ರಾಜ್ಯದ ಬಿಪಿಎಲ್ ಕಾರ್ಡ್ ಫಲಾನುಭವಿಗಳಿಗೆ ಡಿಸೆಂಬರ್’ನಿಂದ ಸಿಗಲಿದೆ ರೇಷನ್.!

IMG 20241129 WA0000

ಎಲ್ಲಾ ಪಡಿತರ ಕಾರ್ಡ್‌ಗಳನ್ನು(Ration cards) ಮೊದಲಿನಂತೆ ಮುಂದುವರಿಸಲು ಆಹಾರ ಇಲಾಖೆ ಅಧಿಕಾರಿಗಳಿಗೆ(Food Department Officers) ಸೂಚಿಸಲಾಗಿದೆ. ನ.28ರ ಒಳಗೆ ಬಿಪಿಎಲ್‌(BPL) ಪಡಿತರದಾರರ ಸಮಸ್ಯೆ ಪರಿಹರಿಸಿ, 29.ರಿಂದ ಪಡಿತರ ವಿತರಣೆ ಮಾಡಲು ಸೂಚನೆ ನೀಡಿದ್ದೇನೆ ಎಂದು ಆಹಾರ ಸಚಿವ ಕೆ.ಎಚ್ ಮುನಿಯಪ್ಪ(Minister KH Muniyappa) ತಿಳಿಸಿದ್ದಾರೆ. ಈ ಸಮಸ್ಯೆಯ ಕುರಿತು ಸರ್ಕಾರ ತೆಗೆದುಕೊಂಡ ನಿಲುವು ಏನು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ರಾಜ್ಯದಲ್ಲಿ ಪದೇ ಪದೇ ಅಸಮರ್ಪಕ ಚೀಟಿ ವಿತರಣೆಯಿಂದ ಬಡವರ ಅಕ್ಕಿ ಅನರ್ಹ ವ್ಯಕ್ತಿಗಳ ಪಾಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿದ್ದವು. ಇದನ್ನು ಮನಗಂಡ ರಾಜ್ಯ ಸರ್ಕಾರ(State government) ಅನರ್ಹ ಕಾರ್ಡ್(Ineligible card) ರದ್ದುಗೊಳಿಸುವ ಭರದಲ್ಲಿ ಅರ್ಹ ಬಡವರ ಚೀಟಿಯನ್ನೂ ಅನರ್ಹಗೊಳಿಸಿತ್ತು. ನಂತರ ತೀವ್ರ ವಿರೋಧ ಬಂದ ಹಿನ್ನಲೆ ಇದೀಗ ಅರ್ಹರಿಗೆ ಆದ ಅನ್ಯಾಯ ತಡೆಯಲು ಸರ್ಕಾರ ಮುಂದಾಗಿದೆ.

ಅನರ್ಹಗೊಂಡಿರುವ ತೆರಿಗೆ ಪಾವತಿದಾರರು ಮತ್ತು ಸರ್ಕಾರಿ ನೌಕರರ(Government employees) ಪಡಿತರ ಕಾರ್ಡ್‌ಗಳನ್ನು ಎಪಿಎಲ್‌ಗೆ(APL) ವರ್ಗಾಯಿಸಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಗಳ(Chief Ministers) ಜತೆ ಚರ್ಚಿಸಿದ್ದೇನೆ. ಅವರ ನಿರ್ದೇಶನದಂತೆ ಬಡವರ ಪಡಿತರ ಕಾರ್ಡ್ಗಳನ್ನು ಮೊದಲಿನಂತೆ ಮುಂದುವರಿಸಲಾಗುವುದು ಎಂದು ಅಹಾರ ಸಚಿವರು ಮಾಹಿತಿ ನೀಡಿದ್ದಾರೆ.

ಈಗಾಗಲೇ ರಾಜ್ಯದಲ್ಲಿ ಶೇ. 90 ರಷ್ಟು ಕಾರ್ಡ್​ಗಳನ್ನು ಎಪಿಎಲ್​ನಿಂದ ಬಿಪಿಎಲ್ ಗೆ ಮರುಸ್ಥಾಪಿಸಲಾಗಿದೆ. ರಾಜಧಾನಿಯಲ್ಲಿ ಶೇ. 95 ರಷ್ಟು ಬಿಪಿಎಲ್ ಕಾರ್ಡ್ ಮರುಸ್ಥಾಪನೆಯಾಗಿದ್ದು, ಉಳಿದ ಕಾರ್ಡ್ ಸರಿಪಡಿಸಲು ಇನ್ನೆರಡು ದಿನ ಕಾಲವಕಾಶವಿದೆ.

ತೆರಿಗೆ ಪಾವತಿದಾರರ(tax payers) 1,06,152 ಬಿಪಿಎಲ್ ಕಾರ್ಡ್​ಗಳನ್ನು ಕೂಡಾ ರದ್ದು ಮಾಡಲಾಗಿತ್ತು. ಸದ್ಯ ಈ ಕಾರ್ಡ್​ಗಳನ್ನು ಮತ್ತೆ ಕಾರ್ಯಗತ ಮಾಡಲಾಗಿದೆ. ಆ ನಂತರ ಆಹಾರ ಇಲಾಖೆ ಮರು ಪರಶೀಲನೆ ಮಾಡಲಿದೆ.

ಈಗಾಗಲೇ ಆಹಾರ ಸರಬರಾಜು ಇಲಾಖೆ ನಿರ್ದೇಶಕರು, ಉಪ ನಿರ್ದೇಶಕರ ಲಾಗಿನ್‌ ಐಡಿಯಲ್ಲಿ ಕಾರ್ಡ್ ವರ್ಗಾವಣೆ ಮತ್ತು ಅರ್ಹ ಪಡಿತರರ ರದ್ದಾದ ಕಾರ್ಡ್ ಗಳನ್ನು ಪುನರ್ ಸ್ಥಾಪಿಸಲು ಅವಕಾಶ ನೀಡಲಾಗಿದೆ.

NIC (National Informatics Centre) ತಂತ್ರಾಂಶ ಎಕ್ಸ್ಪರ್ಟ್​ಗಳ ಜೊತೆ ಆಹಾರ ಇಲಾಖೆ ಸಭೆ ನಡೆಸಿದ್ದು, ಬಿಪಿಎಲ್ ಕಾರ್ಡ್ ಮರು ಪರಶೀಲನೆಗೆ ಇದ್ದ ತಾಂತ್ರಿಕ ಸಮಸ್ಯೆ(Technical problem) ಮತ್ತು ಕಾರ್ಡ್ಗಳಲ್ಲಿದ್ದ ದೋಷ ಸರಿಪಡಿಸಲು ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳುವಂತೆ ಅಧಿಕಾರಿಗಳಿಂದ ನಿರ್ದೇಶನ ಹೊರಡಿಸಲಾಗಿದೆ.

ಈ ಮಾಹಿತಿಗಳನ್ನು ಓದಿ

 

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!