Picsart 25 11 02 23 49 03 852 scaled

ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಾದರೆ ದೇಹವೇ ಎಚ್ಚರಿಕೆ ನೀಡುತ್ತದೆ: ಈ 5 ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ!

Categories:
WhatsApp Group Telegram Group

ಇತ್ತೀಚಿನ ದಿನಗಳಲ್ಲಿ ಜನರ ಆಹಾರ ಪದ್ಧತಿ ಗಂಭೀರವಾಗಿ ಬದಲಾಗುತ್ತಿದೆ. ರೆಡಿಮೇಡ್ ಆಹಾರಗಳು, ಪ್ಯಾಕೇಜ್ಡ್ ಜ್ಯೂಸ್‌, ಚಾಕೋಲೇಟ್‌, ಬೇಕರಿ ಐಟಂಗಳು, ಸಿಹಿತಿಂಡಿಗಳು, ಸಾಫ್ಟ್ ಡ್ರಿಂಕ್ಸ್‌ ಇವೆಲ್ಲವೂ ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗಗಳಾಗಿವೆ. ಈ ಆಹಾರಗಳಲ್ಲಿ ಅಡಗಿರುವ ಅತಿಯಾದ ಸಕ್ಕರೆ ದೇಹದಲ್ಲಿ ಹೇಗೆ ಕೆಲಸ ಮಾಡುತ್ತದೆ, ಅದರ ದೀರ್ಘಕಾಲೀನ ಪರಿಣಾಮಗಳು ಏನು, ಮತ್ತು ಸಕ್ಕರೆ ಹೆಚ್ಚಾದಾಗ ದೇಹ ಹೇಗೆ ನಮ್ಮನ್ನು ಎಚ್ಚರಿಸುತ್ತದೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.  ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ವೈದ್ಯರ ಪ್ರಕಾರ, ಸಕ್ಕರೆ ಪ್ರಮಾಣವನ್ನು ಮಿತಿ ಮೀರಿ ಸೇವನೆ ಮಾಡಿದಾಗ ಅದು ಯಕೃತ್ತು, ಹೃದಯ, ಮೂತ್ರಪಿಂಡ, ರಕ್ತನಾಳಗಳು, ಕೊಲೆಸ್ಟ್ರಾಲ್ ಮಟ್ಟಎಲ್ಲವನ್ನೂ ಪ್ರಭಾವಿಸುತ್ತದೆ. ಸಕ್ಕರೆ ಮಟ್ಟ ಹೆಚ್ಚಿದರೂ, ಅನೇಕರು ಆರಂಭಿಕ ಲಕ್ಷಣಗಳನ್ನು ಗುರುತಿಸದೆ ನಿರ್ಲಕ್ಷ್ಯ ಮಾಡುತ್ತಾರೆ. ಈ ನಿರ್ಲಕ್ಷ್ಯವೇ ಮುಂದಿನ ದಿನಗಳಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ, ಹೊಟ್ಟೆಯ ಕೊಬ್ಬು, ಹೃದಯ ಸಂಬಂಧಿತ ಸಮಸ್ಯೆಗಳು ಮುಂತಾದ ಗಂಭೀರ ಸ್ಥಿತಿಗಳಿಗೆ ಕಾರಣವಾಗುತ್ತದೆ. ಹೀಗಾಗಿ, ದೇಹದಲ್ಲೇ ಮೊದಲಿನಿಂದ ಕಾಣಿಸಿಕೊಳ್ಳುವ ಸಣ್ಣ ಸೂಚನೆಗಳನ್ನು ಗುರುತಿಸುವುದು ಅತ್ಯಂತ ಮುಖ್ಯ.

ಯಾವೆಲ್ಲ ಸೂಚನೆಗಳನ್ನು ಗಮನಿಸಬೇಕು:

ಹಸಿವು ಕಡಿಮೆಯಾಗುವುದು,
ಅತಿಯಾದ ಸಿಹಿ ಸೇವನೆಯಿಂದ ದೇಹದಲ್ಲಿ ಗ್ಲೂಕೋಸ್ ಮಟ್ಟ ಏರಿಕೆ ಕಾಣುತ್ತದೆ. ಇದರಿಂದ, ಹೊಟ್ಟೆ ತುಂಬಿದ ಭಾವನೆ ಬೇಗ ಬರುತ್ತದೆ. ದಿನೇ ದಿನೇ ಹಸಿವಿನ ಪ್ರಮಾಣ ಕಡಿಮೆಯಾಗುತ್ತದೆ. ಮತ್ತೆ ಮತ್ತೆ ಸಿಹಿತಿಂಡಿ ತಿನ್ನುವ ಹಂಬಲ ಹೆಚ್ಚಾಗುತ್ತದೆ. ಗ್ಲೂಕೋಸ್ ಏರಿಕೆಯಿಂದ ಮುಖದಲ್ಲಿ ಮೊಡವೆ, ಅತಿಸಾರ, ಹಾಗೂ ದೇಹದಲ್ಲಿ ಕೊಬ್ಬಿನ ಸಂಗ್ರಹ ಕೂಡ ಹೆಚ್ಚಾಗುವ ಸಾಧ್ಯತೆಯಿದೆ.

ತೂಕ ಅಸಹಜವಾಗಿ ಹೆಚ್ಚಾಗುವುದು:

ಯಾವುದೇ ಕಾರಣವಿಲ್ಲದೆ ತೂಕ ಏರಿಕೆ ಕಾಣಿಸಿದರೆ, ಅದರ ಹಿಂದೆ ಬಹುಮಟ್ಟಿಗೆ ಸಕ್ಕರೆಯ ಹೆಚ್ಚುವರಿ ಸೇವನೆ ಕಾರಣವಾಗಿರುತ್ತದೆ. ಸಿಹಿ ಆಹಾರಗಳಲ್ಲಿ ಇರುವ ಹೆಚ್ಚುವರಿ ಕ್ಯಾಲೊರಿಗಳು ದೇಹದಲ್ಲಿ ಕೊಬ್ಬು ರೂಪದಲ್ಲಿ ಸಂಗ್ರಹವಾಗುತ್ತವೆ.

ಮೆಗ್ನೀಸಿಯಮ್ ಮಟ್ಟ ಕುಸಿತ :

ಬಿಳಿ ಸಕ್ಕರೆ ದೇಹದಲ್ಲಿ ಸೈಟೊಕಿನ್‌ಗಳನ್ನು ಬಿಡುಗಡೆ ಮಾಡುತ್ತದೆ. ಇದರಿಂದ, ಕಿರಿಕಿರಿ, ಆಯಾಸ, ಒತ್ತಡ ಹಾಗೂ ನಿದ್ರಾಹೀನತೆ ಉಂಟಾಗುವಂತೆ ಮಾಡುತ್ತವೆ.
ಸಕ್ಕರೆಯ ಮಿತಿ ಮೀರಿ ಸೇವನೆಯು ದೇಹದ ಮೆಗ್ನೀಸಿಯಮ್ ಮಟ್ಟ ಕಡಿಮೆ ಮಾಡುತ್ತದೆ. ಮೆಗ್ನೀಸಿಯಮ್ ಉತ್ತಮ ನಿದ್ರೆಗೆ ಅಗತ್ಯವಾದ ಖನಿಜ. ಹೀಗಾಗಿ, ನಿದ್ರೆ ಬರದೆ ತೊಂದರೆಯಾಗಿ ಮಧ್ಯರಾತ್ರಿ ಎಚ್ಚರವಾಗುತ್ತದೆ. ಇದರಿಂದ ನಿದ್ರೆ ಚಕ್ರದಲ್ಲಿ ವ್ಯತ್ಯಯವಾಗುತ್ತದೆ.  ಇವೆಲ್ಲವೂ ಸಕ್ಕರೆ ಹೆಚ್ಚಾಗಿರುವ ಸೂಚನೆಗಳಾಗಬಹುದು.

ಸಿಹಿ ಅಂಶ ಅಧಿಕವಾಗಿ ಸೇವಿಸಿದರೆ ಚರ್ಮದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತವೆ:

ಮುಖದಲ್ಲಿ ಮೊಡವೆಗಳು ಹೆಚ್ಚಾಗುವುದು,
ಚರ್ಮದ ಕಿರಿಕಿರಿ.
ಚರ್ಮ ಉಬ್ಬುವ ಹಾಗೆ ಕಾಣಿಸಿಕೊಳ್ಳುವುದು. ಇವೆಲ್ಲವೂ ದೇಹದ ಒಳಗಿನ ಸಕ್ಕರೆ ಅಸ್ಥಿರತೆಯ ಸೂಚನೆಗಳು.

ದೇಹದಲ್ಲಿ ನಿರಂತರ ದಾಹ ಮತ್ತು ದೌರ್ಬಲ್ಯ:
ಸಕ್ಕರೆ ಹೆಚ್ಚಿದ್ದರೆ ದೇಹ ಹೆಚ್ಚಾಗಿ ನೀರನ್ನು ಹೊರಹಾಕಲು ಪ್ರಯತ್ನಿಸುತ್ತದೆ. ಇದರಿಂದ, ನಿರಂತರ ದಾಹ, ಬಾಯಿ ಒಣಗುವುದು, ಶಕ್ತಿಯ ಕೊರತೆ. ಈ ಲಕ್ಷಣಗಳನ್ನು ನಿರ್ಲಕ್ಷಿಸಬಾರದು.

ಹಾಗಿದ್ದರೆ ಸಿಹಿ ಅಂಶವನ್ನು ಸಂಪೂರ್ಣವಾಗಿ ತ್ಯಜಿಸಬೇಕೇ?:

ಇಲ್ಲ! ದೇಹಕ್ಕೆ ಸಕ್ಕರೆ ಅಗತ್ಯವಾಗಿ ಬೇಕು.
ಆದರೆ, ಕೈಗಾರಿಕಾ ಸಕ್ಕರೆ (white sugar) ಕಡಿಮೆ ಮಾಡಬೇಕು. ನೈಸರ್ಗಿಕ ಸಕ್ಕರೆಯನ್ನು ಆಯ್ಕೆ ಮಾಡಬೇಕು
ಉದಾಹರಣೆಗೆ, ಹಣ್ಣುಗಳು, ಹಾಲು ಮತ್ತು ಡೈರಿ ಉತ್ಪನ್ನಗಳು, ಜೇನು, ಬೆಲ್ಲ (ಮಿತವಾಗಿ) ಇವು ದೇಹಕ್ಕೆ ಒಳ್ಳೆಯ ಶಕ್ತಿಯನ್ನು ನೀಡುವುದರ ಜೊತೆಗೆ ಯಾವುದೇ ಹಾನಿ ಉಂಟುಮಾಡುವುದಿಲ್ಲ.

ಒಟ್ಟಾರೆಯಾಗಿ, ಸಕ್ಕರೆ ಮಿತಿ ಮೀರಿ ಸೇವಿಸಿದರೆ ದೇಹ ತಕ್ಷಣವೇ ಕೆಲವು ಸೂಚನೆಗಳನ್ನು ನೀಡುತ್ತದೆ. ಹಸಿವು ಕಡಿಮೆಯಾಗುವುದು, ತೂಕ ಏರಿಕೆ, ನಿದ್ರಾಹೀನತೆ, ಚರ್ಮದ ಸಮಸ್ಯೆಗಳು, ನಿರಂತರ ದಾಹ ಇವೆಲ್ಲವೂ ದೇಹದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗಿರುವ ಎಚ್ಚರಿಕೆ ಸಂಕೇತಗಳು. ಇಂತಹ ಲಕ್ಷಣಗಳು ಕಂಡುಬಂದರೆ ಮೊದಲಿನ ಹಂತದಲ್ಲಿಯೇ ಸಕ್ಕರೆಯ ಸೇವನೆಯಲ್ಲಿ ನಿಯಂತ್ರಣ ತರಬೇಕು. ಇದು ಮಧುಮೇಹ ಮತ್ತು ಅನೇಕ ಗಂಭೀರ ಸಮಸ್ಯೆಗಳನ್ನು ತಡೆಯುವಲ್ಲಿ ಸಹಕಾರಿಯಾಗುತ್ತದೆ.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories