂಡಿತ ಹೌದು. ಮಾರ್ಚ್ 1ನೇ ತಾರೀಖಿಗೆ ಹೋಲಿಸಿದರೆ 10 ಗ್ರಾಂ ಚಿನ್ನದ ಬೆಲೆ ಸುಮಾರು ₹10,000 ದಷ್ಟು ಕಡಿಮೆಯಾಗಿದೆ. ಮದುವೆ ಸೀಸನ್ ಆಗಿರುವುದರಿಂದ ಬೇಡಿಕೆ ಹೆಚ್ಚಾಗಿ, ಮುಂದಿನ ದಿನಗಳಲ್ಲಿ ಬೆಲೆ ಮತ್ತೆ ಏರಿಕೆಯಾಗುವ ಸಾಧ್ಯತೆ ದಟ್ಟವಾಗಿದೆ.
ಪ್ರಶ್ನೆ 2: 22 ಕ್ಯಾರೆಟ್ ಮತ್ತು 24 ಕ್ಯಾರೆಟ್ ಚಿನ್ನದ ನಡುವಿನ ವ್ಯತ್ಯಾಸವೇನು?
ಉತ್ತರ: 22 ಕ್ಯಾರೆಟ್ ಚಿನ್ನವು ಆಭರಣಗಳನ್ನು ತಯಾರಿಸಲು ಸೂಕ್ತವಾಗಿದೆ (91.6% ಶುದ್ಧತೆ). ಆದರೆ 24 ಕ್ಯಾರೆಟ್ ಚಿನ್ನವು 99.9% ಶುದ್ಧವಾಗಿದ್ದು, ಇದನ್ನು ನಾಣ್ಯ ಅಥವಾ ಬಿಸ್ಕೆಟ್ (Investment) ರೂಪದಲ್ಲಿ ಹೂಡಿಕೆ ಮಾಡಲು ಮಾತ್ರ ಬಳಸಲಾಗುತ್ತದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸು

ಲಿಂಗರಾಜ್ ರಾಮಾಪುರ ಅವರು BCA, MCA ಹಾಗೂ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ (MA) ಪಡೆದಿದ್ದಾರೆ. ಈ ಹಿಂದೆ ಬೆಂಗಳೂರಿನ Infosys ಮತ್ತು Concentrix ಸಂಸ್ಥೆಗಳಲ್ಲಿ 6 ವರ್ಷಗಳ ಕಾಲ ವೃತ್ತಿಪರ ಅನುಭವ ಹೊಂದಿರುವ ಇವರು, ತಾಂತ್ರಿಕ ಜ್ಞಾನವನ್ನು ಪತ್ರಿಕೋದ್ಯಮಕ್ಕೆ ಅನ್ವಯಿಸಿದ ಪರಿಣತರು.
ವೃತ್ತಿಪರ ಹಾದಿ: 2017 ರಲ್ಲಿ ಐಟಿ ವೃತ್ತಿಜೀವನದ ಜೊತೆಗೇ ಡಿಜಿಟಲ್ ಮಾಧ್ಯಮ ಕ್ಷೇತ್ರಕ್ಕೆ ಕಾಲಿಟ್ಟ ಇವರು, ಪ್ರಸ್ತುತ NeedsOfPublic.in ನ ಎಡಿಟೋರಿಯಲ್ ಸ್ಟ್ರಾಟಜಿಯನ್ನು ಮುನ್ನಡೆಸುತ್ತಿದ್ದಾರೆ. ಡೇಟಾ-ಆಧಾರಿತ ವರದಿಗಾರಿಕೆ, ಮಾರುಕಟ್ಟೆ ವಿಶ್ಲೇಷಣೆ ಮತ್ತು ಸಾರ್ವಜನಿಕರಿಗೆ ಉಪಯುಕ್ತವಾಗುವ ನಿಖರ ಮಾಹಿತಿಯನ್ನು ತಲುಪಿಸುವುದು ಇವರ ಮುಖ್ಯ ಗುರಿ. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಇವರಿಗೆ 9 ವರ್ಷಗಳ ಸುದೀರ್ಘ ಅನುಭವವಿದೆ.


WhatsApp Group




