ಈ ವರದಿಯಲ್ಲಿ SBI SPECIALIST CADRE OFFICER RECRUITMENT 2025 ನೇಮಕಾತಿ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಭಾರತದ ಅತಿ ದೊಡ್ಡ ಸರ್ಕಾರಿ ಬ್ಯಾಂಕ್ SBI, ತನ್ನ ಸೈಬರ್ ಸೆಕ್ಯುರಿಟಿ ಹಾಗೂ ಮಾಹಿತಿ ವ್ಯವಸ್ಥೆ ಆಡಿಟ್ ವಿಭಾಗವನ್ನು ಬಲಪಡಿಸಲು 33 ವಿಶೇಷ ಕೇಡರ್ ಅಧಿಕಾರಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿಯು ಬ್ಯಾಂಕಿಂಗ್ ಕ್ಷೇತ್ರದಲ್ಲಿನ ತಂತ್ರಜ್ಞಾನ ಪ್ರಗತಿಗೆ ಸೂಕ್ತ ರೀತಿಯ ಹೆಜ್ಜೆಯಾಗಿದೆ.
ಉದ್ಯೋಗ ವಿವರಗಳು :
ಇಲಾಖೆ ಹೆಸರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
ಹುದ್ದೆಗಳ ಹೆಸರು ವಿವಿಧ ಹುದ್ದೆಗಳು
ಒಟ್ಟು ಹುದ್ದೆಗಳು 33
ಅರ್ಜಿ ಸಲ್ಲಿಸುವ ಬಗೆ ಆನ್ಲೈನ್ (Online)
ಉದ್ಯೋಗ ಸ್ಥಳ –ಭಾರತಾದ್ಯಂತ
ಇದು ಸಾಮಾನ್ಯ ಬ್ಯಾಂಕ್ ಉದ್ಯೋಗವಲ್ಲ – ಇದು ವಿಶೇಷ ತಂತ್ರಜ್ಞರಿಗಾಗಿ!
ಹೆಚ್ಚಿನ ಉದ್ಯೋಗಾಕಾಂಕ್ಷಿಗಳು ಬ್ಯಾಂಕ್ ಉದ್ಯೋಗ ಎಂದರೆ ಲಿಖಿತ ಪರೀಕ್ಷೆ, ಪ್ರೊಬೇಷನರಿ ಪಿರಿಯಡ್, ಸಾಮಾನ್ಯ ಬ್ಯಾಂಕಿಂಗ್ ಕೆಲಸ ಎಂದುಕೊಳ್ಳುತ್ತಾರೆ. ಆದರೆ ಈ ಬಾರಿಯ SBI SCO ನೇಮಕಾತಿಯು ಸರ್ವಥಾ ವಿಭಿನ್ನವಾಗಿದೆ. ಇದು ಸೈಬರ್ ಸೆಕ್ಯುರಿಟಿ, IS ಆಡಿಟ್ ಹಾಗೂ ಬ್ಯಾಂಕಿಂಗ್ ಟೆಕ್ನಾಲಜಿ ಕ್ಷೇತ್ರದಲ್ಲಿ ಪರಿಣಿತರಾಗಿರುವವರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.
ಹುದ್ದೆಗಳ ವೈಶಿಷ್ಟ್ಯಗಳು:
ಹುದ್ದೆ ಹೆಸರು : ಜನರಲ್ ಮ್ಯಾನೇಜರ್ (IS Audit)
ಹುದ್ದೆಗಳ ಸಂಖ್ಯೆ :01
ಗರಿಷ್ಠ ವಯಸ್ಸು: 55 ವರ್ಷ
ವಿದ್ಯಾರ್ಹತೆ : BE/BTech ಅಥವಾ MCA/ MSc/ MTech + CISA, CEH
ಅನುಭವ : ಕನಿಷ್ಠ 15 ವರ್ಷ
ಹುದ್ದೆ ಹೆಸರು : ಸಹಾಯಕ ಉಪಾಧ್ಯಕ್ಷ (IS Audit)
ಹುದ್ದೆಗಳ ಸಂಖ್ಯೆ :14
ಗರಿಷ್ಠ ವಯಸ್ಸು : 45 ವರ್ಷ
ವಿದ್ಯಾರ್ಹತೆ : BE/BTech (CS/IT/ECE) + CISA
ಅನುಭವ : ಕನಿಷ್ಠ 6 ವರ್ಷ
ಹುದ್ದೆ ಹೆಸರು : ಡೆಪ್ಯುಟಿ ಮ್ಯಾನೇಜರ್ (IS Audit)
ಹುದ್ದೆಗಳ ಸಂಖ್ಯೆ: 18
ಗರಿಷ್ಠ ವಯಸ್ಸು : 35 ವರ್ಷ
ವಿದ್ಯಾರ್ಹತೆ : BE/BTech + CISA
ಅನುಭವ : ಕನಿಷ್ಠ 4 ವರ್ಷ
ವೇತನದ ಭರವಸೆ:
GM ಹುದ್ದೆ: ವಾರ್ಷಿಕ ₹1 ಕೋಟಿ ತನಕ CTC
AVP ಹುದ್ದೆ: ವಾರ್ಷಿಕ ₹44 ಲಕ್ಷ ತನಕ CTC
DM ಹುದ್ದೆ: ₹64,820 ರಿಂದ ₹93,960 ಮೂಲ ವೇತನ + DA, HRA, ಗ್ರಾಚ್ಯೂಟಿ ಮೊದಲಾದ ಲಾಭಗಳು.
ಇದರಲ್ಲಿ ಹೆಚ್ಚಿನ ಶೇಕಡಾ ಭಾಗ ಸ್ಥಿರ ವೇತನವಾಗಿದ್ದು, ಉಳಿದ ಭಾಗದ ವೇತನ ನಿಮ್ಮ ಪರ್ಫಾರ್ಮೆನ್ಸ್ ಲಿಂಕ್ಡ್ ಇನ್ಸೆಂಟಿವ್ ಮೇಲೆ ನಿಗದಿಯಾಗುತ್ತದೆ.
ಆಯ್ಕೆ ಪ್ರಕ್ರಿಯೆ:
ಈ ನೇಮಕಾತಿಯಲ್ಲಿ ಯಾವುದೇ ಲಿಖಿತ ಪರೀಕ್ಷೆ ಇಲ್ಲ. ಪ್ರಕ್ರಿಯೆಯು ಮೂರು ಹಂತಗಳಲ್ಲಿ ನಡೆಯುತ್ತದೆ:
ಅರ್ಜಿ ಪರಿಶೀಲನೆ: ವಿದ್ಯಾರ್ಹತೆ + ಅನುಭವದ ಆಧಾರದಲ್ಲಿ ಶಾರ್ಟ್‌ಲಿಸ್ಟ್.
ವೈಯಕ್ತಿಕ ಸಂದರ್ಶನ: 100 ಅಂಕಗಳಿಗೆ ತಾಂತ್ರಿಕ ಪ್ಯಾನೆಲ್ ಮುಂದೆ.
CTC ಚರ್ಚೆ (GM ಮತ್ತು AVP ಹುದ್ದೆಗಳಿಗೆ): ಅನುಭವದ ಆಧಾರದ ಮೇಲೆ ವೆತನ ಸಮಾಲೋಚನೆ.
ಗಮನಿಸಿ: ಡೆಪ್ಯುಟಿ ಮ್ಯಾನೇಜರ್ ಹುದ್ದೆಗೆ ನೇರ ಪೇ ಸ್ಕೇಲ್ ಅನ್ವಯವಾಗುತ್ತದೆ.
ಪ್ರಮುಖ ದಿನಾಂಕಗಳು
ಅಧಿಸೂಚನೆ ಪ್ರಕಟಣೆ: 11-07-2025
ಅರ್ಜಿ ಸಲ್ಲಿಕೆ ಆರಂಭ: 11-07-2025
ಅಂತಿಮ ದಿನಾಂಕ: 31-07-2025
ಅರ್ಜಿ ಶುಲ್ಕ ಪಾವತಿ ಕೊನೆ ದಿನಾಂಕ: 31-07-2025
ಅರ್ಜಿ ಶುಲ್ಕ:
ಸಾಮಾನ್ಯ/OBC/EWS: ₹750/-
SC/ST/PwD: ಶುಲ್ಕವಿಲ್ಲ
ಪ್ರಮುಖ ಲಿಂಕುಗಳು:
ನೋಟಿಫಿಕೇಶನ್ (ಅಧಿಸೂಚನೆ): ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್ ಅರ್ಜಿ ಲಿಂಕ್: ಇಲ್ಲಿ ಕ್ಲಿಕ್ ಮಾಡಿ
ಇದು ನವತಂತ್ರಜ್ಞರಿಗೊಂದು ಬೃಹತ್ ವೇದಿಕೆ!
ಸೈಬರ್ ಸೆಕ್ಯುರಿಟಿ, ಮಾಹಿತಿ ಆಡಿಟ್, ಬ್ಯಾಂಕಿಂಗ್ ಟೆಕ್ನಾಲಜಿ ಇಂತಹ ಪ್ರತ್ಯೇಕ ಕ್ಷೇತ್ರಗಳಲ್ಲಿ ಪ್ರಭುತ್ವ ಹೊಂದಿರುವ ತಜ್ಞರಿಗೆ SBI ನೀಡುತ್ತಿರುವ ಈ ಅವಕಾಶ ಎಷ್ಟರಮಟ್ಟಿಗೆ ಮಹತ್ವದ್ದೆಂದರೆ ,ಇದು ಹೆಚ್ಚಿನ ವೇತನ, ವಿಶ್ವಾಸಾರ್ಹತೆ ಮತ್ತು ದಕ್ಷತೆಯ ಹೆಗ್ಗಳಿಕೆ ಹೊಂದಿರುವ ಹುದ್ದೆ.
ಕೊನೆಯದಾಗಿ ಹೇಳುವುದಾದರೆ, SBI ನಲ್ಲಿ Special Cadre Officer ಆಗಿ ಸೇರುವುದು ಎಂದರೆ ಕೆವಲ ಉದ್ಯೋಗವಲ್ಲ – ಅದು ನಿಮ್ಮ ಪ್ರೌಢತೆ, ತಂತ್ರಜ್ಞಾನ ಕೌಶಲ್ಯ, ಮತ್ತು ಬ್ಯಾಂಕಿಂಗ್ ಭದ್ರತೆಗೆ ಕೊಡುಗೆ ನೀಡುವ ಅಪೂರ್ವ ಅವಕಾಶ. ಈ ಹುದ್ದೆಗಳು ದೇಶದ ಬ್ಯಾಂಕಿಂಗ್ ಭದ್ರತೆ ವ್ಯವಸ್ಥೆಯ ಎದೆಯಲ್ಲಿ ನಿಂತು ಕೆಲಸ ಮಾಡುವಂತಹ ಗಂಭೀರ ಹೊಣೆಗಾರಿಕೆಯ ಹುದ್ದೆಗಳು. ತಾಂತ್ರಿಕತೆ ಮತ್ತು ಸೇವಾಭಾವನೆ ಹೊಂದಿರುವ ಅಭ್ಯರ್ಥಿಗಳು ಈ ಅವಕಾಶವನ್ನು ತಪ್ಪಿಸಿಕೊಳ್ಳಬಾರದು.
ಬುಧಿವಂತರಿಗೆ ಕಾಲ ಮಿಟ್ಟಿರುವ ಅವಕಾಶ!
ಅರ್ಜಿಸಲ್ಲಿಸಿ, ಭವಿಷ್ಯವನ್ನೇ ರೂಪಿಸಿ!ಮತ್ತು ಇಂತಹ ಉತ್ತಮವಾದ ಮಾಹಿತಿಯನ್ನು ನೀವು ತಿಳಿದಮೇಲೆ ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.