ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ ಪ್ರಸ್ತುತ ಚಿನ್ನ(Gold) ಮತ್ತು ಬೆಳ್ಳಿ(Silver)ಯ ದರ ಎಷ್ಟಿದೆ ಎಂಬುದರ ಕುರಿತು ಮಾಹಿತಿಯನ್ನು ನೀಡಲಾಗುವುದು.
ಶನಿವಾರ ಅಂದರೆ ಇಂದು, 4 Nov 2023 ರಂದು ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಕೊಂಚ ಏರಿಕೆ ಕಂಡಿದೆ. ಇಂದು, ಯಾವ ಯಾವ ನಗರಗಳಲ್ಲಿ ಚಿನ್ನ-ಬೆಳ್ಳಿ ಬೆಲೆ(Gold and silver price) ಎಷ್ಟಿದೆ ಎಂದು ಈ ವರದಿಯಲ್ಲಿ ತಿಳಿಸಿಕೊಡಲಾಗುವುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಇಂದು ಚಿನ್ನ ಬೆಳ್ಳಿ ದರದಲ್ಲಿ ಕೊಂಚ ಏರಿಕೆ :
ಚಿನ್ನ ಮತ್ತು ಬೆಳ್ಳಿ ಎಲ್ಲರ ಪ್ರಿಯ ಒಡವೆ, ವಿಶೇಷವಾಗಿ ಮಹಿಳೆಯರಿಗೆ ಚಿನ್ನ – ಬೆಳ್ಳಿ ಆಭರಣಗಳು ಅತ್ಯಂತ ಪ್ರಿಯವಾದದ್ದು. ಮಹಿಳೆಯರು ಹೆಚ್ಚಾನೆಚ್ಚಾಗಿ ಚಿನ್ನದ ಆಭರಣಗಳ ಮೇಲೆ ಆಕರ್ಷಿತರಾಗುತ್ತಾರೆ. ಚಿನ್ನವು ಸುಖ, ಸಮೃದ್ಧಿ ಮತ್ತು ಸಂಪತ್ತಿನ ಸಂಕೇತ ಎಂದು ಹೇಳಲಾಗುತ್ತದೆ. ಹಬ್ಬದ ಋತುವಿನಲ್ಲಿ ಆಭರಣ ಅಂಗಡಿಗಳಲ್ಲಿ ಭಾರಿ ಜನಸಂದಣಿ ಕಂಡುಬರುತ್ತದೆ. ಸಾಮಾನ್ಯವಾಗಿ ಹಬ್ಬದ ಶುಭ ಮುಹೂರ್ತಗಳಲ್ಲಿ ಚಿನ್ನ – ಬೆಳ್ಳಿಯ ವ್ಯಾಪಾರವು ಜಾಸ್ತಿ. ಮತ್ತು ಚಿನ್ನದ ದರವು ಕೂಡಾ ಜಾಗತಿಕವಾಗಿ ಬದಲಾಗುತ್ತಿರುತ್ತದೆ. ಹೀಗಿರುವಾಗ ಸದ್ಯದ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ ಎಂದು ತಿಳಿಯೋಣ ಬನ್ನಿ.
ಚಿನ್ನ-ಬೆಳ್ಳಿ ಬೆಲೆ ಇಂದು, 4 ನವೆಂಬರ್ 2023:

ಪ್ರಸಕ್ತ ಜಾಗತಿಕ ಮಾರುಕಟ್ಟೆ(Global market)ಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಸ್ವಲ್ಪಮಟ್ಟಿಗೆ ಏರಿಕೆ ಕಂಡಿದೆ. ಸತತವಾಗಿ ಮೂರು ಬಾರಿ ಬೆಲೆಯಲ್ಲಿ ಇಳಿಕೆ ಕಂಡಿದ್ದು, ಈಗ ಮತ್ತೆ ಇವುಗಳ ಬೆಲೆಯಲ್ಲಿ ಏರಿಕೆ ದಾಖಲೆಯಾಗಿದೆ.
ವಿದೇಶದಲ್ಲಿ, ಹೆಚ್ಚಿನ ದೇಶಗಳಲ್ಲಿ ಚಿನ್ನದ ಬೆಲೆ ಏರಿಕೆಯಾಗಿದೆ. ಆದರೆ ಅಮೆರಿಕದಲ್ಲಿ ಹಾಗೂ ಇತರ ಕೆಲವೆಡೆ ಚಿನ್ನದ ಬೆಲೆ ಇಳಿದಿದೆ. ಚಿನ್ನದ ಬೆಲೆ ಇಳಿಕೆಯ ಹಿನ್ನಲೆಯಲ್ಲಿ ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿ(interest) ದರ ಏರಿಕೆಯಾಗಬಹುದು ಎಂದು ಹೇಳಲಾಗುತ್ತಿದೆ. ತಜ್ಞರ ವರದಿ(Report)ಯ ಪ್ರಕಾರ, ಸದ್ಯ ಚಿನ್ನದ ಬೆಲೆ ಕಡಿಮೆ ಇದ್ದರು ಮುಂಬರುವ ದಿನಗಳಲ್ಲಿ ಅದು ಹೆಚ್ಚಾಗುವ ಸಾಧ್ಯತೆ ಇದೆ. ಮುಂಬರುವ ವರ್ಷದಲ್ಲಿ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.
ಭಾರತದಲ್ಲಿ Nov 3, 2023 ಪ್ರಕಾರ, ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 56,500 ರುಪಾಯಿಗೆ ಬಂದು ನಿಂತಿದೆ. 24 ಕ್ಯಾರಟ್ನ ಅಪರಂಜಿ ಚಿನ್ನದ (Aparanji gold) ಬೆಲೆ 61,640 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ(Sliver)ಬೆಲೆ 7,480 ರುಪಾಯಿ ಇದೆ.
ಇದನ್ನೂ ಓದಿ – 5 ವರ್ಷವೂ ನಾನೇ ಸಿ.ಎಂ, ಸರ್ಕಾರ ಸುಭದ್ರವಾಗಿದೆ. – ಸಿದ್ದರಾಮಯ್ಯ
ಕರ್ನಾಟಕದಲ್ಲಿ ಚಿನ್ನದ ಬೆಲೆ ಎಷ್ಟಿದೆ?:
ಇನ್ನು ಕರ್ನಾಟಕಕ್ಕೆ ಬರುವುದಾದರೆ, ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 56,500 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,300 ರುಪಾಯಿ ಆಗಿದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ:
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 56,500 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 61,640 ರೂ
ಬೆಳ್ಳಿ ಬೆಲೆ 10 ಗ್ರಾಂ ಗೆ: 748 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ:
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 56,500 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 61,640 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 730 ರೂ.
ಇದನ್ನೂ ಓದಿ – Gruhalakshmi Status – ಎರಡನೇ ಕಂತಿನ 2000/- ಹಣ ಜಮಾ, ಹಣ ಬರದೆ ಇದ್ದವರು ಈ ಆಪ್ ನಲ್ಲಿ ಚೆಕ್ ಮಾಡಿ.
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆಯ ಪಟ್ಟಿ (10 ಗ್ರಾಮ್ಗೆ):
ಬೆಂಗಳೂರು: 56,500 ರೂ
ಚೆನ್ನೈ: 56,950 ರೂ
ಮುಂಬೈ: 56,500 ರೂ
ದೆಹಲಿ: 56,650 ರೂ
ಕೋಲ್ಕತಾ: 56,500 ರೂ
ಕೇರಳ: 56,500 ರೂ
ಅಹ್ಮದಾಬಾದ್: 56,550 ರೂ
ಜೈಪುರ್: 56,650 ರೂ
ಲಕ್ನೋ: 56,650 ರೂ
ಭುವನೇಶ್ವರ್: 56,500 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ):
ಮಲೇಷ್ಯಾ: 2,980 ರಿಂಗಿಟ್ (52,192 ರುಪಾಯಿ)
ದುಬೈ: 2,230 ಡಿರಾಮ್ (50,529 ರುಪಾಯಿ)
ಅಮೆರಿಕಾ: 610 ಡಾಲರ್ (50,764 ರುಪಾಯಿ)
ಸಿಂಗಾಪುರ: 843 ಸಿಂಗಾಪುರ್ ಡಾಲರ್ (51,472 ರುಪಾಯಿ)
ಕತಾರ್: 2,290 ಕತಾರಿ ರಿಯಾಲ್ (52,253 ರೂ)
ಸೌದಿ ಅರೇಬಿಯಾ: 2,300 ಸೌದಿ ರಿಯಾಲ್ (51,021 ರುಪಾಯಿ)
ಓಮನ್: 242.50 ಒಮಾನಿ ರಿಯಾಲ್ (52,417 ರುಪಾಯಿ)
ಕುವೇತ್: 191 ಕುವೇತಿ ದಿನಾರ್ (51,446 ರುಪಾಯಿ)
ಅಬಕಾರಿ ಸುಂಕ(excise duty), ಮೇಕಿಂಗ್ ಶುಲ್ಕಗಳು,ಮತ್ತು ರಾಜ್ಯ ತೆರಿಗೆ(GST)ಗಳಂತಹ ಕೆಲವು ನಿಯತಾಂಕಗಳನ್ನು ಆಧರಿಸಿ ದೇಶದ ವಿವಿಧ ಪ್ರದೇಶಗಳಿಗೆ ಚಿನ್ನ-ಬೆಳ್ಳಿಯ ಬೆಲೆ ಬದಲಾಗುತ್ತದೆ.
ಇದನ್ನೂ ಓದಿ – OnePlus Mobile – OnePlus: ಒನ್‌ಪ್ಲಸ್‌ನ ಜನಪ್ರಿಯ ಮೊಬೈಲ್ ಮೇಲೆ ಭಾರಿ ಡಿಸ್ಕೌಂಟ್ ಘೋಷಣೆ, ಇಲ್ಲಿದೆ ವಿವರ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group






