Tech Tips – ಮೊಬೈಲ್ ನ ಈ ಸೀಕ್ರೆಟ್ ಕೋಡ್ಸ್ ತುಂಬಾ ಜನರಿಗೆ ಗೊತ್ತಿಲ್ಲ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

secrete code

ನಮ್ಮ ಮೊಬೈಲ್ ನಲ್ಲಿ ನಮಗೆ ಗೊತ್ತಿರದ ಎಷ್ಟೋ ರಹಸ್ಯಗಳು (Secret settings) ಅಡಗಿವೆ ಆದರೆ ಅವುಗಳ ಬಗ್ಗೆ ನಮಗೆ ಗೊತ್ತೇ ಇರುವುದಿಲ್ಲ . ನಾವು ಮೊಬೈಲ್ ಅನ್ನು ಬೇಕಾದ ಹಾಗೆ ಮಾತ್ರ ಬಳಸಿಕೊಳ್ಳುತ್ತೇವೆ. ಅದೇ ರೀತಿ ನಮ್ಮ ಮೊಬೈಲ್ ಫೋನ್ ನಲ್ಲಿ 7 ರಹಸ್ಯ ( Secret Codes ) ಕೋಡ್ ಗಳಿವೆ ಅವುಗಳನ್ನು ನಾವು ಡಯಲ್ ಮಾಡಿದ್ರೆ ನಮಗೆ ಬೇಕಾದ ಎಲ್ಲಾ ಮಾಹಿತಿಗಳು ಸಿಗುತ್ತವೆ. ಆ ಕೋಡ್ ಗಳು ಯಾವುವು ಮತ್ತು ಆ ಕೊಡ್ ಗಳನ್ನು ಬಳಸಿದಾಗ ಸಿಗುವ ಮಾಹಿತಿಯ ಬಗ್ಗೆ ತಿಳಿದುಕೊಳ್ಳಲು ಈ ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ಈ ಹಿಂದೆ ನಾವು ನಮ್ಮ ಮೊಬೈಲ್ ಫೋನ್ ನಲ್ಲಿ ಬ್ಯಾಲೆನ್ಸ್ ಚೆಕ್ ( Balance Check ) ಮಾಡಲು ಹಲವಾರು ಕೋಡ್ ಗಳನ್ನು ಬಳಸುತ್ತಿದ್ದೆವು ಹಾಗೆಯೇ ಆ ಕೋಡ್ ಗಳು ಬಹಳ ಜನರಿಗೆ ತಿಳಿದಿರುತ್ತಿಲ್ಲ. ಆ ಕೋಡ್ ಗಳು * ಅಥವಾ # ನಿಂದ ಸ್ಟಾರ್ಟ್ ಆಗುತ್ತಿದ್ದವು ಹಾಗೆಯೇ ಅದರಲ್ಲಿ ನಂಬರ್ಸ್ ಗಳನ್ನು ಕೂಡಾ ಬಳಸಲಾಗುತ್ತಿತ್ತು.

ಅಷ್ಟೇ ಅಲ್ಲದೆ ಇನ್ನು ಹಲವಾರು ರಹಸ್ಯ ವಿಷಯಗಳನ್ನು ಇನ್ನು ಹೆಚ್ಚಿನ ರಹಸ್ಯ ಕೋಡ್ ಗಳನ್ನು ಬಹಳಸಿಕೊಂಡು ನೋಡಬಹುದು. ಈ ಕೋಡ್ ಗಳನ್ನು ಬಳಸಿಕೊಂಡು ನಮ್ಮ ಸ್ಮಾರ್ಟ್ ಫೋನ್ ನ ಬಗ್ಗೆ ಬಹಳಷ್ಟು ಮಾಹಿತಿಗಳನ್ನು ತಿಳಿದುಕೊಳ್ಳಬಹುದು. ಹಾಗೆಯೇ ನಮ್ಮ ಆಂಡ್ರಾಯ್ಡ್ ಮೊಬೈಲ್ ಫೋನ್ ನಲ್ಲಿ ಎರಡು ರೀತಿಯ ರಹಸ್ಯ ಕೋಡ್ ಗಳನ್ನು ಹೊಂದಿವೆ.

ಈ ಎರಡು ರೀತಿಯ ರಹಸ್ಯ ಸಂಕೇತಗಳೆಂದರೆ :

ಅನ್ ಸ್ಟ್ರಕ್ಟರ್ಡ್ ಸಪ್ಲಿಮೆಂಟರಿ ಸರ್ವೀಸ್ ಡೇಟಾ ( Unstructured Supplementary Service Data )(ಯು ಎಸ್ ಎಸ್ ಡಿ)

ಮೈನ್ ಮೆಷಿನ್ ಇಂಟರ್ಫೇಸ್ ( Main Machine Interface ) (ಎಂಎಂಐ)

ಯು ಎಸ್ ಎಸ್ ಡಿ ಎಂಬುದು ವಾಹಕ-ನಿರ್ದಿಷ್ಟ ಕೋಡ್ ಆಗಿದ್ದು, ಇದು ನೆಟ್ವರ್ಕ್ ವಾಹಕದ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಅದೇ ಸಮಯದಲ್ಲಿ, ಎಂಎಂಐ ಬ್ರಾಂಡ್ ಗೆ ನಿರ್ದಿಷ್ಟವಾಗಿರುತ್ತದೆ. ಆ ಸಂದರ್ಭದಲ್ಲಿ ಯುಎಸ್ ಎಸ್ ಡಿ ಯು ಸಿಮ್ ಕಾರ್ಡ್ ಬ್ಯಾಲೆನ್ಸ್ ಮತ್ತು ಸೇವೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ ಮತ್ತು ಎಂಎಂಐ ಸ್ಮಾರ್ಟ್ ಫೋನ್ ಸೋಫ್ಟ್ ವೇರ್ ಮತ್ತು ಹಾರ್ಡ ವೇರ್ ಗೆ ಸಂಬಂಧಿಸಿದ ಮಾಹಿತಿಯನ್ನು ನೀಡುತ್ತದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈಗ ನಾವು ಆ ಏಳು ಕೋಡ್ ಗಳು ಯಾವುವು ಮತ್ತು ಅದರ ಮಾಹಿತಿಗಳ ಬಗ್ಗೆ ತಿಳಿದುಕೊಳ್ಳೋಣ :

*#21#
ಈ ರಹಸ್ಯ ಕೋಡ್ ಸಹಾಯದಿಂದ, ನಿಮ್ಮ ಕರೆ, ಡೇಟಾ ಅಥವಾ ಸಂಖ್ಯೆಯನ್ನು ಮತ್ತೊಂದು ಸಂಖ್ಯೆಗೆ ಫಾರ್ವಡ್ ಮಾಡಲಾಗಿದೆಯೇ ಎಂದು ನೀವು ತಿಳಿಯಬಹುದು.

#0#
ಈ ಕೋಡ್ ಸಹಾಯದಿಂದ, ನಿಮ್ಮ ಫೋನ್ ಅನ್ನು ಡಯಲ್ ಮಾಡುವ ಮೂಲಕ ಫೋನ್ನ ಡಿಸ್ಕ್ , ಸ್ಪೀಕರ್, ಕ್ಯಾಮೆರಾ, ಸೆನ್ಸರ್ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂದು ನೀವು ಕಂಡುಹಿಡಿಯಬಹುದು.

*#07#
ಈ ಕೋಡ್ ನಿಮ್ಮ ಫೋನ್ ನ ಎಸ್ ಎ ಆರ್ ಮೌಲ್ಯವನ್ನು ಸೂಚಿಸುತ್ತದೆ. ಇದರ ಸಹಾಯದಿಂದ, ನೀವು ಫೋನ್ ನಿಂದ ಹೊರಹೊಮ್ಮುವ ವಿಕಿರಣದ ಬಗ್ಗೆ ಮಾಹಿತಿಯನ್ನು ಪಡೆಯಬಹುದು. ಎಸ್ಎಆರ್ ಮೌಲ್ಯವು 1.6 ಕ್ಕಿಂತ ಕಡಿಮೆ ಇರಬೇಕು.

*#06#
ಈ ಕೋಡ್ ಸಹಾಯದಿಂದ, ನಿಮ್ಮ ಫೋನ್ನ ವಿಶಿಷ್ಟ ಐಎಂಇಐ ಸಂಖ್ಯೆಯನ್ನು ನೀವು ಕಂಡುಹಿಡಿಯಬಹುದು. ನೀವು ಫೋನ್ ಕಳೆದುಕೊಂಡಾಗ ಈ ಐಎಂಇಐ ಸಂಖ್ಯೆಯ ಅಗತ್ಯವಿದೆ.

##4636##
ಈ ರಹಸ್ಯ ಕೋಡ್ ಮೂಲಕ ನಿಮ್ಮ ಸ್ಮಾರ್ಟ್ ಫೋನ್ ನ ಬ್ಯಾಟರಿ, ಇಂಟರ್ನೆಟ್, ವೈಫೈ ಮಾಹಿತಿಯನ್ನು ನೀವು ಕಂಡುಹಿಡಿಯಬಹುದು.

##34971539##
ಈ ಕೋಡ್ ನಿಂದ ನೀವು ಫೋನ್ ನ ಕ್ಯಾಮೆರಾ ಮಾಹಿತಿಯನ್ನು ಕಂಡುಹಿಡಿಯಬಹುದು. ಕ್ಯಾಮೆರಾ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಅಥವಾ ಇಲ್ಲವೇ ಎಂದು ಈ ಕೋಡ್ ನಿಮಗೆ ತಿಳಿಸುತ್ತದೆ.

2767*3855#
ನೀವು ಈ ಕೋಡ್ ಅನ್ನು ಟೈಪ್ ಮಾಡಿದರೆ, ಅದು ನಿಮ್ಮ ಸ್ಮಾರ್ಟ್ ಫೋನ್ ಅನ್ನು ಮರುಹೊಂದಿಸುತ್ತದೆ. ರೀಸೆಟ್ ಮಾಡಿದಾಗ ಫೋನ್ನ ಡೇಟಾ ಕಳೆದುಹೋಗಬಹುದು.

ಇದಿಷ್ಟು ಈ ಕೋಡ್ ಗಳ ಮಾಹಿತಿ ಆಗಿದ್ದು ನಿಮಗೆ ಮೊಬೈಲ್ ಬಗ್ಗೆ ಯಾವುದೇ ಮಾಹಿತಿ ಬೇಕಿದ್ದರೆ ಈ ಕೋಡ್ ಗಳನ್ನು ಬಳಸಿಕೊಂಡು ಮಾಹಿತಿ ತಿಳಿದುಕೊಳ್ಳಬಹುದು.

ಇದನ್ನೂ ಓದಿ –  Diwali Offer- 135 ಕಿ.ಮೀ ಮೈಲೇಜ್ ಕೊಡುವ ಒಂದು ಸ್ಕೂಟಿ ತಗೊಂಡ್ರೆ ಇನ್ನೊಂದು ಸ್ಕೂಟಿ ಉಚಿತ, ದೀಪಾವಳಿ ಬಂಪರ್ ಆಫರ್.!

ಇದನ್ನೂ ಓದಿ – ಭಾಗ್ಯಲಕ್ಷ್ಮಿ ಬಾಂಡ್ ಗೆ 18 ವರ್ಷ, ಎಲ್ಲಾ ಹೆಣ್ಣು ಮಗುವಿಗೆ ಬರುತ್ತೆ ಬರೋಬ್ಬರಿ 1 ಲಕ್ಷ ರೂಪಾಯಿ

ಇದನ್ನೂ ಓದಿ – E-scooter: ಒಂದೇ ಚಾರ್ಜ್ ಗೆ ಬರೋಬ್ಬರಿ 101 ಕಿ.ಮೀ ಮೈಲೇಜ್ ಕೊಡುವ ಇ – ಸ್ಕೂಟಿ, ಇಲ್ಲಿದೆ ಸಂಪೂರ್ಣ ಮಾಹಿತಿ

ಇದನ್ನೂ ಓದಿ – ದೀಪಾವಳಿ ಆಫರ್ ನಲ್ಲಿ 15 ಸಾವಿರ ರೂ.ನಲ್ಲಿ ಸಿಗುವ ಬೆಸ್ಟ್ 5G ಸ್ಮಾರ್ಟ್ ಫೋನ್ ಗಳ ಲಿಸ್ಟ್ ಇಲ್ಲಿದೆ, Best Smartphones

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!