Home » ಉದ್ಯೋಗ » SSLC ಆದವರಿಗೆ ಕೇಂದ್ರದಿಂದ 11409 ಹುದ್ದೆಗಳ ಬೃಹತ್ ನೇಮಕಾತಿ 2023 : SSC Recruitment 2023

SSLC ಆದವರಿಗೆ ಕೇಂದ್ರದಿಂದ 11409 ಹುದ್ದೆಗಳ ಬೃಹತ್ ನೇಮಕಾತಿ 2023 : SSC Recruitment 2023

ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗ (SSC) ನೇಮಕಾತಿಯ  ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಎಂಬುವುದರ ಮಾಹಿತಿಯನ್ನು ತಿಳಿಸಿಕೊಡಲಾಗುತ್ತದೆ. ಸಿಬ್ಬಂದಿ ನೇಮಕಾತಿ ಆಯೋಗದಿಂದ ಬೃಹತ್ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ,11,409 ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ. ಇದೇ ರೀತಿಯ ಎಲ್ಲಾ  ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. 

SSC MTS ನೇಮಕಾತಿ 2023:

ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಮಲ್ಟಿ ಟಾಸ್ಕಿಂಗ್ ಸ್ಟಾಫ್ ಮತ್ತು ಹವಾಲ್ದಾರ್ ನೇಮಕಾತಿ ಪರೀಕ್ಷೆಗೆ ಅಧಿಸೂಚನೆಯನ್ನು ಪ್ರಕಟಿಸಿದೆ.ಎಸ್‌ಎಸ್‌ಎಲ್‌ಸಿ ಪಾಸಾದ ಅಭ್ಯರ್ಥಿಗಳಿಗೆ ಕೇಂದ್ರ ಸರಕಾರದ ಉದ್ಯೋಗ ಪಡೆಯುವ ಸುವರ್ಣಾವಕಾಶ ಒದಗಿ ಬಂದಿದೆ. ಕೇದ್ರ ಸಿಬ್ಬಂದಿ ನೇಮಕಾತಿ ಆಯೋಗವು (ಎಸ್‌ಎಸ್‌ಸಿ) ಕೇಂದ್ರದ ವಿವಿಧ ಸಚಿವಾಲಯ, ಇಲಾಖೆ ಮತ್ತು ಸಂಸ್ಥೆಗಳಲ್ಲಿ ಖಾಲಿ ಇರುವ ಸಿ ಗ್ರೂಪ್‌ನ ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS) ಮತ್ತು ಹವಾಲ್ದಾರ್ ಹುದ್ದೆಗಳ ಬೃಹತ್ ನೇಮಕಕ್ಕೆ ಅರ್ಜಿ ಆಹ್ವಾನಿಸಿದೆ.

ಇದನ್ನೂ ಓದಿ: ಕಾರ್ಮಿಕ ಸಚಿವಾಲಯ ಮತ್ತು ಉದ್ಯೋಗ ನೇಮಕಾತಿ 2023

ಹುದ್ದೆಗಳ ವಿವರ:

ಒಟ್ಟು ಪೋಸ್ಟ್‌ಗಳು – 11,000
MTS – 10,880 ಪೋಸ್ಟ್‌ಗಳು
ಹವಾಲ್ದಾರ್ – 529 ಪೋಸ್ಟ್‌ಗಳು

ಸಂಬಳ ಎಷ್ಟು?

ಸಿಬ್ಬಂದಿ ಆಯ್ಕೆ ಆಯೋಗ (SSC) ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ 7ನೇ ವೇತನ ಆಯೋಗದ ಪೇ ಮ್ಯಾಟ್ರಿಕ್ಸ್ ಪ್ರಕಾರ ಸಂಬಳ ನಿಗದಿಪಡಿಸಲಾಗಿದೆ.

ಶೈಕ್ಷಣಿಕ ವಿದ್ಯಾರ್ಹತೆ :

ಸಿಬ್ಬಂದಿ ನೇಮಕಾತಿ ಆಯೋಗ ನೇಮಕಾತಿ ಅಧಿಕೃತ ಅಧಿಸೂಚನೆಗಳ ಪ್ರಕಾರ ಅಭ್ಯರ್ಥಿಯು ಮಾನ್ಯತೆ ಪಡೆದ ಮಂಡಳಿಗಳಿಂದ 10ನೇ, 12ನೇ,ಡಿಪ್ಲೋಮ, ಪದವಿ ಅಥವಾ ತತ್ಸಮಾನ ಪಾಸ್ ಆಗಿರಬೇಕು.. ಹವಾಲ್ದಾರ್ ಹುದ್ದೆಗೆ ಅರ್ಜಿ ಸಲ್ಲಿಸುವ ಪುರಷ ಅಭ್ಯರ್ಥಿಗಳು 157.5 ಸೆಂ.ಮೀ. ಎತ್ತರವಿರಬೇಕು. ಎದೆಯ ಸುತ್ತಳತೆಯು 81 ಸೆಂ.ಮೀ ಇರಬೇಕು. ಮಹಿಳಾ ಅಭ್ಯರ್ಥಿಗಳು 152 ಸೆಂ.ಮೀ ಎತ್ತರವಿರಬೇಕು. 48 ಕೆಜಿ ತೂಕವಿರಬೇಕು.

ವಯಸ್ಸಿನ ಮಿತಿ

ಕಂದಾಯ ಇಲಾಖೆಯಲ್ಲಿ (CBN) MTS ಮತ್ತು ಹವಾಲ್ದಾರ್ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು, ಅವರ ವಯಸ್ಸಿನ ಮಿತಿ 18 ವರ್ಷದಿಂದ 25 ವರ್ಷಗಳು, ಹಾಗೆಯೇ ಕಂದಾಯ ಇಲಾಖೆ (ಸಿಬಿಐಸಿಯಲ್ಲಿ ಹವಾಲ್ದಾರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು) 18 ವರ್ಷದಿಂದ 27 ವರ್ಷ ವಯಸ್ಸಿನ ಮಿತಿಯನ್ನು ಹೊಂದಿರಬೇಕು. ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆಯನ್ನು ನೀಡಲಾಗುವುದು.

ಇದನ್ನೂ ಓದಿ: ಬ್ಯಾಂಕ್ ಆಫ್ ಬರೋಡ ನೇಮಕಾತಿ 2023 : ಅರ್ಜಿ ಸಲ್ಲಿಸುವ ವಿಧಾನ

ವಯೋಮಿತಿ ಸಡಿಲಿಕೆ

  1. ಒಬಿಸಿ ಅಭ್ಯರ್ಥಿಗಳಿಗೆ : 03 ವರ್ಷಗಳು
  2. ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ : 05 ವರ್ಷಗಳು
  3. ಅಂಗವಿಕಲ (ಸಾಮಾನ್ಯ) ಅಭ್ಯರ್ಥಿಗಳಿಗೆ : 10 ವರ್ಷಗಳು
  4. ಅಂಗವಿಕಲ (ಒಬಿಸಿ) ಅಭ್ಯರ್ಥಿಗಳಿಗೆ : 13 ವರ್ಷಗಳು
  5. ಅಂಗವಿಕಲ (ಎಸ್ಸಿ/ಎಸ್ಟಿ) ಅಭ್ಯರ್ಥಿಗಳಿಗೆ : 15 ವರ್ಷಗಳು

ಅರ್ಜಿ ಶುಲ್ಕ:

ಎಲ್ಲಾ ಇತರ ಅಭ್ಯರ್ಥಿಗಳಿಗೆ : ರೂ.100/-
ಎಸ್ಸಿ/ಎಸ್ಟಿ /ಅಂಗವಿಕಲ /ಮಾಜಿ ಸೈನಿಕರು & ಮಹಿಳಾ ಅಭ್ಯರ್ಥಿಗಳಿಗೆ : ಇಲ್ಲ
ಪಾವತಿ ವಿಧಾನ: ಆನ್‌ಲೈನ್ / ಚಲನ್ ಮೋಡ್

ನೇಮಕ ಹೇಗೆ?

ಮೊದಲಿಗೆ ಕಂಪ್ಯೂಟರ್ ಆಧಾರಿತ ಎರಡು ಹಂತದ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ, ಅಗತ್ಯವಿದ್ದರೆ ದೈಹಿಕ ಪರೀಕ್ಷೆ ನಡೆಸಲಾಗುತ್ತದೆ. ಅಗತ್ಯವಿಲ್ಲದ ಹುದ್ದೆಗಳಿಗೆ ನೇರವಾಗಿ ದಾಖಲೆ ಪರಿಶೀಲನೆ ನಡೆಸಿ ನೇಮಕ ಮಾಡಿಕೊಳ್ಳಲಾಗುತ್ತದೆ. ಪರೀಕ್ಷೆಗಳು ಹೇಗಿರುತ್ತವೆ, ಯಾವೆಲ್ಲಾ ವಿಷಯಗಳನ್ನು ಒಳಗೊಂಡಿರುತ್ತದೆ ಎಂಬ ಮಾಹಿತಿಯನ್ನು ಅಧಿಸೂಚನೆಯಲ್ಲಿ ನೀಡಲಾಗಿದೆ.

ಇದನ್ನೂ ಓದಿ: ಉಚಿತ ಜೆಸಿಬಿ ಆಪರೇಟರ್ ತರಬೇತಿಗೆ ಅರ್ಜಿ ಅಹ್ವಾನ – ಊಟ & ವಸತಿ ಸಂಪೂರ್ಣ ಉಚಿತ

ಕನ್ನಡದಲ್ಲಿ ಪರೀಕ್ಷೆ ನಡೆಯಲಿದೆ 

ಕೇಂದ್ರ ಸಿಬ್ಬಂದಿ ಆಯ್ಕೆ ಆಯೋಗ (ಎಸ್‌ಎಸ್‌ಸಿ) ಈ ಬಾರಿ ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳ ನೇಮಕಾತಿಗೆ ಕನ್ನಡದಲ್ಲೂ ಪರೀಕ್ಷೆ ಬರೆಯಲು ಅವಕಾಶ ನೀಡಿದೆ. ಕನ್ನಡ ಸೇರಿ ದೇಶದ 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಬಹುದು ಎಂದು ಅಧಿಸೂಚನೆಯಲ್ಲಿ ಘೋಷಿಸಿದೆ. ಈ ಮೊದಲು ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಮಾತ್ರ ಪರೀಕ್ಷೆ ಬರೆಯಬೇಕಿತ್ತು. ಕನ್ನಡದಲ್ಲಿ ಟಿಪ್ಪಣಿಯೊಂದನ್ನು (ಪತ್ರ ಲೇಖನ) ಬರೆಯುವ ಅವಕಾಶವಿತ್ತು. ಆದರೆ, ಇದು ಅರ್ಹತಾದಾಯಕ ಪತ್ರಿಕೆಯಾಗಿದ್ದು, ಇದರ ಅಂಕಗಳನ್ನು ನೇಮಕಕ್ಕೆ ಪರಿಗಣಿಸುತ್ತಿರಲಿಲ್ಲ. ಈಗ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನೇ ಕನ್ನಡದಲ್ಲಿ ಬರೆಯಬಹುದು. ಇದರೊಂದಿಗೆ ಅಸ್ಸಾಮಿ, ಬೆಂಗಾಳಿ, ಗುಜರಾತಿ, ಕೊಂಕಣಿ, ಮಲಯಾಳಂ, ಮಣಿಪುರಿ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು, ಉರ್ದು ಭಾಷೆಗಳನ್ನು ಪರೀಕ್ಷೆಗೆ ಪರಿಗಣಿಸಲಾಗಿದೆ.

ರಾಜ್ಯದಲ್ಲಿನ ಪರೀಕ್ಷಾ ಕೇಂದ್ರಗಳು

ಈ ನೇಮಕಾತಿಯಲ್ಲಿ ನಡೆಸಲಾಗುವ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು (Computer Based Examination) ಇದೇ ಮೊದಲ ಬಾರಿಗೆ ಕನ್ನಡಲ್ಲೂ ಬರೆಯಬಹುದಾಗಿದೆ ಎಂದು ಎಸ್‌ಎಸ್‌ಸಿಯು ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ತಿಳಿಸಿದೆ. ರಾಜ್ಯದ ಅಭ್ಯರ್ಥಿಗಳು ಕನ್ನಡ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಲು 08 ಕೋಡ್ ಬಳಸಬಹುದು. ರಾಜ್ಯದ ಒಟ್ಟು 08 ಜಿಲ್ಲಾ ಕೇಂದ್ರಗಳಲ್ಲಿ ಈ ಪರೀಕ್ಷೆ ನಡೆಸಲಾಗುತ್ತದೆ. ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿ ಪರೀಕ್ಷಾ ಕೇಂದ್ರಗಳು ಇರಲಿದೆ.

ಇದನ್ನೂ ಓದಿ: ಕಾರ್ಮಿಕ ಉದ್ಯೋಗ ಸಚಿವಾಲಯದಲ್ಲಿ ಯುವ ವೃತ್ತಿಪರ ಹುದ್ದೆ

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 18 ಜನವರಿ 2023 ರಿಂದ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 17 ಫೆಬ್ರವರಿ 2023

ನೇಮಕಾತಿ ಕುರಿತ ಸಂಪೂರ್ಣ ವಿವರವುಳ್ಳ ಅಧಿಸೂಚನೆ (Notification) ಓದಲು ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸುವುದು ಹೇಗೆ?

ಹಂತ 1: ಮೊದಲು, ಸಂಪೂರ್ಣ SSC ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ!
ಹಂತ 2: ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ : https://ssc.nic.in/
ಹಂತ 3: SSC ನೇಮಕಾತಿ ಬಟನ್ ಮೇಲೆ ಕ್ಲಿಕ್ ಮಾಡಿ
ಹಂತ 4: ಲಾಗ್-ಇನ್/ಹೊಸ ನೋಂದಣಿ ಆಯ್ಕೆಮಾಡಿ (ಇದು SSC ಖಾಲಿ ಹುದ್ದೆಗೆ ನಿಮ್ಮ ಮೊದಲ           ಪ್ರಯತ್ನವಾಗಿದ್ದರೆ)
ಹಂತ 5:  SSC ಉದ್ಯೋಗ ನಮೂನೆಯಲ್ಲಿ ಆಕಾಂಕ್ಷಿಗಳು ತಮ್ಮ ಮೂಲ ದಾಖಲೆಗಳಿಗೆ ಹೊಂದಿಕೆಯಾಗುವ ವಿವರಗಳನ್ನು ಭರ್ತಿ ಮಾಡಬೇಕು
ಹಂತ 6: ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಸಹಿಯನ್ನು ಅಪ್‌ಲೋಡ್ ಮಾಡಿ
ಹಂತ 7: ಅನ್ವಯಿಸಿದರೆ ಅಧಿಕೃತ ಶುಲ್ಕವನ್ನು ಪಾವತಿಸಿ ಸಲ್ಲಿಸು ಕ್ಲಿಕ್ ಮಾಡಿ
ಹಂತ 8:  ಭವಿಷ್ಯದ ಉಲ್ಲೇಖಕ್ಕಾಗಿ ಅಧಿಕೃತ ಅಧಿಸೂಚನೆಯ ಪ್ರಿಂಟ್ ಔಟ್ ತೆಗೆದುಕೊಳ್ಳುವುದು ಸೂಕ್ತ

ಓದು ಮುಗಿದ ನಂತರ ನೀವೇನಾದರೂ ಭಾರತ ಸರ್ಕಾರದ ಅಡಿಯಲ್ಲಿ ಹುದ್ದೆಯನ್ನು ಮಾಡಬೇಕೆಂದು ಇಚ್ಚಿಸಿದ್ದಲ್ಲಿ ಇದು ಒಂದು ಉತ್ತಮ ಆಯ್ಕೆಯಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಆನ್ಲೈನ್ ಮುಖಾಂತರ ಅರ್ಜಿಯನ್ನು, ಮೇಲಿನ ವಿವರಗಳನ್ನು ಓದಿಕೊಂಡು ಸಲ್ಲಿಸಬಹುದಾಗಿದೆ. ಇಂತಹ ಉತ್ತಮವಾದ ಉದಯ ಮಾಹಿತಿ ಹೊಂದಿರುವ ಈ ಲೇಖನವನ್ನು ಈ ಕೊಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೂ ಹಾಗೂ ಬಂಧುಗಳಿಗೂ ಶೇರ್ ಮಾಡಿ, ಧನ್ಯವಾದಗಳು.

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ವಿದ್ಯಾರ್ಥಿಗಳಿಗೆ ಲಭ್ಯವಿರುವ ಸ್ಕಾಲರ್ಶಿಪ್ ಗಳ ಮಾಹಿತಿ

  1. SSP ಸ್ಕಾಲರ್ಶಿಪ್ : Click Here
  2. ಧರ್ಮಸ್ಥಳ ಸುಜ್ಞಾನನಿಧಿ ಸ್ಕಾಲರ್ಶಿಪ್: Click Here
  3. ರೈತ ವಿದ್ಯಾನಿಧಿ ಸ್ಕಾಲರ್ಶಿಪ್: Click Here
  4. ಕೇಂದ್ರ ಸರ್ಕಾರದ ಲೇಬರ್ ಕಾರ್ಡ್ ಸ್ಕಾಲರ್ಶಿಪ್: Click Here
  5. ಎಚ್‌ಡಿಎಫ್‍ಸಿ ಬಡ್ತೆ ಕದಂ: Click Here
  6. ಹೊಸ ಕೈಂಡ್ ಸ್ಕಾಲರ್ಶಿಪ್ ಕೋಟಕ್ ಕನ್ಯಾ ಸ್ಕಾಲರ್ಶಿಪ್: Click Here
  7. ವಿದ್ಯಾಸಿರಿ ಸ್ಕಾಲರ್ಶಿಪ್: Click Here
  8. ಕ್ರೆಡಿಟ್ ಸ್ವಿಸ್ ಸ್ಕಾಲರ್ಶಿಪ್ 2022 : Click Here
  9. ಲದೂಮಾ ದಮೇಚ ಯುವಾ ಸ್ಕಾಲರ್ಶಿಪ್ 2022 : Click Here
  10. ಫೆಡರಲ್ ಬ್ಯಾಂಕ್ ಸ್ಕಾಲರ್ಶಿಪ್ 2022: Click Here
  11. ಕೋಲ್ಗೇಟ್ ಸ್ಕಾಲರ್ಶಿಪ್ 2022-23: Click Here
  12. ಜಿಂದಾಲ್ ಸ್ಕಾಲರ್ಶಿಪ್ 2022: Click Here
  13. SSP ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ: Click Here

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

ಆಧಾರ್ ನಂಬರ್ ‌ ಅಥವಾ ರೇಷನ್ ಕಾರ್ಡ್ ನಂಬರ್ ಹಾಕಿ ನಿಮ್ಮ ಬೆಳೆ ಸಾಲ ಮನ್ನಾ ಮಾಹಿತಿ ಚೆಕ್ ಮಾಡಿ

ರೇಷನ್ ಕಾರ್ಡ್ ಅಥವಾ ಆಧಾರ್ ನಂಬರ್ ಹಾಕಿ ನಿಮ್ಮ ಬೆಳೆ ಸಾಲ ಮನ್ನದ ಪಟ್ಟಿಯಲ್ಲಿರುವ ಹೆಸರನ್ನು ಹೇಗೆ ಚೆಕ್ ಮಾಡಿಕೊಳ್ಳುವುದು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗುವುದು. ಹೌದು ಇದು ಒಂದು ಕನ್ನಡದ ಜನತೆಗೆ ಸಿಹಿ ಸುದ್ದಿಯಾಗಿದೆ.
ಸ್ಟೋರ್ ರೈತರು ತಮ್ಮ ಬೆಳೆಯನ್ನು ಹಾನಿ ಮಾಡಿಕೊಂಡು ಅಗಾಧದಲ್ಲಿದ್ದಾರೆ, ಇದಕ್ಕಾಗಿ ರಾಜ್ಯ ಸರ್ಕಾರವು
ಒಂದು ಉತ್ತಮವಾದ ನಿರ್ಧಾರವನ್ನು ತೆಗೆದುಕೊಂಡಿದೆ ಅದೇನೆಂದರೆ ಬೆಳೆ ಸಾಲವನ್ನು ಮನ್ನಾ ಮಾಡುವುದು.
ಅದರ ಜೊತೆಗೆ ಬೆಳೆ ಸಾಲವನ್ನು ಮನ್ನಾ ಮಾಡಿರುವ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದೆ, ಇದು 2018ರ
ಬೆಳೆ ಸಾಲದ ಮನ್ನಾದ ಪಟ್ಟಿಯಾಗಿದೆ.

ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ : https://www.needsofpublic.in/crop-loan-waiver-kannada/

ನಿಮ್ಮ ಜಾಗ ಹೊಲ ಗದ್ದೆಗಳ ಸಂಪೂರ್ಣ ಸರ್ವೇ ಸ್ಕೆಚ್ಚ್ ನಿಮ್ಮ ಪೋನಲ್ಲೆ ಉಚಿತವಾಗಿ ಪಡೆಯಿರಿ

ನಾವು ಭೂಮಿಯ ನಕ್ಷೆ, ಸರ್ವೆ ನಂಬರ್, ಭೂಮಿ ಒತ್ತುವರಿ ಆಗಿದ್ದನ್ನು ನೋಡಲು ದಿಶಾಂಕ್ ಆಪ್ ಅನ್ನು ಬಳಸಿಕೊಂಡು ಹೇಗೆ ಇವುಗಳನ್ನು ತಮ್ಮ ಫೋನ್ಗಳಲ್ಲಿ ಅಥವಾ ಕಂಪ್ಯೂಟರ್ಗಳಲ್ಲಿ  ನೋಡಿಕೊಳ್ಳುವುದು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಾಗುವುದು. ಹೌದು ಇದು ರೈತರಿಗೆ ಒಂದು ಸಂತಹಸದ ಸುದ್ದಿ ಅಂತನೇ ಹೇಳಬಹುದು, ಏಕೆಂದರೆ ಮೊದಲೆಲ್ಲಾ ಸರ್ವೆ ನಂಬರನ್ನು ತಿಳಿದುಕೊಳ್ಳಲು ಅಥವಾ ಒತ್ತುವರಿ  ಜಾಗದ ಬಗ್ಗೆ ವಿಚಾರಿಸಲು ಸರ್ವೇಯರ್ ನನ್ನು ಕರೆಯಬೇಕಾಗಿತ್ತು. ಆದರೆ ಇನ್ನು ಮುಂದೆ ಅಂತ ತಲೆಬಿಸಿ ಕೆಲಸ ಇಲ್ಲ. ನೀವು ಈ ಎಲ್ಲಾ ವಿಷಯಗಳ ಬಗ್ಗೆ ಕೂತಲ್ಲಿಯೇ ತಮ್ಮ ಮೊಬೈಲ್ಗಳಲ್ಲಿ ಅಥವಾ ಕಂಪ್ಯೂಟರ್ಗಳಲ್ಲಿ ದಿಶಾಂಕ್ ಆಪ್ (Dishank app)ಇಂದ ತಿಳಿದುಕೊಳ್ಳಬಹುದು. ಇದರಿಂದಾಗಿ ನೀವು ತುಂಬಾ ಸಮಯವನ್ನು ಒಳಿತು ಮಾಡಬಹುದು ಅದಲ್ಲದೆ ಕಚೇರಿಗಳಿಗೆ, ಆಫೀಸ್ ಗಳಿಗೆ ಅಲೆದಾಡುವ ಸಂದರ್ಭ ಬರುವುದಿಲ್ಲ.

ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: https://www.needsofpublic.in/dishank-app-kannada/

ನಿಮ್ಮ ಜಮೀನಿನ ಪಹಣಿ (ಆರ್ ಟಿ ಸಿ ಉತಾರ) ಮತ್ತು ವರ್ಗಾವಣೆ ಸ್ಥಿತಿ ಮೊಬೈಲ್ ನಲ್ಲೇ ಚೆಕ್ ಮಾಡಿ

ನಿಮ್ಮ ಜಮೀನಿನ ಪಹಣಿ ಯಾವ ವರ್ಷದಿಂದ ತಮ್ಮ ತಮ್ಮ ಹೆಸರಿಗೆ ವರ್ಗಾವಣೆಯಾಗಿದೆ , ಮತ್ತು ನಿಮ್ಮ ಜಮೀನಿನ ಪಹಣಿ ಅಥವಾ ಆರ್ ಟಿ ಸಿ ಉತಾರವನ್ನ ಹೇಗೆ ನೋಡುವುದು ಎಂಬುದನ್ನು ಮೊಬೈಲ್ ನಲ್ಲಿ ಚೆಕ್ ಮಾಡುವ ವಿಧಾನದ ಬಗ್ಗೆ ಸಂಪೂರ್ಣವಾಗಿ ಮಾಹಿತಿ ತಿಳಿಸಲಾಗುವುದು. ಇದು ರೈತರಿಗೆ ಒಂದು ಸಂತಸದ ವಿಷಯ ಎಂದು ತಿಳಿಸಬಹುದಾಗಿದೆ. ಏಕೆಂದರೆ ರೈತರು ಕಚೇರಿಗೆ ತೆರಳಿ ತಮ್ಮ ಪಹಣಿಯು ಯಾವ ವರ್ಷವದಿಂದ ತಮಗೆ ವರ್ಗಾವಣೆಯಾಗಿದೆ ಎಂಬುವುದರ ಮಾಹಿತಿಯನ್ನು ತಿಳಿದುಕೊಳ್ಳುವ ಅವಶ್ಯಕತೆ ಇಲ್ಲ, ಏಕೆಂದರೆ ಅವರು ಕೂತಲಿಯೇ ಮೊಬೈಲ್ ಮೂಲಕ ತಮ್ಮ ಪಹಣಿ ಯಾವ ವರ್ಷದಿಂದ ತಮಗೆ ವರ್ಗಾವಣೆ ಆಗಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.

ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: https://www.needsofpublic.in/view-rtc-in-mobile-phone/

ಇದನ್ನೂ ಓದಿ:

25 ಲಕ್ಷದವರೆಗೆ ಸಾಲ ಸೌಲಭ್ಯ 35% ಸಬ್ಸಿಡಿ ಸಿಗುತ್ತೆ : PMEGP Loan Scheme 2022, ಅರ್ಜಿ ಸಲ್ಲಿಸುವುದು ಹೇಗೆ ?

ಖಾಲಿ ಜಾಗ, ಗುಡಿಸಲು, ಹಳೆ ಮನೆ ಇದ್ದವರಿಗೆ ಉಚಿತ ಮನೆ ಕಟ್ಟಿಸಲು ಅವಕಾಶ : ಬಸವ ವಸತಿ ಯೋಜನೆ 2022

ಗೂಗಲ್ ಪೇ ಲೋನ್ : ಗೂಗಲ್ ಪೇ ನಲ್ಲಿ 8 ಲಕ್ಷ ರೂಪಾಯಿ ಸಾಲ ಸೌಲಭ್ಯ : ಈಗಲೇ ಅರ್ಜಿ ಸಲ್ಲಿಸಿ

 

About

Lingaraj Ramapur BCA,MCA, MA(Journalism)

Leave a Reply

Your email address will not be published. Required fields are marked *

error: Content is protected !!