Subsidy Scheme- ಕೃಷಿ ಭೂಮಿ ಖರೀದಿಸಲು 10 ಲಕ್ಷ ರೂಪಾಯಿ ಉಚಿತ, ಈ ವರ್ಗದ ಮಹಿಳೆಯರಿಗೆ ಮಾತ್ರ

bhoo odetana

ಎಲ್ಲರಿಗೂ ನಮಸ್ಕಾರ, ಇವತ್ತಿನ ವರದಿಯಲ್ಲಿ ಜಮೀನು ಖರೀದಿ ಮಾಡಲು ಸರ್ಕಾರ ಘೋಷಿಸಿದ ಸಬ್ಸಿಡಿ ಯೋಜನೆಯ ಬಗ್ಗೆ ತಿಳಿದುಕೊಳ್ಳೋಣ, ಹೌದು 50 % ಸಬ್ಸಿಡಿಯಲ್ಲಿ ( 50% Subsidy on Land Purchase ) ಭೂ ಒಡೆತನ ( Land Ownership ) ಎಂಬ ಯೋಜನೆಯಡಿ ಭೂಮಿ ಖರೀದಿಸಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಇದು ಒಂದು ಖುಷಿಯ ವಿಚಾರ ಆಗಿದ್ದು.ಭೂಮಿ ಇರದ ರೈತರು ಭೂಮಿಯನ್ನು ತಮ್ಮದಾಗಿಸಲು ಈ ಯೋಜನೆ ಬಹಳ ಉಪಯುಕ್ತವಾಗಿದೆ. ಈ ಯೋಜನೆಯ ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ಕರ್ನಾಟಕ ಭೂ ಒಡೆತನ ಯೋಜನೆ 2023

ಈ ಯೋಜನೆಯಿಂದ ತಮ್ಮ ಬಳಿ ಸ್ವಂತ ಭೂಮಿಯನ್ನು ಹೊಂದಿರದ ರೈತರಿಗೆ ಬಹಳ ಉಪಯುಕ್ತ ವಾಗಿದೆ. ಮತ್ತು ಅವರ ಆರ್ಥಿಕ ಪರಿಸ್ಥಿತಿ ( Economic Situation ) ಮತ್ತು ಅವರ ಜೀವನಕ್ಕೆ ಒಂದು ದಾರಿದೀಪವಾಗಿದೆ. ಮತ್ತು ಉತ್ತಮ ಬೆಳೆ ಬೆಳೆಯಲು ಕೂಡಾ ಸಹಾಯವಾಗಿದೆ. ಭೂ ಒಡೆತನ ಯೋಜನೆಯ ಅಡಿಯಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ರಾಮನಗರ ಜಿಲ್ಲೆಗಳಿಗೆ ನಿಗದಿಪಡಿಸಿರುವ ಘಟಕ ವೆಚ್ಚ ರೂ. 25 ಲಕ್ಷ ಆಗಿರುತ್ತದೆ. ಹಾಗೂ ಇನ್ನೂಳಿದ ಜಿಲ್ಲೆಗಳಿಗೆ ರೂ. 20 ಲಕ್ಷ ನೀಡಲಾಗುತ್ತದೆ. ಇದರಲ್ಲಿ ಶೇ 50% ರಷ್ಟು ಸಹಾಯಧನ ಮತ್ತು ಇನ್ನೂಳಿದ ಶೇ 50% ಸಾಲವಾಗಿ ನೀಡುತ್ತಾರೆ.

bhoo odetana yojane

ಈ ಯೋಜನೆಗೆ ಬೇಕಾಗುವ ದಾಖಲೆಗಳ ವಿವರ :

  1. ಭಾವಚಿತ್ರ  ( Photo )
  2. ಜಾತಿ ಪ್ರಮಾಣಪತ್ರ (Caste Certificate) ಪರಿಶಿಷ್ಟ ಜಾತಿ/ಪಂಗಡ
  3. ಆದಾಯ ಪ್ರಮಾಣಪತ್ರ (Income Certificate) (ಆದಾಯ ಮಿತಿ ಗ್ರಾಮೀಣ ಪ್ರದೇಶದಲ್ಲಿ ರೂ.1.5 ಲಕ್ಷ, ನಗರ ಪ್ರದೇಶದಲ್ಲಿ ರೂ.2.00 ಲಕ್ಷ)
  4. ಆಧಾರ್ ಕಾರ್ಡ್ ( Adhar Card )
  5. ಭೂ-ರಹಿತ ಮಹಿಳಾ ಕೃಷಿ ಕಾರ್ಮಿಕ ಪ್ರಮಾಣಪತ್ರ ( Agriculture document )

ಎಸ್ಸಿ ಎಸ್ಟಿ ಸಮುದಾಯದ ಎಲ್ಲಾ ಜಾತಿ ಮತ್ತು ಉಪಜಾತಿಯ ಮಹಿಳಾ ಭೂ ರಹಿತ ರೈತ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಕೆಳಗೆ ಕೊಡಲಾದ ಎಲ್ಲಾ ನಿಗಮಗಳಲ್ಲಿ ಈ ಯೋಜನೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

  1. ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ
  2. ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮ
  3. ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ
  4. ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ
  5. ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ
  6. ಡಾ. ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ
  7. ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ

ವಯೋಮಿತಿ 

ಈ ಯೋಜನೆಗೆ ವಯೋಮಿತಿ ( Age Limit ) ಕನಿಷ್ಠ 21 ಹಾಗೂ ಗರಿಷ್ಠ 50 ವರ್ಷ ಹೊಂದಿರಬೇಕು.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಸಂಪರ್ಕಿಸಿ

 ಕಲ್ಯಾಣ ಮಿತ್ರ 24×7 ಸಹಾಯವಾಣಿ 9482300400 ಅನ್ನು ಸಂಪರ್ಕಿಸಬಹುದು. ಆಸಕ್ತ ಅರ್ಹರು ನವೆಂಬರ್ 29ರ ಒಳಗಾಗಿ ಸೇವಾಸಿಂಧು ಪೋರ್ಟಲ್ ( Seva Sindhu Portal ) ಮೂಲಕ ಅರ್ಜಿ ಸಲ್ಲಿಸಬಹುದು. ಹಾಗಾಗಿ ಈ ಯೋಜನೆಗೆ ಆದಷ್ಟು ಬೇಗ ಅರ್ಜಿ ಸಲ್ಲಿಸಿ ತಮ್ಮ ಭೂ ಮಿಯ ಒಡೆತನವನ್ನು ಪಡೆದುಕೊಳ್ಳಬಹುದು. ಆದಷ್ಟು ಬೇಗ ಈ ಯೋಜನೆಗೆ ಅರ್ಜಿ ಸಲ್ಲಿಸಿ.

ಇದನ್ನೂ ಓದಿ – Gruhalakshmi – ಪ್ರತಿ ತಿಂಗಳು ಗೃಹಲಕ್ಷ್ಮಿ ಹಣ ಜಮಾ ಆಗಲು ಅಧಿಕೃತ ದಿನಾಂಕ ನಿಗದಿ, ಇಲ್ಲಿದೆ ಸಂಪೂರ್ಣ ಮಾಹಿತಿ

ಇದನ್ನೂ ಓದಿ – ಮಹಿಳೆಯರೇ ಗಮನಿಸಿ : ಕೇಂದ್ರ ಸರ್ಕಾರದ ಈ ಯೋಜನೆ’ಗೆ ಅರ್ಜಿ ಸಲ್ಲಿಸಿದ್ರೆ ಸಿಗುತ್ತೆ 6,000 ರೂ.! ಇಲ್ಲಿದೆ ಕಂಪ್ಲೀಟ್ ಮಾಹಿತಿ

ಇದನ್ನೂ ಓದಿ – Gold rate Today- ಚಿನ್ನ-ಬೆಳ್ಳಿಯ ದರದಲ್ಲಿ ಇಳಿಕೆ, ದೀಪಾವಳಿಗೆ ಚಿನ್ನಾಭರಣ ಖರೀದಿಸೋರಿಗೆ ಗುಡ್ ನ್ಯೂಸ್

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

 

Leave a Reply

Your email address will not be published. Required fields are marked *