ಬಿಗ್ ಬಾಸ್ ಸೀಸನ್ 10 ( big boss season 10 ) ಶುರುವಾಗಿ ಹಲವು ದಿನಗಳು ಕಳೆಯಿತು. ಹಾಗೆಯೇ ಹಲವಾರು ಪ್ರಕರಣಗಳು ನಡೆದಿವೆ. ಮತ್ತು ಬಿಗ್ ಬಾಸ್ ನ ಪ್ರತಿ ಸೀಸನ್ ನಲ್ಲೂ ಸ್ಪರ್ಧಿಗಳ ನಡುವೆ ಪ್ರೇಮ ಕಥೆ ( Love story ) ಇದ್ದೆ ಇರುತ್ತದೆ. ಹಾಗೆಯೇ ಬಿಗ್ ಬಾಸ್ ಮನೆಗೆ ಬಂದ ನಂತರ ಸ್ಪರ್ಧಿಗಳ ನಡುವೆ ಲವ್ ಕೂಡ ಆಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ನಮ್ರತಾ ಮೇಲೆ ಸ್ನೇಹಿತ್ ಗೆ ಫೀಲಿಂಗ್ಸ್ ಇದೆಯಂತೆ
ಈ ಸೀಸನ್ ಬಿಗ್ ಬಾಸ್ ನಲ್ಲೂ ಹಾಗೆ ಆಗಿದೆ. ಸ್ನೇಹಿತ್ ( Snehith ) ಅವರು ನಮ್ರತಾ ಅವರನ್ನ ಮನಸಾರೆ ಇಷ್ಟ ಪಟ್ಟಿದ್ದಾರೆ. ಈ ಲವ್ ಬರ್ಡ್ಸ್ ಜೋಡಿ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಲೇ ಇರುತ್ತಾರೆ. ಹಾಗೆಯೇ ಇದೀಗ ನಮ್ರತಾ (Namratha Gowda) ಮೇಲೆ ಫೀಲಿಂಗ್ಸ್ ಅನ್ನು ಸ್ನೇಹಿತ್ ವಿನಯ್ ಜೊತೆ ಹಂಚಿಕೊಂಡಿದ್ದಾರೆ. ಅದೇನೆಂದು ತಿಳಿದು ಕೊಳ್ಳೋಣ ಬನ್ನಿ.
ನಮ್ರತಾ ಜೊತೆ ಫ್ರೆಂಡ್‌ಶಿಪ್‌ಗಿಂತ ಜಾಸ್ತಿ ಹಚ್ಚಿಕೊಂಡಿದ್ದೀನಿ. ಇದು ಫ್ರೆಂಡ್ ಶಿಪ್ ಇಲ್ಲ ಲವ್ ನ ಅಂತ ಗೋತಾಗ್ತಿಲ್ಲ ಎಂದು ಸ್ನೇಹಿತ್ (Snehith Gowda) ವಿನಯ್ ಜೊತೆ ಮಾತನಾಡುವಾಗ ಹೇಳಿಕೊಂಡಿದ್ದಾರೆ.
ಬಿಗ್ ಬಾಸ್ ನ ಎಂಟನೇ ವಾರದ ವಿಕೇಂಡ್ ಶೋ ನಲ್ಲಿ ಸ್ನೇಹಿತ್ ಎಲಿಮಿನೇಟ್ ಆಗಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಈ ಸಲ ಸ್ನೇಹಿತ್ ಕ್ಯಾಪ್ಟನ್ ಆಗಿದ್ದರೂ ಕೂಡ ಎಲಿಮಿನೇಷನ್ ( Elimination ) ಆಗುತ್ತಾರಾ ಎಂಬ ಚರ್ಚೆಗಳು ಶೋಷಿಯಲ್ ಮೀಡಿಯಾ ( social Media ) ದಲ್ಲಿ ಓಡಾಡುತ್ತಿದ್ದವು. ಆದರೆ ಈ ವಾರ ಸ್ನೇಹಿತ್ ಎಲಿಮಿನೇಟ್ ಆಗದೆ ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ.

ಇದೀಗ ಅವರ ನಮ್ರತಾ ಬಗ್ಗೆ ಇರುವ ಫಿಲೀಂಗ್ಸ್ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಮಾತನಾಡಿದ್ದಾರೆ. ಆ ಒಂದು ಲವ್ ಫೀಲಿಂಗ್ ಯಾವ ರೀತಿಯದ್ದು ಎಂದು ಸ್ನೇಹಿತ್ ಗೌಡ (Snehit Gowda) ಅವರು ವಿನಯ್ ಗೌಡ ಬಳಿ ವಿವರಿಸಿದ್ದಾರೆ.
ರಾತ್ರಿ ಎಲ್ಲರೂ ಮಲಗಿರುವಾಗ ಸ್ನೇಹಿತ್ ಅವರು ನಮ್ರತಾ ಫೋಟೊ ಪಕ್ಕ ತಮ್ಮ ಫೋಟೊವನ್ನು ಇಟ್ಟು ವಿನಯ್ ಅವರ ಬಳಿ ನಮ್ರತಾ ಮೇಲೆ ಇರುವ ಫೀಲಿಂಗ್ ಹೇಳಿಕೊಂಡರು. ‘ನನಗೆ ಹುಡುಗಿಯರು ಇಷ್ಟ ಆಗಿದ್ದು ಬಹಳ ಕಡಿಮೆ. ಒಬ್ಬಳು ಇಷ್ಟ ಆಗಿದ್ದಳು. ಅವಳು ನನಗೆ ಸಿಗಲಿಲ್ಲ. ಅದಾದ ಬಳಿಕ ನಮ್ರತಾ ಮೇಲೆ ಲವ್ ಫೀಲಿಂಗ್ ಬಂದಿದೆ ಎಂದರು.
ಬಿಗ್ ಬಾಸ್ ಮನೆಗೆ ಬಂದಾಗ ಒಬ್ಬರು ನನಗೆ ಇಷ್ಟೆಲ್ಲ ಇಷ್ಟ ಆಗುತ್ತಾರೆ ಎಂದು ನನಗೂ ನಂಬಿಕೆ ಇರಲಿಲ್ಲ. ಅದನ್ನು ನಂಬೋಕೆ ಆಗುತ್ತಿಲ್ಲ. ಇವರ ಜತೆ ನಾನು ಫ್ರೆಂಡ್ ಗಿಂತಲೂ ಚೂರು ಜಾಸ್ತಿ ಅಟ್ಯಾಚ್ ಆಗಿದ್ದೇನೆ ಎಂಬುದು ನಾನು ಜೈಲಿಗೆ ಹೋದಾಗ ಗೊತ್ತಾಯಿತು. ಆಮೇಲೆ ಒಂದು ಹಂತದ ನಂತರ ಅನಿಸಿತು. ನನಗೆ ಇವರ ಮೇಲೆ ಸ್ಟ್ರಾಂಗ್ ಫೀಲಿಂಗ್ಸ್ ಇದೆ. ಅದಾದ ಬಳಿಕ ಅವರಿಗೆ ನಾನು ಹೇಳಿದೆ. ಅವರ ಜತೆ ನನಗೆ ಮುಂದಿನ ಹತ್ತು ವರ್ಷಗಳು ಕಾಣುತ್ತಿವೆ. ನಮ್ಮ ಅಪ್ಪ-ಅಮ್ಮನ ಜೊತೆ ಅವರು ಕೂಡ ಕಾಣುತ್ತಾರೆ’ ಎಂದು ಸ್ನೇಹಿತ್ ಎಂದೆಲ್ಲ ಹೇಳಿಕೊಂಡಿದ್ದರೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ನಮ್ರತಾಗೆ ಲವ್ ಪ್ರೊಪೋಸ್ (love propose ) ಮಾಡಿದ ಸ್ನೇಹಿತ್ :

ಕಳೆದ ವಾರ ನಮ್ರತಾ ಗೌಡಗೆ ಲವ್ ಪ್ರೊಪೋಸ್ ಮಾಡಿದ್ದರು ಸ್ನೇಹಿತ್. ನಮ್ರತಾ ಗೌಡ ಸಮಯ ಕೊಡಿ ಎಂದು ಹೇಳಿದ್ದರು. ಈ ವಿಚಾರವಾಗಿ ನಮ್ರತಾ ತುಂಬಾ ಕಿರಿಕಿರಿ ಅನುಭವಿಸಿದ್ದರು. ಈ ಮುಂಚೆಯೇ ನಮ್ರತಾ ಅವರು ಸ್ನೇಹಿತ್‌ಗೆ ʻʻಸ್ಮೈಲ್ ಮಾಡ್ಕೊಂಡು ಎಲ್ಲದನ್ನೂ ಚಿಲ್ಲಾಗಿ ತೆಗೆದುಕೊಳ್ಳುತ್ತಿದ್ದೀನಿ ಎಂದ ಮಾತ್ರಕ್ಕೆ ಎಲ್ಲವೂ ಸರಿ ಇದೆ ಎಂದಲ್ಲ. ‘ನಿಮಗೆ ಬೇಕಾದಾಗ ನೀವು ಮಾತು ನಿಲ್ಲಿಸಬಹುದು. ನಿಮಗೆ ಬೇಕಾದ ನೀವು ಬ್ಲೇಮ್ ಮಾಡಬಹುದು. ಮೊದಲ ದಿನದಿಂದಲೂ ಇದನ್ನೂ ಮಾಡುತ್ತಿದ್ದೀರಿ’ ಎಂದು ಬೇಸರ ವ್ಯಕ್ತಪಡಿಸಿದ್ದರು.
ಇದಿಷ್ಟು ಸ್ನೇಹಿತ್ ನಮ್ರತಾ ಮೇಲೆ ಇದ್ದ ಫೀಲಿಂಗ್ಸ್. ಹಾಗೆಯೇ ನಮ್ರತಾ ಕೂಡ ನಾನು ನನ್ನ ಅಮ್ಮನನ್ನು ಬಹಳ ಮಿಸ್ ಮಾಡಿಕೊಳ್ಳುತ್ತ ಇದ್ದೇನೆ. ನನಗೆ ಇದೆಲ್ಲ ಯಾಕೋ ಸರಿ ಅನ್ನಿಸಲ್ಲ. ನಾವು ಇಲ್ಲಿಗೆ ಬಂದ ಕಾರಣ ಬೇರೆಯೇ ಇದೆ. ಕಾರ್ತಿಕ್ ಮತ್ತು ಸಂಗೀತ ತರ ನಾವು ಟಾಕ್ಸಿಕ್ ಆಗೋದು ಬೇಡ ಎಂದು ಸ್ನೇಹಿತ್ ಗೆ ಹೇಳಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group








