Picsart 25 10 10 23 02 46 053 scaled

UPI ಮೂಲಕ ತಪ್ಪಾಗಿ ಹಣ ಕಳುಹಿಸಿದ್ದೀರಾ? ಈ 3 ಹಂತಗಳಲ್ಲಿ ಸುಲಭವಾಗಿ ವಾಪಸ್ ಪಡೆಯಿರಿ!

Categories:
WhatsApp Group Telegram Group

ಡಿಜಿಟಲ್ ಇಂಡಿಯಾದ ಕನಸನ್ನು ಸಾಕಾರಗೊಳಿಸುವಲ್ಲಿ UPI (Unified Payments Interface) ಮಹತ್ವದ ಪಾತ್ರ ವಹಿಸಿದೆ. ಇಂದಿನ ದಿನಗಳಲ್ಲಿ ಚಹಾ ಅಂಗಡಿಗಳಿಂದ ಹಿಡಿದು ಶಾಪಿಂಗ್ ಮಾಲ್‌ಗಳವರೆಗೆ ಎಲ್ಲೆಡೆ UPI ವಹಿವಾಟುಗಳು ಸಾಮಾನ್ಯವಾಗಿದೆ. ಕೇವಲ ಒಂದು ಮೊಬೈಲ್ ಮತ್ತು ಇಂಟರ್ನೆಟ್ ಇದ್ದರೆ ಸಾಕು, ಹಣ ವರ್ಗಾವಣೆ, ಬಿಲ್ ಪಾವತಿ, ಮೊಬೈಲ್ ರೀಚಾರ್ಜ್, ಟಿಕೆಟ್ ಬುಕ್ಕಿಂಗ್ ಎಲ್ಲವೂ ಕ್ಷಣಗಳಲ್ಲಿ ಸಾಧ್ಯವಾಗುತ್ತದೆ. ಆದರೆ ಒಂದು ಸಣ್ಣತಪ್ಪಿನಿಂದ ಬೇರೆಯವರ ಖಾತೆಗೆ ಹಣ ಕಳುಹಿಸುವ ಸಾಧ್ಯತೆ ಇದೆ. ಒಂದು ಅಂಕಿ ತಪ್ಪಾಗಿ ಟೈಪ್ ಮಾಡಿದರೆ ಅಥವಾ ತಪ್ಪು ವ್ಯಕ್ತಿಯನ್ನು ಆಯ್ಕೆ ಮಾಡಿದರೆ, ಹಣ ನೇರವಾಗಿ ಅವರ ಖಾತೆಗೆ ಹೋಗುತ್ತದೆ. ಈ ಸಮಯದಲ್ಲಿ ಬಹುತೇಕ ಜನರಲ್ಲಿ ಬರುವ ಮೊದಲ ಪ್ರಶ್ನೆ ಈ ಹಣ ಹಿಂತಿರುಗುತ್ತದೆಯೇ ಎಂದು. ಹಾಗಿದ್ದರೆ ಈ ಹಣ ಹಿಂತಿರುಗುತ್ತದೆಯೇ? ಹಿಂತಿರುಗಿದರೆ ಅದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೌದು, ಅಜಾಗರೂಕತೆಯಿಂದ ತಪ್ಪು ಮೊಬೈಲ್ ಸಂಖ್ಯೆ ಅಥವಾ ತಪ್ಪು UPI ID ನಮೂದಿಸುವುದರಿಂದ ಈ ರೀತಿಯ ಘಟನೆಗಳು ಹೆಚ್ಚಾಗುತ್ತಿವೆ. ಒಂದು ಬಾರಿ ಹಣ ಹೋದ ಬಳಿಕ, ಅದನ್ನು ಮರಳಿ ಪಡೆಯಬಹುದೇ ಎಂಬ ಆತಂಕ ಅನೇಕ ಮಂದಿಯ ಮನದಲ್ಲಿ ಮೂಡುತ್ತದೆ. ಆದರೆ ಚಿಂತೆಯ ಅಗತ್ಯವಿಲ್ಲ. ನಿರ್ದಿಷ್ಟ ಪ್ರಕ್ರಿಯೆಯನ್ನು ಸರಿಯಾಗಿ ಅನುಸರಿಸಿದರೆ, ತಪ್ಪಾಗಿ ಕಳುಹಿಸಿದ ಹಣವನ್ನು ವಾಪಸ್ ಪಡೆಯುವುದು ಸಾಧ್ಯ.

ಹಂತ 1: ನೀವು ಬಳಸಿದ ಅಪ್ಲಿಕೇಶನ್‌ನಲ್ಲಿ ತಕ್ಷಣ ದೂರು ಸಲ್ಲಿಸಿ,

ನೀವು Google Pay, PhonePe, Paytm ಅಥವಾ ಯಾವುದೇ BHIM ಆಧಾರಿತ UPI ಆ್ಯಪ್ ಮೂಲಕ ತಪ್ಪಾಗಿ ಹಣ ಕಳುಹಿಸಿದ್ದರೆ, ಮೊದಲು ಆ ಆ್ಯಪ್‌ನಲ್ಲೇ ದೂರು ನೀಡಬೇಕು.
ನಿಮ್ಮ UPI ಆ್ಯಪ್ ತೆರೆಯಿರಿ.
Transaction History (ವಹಿವಾಟು ಇತಿಹಾಸ) ವಿಭಾಗಕ್ಕೆ ಹೋಗಿ.
ನೀವು ತಪ್ಪಾಗಿ ಮಾಡಿದ ವಹಿವಾಟನ್ನು ಆಯ್ಕೆಮಾಡಿ.
Help / Report Problem (ಸಹಾಯ ಅಥವಾ ಸಮಸ್ಯೆ ವರದಿ) ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ತಪ್ಪು ವಹಿವಾಟಿನ ಕಾರಣವನ್ನು ಆಯ್ಕೆ ಮಾಡಿ ಮತ್ತು Transaction ID, UTR Number ಮುಂತಾದ ಎಲ್ಲಾ ವಿವರಗಳನ್ನು ಸರಿಯಾಗಿ ನಮೂದಿಸಿ.
ಈ ಹಂತವನ್ನು ತಕ್ಷಣ ಮಾಡುವುದರಿಂದ ಬ್ಯಾಂಕ್ ಮತ್ತು NPCIಗೆ ಸಮಸ್ಯೆಯನ್ನು ಟ್ರಾಕ್ ಮಾಡಲು ಸುಲಭವಾಗುತ್ತದೆ.

ಹಂತ 2: ನಿಮ್ಮ ಬ್ಯಾಂಕ್ ಅಥವಾ NPCIಗೆ ದೂರು ನೀಡಿ,

ಆ್ಯಪ್‌ನಲ್ಲಿ ದೂರು ನೀಡಿದ ನಂತರವೂ ಸಮಸ್ಯೆ ಬಗೆಹರಿಯದಿದ್ದರೆ, ಮುಂದಿನ ಹಂತವಾಗಿ ನೇರವಾಗಿ ಬ್ಯಾಂಕ್ ಅಥವಾ NPCI (National Payments Corporation of India) ಅನ್ನು ಸಂಪರ್ಕಿಸಬೇಕು.
ಬ್ಯಾಂಕ್:
ನಿಮ್ಮ ಬ್ಯಾಂಕಿನ ಗ್ರಾಹಕ ಸೇವಾ ಸಂಖ್ಯೆಗೆ ಕರೆ ಮಾಡಿ ಅಥವಾ ಹತ್ತಿರದ ಶಾಖೆಗೆ ತೆರಳಿ.
ವಹಿವಾಟಿನ ಸಂಪೂರ್ಣ ವಿವರಗಳನ್ನು ನೀಡಿ ಮತ್ತು ದೂರು ದಾಖಲಿಸಿ.
NPCI:
ಅಧಿಕೃತ NPCI ವೆಬ್‌ಸೈಟ್‌ಗೆ ಹೋಗಿ ದೂರು ಸಲ್ಲಿಸಬಹುದು.
ಅಥವಾ NPCI ಟೋಲ್ ಫ್ರೀ ಸಂಖ್ಯೆಗೆ  1800-120-1740 ಕರೆ ಮಾಡಿ ಸಮಸ್ಯೆಯನ್ನು ವಿವರಿಸಬಹುದು.

ಹಂತ 3: 30 ದಿನಗಳಲ್ಲಿ ಪರಿಹಾರ ಸಿಗದಿದ್ದರೆ, ವಿವಾದ ಪರಿಹಾರ ಪ್ರಕ್ರಿಯೆಗೆ ಹೋಗಿ
ನೀವು ಮೇಲಿನ ಹಂತಗಳನ್ನು ಅನುಸರಿಸಿದರೂ 30 ದಿನಗಳಲ್ಲಿ ಹಣ ವಾಪಸ್ ಆಗದಿದ್ದರೆ, NPCIಯ Dispute Redressal Mechanism ಮೂಲಕ ಮತ್ತೊಮ್ಮೆ ದೂರು ಸಲ್ಲಿಸಬಹುದು.
NPCI ನೀವು ಒದಗಿಸಿದ ಮಾಹಿತಿ ಪರಿಶೀಲಿಸಿ ವಹಿವಾಟು ನಿಜವಾಗಿಯೂ ತಪ್ಪಾಗಿ ನಡೆದಿದೆ ಎಂದು ದೃಢಪಡಿಸಿದರೆ, ಬ್ಯಾಂಕ್‌ಗೆ ಹಣವನ್ನು ವಾಪಸ್ ಮಾಡಲು ಸೂಚನೆ ನೀಡುತ್ತದೆ.
ಆದ್ದರಿಂದ Transaction ID, UTR Number ಮುಂತಾದ ವಿವರಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ.

ತಕ್ಷಣ ಕ್ರಮ ಕೈಗೊಳ್ಳುವುದು ಮುಖ್ಯ:

UPI ವಹಿವಾಟುಗಳು ಕ್ಷಣಾರ್ಧದಲ್ಲಿ ಮುಗಿಯುವುದರಿಂದ, ಸಮಯ ಕಳದಷ್ಟು ಹಣ ವಾಪಸ್ ಪಡೆಯುವ ಅವಕಾಶ ಕಡಿಮೆಯಾಗುತ್ತದೆ. ತಪ್ಪಾಗಿ ಹಣ ಕಳುಹಿಸಿದ್ದೀರಿ ಎಂದು ಗೊತ್ತಾದ ತಕ್ಷಣ ಈ ಹಂತಗಳನ್ನು ಅನುಸರಿಸಿದರೆ ಮಾತ್ರ ನಿಮ್ಮ ಹಣವನ್ನು ಬೇಗನೆ ಮರಳಿ ಪಡೆಯಲು ಸಾಧ್ಯವಾಗುತ್ತದೆ.

WhatsApp Image 2025 09 05 at 10.22.29 AM 17

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories