ಸುಜ್ಞಾನ ನಿಧಿ ವಿದ್ಯಾರ್ಥಿ ವೇತನ 2023-24 (ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ) : ಈಗಲೇ ಅರ್ಜಿ ಸಲ್ಲಿಸಿ, ಅರ್ಜಿ ಸಲ್ಲಿಸುವ ವಿಧಾನ

sujnananidhi 2023

ಸುಜ್ಞಾನ ನಿಧಿ ವಿದ್ಯಾರ್ಥಿ ವೇತನ, ಅಂದರೆ ಧರ್ಮಸ್ಥಳ ಸ್ವಸಾಯ ಸಂಘದ ಸದಸ್ಯರ ಮಕ್ಕಳಿಗೆ ಇರುವಂತಹ ವಿದ್ಯಾರ್ಥಿವೇತನದ ಬಗ್ಗೆ ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿಕೊಡಲಾಗುತ್ತದೆ.  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಯಾವ ವತಿಯಿಂದ ಈ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. ಈ ವಿದ್ಯಾರ್ಥಿ ವೇತನವನ್ನು ಪಡೆಯಲು ಅಪ್ಲಿಕೇಶನ್ ಪ್ರಕ್ರಿಯೆ, ಆಯ್ಕೆ ಪ್ರಕ್ರಿಯೆ ಮತ್ತು ಹೆಚ್ಚಿನ ಇದರ ಸಂಬಂಧಿತ ವಿವರಗಳನ್ನು ಪಡೆಯಲು ಈ ಲೇಖನವನ್ನು ಓದಿರಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.)ನ ಬೆಳ್ಳಿಹಬ್ಬದ ಆಚರಣೆಯ ಸವಿನೆನಪಿಗಾಗಿ, ಯೋಜನೆಯ ಪಾಲುದಾರ ಕುಟುಂಬದ ಸ್ವ-ಸಹಾಯ ಹಾಗೂ ಪ್ರಗತಿಬಂಧು ಸಂಘಗಳ, ಆರ್ಥಿಕವಾಗಿ ಹಿಂದುಳಿದ ಸದಸ್ಯರ ಮಕ್ಕಳ ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣಕ್ಕೆ ನೆರವಾಗಲು ಪೂಜ್ಯ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು 2007 ರಲ್ಲಿ ಸುಜ್ಞಾನನಿಧಿ ಶಿಷ್ಯವೇತನ ಕಾರ್ಯಕ್ರಮವನ್ನು ಪ್ರಾರಂಭಿಸಿದರು.

ಸುಜ್ಞಾನನಿಧಿ ಕಾರ್ಯಕ್ರಮದಡಿಯಲ್ಲಿ ಶೈಕ್ಷಣಿಕ ವರ್ಷಕ್ಕೆ ಅನುಗುಣವಾಗಿ 2 ರಿಂದ 5 ವರ್ಷ ಅವಧಿಯ ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣಗಳಿಗೆ ಸಂಸ್ಥೆಯು ನಿಗದಿಪಡಿಸಿದ ಆಯ್ದ ಕೋರ್ಸಿಗೆ ಅನುಗುಣವಾಗಿ ರೂ 400 ರಿಂದ ರೂ 1000 ಸಾವಿರದವರೆಗೆ ಮಾಸಿಕ ಶಿಷ್ಯವೇತನವನ್ನು ಪಾವತಿಸಲಾಗುತ್ತಿದೆ. ಕರ್ನಾಟಕ ರಾಜ್ಯಾದ್ಯಂತ ಇದುವರೆಗೂ 52 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡಿರುತ್ತಾರೆ. ಸದ್ರಿ ವಿದ್ಯಾರ್ಥಿಗಳಿಗೆ ರೂ. 67 ಕೋಟಿಗೂ ಅಧಿಕ ಶಿಷ್ಯವೇತನವನ್ನು ಈವರೆಗೆ ವಿತರಿಸಲಾಗಿದೆ.

( NEW STUDENT) ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು :

  1. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಪ್ರಾಯೋಜಿಸುತ್ತಿರುವ ಪ್ರಗತಿಬಂಧು ಹಾಗೂ ಸ್ವ-ಸಹಾಯ ತಂಡಗಳಲ್ಲಿ ದಿನಾಂಕ 30.06.2021 ಕ್ಕಿಂತ ಮೊದಲು ಪ್ರಾರಂಭಿಸಲಾದ ಸಂಘದಲ್ಲಿ ಸದಸ್ಯರಾಗಿದ್ದು ವ್ಯವಹಾರದಲ್ಲಿ ಎಸ್, ಎ ಮತ್ತು ಬಿ ಶ್ರೇಣಿಯಲ್ಲಿರುವ ಗುಂಪುಗಳ ಸದಸ್ಯರ ಮಕ್ಕಳು ಅರ್ಜಿ ಸಲ್ಲಿಸಬಹುದು.

  2. ತಂದೆ, ತಾಯಿ ಅಥವಾ ಒಂದೇ ಮನೆಯಲ್ಲಿ ವಾಸ ಮಾಡುವ, ಒಂದೇ ರೇಷನ್ ಕಾರ್ಡ್ ಹೊಂದಿರುವ ಸಂಘದ ಯಾವುದೇ ಸದಸ್ಯರ ಒಬ್ಬ ಮಗ/ಮಗಳಿಗೆ (ಒಂದು ಕುಟುಂಬದಿಂದ ಒಂದು ವಿದ್ಯಾರ್ಥಿಗೆ) ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ.

  3. ಹಳೆಯ ಸಂಘ ಬರ್ಕಾಸ್ತುಗೊಂಡು ಹೊಸ ಸಂಘಕ್ಕೆ ಸೇರ್ಪಡೆಯಾಗಿ ಕಡ್ಡಾಯವಾಗಿ ಒಂದು ವರ್ಷ ಸಂಪೂರ್ಣಗೊಂಡಿರುವ ಸಂಘದ ಸದಸ್ಯರ ಮಕ್ಕಳು ಅರ್ಜಿ ಸಲ್ಲಿಸಬಹುದು.

  4.  SSLC/PUC/DEGREE ಅಥವಾ ಅರ್ಹ ಕೋರ್ಸಿನ ಸೇರ್ಪಡೆಗೆ ನಿಗದಿಪಡಿಸಿದ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ. ಶಿಷ್ಯವೇತನಕ್ಕೆ ಆಯ್ಕೆ ಮಾಡಿದ ಕೋರ್ಸಿನ ಪ್ರಥಮ ವರ್ಷದ ಮೊದಲ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗುವುದು.
  5. ಆಯ್ಕೆಯಾದ ವಿದ್ಯಾರ್ಥಿ/ನಿಯು ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆಯನ್ನು ಹೊಂದಿರಬೇಕು. UPLOAD ಮಾಡುವ ಬ್ಯಾಂಕ್ ಪಾಸ್‌ ಪುಸ್ತಕದಲ್ಲಿ ಬ್ಯಾಂಕ್ ವ್ಯವಸ್ಥಾಪಕರ ಸಹಿ ಮತ್ತು ಮುದ್ರೆ ಕಡ್ಡಾಯವಾಗಿ ಇರಬೇಕು. ಸದ್ರಿ ಖಾತೆಯಲ್ಲಿ ವ್ಯವಹಾರಗಳು ಪ್ರಸ್ತುತ ಮೂರು ತಿಂಗಳಿನಿಂದ ಚಾಲ್ತಿಯಲ್ಲಿರಬೇಕು. ಖಾತೆ ಸಂಖ್ಯೆ ಕಾಣಿಸದೇ ಇದ್ದಲ್ಲಿ ಕೈ ಬರಹದ ಖಾತೆ ಸಂಖ್ಯೆ, ಬ್ರಾಂಚ್ ಹೆಸರು ಮತ್ತು IFSC CODE ನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ.
  6. 01.4.2022 ನಂತರ ಕಾಲೇಜಿಗೆ ದಾಖಲಾದ ಎಲ್ಲಾ ಮೊದಲ ಸೆಮಿಸ್ಟರ್ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು (ಕಾಲೇಜು ದೃಢೀಕರಣದಲ್ಲಿ ಕಡ್ಡಾಯವಾಗಿ ಕಾಲೇಜಿಗೆ ದಾಖಲಾದ ದಿನಾಂಕ ನಮೂದಿಸಿರಬೇಕು)
  7. ಸುಜ್ಞಾನನಿಧಿ ಶಿಷ್ಯವೇತನವು ಶೈಕ್ಷಣಿಕ ವರ್ಷಕ್ಕೆ ಅನುಗುಣವಾಗಿ ಸಂಸ್ಥೆಯು ಆಯ್ಕೆ ಮಾಡಿ ನಿಗದಿಪಡಿಸಿದ 2 ರಿಂದ 5 ವರ್ಷ ಅವಧಿಯ ಕೆಲವು ವೃತ್ತಿಪರ ಹಾಗೂ ತಾಂತ್ರಿಕ ಶಿಕ್ಷಣದ ಕೋರ್ಸುಗಳಿಗೆ, ಸಂಸ್ಥೆಯ ನಿಯಮಾನುಸಾರ ನಿಗದಿ ಪಡಿಸಿದ ಕೋರ್ಸಿಗೆ ಅನುಗುಣವಾಗಿ ರೂ 400 ರಿಂದ ರೂ 1000 ಸಾವಿರದವರೆಗೆ ಮಾತ್ರವೇ ಶಿಷ್ಯವೇತನ ನೀಡಲಾಗುವುದು.

  8. ವಿದ್ಯಾರ್ಥಿಗಳು Online ಮೂಲಕ Sujnananidhi App ನಲ್ಲಿ ಅರ್ಜಿ ಸಲ್ಲಿಸುವ ಮೊದಲು ಈ ಮಾಹಿತಿ ಪತ್ರವನ್ನು ಸರಿಯಾಗಿ ಓದಿಕೊಂಡು ಅಗತ್ಯವಾದ ಮಾಹಿತಿಯನ್ನು ಹಾಗೂ ದಾಖಲಾತಿಗಳನ್ನು ಸಂಗ್ರಹಿಸಿಕೊಂಡ ನಂತರ, ಅರ್ಜಿ ಸಲ್ಲಿಕೆಯ ಸಂದರ್ಭದಲ್ಲಿ ಅಗತ್ಯ ಎಲ್ಲಾ ಪೂರಕ ದಾಖಲಾತಿಗಳೊಂದಿಗೆ ದಿನಾಂಕ 31.03.2023ರೊಳಗೆ, Online ಮೂಲಕ Sujnananidhi App ನಲ್ಲಿ ರಿಜಿಸ್ಟ್ರೇಷನ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ.

drdp

ಆಯ್ಕೆ ಮಾಡಬಹುದಾದ ಕೋರ್ಸ್‌ಗಳು:

BE, B.TECH, MBBS, BAMS, BDS, BHMS, BVA, BNYS, BVSC, MBA, D.Ed, B.Ed, NURSING(General), BSC(NURSING), ITI, LAB TECHNICIAN, DIPLOMA, LLB, PARAMEDICAL SCIENCE, BSC (HORTI), BSC (AGRI), BSC (FORESTRY), BSC (FISHERIES,) PHARM.D, PHYSIOTHERAPY, DIPLOMA AGRI, B.PHARM, D.PHARM, B.ARCHITECTURE.

ಯಾರಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ

  1. ಸುಜ್ಞಾನನಿಧಿ ಶಿಷ್ಯವೇತನ ಪಡೆದ ನಂತರ ವಿನಾಕಾರಣ ಪರೀಕ್ಷೆಗಳಲ್ಲಿ ಅನುತ್ತೀರ್ಣಗೊಂಡು ಮುಂದಿನ ತರಗತಿಗೆ ಹೋಗಲು ಅರ್ಹರಲ್ಲದ, ಅಂತೆಯೇ ಶಿಕ್ಷಣವನ್ನು ಮಧ್ಯದಲ್ಲೇ ಕೈ ಬಿಟ್ಟು ಬೇರೆ ಶಿಕ್ಷಣಕ್ಕಾಗಲಿ, ಬೇರೆ ವೃತ್ತಿಗಾಗಲಿ ಸೇರುವ ವಿದ್ಯಾರ್ಥಿಗಳಿಗೆ ಶಿಷ್ಯವೇತನವನ್ನು ಮುಂದುವರಿಸಲಾಗುವುದಿಲ್ಲ.
  2. ಯೋಜನೆಯ ಖಾಯಂ ಸಿಬ್ಬಂದಿಗಳ ಮಕ್ಕಳಿಗೆ ಸುಜ್ಞಾನನಿಧಿ ಶಿಷ್ಯವೇತನ ಲಭ್ಯವಿರುವುದಿಲ್ಲ.
  3. ಸುಜ್ಞಾನನಿಧಿ ಶಿಷ್ಯವೇತನವು SSLC, PUC, DEGREE ( 3 YEAR) BA, B-SC, B-COM, BBM, BCA, MA, M-SC, M-COM, MD, MCA, M-TECH, CA, POST BSC NURSING, ಒಂದು ವರ್ಷದ ಅವಧಿಯ ಹಾಗೂ CERTIFICATE ಕೋರ್ಸ್‌ಗಳ ಶಿಕ್ಷಣಕ್ಕೆ ಅನ್ವಯವಾಗುವುದಿಲ್ಲ.
  4. LATERAL ENTRY ಮೂಲಕ ಎರಡನೇ ವರ್ಷದ ಕೋರ್ಸಿಗೆ ಪ್ರವೇಶ ಪಡೆಯುವ, CORESPONDENCE ಮೂಲಕ ದೂರ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಸುಜ್ಞಾನನಿಧಿ ಶಿಷ್ಯವೇತನ ನೀಡಲಾಗುವುದಿಲ್ಲ.
  5. ತಾಂತ್ರಿಕ ಮತ್ತು ವೃತ್ತಿಪರ ಕೋರ್ಸಿಗೆ ಒಂದು ಬಾರಿ ಶಿಷ್ಯವೇತನ ಪಡೆದವರು ಎರಡನೇ ಬಾರಿಗೆ ಇತರ ಕೋರ್ಸುಗಳ ಅಧ್ಯಯನಕ್ಕೆ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಸುಜ್ಞಾನನಿಧಿ ಶಿಷ್ಯವೇತನ ನೀಡಲಾಗುವುದಿಲ್ಲ. (ಉದಾ: DIPLOMA ಮೂಲಕ BE ಮಾಡುವ ವಿದ್ಯಾರ್ಥಿಗಳು)
  6. SDM ಎಜುಕೇಶನಲ್ ಟ್ರಸ್ಟ್ (ರಿ) ಉಜಿರೆ ಇಲ್ಲಿ ನೀಡುವ ಶಿಷ್ಯವೇತನ ಪಡೆಯುವ ವಿದ್ಯಾರ್ಥಿಗಳಿಗೆ ಸುಜ್ಞಾನನಿಧಿ ಶಿಷ್ಯವೇತನ ನೀಡಲಾಗುವುದಿಲ್ಲ.

 

ವಿದ್ಯಾರ್ಥಿಯು ಸಲ್ಲಿಸಬೇಕಾದ ದಾಖಲಾತಿಗಳು:

  1. SSLC ಅಂಕಪಟ್ಟಿ
  2. ಪ್ರಸ್ತುತ ವರ್ಷ ಅಧ್ಯಯನ ನಡೆಸುತ್ತಿರುವ ಕಾಲೇಜಿನ STUDY CERTIFICATE & FEES REGIEPT (ಪ್ರಸ್ತುತ ವರ್ಷ 2022-23ರಲ್ಲಿ ವಿದ್ಯಾರ್ಥಿಯು ಆಯ್ಕೆ ಮಾಡಿದ ಕೋರ್ಸ್‌ಗೆ ಪ್ರವೇಶ ಪಡೆದಿದ್ದಲ್ಲಿ ಮಾತ್ರ )

    ವಿದ್ಯಾರ್ಥಿಯು ಈ ಹಿಂದೆ ಅಧ್ಯಯನ ನಡೆಸಿದ ವಿದ್ಯಾಭ್ಯಾಸದ ಅಂಕಪಟ್ಟಿ (SSLC/PUC / DEGREE)

  3. ವಿದ್ಯಾರ್ಥಿಯ ಬ್ಯಾಂಕ್ ಪಾಸ್ ಬುಕ್ ಪ್ರತಿ

  4. ಯೋಜನಾ ಕಛೇರಿಯ ಶಿಫಾರಸ್ಸು ಪತ್ರ
  5. ವಿದ್ಯಾರ್ಥಿ ಹಾಗೂ ತಂದೆಯ ಆಧಾರ್ ಕಾರ್ಡ್‌ ಕಡ್ಡಾಯ (ಒಂದು ವೇಳೆ ತಂದೆ ಇಲ್ಲದಿದ್ದಲ್ಲಿ ತಾಯಿಯ ಆಧಾರ್ ಕಾರ್ಡ್ ಒದಗಿಸುವುದು)
  6. ಒಬ್ಬ ವಿದ್ಯಾರ್ಥಿಗೆ ಒಂದು ಬಾರಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ.

2022-23 ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಸ್ತುತ ಪ್ರಥಮ ವರ್ಷದ ಮೊದಲ ಸೆಮಿಸ್ಟರ್ ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. • ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು ಗ್ರಾಮಾಭಿವೃದ್ಧಿ ಯೋಜನೆಯ

Online ಮೂಲಕ ಹೊಸ ಅರ್ಜಿ ಸಲ್ಲಿಸಲು 31.12.2023 ಕೊನೆಯ ದಿನಾಂಕವಾಗಿರುತ್ತದೆ.

ಅರ್ಜಿ ಸಲ್ಲಿಸುವ ವಿಧಾನ:

ಸಾಮಾನ್ಯ ಸೇವಾ ಕೇಂದ್ರ (CSC ಕೇಂದ್ರಗಳ) ಮೂಲಕ ಮಾತ್ರ ಸುಜ್ಞಾನ ನಿಧಿ ಶಿಷ್ಯವೇತನಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶ ಕೊಡಲಾಗಿದೆ

ಅಧಿಕೃತ ಜಾಲತಾಣಕ್ಕೆ ಇಲ್ಲಿ ಕ್ಲಿಕ್ ಮಾಡಿ

ವಿದ್ಯಾರ್ಥಿ ವೇತನದ ಫಾರ್ಮೆಟ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಹೆಚ್ಚಿನ ಮಾಹಿತಿಗಾಗಿ ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು. ದೂ: 9591770660-6366358320

ಈ ವಿದ್ಯಾರ್ಥಿ ವೇತನ ಹಣಕಾಸಿನ ಅಡಚಣೆಯನ್ನು ತೆಗೆದುಹಾಕುವ ಮೂಲಕ ನಿಮ್ಮ ಶೈಕ್ಷಣಿಕ ಮತ್ತು ವೃತ್ತಿ ಗುರಿಗಳನ್ನು ಸಶಕ್ತಗೊಳಿಸಲು ಇದು ಸಹಾಯ ಮಾಡುತ್ತದೆ. ವಿದ್ಯಾರ್ಥಿವೇತನವನ್ನು ಪಡೆಯುವುದು ನಿಮ್ಮ ಎಲ್ಲಾ ಹಣಕಾಸಿನ ಕಾಳಜಿಗಳನ್ನು ದೂರ ಮಾಡುತ್ತದೆ. ಆದ್ದರಿಂದ ಇಂತಹ ಒಳ್ಳೆಯ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಈ ಕೂಡಲೇ ನಿಮ್ಮ ಎಲ್ಲಾ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ವೃಂದದವರೆಗೆ, ನಿಮ್ಮ ಸ್ನೇಹಿತರಿಗೆ ಹಾಗೂ ಸಂಬಂಧಿಕರಿಗೆ ಶೇರ್ ಮಾಡಿ, ಧನ್ಯವಾದಗಳು

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download


Picsart 23 07 16 14 24 41 584 transformed 1

 

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!