WhatsApp Image 2025 10 30 at 1.47.16 PM

ಸಾರ್ವಜನಿಕರ ಗಮನಕ್ಕೆ : ರಾಜ್ಯ ಸರ್ಕಾರದಿಂದ `ಮೀಸಲಾತಿ ರೋಸ್ಟರ್’ ಬಿಂದು ನಿಗದಿ ಹೀಗಿದೆ ನೋಡಿ

WhatsApp Group Telegram Group

ಬೆಂಗಳೂರು : ರಾಜ್ಯದಲ್ಲಿ ಮೀಸಲಾತಿ ರೋಸ್ಟರ್ ಬಿಂದು ನಿಗದಿಪಡಿಸಿ ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ. ಪರಿಶಿಷ್ಟ ಜಾತಿಗೆ ಶೇಕಡ 17ರಷ್ಟು ಮೀಸಲಾತಿ ನಿಗದಿಯಾಗಿದ್ದು, ಶೇಕಡ 100ನ್ನು 17 ರಿಂದ ಭಾಗಿಸಿದಾಗ 5.88 ಬರುತ್ತದೆ. ಅಂದರೆ, 6ನೇ ಬಿಂದು ನಿಗದಿಯಾಗುತ್ತದೆ.
ರೋಸ್ಟರ್ ಬಿಂದು ಪರಿಶಿಷ್ಟ ಜಾತಿಗೆ 1ನ್ನು ನಿಗದಿಪಡಿಸಿರುವುದರಿಂದ 1ಕ್ಕೆ +6ನ್ನು ಸೇರಿಸಿದರೆ, 7ನೇ ಬಿಂದು ನಿಗದಿಯಾಗುತ್ತದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ..

1. ಪರಿಶಿಷ್ಟ ಜಾತಿ (ಶೇಕಡ 17ರಷ್ಟು)

ಪರಿಶಿಷ್ಟ ಜಾತಿಗೆ ಶೇಕಡ 17ರಷ್ಟು ಮೀಸಲಾತಿ ನಿಗದಿಯಾಗಿದ್ದು, ಶೇಕಡ 100ನ್ನು 17 ರಿಂದ ಭಾಗಿಸಿದಾಗ 5.88 ಬರುತ್ತದೆ. ಅಂದರೆ, 6ನೇ ಬಿಂದು ನಿಗದಿಯಾಗುತ್ತದೆ. ರೋಸ್ಟರ್ ಬಿಂದು ಪರಿಶಿಷ್ಟ ಜಾತಿಗೆ 1ನ್ನು ನಿಗದಿಪಡಿಸಿರುವುದರಿಂದ 1ಕ್ಕೆ +6ನ್ನು ಸೇರಿಸಿದರೆ, 7ನೇ ಬಿಂದು ನಿಗದಿಯಾಗುತ್ತದೆ. ಇದೇ ಮಾದರಿಯಲ್ಲಿ +6ನ್ನು ಸೇರಿಸುತ್ತಾ ಹೋದರೆ ಮುಂದಿನಂತೆ ಪರಿಶಿಷ್ಟ ಜಾತಿಯ ಬಿಂದುಗಳು ನಿಗದಿಯಾಗುತ್ತದೆ. ಪರಿಶಿಷ್ಟ ಜಾತಿಗೆ ನೇರ ನೇಮಕಾತಿಯ :- 1,7,13,19,25,31,37,43,49,55,61,67,73,79,85,91,97.

2. ಪರಿಶಿಷ್ಟ ಪಂಗಡಗಳು (ಶೇಕಡಾ 7)

ಪರಿಶಿಷ್ಟ ಪಂಗಡಕ್ಕೆ ಶೇಕಡ 7ರಷ್ಟು ಮೀಸಲಾತಿ ನಿಗದಿಯಾಗಿದ್ದು, ಶೇಕಡ 100ನ್ನು 07 ರಿಂದ ಭಾಗಿಸಿದಾಗ 14.28 ಬರುತ್ತದೆ. ಅಂದರೆ, 14ನೇ ಬಿಂದು ನಿಗದಿಯಾಗುತ್ತದೆ. ರೋಸ್ಟರ್ ಬಿಂದು ಪರಿಶಿಷ್ಟ ಪಂಗಡಕ್ಕೆ 2ನ್ನು ನಿಗದಿಪಡಿಸಿರುವುದರಿಂದ 2ಕ್ಕೆ +14ನ್ನು ಸೇರಿಸಿದರೆ, 16ನೇ ಬಿಂದು ನಿಗದಿಯಾಗುತ್ತದೆ. ಇದೇ ಮಾದರಿಯಲ್ಲಿ +14ರನ್ನು ಸೇರಿಸುತ್ತಾ ಹೋದರೆ ಮುಂದಿನಂತೆ ಪರಿಶಿಷ್ಟ ಪಂಗಡದ ಬಿಂದುಗಳು ನಿಗದಿಯಾಗುತ್ತದೆ. ಪರಿಶಿಷ್ಟ ಪಂಗಡಕ್ಕೆ ನೇರ ನೇಮಕಾತಿಯ ರೋಸ್ಟರ್ ಬಿಂದುಗಳು:- 2,16,30,44,58,72,86.

3. ಸಾಮಾನ್ಯ (ಶೇಕಡ 44ರಷ್ಟು)

ಸಾಮಾನ್ಯ ವರ್ಗದವರಿಗೆ ಶೇಕಡ 44ರಷ್ಟು ಮೀಸಲಾತಿ ನಿಗದಿಯಾಗಿರುವುದರಿಂದ ಶೇಕಡ 100ನ್ನು 44 ರಿಂದ ಭಾಗಿಸಿದಾಗ 2.27 ಬರುತ್ತದೆ. ಅಂದರೆ, 3ನೇ ಬಿಂದು ನಿಗದಿಯಾಗುತ್ತದೆ. ಪ್ರತಿ 3ಕ್ಕೆ +3ನ್ನು ಸೇರಿಸುತ್ತಾ ಹೋದರೆ, ಈ ಕೆಳಕಂಡ ಬಿಂದುಗಳು ಸಾಮಾನ್ಯ ವರ್ಗಕ್ಕೆ ನಿಗದಿಪಡಿಸಬೇಕಾಗುತ್ತದೆ. ಸಾಮಾನ್ಯ ವರ್ಗಕ್ಕೆ ನೇರ ನೇಮಕಾತಿಯ : 3, 6, 9, 12, 15, 18, 21, 24, 27, 32, 33, 36, 39, 42, 45, 48, 51, 54, 57, 60, 63, 66, 69, 72, 75, 78, 81, 84, 87, 90, 93, 96, 99 = 33

30ಕ್ಕೆ ಎಸ್ಪಿ ಇರುವುದರಿಂದ 32ನ್ನು ನಿಗದಿಪಡಿಸಲಾಗಿದೆ.

72ರಲ್ಲಿ ಎಸ್ಪಿ ಇರುವುದರಿಂದ 74ನ್ನು ನಿಗದಿಪಡಿಸಲಾಗಿದೆ.

3ನೇ ಬಿಂದುವಿಗೆ ಪ್ರತಿ 3ನ್ನು ಸೇರಿಸುತ್ತಾ ಹೋದರೆ, 99ರವರೆವಿಗೆ 33 ಬಿಂದುಗಳು ಲಭ್ಯವಾಗುತ್ತದೆ. ಆದ್ದರಿಂದ 44-33=11 ಬಿಂದುಗಳನ್ನು ಹೆಚ್ಚುವರಿಯಾಗಿ ಈ ಕೆಳಕಂಡಂತೆ Ơ ơ . 17, 23, 26, 46, 47, 65, 68, 71, 88, 94, 95 ಬಿಂದುಗಳನ್ನು ನಿಗದಿಪಡಿಸಲಾಗಿದೆ.

4. ವರ್ಗ-1 ( 40 )

Category-1:- ಶೇಕಡ 4ರಷ್ಟು ಮೀಸಲಾತಿ ಲಭ್ಯವಾಗಿದ್ದು, 25ನೇ ಬಿಂದು ನಿಗದಿಯಾಗಬೇಕಾಗುತ್ತದೆ. ಇದೇ ಮಾದರಿಯಲ್ಲಿ 25, 50, 75, 100ನೇ ಬಿಂದು ನಿಗದಿಯಾಗಬೇಕು. ಈ ಮುಂದಿನಂತೆ ರೋಸ್ಟರ್ ಬಿಂದುಗಳನ್ನು ನಿಗದಿಪಡಿಸಲಾಗಿದೆ.

> 4ನೇ ಬಿಂದುವನ್ನು ನಿಗದಿಪಡಿಸಲಾಗಿದೆ.

29ನೇ ಬಿಂದುವನ್ನು ನಿಗದಿಪಡಿಸಲಾಗಿದೆ.

54ರ ಬದಲು 53ನೇ ಬಿಂದುವನ್ನು ನಿಗದಿಪಡಿಸಲಾಗಿದೆ.

> 79ರ ಬದಲು 80ನೇ ಬಿಂದುವನ್ನು ನಿಗದಿಪಡಿಸಲಾಗಿದೆ.

5. ವರ್ಗ-2A (150)

Category-2A:- ಶೇಕಡ 15ರಷ್ಟು ಮೀಸಲಾತಿ ಲಭ್ಯವಾಗಿದ್ದು, 100 ರಿಂದ ಭಾಗಿಸಿದಾಗ 6.66ರಷ್ಟು ಬರುತ್ತಿದ್ದು, 7ನೇ ಬಿಂದು ನಿಗದಿಪಡಿಸಬೇಕಾಗುತ್ತದೆ. ಆದರೆ, ಸದರಿ ಬಿಂದುಗಳು ಬೇರೆ Categoryಗೆ ನಿಗದಿಯಾಗಿರುವುದರಿಂದ ಈ ಮುಂದಿನಂತೆ ರೋಸ್ಟರ್ ಬಿಂದುಗಳನ್ನು ನಿಗದಿಪಡಿಸಲಾಗಿದೆ.

> 7ರ ಬದಲು 8ನೇ ಬಿಂದುವನ್ನುನಿಗದಿಪಡಿಸಲಾಗಿದೆ.

> 14ನೇ ಬಿಂದುವನ್ನು ನಿಗದಿಪಡಿಸಲಾಗಿದೆ.

> 21ರ ಬದಲು 22ನೇ ಬಿಂದುವನ್ನು ನಿಗದಿಪಡಿಸಲಾಗಿದೆ.

> 28ನೇ ಬಿಂದು ನಿಗದಿಪಡಿಸಲಾಗಿದೆ.

> 35ನೇ ಬಿಂದು ನಿಗದಿಪಡಿಸಲಾಗಿದೆ.

> 42ರ ಬದಲು 40ನೇ ಬಿಂದುವನ್ನು ನಿಗದಿಪಡಿಸಲಾಗಿದೆ(ಹಿಂದೂಡಲಾಗಿದೆ).

> 49ರ ಬದಲು 50ನೇ ಬಿಂದುವನ್ನು ನಿಗದಿಪಡಿಸಲಾಗಿದೆ.

> 56ನೇ ಬಿಂದು ನಿಗದಿಪಡಿಸಲಾಗಿದೆ.

63ರ ಬದಲು 64ನೇ ಬಿಂದುವನ್ನು ನಿಗದಿಪಡಿಸಲಾಗಿದೆ.

> 70ನೇ ಬಿಂದುವನ್ನು ನಿಗದಿಪಡಿಸಲಾಗಿದೆ.

> 77ನೇ ಬಿಂದುವನ್ನು ನಿಗದಿಪಡಿಸಲಾಗಿದೆ.

> 84ರ ಬದಲು 83ನೇ ಬಿಂದುವನ್ನು ನಿಗದಿಪಡಿಸಲಾಗಿದೆ(ಹಿಂದೂಡಲಾಗಿದೆ).

> 91ರ ಬದಲು 92ನೇ ಬಿಂದುವನ್ನು ನಿಗದಿಪಡಿಸಲಾಗಿದೆ.

> 98ನೇ ಬಿಂದುವನ್ನು ನಿಗದಿಪಡಿಸಲಾಗಿದೆ.

100ನೇ ಬಿಂದುವನ್ನು ನಿಗದಿಪಡಿಸಲಾಗಿದೆ.

WhatsApp Image 2025 10 30 at 1.31.57 PM
WhatsApp Image 2025 10 30 at 1.31.58 PM
WhatsApp Image 2025 10 30 at 1.31.58 PM 1
WhatsApp Image 2025 09 05 at 11.51.16 AM 1

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories