6302934120169933807

ದ್ವಿತೀಯ ಪಿಯುಸಿ ಪರೀಕ್ಷೆ-1: ಹೊಸ ವಿದ್ಯಾರ್ಥಿಗಳ ನೋಂದಣಿಗೆ ಮಹತ್ವದ ಆದೇಶ.!

WhatsApp Group Telegram Group

ಬೆಂಗಳೂರು:2025-26ನೇ ಸಾಲಿನಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆ-1 (ಫೆಬ್ರವರಿ/ಮಾರ್ಚ್) ಕ್ಕೆ ಹಾಜರಾಗುವ ಅರ್ಹ ಹೊಸ ವಿದ್ಯಾರ್ಥಿಗಳ (Regular) ನೋಂದಣಿಗಾಗಿ ಮಂಡಳಿಯ ಅಧಿಕೃತ ಜಾಲತಾಣವಾದ https://kseab.karnataka.gov.in ನಲ್ಲಿರುವ PU EXAM PORTAL ನಲ್ಲಿ ವ್ಯವಸ್ಥೆ ಮಾಡಲಾಗಿದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ರಾಜ್ಯದ ಎಲ್ಲಾ ಸರ್ಕಾರಿ, ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಕಾಲೇಜುಗಳ ಪ್ರಾಂಶುಪಾಲರು ತಮ್ಮ ಕಾಲೇಜಿನ 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1 ತೆಗೆದುಕೊಳ್ಳುವ ಹೊಸ ವಿದ್ಯಾರ್ಥಿಗಳ ವಿವರಗಳನ್ನು ಕಡ್ಡಾಯವಾಗಿ ಆನ್‌ಲೈನ್ ಮೂಲಕ ಅಪ್‌ಲೋಡ್ ಮಾಡುವಂತೆ ಮಂಡಳಿ ಸೂಚಿಸಿದೆ.

ಪ್ರಮುಖ ದಿನಾಂಕ ಮತ್ತು ಸೂಚನೆಗಳು:

ನೋಂದಣಿ ಅವಧಿ: ವಿದ್ಯಾರ್ಥಿಗಳ ಮಾಹಿತಿ ಅಪ್‌ಲೋಡ್ ಮಾಡಲು ದಿನಾಂಕ: 08-10-2025 ರಿಂದ 31-10-2025 ರವರೆಗೆ ಕಾಲಾವಕಾಶ ನೀಡಲಾಗಿದೆ.

ಅಪ್‌ಲೋಡ್ ವಿಧಾನ: ಮಾಹಿತಿಯನ್ನು ಮಂಡಳಿಯ ಜಾಲತಾಣವಾದ https://kseab.karnataka.gov.in ನಲ್ಲಿನ PU EXAM PORTAL ನ ಕಾಲೇಜು ಲಾಗಿನ್ ಮುಖಾಂತರ ಅಪ್‌ಲೋಡ್ ಮಾಡಬೇಕು.

ಲಾಗಿನ್ ವಿವರಗಳು: ಪ್ರಾಂಶುಪಾಲರು ಮಂಡಳಿಯು ಈಗಾಗಲೇ ಒದಗಿಸಿರುವ Username ಮತ್ತು Password ಬಳಸಿ ಆನ್‌ಲೈನ್ ನೋಂದಣಿ ಕಾರ್ಯವನ್ನು ನಿರ್ವಹಿಸಬಹುದು.

SATS ಸಂಖ್ಯೆ ಕಡ್ಡಾಯ: ನೋಂದಣಿ ಕಾರ್ಯವನ್ನು ಪ್ರತಿ ವಿದ್ಯಾರ್ಥಿಯ SATS ಸಂಖ್ಯೆ (Student Achievement Tracking System Number) ಬಳಸಿ ಮಾಡಬೇಕು.

ಭಾವಚಿತ್ರ ಅಪ್‌ಲೋಡ್:

ಪ್ರತಿ ವಿದ್ಯಾರ್ಥಿಯ ಭಾವಚಿತ್ರವನ್ನು ಸ್ಕ್ಯಾನ್ ಮಾಡಿ 20-80 kb ಗಾತ್ರದಲ್ಲಿ Jpeg ಮಾದರಿಯಲ್ಲಿ ಸಿದ್ಧಪಡಿಸಿಕೊಳ್ಳಬೇಕು.

ಭಾವಚಿತ್ರದ ಫೈಲ್ ಹೆಸರನ್ನು ಅವರ SATS ನೋಂದಣಿ ಸಂಖ್ಯೆಯ ಅನುಕ್ರಮದಲ್ಲಿ ಸೇವ್ ಮಾಡಬೇಕು.

ಉದಾ: ಅಭ್ಯರ್ಥಿಯ SATS ಸಂಖ್ಯೆ 12345678 ಆಗಿದ್ದಲ್ಲಿ, ಭಾವಚಿತ್ರದ soft copy ಯನ್ನು P12345678 ಎಂದು ಸೇವ್ ಮಾಡಬೇಕು.

SATS ಮಾಹಿತಿ ತಿದ್ದುಪಡಿ:

ದ್ವಿತೀಯ ಪಿಯುಸಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಾರ್ಥಿಗಳ ಹೆಚ್ಚಿನ ಮಾಹಿತಿಯನ್ನು SATS ಡೇಟಾಬೇಸ್ ನಿಂದ ಪಡೆಯಲಾಗುತ್ತದೆ.

ವಿದ್ಯಾರ್ಥಿಯ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಜನ್ಮ ದಿನಾಂಕ, ಪ್ರವರ್ಗ, ಲಿಂಗ, ಮಾಧ್ಯಮ, ಸಂಯೋಜನೆ ಮತ್ತು ವಿಷಯ ಇವುಗಳಲ್ಲಿ ಯಾವುದೇ ತಿದ್ದುಪಡಿಗಳು ಇದ್ದರೆ, ಮಂಡಳಿಯ ಜಾಲತಾಣದಲ್ಲಿ ನೇರವಾಗಿ ತಿದ್ದುಪಡಿ ಮಾಡಲು ಅವಕಾಶವಿರುವುದಿಲ್ಲ.

ಮೊದಲಿಗೆ, ಶಾಲಾ ಶಿಕ್ಷಣ (ಪಿ.ಯು. ಇಲಾಖೆ) ಇಲ್ಲಿರುವ SATS ಡೇಟಾಬೇಸ್‌ನಲ್ಲಿ ತಿದ್ದುಪಡಿ ಮಾಡಿಸಬೇಕು.

ತಿದ್ದುಪಡಿ ಮಾಡಿದ ನಂತರ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ PU EXAM PORTAL ಕಾಲೇಜು ಲಾಗಿನ್‌ನಲ್ಲಿರುವ “UPDATE LATEST DATA FROM SATS” ಆಯ್ಕೆಯನ್ನು ಬಳಸಿ ಪರಿಷ್ಕೃತ ಮಾಹಿತಿಯನ್ನು ಅಪ್‌ಡೇಟ್ ಮಾಡಬೇಕು.

ಪರಿಷ್ಕೃತ ಮಾಹಿತಿಯನ್ನು ಪರಿಶೀಲಿಸಿ, ತಾಳೆ ಹೊಂದಿದ ನಂತರವೇ SUBMIT ಮಾಡಬೇಕು.

ದಾಖಲೆ ಪರಿಶೀಲನೆ: SATS ನಲ್ಲಿ ತಿದ್ದುಪಡಿ ಮಾಡುವಾಗ, ವಿದ್ಯಾರ್ಥಿಯ ಮಾಹಿತಿಯನ್ನು ಎಸ್.ಎಸ್.ಎಲ್.ಸಿ./10ನೇ ತರಗತಿ ಅಂಕಪಟ್ಟಿಯ ವಿವರಗಳೊಂದಿಗೆ ಕಡ್ಡಾಯವಾಗಿ ಪರಿಶೀಲಿಸಬೇಕು.

    1 8 724x1024 1
    2 8 724x1024 1
    WhatsApp Image 2025 09 05 at 11.51.16 AM 1

    ಈ ಮಾಹಿತಿಗಳನ್ನು ಓದಿ

    ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

     

    WhatsApp Group Join Now
    Telegram Group Join Now

    Popular Categories