ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಪ್ಲಾಟಿನಂ ಜುಬಿಲಿ ಆಶಾ ವಿದ್ಯಾರ್ಥಿವೇತನ 2025–26(Platinum Jubilee ASHA Scholarship 2025–26) ಯೋಜನೆಯ ಅಡಿಯಲ್ಲಿ, ವಿದ್ಯಾರ್ಥಿಗಳಿಗೆ 20 ಲಕ್ಷ ರೂಪಾಯಿವರೆಗೆ(20 lakhs) ವಿದ್ಯಾರ್ಥಿವೇತನ ನೀಡುವ ಮಹತ್ವದ ಕಾರ್ಯಕ್ರಮವನ್ನು ಆರಂಭಿಸಿದೆ. ಉತ್ತಮ ಶಿಕ್ಷಣವನ್ನು ಆರ್ಥಿಕ ಬಾಧ್ಯತೆಗಳಿಂದ ತೊಂದರೆಗೊಳಗಾಗದೆ ಮುಂದುವರಿಸಲು ವಿಧ್ಯಾರ್ಥಿಗಳಿಗೆ ಈ ಯೋಜನೆ ಸಹಾಯ ಮಾಡುವ ಉದ್ದೇಶ ಹೊಂದಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ವಿದ್ಯಾರ್ಥಿವೇತನದ ವೈಶಿಷ್ಟ್ಯಗಳು(Scholarship Features):
ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಮಟ್ಟ ಮತ್ತು ಕೋರ್ಸ್ಗೆ ಅನುಗುಣವಾಗಿ ರೂ. 15,000 ರಿಂದ ರೂ. 20 ಲಕ್ಷದವರೆಗೆ ವಿದ್ಯಾರ್ಥಿವೇತನ ಪಡೆಯಬಹುದು.
SC/ST ಅಭ್ಯರ್ಥಿಗಳಿಗೆ ಶೇಕಡಾ 10 ಅಂಕಗಳಲ್ಲಿ ಸಡಿಲಿಕೆ ನೀಡಲಾಗುತ್ತದೆ.
ಮಹಿಳಾ ಅಭ್ಯರ್ಥಿಗಳು ಮತ್ತು SC/ST ವರ್ಗದವರಿಗೆ ತಲಾ 50% ಮೀಸಲಾತಿ ಒದಗಿಸಲಾಗಿದೆ.
ಈ ವಿದ್ಯಾರ್ಥಿವೇತನವನ್ನು ಶಾಲೆ, ಪದವಿಪೂರ್ವ, ಸ್ನಾತಕೋತ್ತರ, ವೈದ್ಯಕೀಯ, IIT, IIM ಹಾಗೂ ವಿದೇಶಿ ಅಧ್ಯಯನ(Foreign studies)ಗಳಿಗೆ ಸಹ ಅನ್ವಯಿಸುತ್ತದೆ.
ಅರ್ಹತಾ ಮಾನದಂಡಗಳು:
ಶಾಲಾ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ ರೂ. 3 ಲಕ್ಷಕ್ಕಿಂತ ಹೆಚ್ಚು ಇರಬಾರದು.
ಪದವಿ, ಸ್ನಾತಕೋತ್ತರ ಅಥವಾ ಇತರೆ ವಿದ್ಯಾರ್ಥಿಗಳ ಕುಟುಂಬದ ಆದಾಯ ರೂ. 6 ಲಕ್ಷಕ್ಕಿಂತ ಹೆಚ್ಚು ಇರಬಾರದು.
ಅಗತ್ಯ ದಾಖಲೆಗಳು:
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕೆಳಗಿನ ದಾಖಲೆಗಳನ್ನು ಸಲ್ಲಿಸಬೇಕಿದೆ:
ಅಂಕಪಟ್ಟಿ ಮತ್ತು ಗುರುತಿನ ಚೀಟಿ
ಪ್ರಸಕ್ತ ವರ್ಷದ ಶುಲ್ಕ ರಶೀದಿ
ಬ್ಯಾಂಕ್ ಖಾತೆ ವಿವರಗಳು (ವಿದ್ಯಾರ್ಥಿ ಅಥವಾ ಪೋಷಕರು)
ಕುಟುಂಬದ ಆದಾಯ ಪ್ರಮಾಣಪತ್ರ
ಪ್ರವೇಶ ದೃಢೀಕರಣ ದಾಖಲೆ(Admission confirmation document)
ಇತ್ತೀಚಿನ ಪಾಸ್ಪೋರ್ಟ್ ಗಾತ್ರದ ಫೋಟೋ
ಜಾತಿ ಪ್ರಮಾಣಪತ್ರ (ಅನ್ವಯಿಸಿದಲ್ಲಿ)
ಹೇಗೆ ಅರ್ಜಿ ಸಲ್ಲಿಸಬೇಕು?
ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ – sbiashascholarship.co.in
ಮುಖಪುಟದಲ್ಲಿ ತಮಗೆ ತಕ್ಕ ಅಧ್ಯಯನ ಮಟ್ಟವನ್ನು ಆಯ್ಕೆ ಮಾಡಿ “ಈಗಲೇ ಅನ್ವಯಿಸು” ಕ್ಲಿಕ್ ಮಾಡಿ.
ಮೊಬೈಲ್ ಸಂಖ್ಯೆ ಅಥವಾ ಜಿಮೇಲ್ ಐಡಿ ಮೂಲಕ ನೋಂದಣಿ ಮಾಡಿ.
ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
ನಿಯಮ ಮತ್ತು ಷರತ್ತುಗಳನ್ನು ಅಂಗೀಕರಿಸಿ ಅರ್ಜಿಯನ್ನು ಸಲ್ಲಿಸಿ.
ಯಶಸ್ವಿಯಾಗಿ ಸಲ್ಲಿಸಿದ ನಂತರ ನಿಮ್ಮ ಅರ್ಜಿ ಪ್ರಕ್ರಿಯೆಗೆ ಸೇರುತ್ತದೆ.
ಕೊನೆಯ ದಿನಾಂಕ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15 ನವೆಂಬರ್ 2025 ಆಗಿದೆ. ವಿದ್ಯಾರ್ಥಿಗಳು ತಡಮಾಡದೆ ಬೇಗ ಅರ್ಜಿ ಸಲ್ಲಿಸುವುದು ಒಳಿತು.
ಎಸ್ಬಿಐ ವಿದ್ಯಾರ್ಥಿವೇತನವು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಭವಿಷ್ಯ ನಿರ್ಮಿಸಲು ಮಹತ್ವದ ಹಾದಿ. ವಿಶೇಷವಾಗಿ SC/ST ಹಾಗೂ ಮಹಿಳಾ ವಿದ್ಯಾರ್ಥಿಗಳಿಗೆ ಮೀಸಲಾತಿ ಒದಗಿಸಿರುವುದು ಸಮಾಜದಲ್ಲಿ ಸಮಾನ ಶಿಕ್ಷಣದ ಅವಕಾಶಗಳನ್ನು ಒದಗಿಸುವ ಹೆಜ್ಜೆ. ಉತ್ತಮ ಅರ್ಹತೆ ಹೊಂದಿರುವ ವಿದ್ಯಾರ್ಥಿಗಳು ಈ ಅವಕಾಶವನ್ನು ತಪ್ಪದೆ ಬಳಸಿಕೊಳ್ಳಬೇಕು.

ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




