WhatsApp Image 2025 10 12 at 10.28.33 AM

ಸರ್ಕಾರಿ ನೌಕರರಿಗೆ ಸ್ಥಗಿತ ವೇತನ ಬಡ್ತಿ ಸೌಲಭ್ಯ: ನಿಯಮ, ಮಾರ್ಗಸೂಚಿಗಳ ಸಂಪೂರ್ಣ ಮಾಹಿತಿ ಇಲ್ಲಿದೆ.!

WhatsApp Group Telegram Group

ಬೆಂಗಳೂರು, ಅಕ್ಟೋಬರ್ 11: ಕರ್ನಾಟಕ ರಾಜ್ಯ ಸರ್ಕಾರವು ಕಾಲಿಕ ವೇತನ ಶ್ರೇಣಿಯಲ್ಲಿ ಗರಿಷ್ಠ ವೇತನ ಮಟ್ಟವನ್ನು ತಲುಪಿರುವ ರಾಜ್ಯ ಸರ್ಕಾರಿ ನೌಕರರಿಗೆ ‘ಸ್ಥಗಿತ ವೇತನ ಬಡ್ತಿ’ (Stagnation Increment) ಸೌಲಭ್ಯಗಳನ್ನು ಮಂಜೂರು ಮಾಡುವ ಕುರಿತು ಪರಿಷ್ಕೃತ ಮತ್ತು ನಿಖರ ಮಾರ್ಗಸೂಚಿಗಳನ್ನು ಅನುಸರಿಸಲು ಆದೇಶಿಸಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ..

ಪ್ರಮುಖಾಂಶಗಳು:

ಮಾರ್ಗಸೂಚಿಗಳ ಹಿನ್ನೆಲೆ: ರಾಜ್ಯ ಸರ್ಕಾರಿ ನೌಕರರು ತಾವು ಹೊಂದಿರುವ ಹುದ್ದೆಯ ಕಾಲಿಕ ವೇತನ ಶ್ರೇಣಿಯ ಗರಿಷ್ಠ ಹಂತವನ್ನು ತಲುಪಿದಾಗ, ಅವರಿಗೆ ಸ್ಥಗಿತ ವೇತನ ಬಡ್ತಿಗಳನ್ನು ಮಂಜೂರು ಮಾಡುವ ಬಗ್ಗೆ 18.03.1996ರ ಸರ್ಕಾರಿ ಆದೇಶದಲ್ಲಿ ಮೊದಲು ಮಾರ್ಗಸೂಚಿಗಳನ್ನು ಹೊರಡಿಸಲಾಗಿತ್ತು. ಈ ಷರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟು ಗರಿಷ್ಠ 5 ಸ್ಥಗಿತ ವೇತನ ಬಡ್ತಿಗಳನ್ನು ಸಕ್ಷಮ ಪ್ರಾಧಿಕಾರಗಳು ಮಂಜೂರು ಮಾಡಲು ಅವಕಾಶವಿತ್ತು.

ಬಡ್ತಿಗಳ ಸಂಖ್ಯೆ ಪರಿಷ್ಕರಣೆ: 2011ರ ಅಧಿಕಾರಿ ವೇತನ ಸಮಿತಿಯ ಶಿಫಾರಸ್ಸಿನಂತೆ, 14.06.2012ರ ಸರ್ಕಾರಿ ಆದೇಶದ ಮೂಲಕ ಸ್ಥಗಿತ ವೇತನ ಬಡ್ತಿಗಳ ಗರಿಷ್ಠ ಸಂಖ್ಯೆಯನ್ನು 5 ರಿಂದ 8 ಕ್ಕೆ ಹೆಚ್ಚಿಸಲಾಗಿದೆ. ಅಂದರೆ, 01.04.2012ರಿಂದ ಜಾರಿಗೆ ಬರುವಂತೆ ನೌಕರರಿಗೆ ಗರಿಷ್ಠ 8 ಸ್ಥಗಿತ ವೇತನ ಬಡ್ತಿಗಳು ಲಭ್ಯವಿದ್ದು, ಇದರ ಮಂಜೂರಾತಿಗೆ ಹಿಂದಿನ ಆದೇಶದಲ್ಲಿ ತಿಳಿಸಿದ ಎಲ್ಲ ಷರತ್ತುಗಳು ಅನ್ವಯವಾಗುತ್ತವೆ.

ಸೇವಾ ದಾಖಲೆಗಳ ನಮೂದು ಕಡ್ಡಾಯ: 6ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಪರಿಷ್ಕರಣೆಯ ನಂತರ, 2018ರ ನಿಯಮಗಳನ್ವಯ ಸರ್ಕಾರಿ ನೌಕರರ ಮೂಲ ಸೇವಾ ಪುಸ್ತಕದಲ್ಲಿ (Service Book) ಸೇವಾ ವಿಷಯಗಳಿಗೆ ಸಂಬಂಧಿಸಿದ ಪ್ರಮುಖ ಅಂಶಗಳನ್ನು ಕಡ್ಡಾಯವಾಗಿ ನಮೂದು ಮಾಡಬೇಕು. ಆದರೆ, ಕೆಲವು ನೌಕರರು ಶ್ರೇಣೀಕೃತ ವ್ಯವಸ್ಥೆಯಲ್ಲಿ ಲಭ್ಯವಿರುವ ಪದೋನ್ನತಿ ಅವಕಾಶಗಳನ್ನು ಸ್ವ ಇಚ್ಛೆಯಿಂದ ನಿರಾಕರಿಸಿದ ಬಗ್ಗೆ ಸೇವಾ ಪುಸ್ತಕದಲ್ಲಿ ನಮೂದು ಮಾಡದೇ ಇರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇದು ಸ್ಥಗಿತ ವೇತನ ಬಡ್ತಿ ಮಂಜೂರು ಮಾಡುವಾಗ ಗೊಂದಲಕ್ಕೆ ಕಾರಣವಾಗುತ್ತದೆ.

ನಿಯಮಬಾಹಿರ ಮಂಜೂರಾತಿಗಳ ಬಗ್ಗೆ ಆತಂಕ: ಸ್ಥಗಿತ ವೇತನ ಬಡ್ತಿ ಸೌಲಭ್ಯಗಳನ್ನು ನಿಗದಿತ ಅವಧಿಯೊಳಗೆ ಮಂಜೂರು ಮಾಡದೆ, ನೌಕರರು ನಿವೃತ್ತರಾದ ನಂತರ ಪ್ರಸ್ತಾವನೆಗಳನ್ನು ಸಲ್ಲಿಸುತ್ತಿರುವ ಹಾಗೂ ಪದೋನ್ನತಿ ನಿರಾಕರಿಸಿದ ನೌಕರರ ಪ್ರಕರಣಗಳಲ್ಲಿಯೂ ನಿಯಮಬಾಹಿರವಾಗಿ ಬಡ್ತಿಗಳನ್ನು ಮಂಜೂರು ಮಾಡಿರುವ ಹಲವು ಪ್ರಕರಣಗಳು ಸರ್ಕಾರದ ಗಮನಕ್ಕೆ ಬಂದಿವೆ.

ಸೌಲಭ್ಯದ ಉದ್ದೇಶ ಮತ್ತು ಮಹತ್ವ: ಕಾಲಿಕ ವೇತನ ಶ್ರೇಣಿಗಳಲ್ಲಿ ಲಭ್ಯವಿರುವ ವಾರ್ಷಿಕ ವೇತನ ಬಡ್ತಿಗಳಿಗೂ (Annual Increment) ಮತ್ತು ಗರಿಷ್ಠ ಹಂತವನ್ನು ತಲುಪಿದ ನೌಕರರಿಗೆ ನೀಡುವ ಸ್ಥಗಿತ ವೇತನ ಬಡ್ತಿಗಳಿಗೂ ವ್ಯತ್ಯಾಸವಿದೆ. ಸ್ಥಗಿತ ವೇತನ ಬಡ್ತಿಯು ವಾರ್ಷಿಕ ಬಡ್ತಿಯಂತೆ ಪ್ರತಿ ವರ್ಷ ಸರ್ವೇ ಸಾಮಾನ್ಯವಾಗಿ ನೀಡುವ ಸೌಲಭ್ಯವಲ್ಲ. ಸರ್ಕಾರಿ ನೌಕರನ ಅರ್ಹತೆ ಮತ್ತು ಸೂಕ್ತತೆಯನ್ನು ಖಚಿತಪಡಿಸಿಕೊಂಡ ಬಳಿಕವಷ್ಟೇ ಇದನ್ನು ಮಂಜೂರು ಮಾಡುವುದು ಸರಿಯಾದ ಕ್ರಮ.

    ಸ್ಥಗಿತ ವೇತನ ಬಡ್ತಿ ಮಂಜೂರಾತಿಗೆ ಅಗತ್ಯವಿರುವ ಷರತ್ತುಗಳು:

    ಸರ್ಕಾರಿ ನೌಕರನು ತೃಪ್ತಿಕರವಾದ ಸೇವಾ ದಾಖಲೆಗಳನ್ನು ಹೊಂದಿರಬೇಕು.

    ಈ ಸೌಲಭ್ಯದ ಮಂಜೂರಾತಿಗಾಗಿ ‘ತೃಪ್ತಿಕರ ಸೇವೆ’ಯನ್ನು ಪದೋನ್ನತಿಗೆ ನಿರ್ಧರಿಸುವ ರೀತಿಯಲ್ಲಿಯೇ ಪರಿಗಣಿಸಬೇಕು.

    ಶ್ರೇಣೀಕೃತ ವ್ಯವಸ್ಥೆಯಲ್ಲಿನ ಪದೋನ್ನತಿ ಅವಕಾಶಗಳನ್ನು ನಿರಾಕರಿಸಿದ ಅಥವಾ ಸ್ವ-ಇಚ್ಛೆಯಿಂದ ಬಿಟ್ಟುಕೊಟ್ಟ ಸರ್ಕಾರಿ ನೌಕರರ ಪ್ರಕರಣಗಳಲ್ಲಿ ಸ್ಥಗಿತ ವೇತನ ಬಡ್ತಿಗಳನ್ನು ಮಂಜೂರು ಮಾಡುವಂತಿಲ್ಲ.

      ಆದ್ದರಿಂದ, ಸ್ಥಗಿತ ವೇತನ ಬಡ್ತಿಗಳನ್ನು ಮಂಜೂರು ಮಾಡುವ ಅಧಿಕಾರವುಳ್ಳ ಸಕ್ಷಮ ಪ್ರಾಧಿಕಾರಿಗಳು, ಸಂಬಂಧಿಸಿದ ಸರ್ಕಾರಿ ನೌಕರರಿಂದ ಲಿಖಿತ ಮನವಿ ಸ್ವೀಕರಿಸಿದ ಕೂಡಲೇ, ಈ ಮೇಲಿನ ಸೂಚನೆಗಳು ಮತ್ತು ಸರ್ಕಾರದ ಆದೇಶಗಳಲ್ಲಿನ ಮಾರ್ಗಸೂಚಿಗಳ ಪ್ರಕಾರ ನಿಯಮಾನುಸಾರ ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

      WhatsApp Image 2025 09 05 at 11.51.16 AM 12

      ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

      ಈ ಮಾಹಿತಿಗಳನ್ನು ಓದಿ

      ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

      WhatsApp Group Join Now
      Telegram Group Join Now

      Popular Categories