SSP SCHOLARSHIP APPLY NOW

SSP ವಿದ್ಯಾರ್ಥಿವೇತನಕ್ಕೆ ಅರ್ಜಿ ಪ್ರಾರಂಭ, SSP Scholarships 2026-27 Apply Online @ssp.karnataka.gov.in

ಕರ್ನಾಟಕ ಸರ್ಕಾರದ 2026-27ನೇ ಸಾಲಿನ ಮೆಟ್ರಿಕ್ ಪೂರ್ವ (Pre-Metric) ಹಾಗೂ ಮೆಟ್ರಿಕ್ ನಂತರದ (Post-Metric) ವಿದ್ಯಾರ್ಥಿವೇತನಕ್ಕೆ SSP ಪೋರ್ಟಲ್ ಮೂಲಕ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಅರ್ಹತೆ, ಬೇಕಾಗುವ ದಾಖಲೆಗಳು ಹಾಗೂ ಅರ್ಜಿ ಸಲ್ಲಿಸುವ ವಿಧಾನದ ಕಂಪ್ಲೀಟ್ ಗೈಡ್ ಇಲ್ಲಿದೆ…

  • *ವಿದ್ಯಾರ್ಥಿವೇತನ: 2026-27ನೇ ಸಾಲಿನ ಎಸ್‌ಎಸ್‌ಪಿ ಸ್ಕಾಲರ್‌ಶಿಪ್‌ಗೆ ಅರ್ಜಿ ಆಹ್ವಾನ.
  • *ಅರ್ಜಿ ಸಲ್ಲಿಕೆ: 1ನೇ ತರಗತಿಯಿಂದ ಪಿಯುಸಿ, ಡಿಗ್ರಿ, ಇಂಜಿನಿಯರಿಂಗ್ ಸೇರಿ ಎಲ್ಲಾ ಕೋರ್ಸ್ ವಿದ್ಯಾರ್ಥಿಗಳಿಗೆ ಅವಕಾಶ.
  • *ನೋಂದಣಿ ಕಡ್ಡಾಯ: ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆಗಳಿಗೆ NSP-OTR ರಿಜಿಸ್ಟ್ರೇಷನ್ ಕಡ್ಡಾಯ.

ಎಸ್‌ಎಸ್‌ಪಿ ಸ್ಕಾಲರ್‌ಶಿಪ್ 2026-27: ವಿದ್ಯಾರ್ಥಿವೇತನಕ್ಕೆ ಆನ್‌ಲೈನ್ ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು: ರಾಜ್ಯದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ನೆರವಾಗುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ‘ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ’ (SSP – State Scholarship Portal) ಮೂಲಕ 2026-27ನೇ ಶೈಕ್ಷಣಿಕ ಸಾಲಿನ ಸ್ಕಾಲರ್‌ಶಿಪ್‌ಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ. 1ನೇ ತರಗತಿಯಿಂದ 10ನೇ ತರಗತಿಯವರೆಗೆ ಓದುತ್ತಿರುವ (Pre-Matric) ಹಾಗೂ 11ನೇ ತರಗತಿ (PUC), ಡಿಗ್ರಿ ಮತ್ತು ಉನ್ನತ ವ್ಯಾಸಂಗ ಮಾಡುತ್ತಿರುವ (Post-Matric) ಎಲ್ಲಾ ವಿದ್ಯಾರ್ಥಿಗಳು ಈ ಪೋರ್ಟಲ್ ಮೂಲಕ ಸುಲಭವಾಗಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು.

ಎಸ್‌ಎಸ್‌ಪಿ (SSP) ಪೋರ್ಟಲ್ ರಾಜ್ಯದ ವಿವಿಧ 15ಕ್ಕೂ ಹೆಚ್ಚು ಇಲಾಖೆಗಳ ವಿದ್ಯಾರ್ಥಿವೇತನ ಯೋಜನೆಗಳನ್ನು ಒಂದೇ ಸೂರಿನಡಿ ತಂದಿರುವ ಮಹತ್ವದ ವೇದಿಕೆಯಾಗಿದೆ.

ಈ ಲೇಖನದಲ್ಲಿ ಎಸ್‌ಎಸ್‌ಪಿಯಲ್ಲಿ ಹೊಸ ಖಾತೆ ಸೃಷ್ಟಿಸುವುದು ಹೇಗೆ? ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳೇನು? ಎಂಬ ಸಂಪೂರ್ಣ ಹಾಗೂ ಹಂತ-ಹಂತದ ಮಾಹಿತಿಯನ್ನು ನೀಡಲಾಗಿದೆ.

1. ಯಾರೆಲ್ಲಾ ಅರ್ಜಿ ಸಲ್ಲಿಸಬಹುದು? (ವಿವಿಧ ವಿಭಾಗಗಳು)

ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್‌ನಲ್ಲಿ (SSP) ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ:

ssp

A) ಹೊಸ ಖಾತೆ ಸೃಷ್ಟಿ (Create New Account)

  • ಇಲ್ಲಿಯವರೆಗೂ ಎಸ್‌ಎಸ್‌ಪಿ (SSP) ತಂತ್ರಾಂಶದಲ್ಲಿ ತಮ್ಮ ಹೆಸರನ್ನು ನೋಂದಾಯಿಸದ ಅಥವಾ ಯಾವುದೇ ಖಾತೆ ಸೃಜಿಸದಿರುವ ವಿದ್ಯಾರ್ಥಿಗಳು (ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಬ್ಬರಿಗೂ ಅನ್ವಯ) ಮೊದಲ ಬಾರಿಗೆ ಪೋರ್ಟಲ್‌ನಲ್ಲಿ ಹೊಸ ಖಾತೆ ತೆರೆಯುವುದು ಕಡ್ಡಾಯ.

B) ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ (Post-Matric Scholarship)

  • 11ನೇ ತರಗತಿ (PUC), ಐಟಿಐ (ITI), ಡಿಪ್ಲೊಮಾ (Diploma), ಪದವಿ (Degree), ಸ್ನಾತಕೋತ್ತರ ಪದವಿ ಹಾಗೂ ಇತರ ವೃತ್ತಿಪರ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು 2026-27ನೇ ಸಾಲಿಗೆ ಅರ್ಜಿ ಸಲ್ಲಿಸಬಹುದು. (ಈಗಾಗಲೇ ಎಸ್‌ಎಸ್‌ಪಿಯಲ್ಲಿ ಖಾತೆ ಹೊಂದಿರುವವರಿಗೆ ಮಾತ್ರ ಅನ್ವಯ).

C) ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ (Pre-Matric Scholarship)

  • 1 ರಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ಶಾಲಾ ವಿದ್ಯಾರ್ಥಿಗಳಿಗೆ ಈ ವಿಭಾಗ ಅನ್ವಯವಾಗುತ್ತದೆ. (ಈಗಾಗಲೇ ಖಾತೆ ಸೃಜಿಸಿರುವ ವಿದ್ಯಾರ್ಥಿಗಳಿಗೆ ಮಾತ್ರ).

2. NSP-OTR ನೋಂದಣಿ ಕಡ್ಡಾಯ (ಅತ್ಯಂತ ಪ್ರಮುಖ ಮಾಹಿತಿ)

ಈ ಬಾರಿಯ ವಿದ್ಯಾರ್ಥಿವೇತನದ ನಿಯಮಗಳಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ.

  • ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ (BCWD), ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ (STWD) ಮತ್ತು ಸಮಾಜ ಕಲ್ಯಾಣ ಇಲಾಖೆಯ (SWD) ಯೋಜನೆಗಳಿಗೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ನ್ಯಾಷನಲ್ ಸ್ಕಾಲರ್‌ಶಿಪ್ ಪೋರ್ಟಲ್‌ನಲ್ಲಿ ಒನ್ ಟೈಮ್ ರಿಜಿಸ್ಟ್ರೇಷನ್ (NSP-OTR) ಮಾಡುವುದು ಕಡ್ಡಾಯವಾಗಿದೆ.
  • ಒಮ್ಮೆ ರಿಜಿಸ್ಟರ್ ಆದ ಬಳಿಕ, ಆ OTR ಸಂಖ್ಯೆಯನ್ನು ಬಳಸಿ ಎಸ್‌ಎಸ್‌ಪಿ ಪೋರ್ಟಲ್‌ನಲ್ಲಿ ಅರ್ಜಿಯನ್ನು ಮುಂದುವರಿಸಬಹುದು.

3. ಅರ್ಜಿ ಸಲ್ಲಿಸಲು ಬೇಕಾಗುವ ಕಡ್ಡಾಯ ದಾಖಲೆಗಳು (Required Documents)

ಎಸ್‌ಎಸ್‌ಪಿ ಪೋರ್ಟಲ್‌ನಲ್ಲಿ ಖಾತೆ ಸೃಜಿಸಿ, ಅರ್ಜಿ ಸಲ್ಲಿಸಲು (ವಿಶೇಷವಾಗಿ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ) ಈ ಕೆಳಗಿನ ಮಾಹಿತಿ ಹಾಗೂ ದಾಖಲೆಗಳು ಕಡ್ಡಾಯವಾಗಿ ಬೇಕಾಗುತ್ತದೆ:

  1. ಆಧಾರ್ ಕಾರ್ಡ್ (Aadhaar Card): ವಿದ್ಯಾರ್ಥಿಯ ಆಧಾರ್ ಸಂಖ್ಯೆ ಮತ್ತು ಅದರಲ್ಲಿರುವಂತೆ ನಿಖರವಾದ ಹೆಸರು.
  2. ಮೊಬೈಲ್ ಸಂಖ್ಯೆ (Mobile Number): ಆಕ್ಟಿವ್ ಆಗಿರುವ ಮೊಬೈಲ್ ಸಂಖ್ಯೆ (ಆಧಾರ್‌ಗೆ ಲಿಂಕ್ ಆಗಿದ್ದರೆ ಉತ್ತಮ).
  3. ಇಮೇಲ್ ಐಡಿ (Email ID): ಭವಿಷ್ಯದ ಸಂಪರ್ಕಕ್ಕಾಗಿ ಇ-ಮೇಲ್ ವಿಳಾಸ.
  4. ಎಸ್‌ಎಸ್‌ಎಲ್‌ಸಿ (SSLC) ವಿವರ: ವಿದ್ಯಾರ್ಥಿಗಳ ಎಸ್‌ಎಸ್‌ಎಲ್‌ಸಿ (10ನೇ ತರಗತಿ) ನೋಂದಣಿ ಸಂಖ್ಯೆ / ರಿಜಿಸ್ಟರ್ ನಂಬರ್.
  5. ಆರ್.ಡಿ ಸಂಖ್ಯೆ (RD Number): ವಿದ್ಯಾರ್ಥಿಯ ಹೆಸರಿನಲ್ಲಿರುವ ಜಾತಿ (Caste) ಮತ್ತು ಆದಾಯ ಪ್ರಮಾಣ ಪತ್ರದ (Income Certificate) ಆರ್.ಡಿ (RD) ಸಂಖ್ಯೆ.
  6. ವಿಕಲಚೇತನರಾಗಿದ್ದರೆ (UDID): ವಿದ್ಯಾರ್ಥಿಯು ವಿಕಲಚೇತನರಾಗಿದ್ದಲ್ಲಿ (Disability), ಯು.ಡಿ.ಐ.ಡಿ (UDID) ಗುರುತಿನ ಸಂಖ್ಯೆ.
  7. ವಿಳಾಸದ ವಿವರ: ವಿದ್ಯಾರ್ಥಿಯು ವಾಸವಿರುವ ಜಿಲ್ಲೆ, ತಾಲ್ಲೂಕು, ವಿಧಾನಸಭಾ ಕ್ಷೇತ್ರದ ಹೆಸರು ಮತ್ತು ಮನೆಯ ಸಂಪೂರ್ಣ ವಿಳಾಸ.
  8. ಕಾಲೇಜು ದಾಖಲಾತಿ (College Registration): ವಿದ್ಯಾರ್ಥಿಯ ಕಾಲೇಜು ದಾಖಲಾತಿ/ನೋಂದಣಿ ಸಂಖ್ಯೆ (College Registration/Admission Number).
  9. ಇ-ದೃಢೀಕರಣ ಸಂಖ್ಯೆ (e-Attestation Number): ಸಂಬಂಧಪಟ್ಟ ದಾಖಲೆಗಳ ಇ-ದೃಢೀಕರಣ ಸಂಖ್ಯೆ (ಅನ್ವಯವಾದಲ್ಲಿ ಮಾತ್ರ).
  10. ಹಾಸ್ಟೆಲ್ ವಿವರಗಳು (Hostel Details): ಸರ್ಕಾರಿ ಅಥವಾ ಇತರೆ ಮಾನ್ಯತೆ ಪಡೆದ ಹಾಸ್ಟೆಲ್‌ನಲ್ಲಿ ಇದ್ದರೆ ಅದರ ಮಾಹಿತಿ (ಅನ್ವಯವಾದಲ್ಲಿ).

4. ಎಸ್‌ಎಸ್‌ಪಿ (SSP) ಪೋರ್ಟಲ್‌ನ ಹೊಸ ನಿಯಮಗಳು

ಈಗಿನ ಹೊಸ ಅಪ್ಡೇಟ್‌ಗಳ ಪ್ರಕಾರ ಅರ್ಜಿ ಸಲ್ಲಿಕೆಯನ್ನು ಸುಗಮಗೊಳಿಸಲು ಹಲವು ತಾಂತ್ರಿಕ ನಿಯಮಗಳನ್ನು ಜಾರಿಗೆ ತರಲಾಗಿದೆ:

  • ಕುಟುಂಬ ಗುರುತಿನ ಸಂಖ್ಯೆ (Kutumba ID): ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಲು ‘ಕುಟುಂಬ ತಂತ್ರಾಂಶ’ದಲ್ಲಿ ನೋಂದಣಿಯಾಗಿ, ‘ಕುಟುಂಬ ಗುರುತಿನ ಸಂಖ್ಯೆ’ ಹೊಂದುವುದು ಐಚ್ಛಿಕವಾಗಿರುತ್ತದೆ (Optional). ಒಂದು ವೇಳೆ ಐಡಿ ಇಲ್ಲದಿದ್ದರೆ, ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಹೊಸದಾಗಿ ರಿಜಿಸ್ಟರ್ ಆಗಬಹುದು.
  • UUCMS ಲಿಂಕ್ ಕಡ್ಡಾಯ: ವಿದ್ಯಾರ್ಥಿಯು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಳಿಸಲು, 2025-26ನೇ ಸಾಲಿನ ಶೈಕ್ಷಣಿಕ ಮಾಹಿತಿಯು ಯುಯುಸಿಎಂಎಸ್ (UUCMS) ತಂತ್ರಾಂಶದಲ್ಲಿ ಲಭ್ಯವಿರಬೇಕು ಅಥವಾ ವಿಶ್ವವಿದ್ಯಾಲಯ/ಬೋರ್ಡ್ ಆ ಮಾಹಿತಿಯನ್ನು UNIDATA ಸರ್ವರ್‌ಗೆ ರವಾನಿಸುವುದು ಕಡ್ಡಾಯ.
  • ಹಾಸ್ಟೆಲ್ ವಿದ್ಯಾರ್ಥಿಗಳಿಗೆ: ಹಾಸ್ಟೆಲರ್ (Hosteller) ಎಂದು ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ವಸತಿನಿಲಯ ದಾಖಲಾತಿ ಮಾಹಿತಿಯು, ರಾಜ್ಯ ವಸತಿನಿಲಯ ತಂತ್ರಾಂಶ (SHP) ಅಥವಾ ಎಸ್‌ಎಸ್‌ಪಿ – ಹೆಚ್.ಎಂ.ಐ.ಎಸ್ (SSP – HMIS) ತಂತ್ರಾಂಶದಲ್ಲಿ ಲಭ್ಯವಿರಬೇಕು.

5. ಎಸ್‌ಎಸ್‌ಪಿ ಪೋರ್ಟಲ್‌ನಲ್ಲಿರುವ 15 ಪ್ರಮುಖ ಇಲಾಖೆಗಳು (Departments List)

ಕರ್ನಾಟಕ ಸರ್ಕಾರದ ಈ ಕೆಳಗಿನ 15 ಇಲಾಖೆಗಳು ಎಸ್‌ಎಸ್‌ಪಿ ಮೂಲಕ ಸ್ಕಾಲರ್‌ಶಿಪ್ ನೀಡುತ್ತವೆ:

  1. ಸಮಾಜ ಕಲ್ಯಾಣ ಇಲಾಖೆ (Social Welfare)
  2. ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ (Tribal Welfare)
  3. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ (BCWD)
  4. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ (Minority Welfare)
  5. ತಾಂತ್ರಿಕ ಶಿಕ್ಷಣ ಇಲಾಖೆ
  6. ವೈದ್ಯಕೀಯ ಶಿಕ್ಷಣ ಇಲಾಖೆ
  7. ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ
  8. ಆಯುಷ್‌ ಇಲಾಖೆ
  9. ವಿಕಲಚೇತನರ ಕಲ್ಯಾಣ ಇಲಾಖೆ
  10. ಕಾಲೇಜು ಶಿಕ್ಷಣ ಇಲಾಖೆ
  11. ಕಾರ್ಮಿಕ ಇಲಾಖೆ
  12. ಕೃಷಿ ಇಲಾಖೆ
  13. ಜವಳಿ ಮತ್ತು ಕೈಮಗ್ಗ ಇಲಾಖೆ
  14. ಸಾರಿಗೆ ಇಲಾಖೆ
  15. ಮೀನುಗಾರಿಕೆ ಇಲಾಖೆ

ಕರ್ನಾಟಕ SSPವಿದ್ಯಾರ್ಥಿವೇತನ ಪ್ರಕ್ರಿಯೆಯು ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ಇರಲಿದ್ದು. ಈ ಕೆಳಗಿನ ಹಂತಗಳನ್ನು ಅನುಸರಿಸಿ

ಹಂತ1: ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್ ssp.karnataka.gov.in ಗೆ ಭೇಟಿ ನೀಡಿ.

ಹಂತ 2: ಹೋಂ ಪೇಜ್ ನಲ್ಲಿ ಲಭ್ಯವಿರುವ ಖಾತೆಯನ್ನು ರಚಿಸುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಹಂತ 3:ನಿಮ್ಮ ಆಧಾರ್ ಸಂಖ್ಯೆ ಮತ್ತು ನಿಮ್ಮ ಹೆಸರು ಆಧಾರ್ ನಲ್ಲಿರುವಂತೆ ಇಲ್ಲಿ ನಮೂದಿಸಿ, ಲಿಂಗವನ್ನು ಆಯ್ಕೆ ಮಾಡಿ, ಕ್ಯಾಪ್ಚಾ ಕೊಡನ್ನು ನಮೂದಿಸಿ ಅರ್ಜಿಯನ್ನು ಮುಂದುವರಿಸಿ

ಹಂತ 5: ನಿಮ್ಮ ಪಾಲಕ ಅಥವಾ ಪೋಷಕರ ಆಧಾರ್ ಸಂಖ್ಯೆಯನ್ನು ನಮೂದಿಸಿ ಮೊಬೈಲ್ ನಂಬರನ್ನು ಭರ್ತಿ ಮಾಡಿ ಮತ್ತು ಸಬ್‌ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ. ನಂತರ ನೀವು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಪಡೆಯುತ್ತೀರಿ.

ಹಂತ 6: ನಂತರ ಅರ್ಜಿದಾರರು ಬಳಕೆದಾರ ID ಮತ್ತು ಪಾಸ್‌ವರ್ಡ್ ಅನ್ನು ಪಡೆಯುತ್ತೀರಿ. ಅದನ್ನು ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ.

ಈ ಎಸ್ ಎಸ್ ಪಿ ವಿದ್ಯಾಭ್ಯಾಸನಕ್ಕೆ ಅರ್ಜಿ ಸಲ್ಲಿಸುವುದರಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಇದರಿಂದ ತುಂಬಾ ಅನುಕೂಲವಾಗಲಿದೆ. ಇದಲ್ಲದೆ ಪೋಷಕರಿಗೂ ಕೂಡ ವಿದ್ಯಾರ್ಥಿಗಳಿಗೆ ಹಣವನ್ನು ಕೊಡುವ ಸಮಸ್ಯೆ ಇರುವುದಿಲ್ಲ. ಹಾಗಾಗಿ ತುಂಬಾ ಅನುಕೂಲವಿರುವಂತಹ ಈ ಲೇಖನವನ್ನು ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೂ ಹಾಗೂ ಪೋಷಕರಿಗೂ ಶೇರ್ ಮಾಡಿ.

ಸಹಾಯವಾಣಿ (Helpline Numbers)

ಅರ್ಜಿ ಸಲ್ಲಿಸುವಾಗ ತಾಂತ್ರಿಕ ತೊಂದರೆಗಳು ಎದುರಾದರೆ ಅಥವಾ ಇಲಾಖಾವಾರು ಮಾಹಿತಿ ಬೇಕಾದರೆ ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬಹುದು:

  • SSP ಸಹಾಯವಾಣಿ (State Scholarship Portal Helpline): 1902
  • ಸಮಾಜ ಕಲ್ಯಾಣ ಇಲಾಖೆ: 9482300400 / ([email protected])
  • ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ: 080 22261789 / 080 22261702 / ವಾಟ್ಸಾಪ್: 9036267776
  • ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ: 8277799990
  • ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ: 8050770004
  • ಕೃಷಿ ಇಲಾಖೆ: 1800-425-3553
  • ಕುಟುಂಬ ತಂತ್ರಾಂಶ (Kutumba ID): 080-22371030 / ([email protected])

ಸೂಚನೆ: ಎಸ್‌ಎಸ್‌ಪಿ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ವಿದ್ಯಾರ್ಥಿಗಳು ತಕ್ಷಣವೇ ತಮ್ಮ ದಾಖಲೆಗಳನ್ನು ಸಿದ್ಧಪಡಿಸಿಕೊಂಡು, ಎಸ್‌ಎಸ್‌ಪಿ (SSP) ಪೋರ್ಟಲ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.

ವರದಿ: ಕೃಷ್ಣಸಾಗರಿ – ನೀಡ್ಸ್ ಆಫ್ ಪಬ್ಲಿಕ್, ದಾವಣಗೆರೆ

ಈ ಮಾಹಿತಿಗಳನ್ನು ಓದಿ:

WhatsApp Group Join Now
Telegram Group Join Now

39 responses to “SSP ವಿದ್ಯಾರ್ಥಿವೇತನಕ್ಕೆ ಅರ್ಜಿ ಪ್ರಾರಂಭ, SSP Scholarships 2026-27 Apply Online @ssp.karnataka.gov.in”

  1. Sushma M R Avatar
    Sushma M R

    Email

  2. Gowthami.M Avatar
    Gowthami.M

    Apply the ssp scholarship

    1. Rajeshwari Avatar
      Rajeshwari

      Ssp vidyasiri scholarship

  3. Hemanth Kumar Avatar
    Hemanth Kumar

    SSLC

  4. Sujata Avatar
    Sujata

    Wonderful

  5. Madevi Madevi Avatar
    Madevi Madevi

    AR jun

  6. Yamuna Avatar
    Yamuna

    Yamuna
    21 jun 2026

  7. Wilfred Tellis Avatar
    Wilfred Tellis

    Excellent

  8. ಧನಲಕ್ಷ್ಮೀ ಎಸ್ ವಿ Avatar
    ಧನಲಕ್ಷ್ಮೀ ಎಸ್ ವಿ

    ನಮಗೆ ಶಿಕ್ಷಣ ಪಡೆಯಲು ತುಂಬಾ ಮುಖ್ಯ ವಾಗಿ ಸಹಾಯ ಕರ ವಾಗಿದೆ

  9. Sharanya Avatar
    Sharanya

    Ssp Vidyasiri scholarship

  10. Mithesh Avatar
    Mithesh

    I need scholarship
    For my studies

  11. Dhrshan Avatar
    Dhrshan

    Hello

  12. Sanchu Avatar
    Sanchu

    “I need help regarding scholarship.”

  13. Sanchu Avatar
    Sanchu

    Kindly respond

  14. Raksha. M. S Avatar
    Raksha. M. S

    Please you say where is apply now option i didn’t notice it

  15. Manjunath Bhagoji Avatar
    Manjunath Bhagoji

    I need help regarding scholarship

Leave a Reply

Your email address will not be published. Required fields are marked *


Popular Categories