ರಾಜ್ಯದಲ್ಲಿನ ಎಲ್ಲಾ ವಿಕಲಚೇತನ ವ್ಯಕ್ತಿಗಳ ಜೀವನವನ್ನು ಸುಗಮಗೊಳಿಸಲು ಮತ್ತು ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಹಲವು ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿದೆ. 2025-26ನೇ ಆರ್ಥಿಕ ಸಾಲಿಗಾಗಿ ಈ ಎಲ್ಲಾ ಫಲಾನುಭವಿ ಆಧಾರಿತ ಯೋಜನೆಗಳನ್ನು ನೇರ ನಗದು ವರ್ಗಾವಣೆ (DBT – Direct Benefit Transfer) ಆನ್ಲೈನ್ ವೇದಿಕೆ ತಂತ್ರಾಂಶದಡಿ ಅಳವಡಿಸಲಾಗಿದ್ದು, ಸೌಲಭ್ಯ ಪಡೆಯಲು ಅರ್ಹ ವಿಕಲಚೇತನರಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಹರಿಗೆ ಯೋಜನೆಗಳ ಲಾಭ ತಲುಪಿಸುವ ಈ ಪ್ರಕ್ರಿಯೆಯನ್ನು ಸುಲಭಗೊಳಿಸಲು, ಅರ್ಜಿ ಸಲ್ಲಿಸಲು ನಿಗದಿಪಡಿಸಿದ್ದ ಅವಧಿಯನ್ನು ಅಕ್ಟೋಬರ್ 15, 2025 ರವರೆಗೆ ವಿಸ್ತರಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಯಾವೆಲ್ಲಾ ಪ್ರಮುಖ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ?
ವಿಕಲಚೇತನ ವ್ಯಕ್ತಿಗಳ ವಿವಿಧ ಅಗತ್ಯಗಳನ್ನು ಪೂರೈಸುವ ಮತ್ತು ಅವರ ಬದುಕಿಗೆ ಆಸರೆಯಾಗುವ ಉದ್ದೇಶದಿಂದ ಈ ಕೆಳಕಂಡ ಪ್ರಮುಖ ಯೋಜನೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ:
ಆಧಾರ ಯೋಜನೆ (ಸಹಾಯಧನ): ವಿಕಲಚೇತನರ ಆರ್ಥಿಕ ಭದ್ರತೆಗಾಗಿ ನೀಡುವ ಮಾಸಿಕ ಆರ್ಥಿಕ ನೆರವು.
ವೈದ್ಯಕೀಯ ಪರಿಹಾರ ನಿಧಿ ಯೋಜನೆ: ಆರೋಗ್ಯ ಸಮಸ್ಯೆಗಳು ಅಥವಾ ಶಸ್ತ್ರಚಿಕಿತ್ಸೆಗಳ ಸಂದರ್ಭದಲ್ಲಿ ಆರ್ಥಿಕ ನೆರವು ಒದಗಿಸುವುದು.
ಪ್ರತಿಭಾವಂತ ವಿಕಲಚೇತನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಯೋಜನೆ: ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು.
ನಿರುದ್ಯೋಗ ಭತ್ಯೆ: ಅರ್ಹತೆ ಇದ್ದರೂ ಉದ್ಯೋಗ ಸಿಗದ ವಿಕಲಚೇತನರಿಗೆ ನಿಗದಿತ ಮಾಸಿಕ ಭತ್ಯೆ.
ಶಿಶುಪಾಲನಾ ಭತ್ಯೆ: ವಿಕಲಚೇತನ ಮಕ್ಕಳಿಗೆ ಆರೈಕೆ ಮತ್ತು ಪೋಷಣೆಗೆ ನೀಡುವ ಸಹಾಯ.
ಮರಣ ಪರಿಹಾರ ನಿಧಿ: ವಿಕಲಚೇತನ ವ್ಯಕ್ತಿ ಮರಣ ಹೊಂದಿದಾಗ ಕುಟುಂಬಕ್ಕೆ ಆರ್ಥಿಕ ನೆರವು.
ಪ್ರತಿಭೆ ಯೋಜನೆ: ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಪ್ರತಿಭೆ ಪ್ರದರ್ಶಿಸುವ ವಿಕಲಚೇತನರಿಗೆ ಪ್ರೋತ್ಸಾಹ.
ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್ಟಾಪ್ ಯೋಜನೆ: ದೃಷ್ಟಿದೋಷವುಳ್ಳ ವಿದ್ಯಾರ್ಥಿಗಳ ಕಲಿಕೆಯನ್ನು ಸುಗಮಗೊಳಿಸಲು ಅಗತ್ಯ ಸಾಧನಗಳ ವಿತರಣೆ.
ದೃಷ್ಟಿದೋಷ ಹೊಂದಿರುವ ವಿಕಲಚೇತನರಿಗೆ ಬ್ರೈಲ್ ಕಿಟ್ ಯೋಜನೆ: ಬ್ರೈಲ್ ಓದಲು ಮತ್ತು ಬರೆಯಲು ಅಗತ್ಯವಿರುವ ಕಿಟ್ಗಳ ವಿತರಣೆ.
ದೈಹಿಕ ವಿಕಲಚೇತನರಿಗೆ ಯಂತ್ರ ಚಾಲಿತ ದ್ವಿಚಕ್ರ ವಾಹನ ಯೋಜನೆ: ಹೆಚ್ಚು ಚಲನಶೀಲತೆ ಅಗತ್ಯವಿರುವವರಿಗೆ ಉಚಿತವಾಗಿ ಅಥವಾ ಸಹಾಯಧನದೊಂದಿಗೆ ವಾಹನ ಒದಗಿಸುವುದು.
ಶ್ರವಣದೋಷವುಳ್ಳ ವ್ಯಕ್ತಿಗಳಿಗೆ ಸ್ವಯಂ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರ ಯೋಜನೆ: ಸ್ವಯಂ ಉದ್ಯೋಗ ಕೈಗೊಳ್ಳಲು ನೆರವು.
ಸಾಧನ ಸಲಕರಣೆ ಯೋಜನೆ: ವಿವಿಧ ಅಂಗವೈಕಲ್ಯಗಳಿಗೆ ಅನುಗುಣವಾಗಿ ಅಗತ್ಯವಿರುವ ಸಲಕರಣೆಗಳ ವಿತರಣೆ.
ವಿಕಲಚೇತನ ವ್ಯಕ್ತಿಗಳಿಗೆ ಬ್ಯಾಟರಿ ಚಾಲಿತ ವ್ಹೀಲ್ಚೇರ್ ಯೋಜನೆ:ಚಲನೆಗೆ ಸಂಪೂರ್ಣ ನೆರವು ಬೇಕಿರುವವರಿಗೆ ಅತ್ಯಾಧುನಿಕ ವ್ಹೀಲ್ಚೇರ್ ಒದಗಿಸುವುದು.
ಅರ್ಜಿ ಸಲ್ಲಿಸುವ ವಿಧಾನ ಮತ್ತು ಅಗತ್ಯ ದಾಖಲಾತಿಗಳ ಸಲ್ಲಿಕೆ
ಈ ಎಲ್ಲಾ ಯೋಜನೆಗಳ ಸೌಲಭ್ಯಗಳನ್ನು ಪಡೆಯಲು ಬಯಸುವ ವಿಕಲಚೇತನರು ಕಡ್ಡಾಯವಾಗಿ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ಮೂರು ಪ್ರಮುಖ ಪೋರ್ಟಲ್ಗಳನ್ನು ಬಳಸಬಹುದಾಗಿದೆ:
ಗ್ರಾಮ ಒನ್ (Grama One)
ಕರ್ನಾಟಕ ಒನ್ (Karnataka One)
ಸೇವಾಸಿಂಧು ಪೋರ್ಟಲ್ (Seva Sindhu Portal): https://sevasindhu.karnataka.gov.in/sevasindhu/kannada
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ ನಂತರ, ಅಭ್ಯರ್ಥಿಗಳು ತಮ್ಮ ಅರ್ಜಿಯ ಸ್ವೀಕೃತಿ ಪ್ರತಿಯನ್ನು (Acknowledgement Copy) ಮತ್ತು ಯೋಜನೆಯ ನಿಯಮಾನುಸಾರ ಅಗತ್ಯವಿರುವ ಎಲ್ಲಾ ಪೂರಕ ದಾಖಲಾತಿಗಳ ಹಾರ್ಡ್ ಪ್ರತಿಗಳನ್ನು ಸಿದ್ಧಪಡಿಸಿಕೊಳ್ಳಬೇಕು.
ಈ ದಾಖಲೆಗಳ ಹಾರ್ಡ್ ಪ್ರತಿಗಳನ್ನು ತಮ್ಮ ತಮ್ಮ ತಾಲ್ಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರ್ತರಿಗೆ (Multi-purpose Rehabilitation Workers – MRWs) ಕಡ್ಡಾಯವಾಗಿ ಸಲ್ಲಿಸಬೇಕು. ಸರಿಯಾದ ದಾಖಲೆಗಳೊಂದಿಗೆ ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸುವುದರಿಂದ ಯೋಜನೆಗಳ ಲಾಭ ಪಡೆಯಲು ಸಹಾಯಕವಾಗುತ್ತದೆ.
ಗಮನಿಸಿ: ವಿಕಲಚೇತನರು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು, ಅಕ್ಟೋಬರ್ 15, 2025 ರೊಳಗೆ ಅರ್ಜಿಗಳನ್ನು ಸಲ್ಲಿಸುವ ಮೂಲಕ ಸರ್ಕಾರಿ ಸೌಲಭ್ಯಗಳನ್ನು ಪಡೆದು ತಮ್ಮ ಬದುಕನ್ನು ಹಸನುಗೊಳಿಸಿಕೊಳ್ಳಲು ಇಲಾಖೆಯು ಕೋರಿಕೊಂಡಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ರಾಜ್ಯ ಸರ್ಕಾರಿ ನೌಕರರ ಸಂಘದಿಂದ ವರ್ಗಾವಣೆ ಸಂಬಂಧಿತ ‘ಪತ್ರ ವ್ಯವಹಾರ’ದ ಬಗ್ಗೆ ಮಹತ್ವದ ಆದೇಶ.!
- 2024-25ನೇ ಸಾಲಿನ `ಶಿಕ್ಷಕರ ವರ್ಗಾವಣೆ’ಗೆ ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ.!
- ರಾಜ್ಯದ ರೈತರ ಪೌತಿ ಖಾತೆ ಕುರಿತು ಬಂಪರ್ ಗುಡ್ ನ್ಯೂಸ್, ಜಮೀನು ವರ್ಗಾವಣೆಗೆ ಹೊಸ ರೂಲ್ಸ್
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.


WhatsApp Group




