ಸರಕಾರಿ ಶಾಲೆಗಳಲ್ಲಿ ಪಾಠದ ಸಮಯದಲ್ಲಿ ಶೈಕ್ಷಣಿಕೇತರ ಕಾರ್ಯಕ್ರಮಗಳಿಗೆ ನಿರ್ಬಂಧ — ವಿದ್ಯಾರ್ಥಿ-ಶಿಕ್ಷಕರ ಶೈಕ್ಷಣಿಕ ಸಮಯ ಸಂರಕ್ಷಣೆ ಕಡ್ಡಾಯ
ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು (Government school children’s and Teacher’s) ಪಾಠದ ಅವಧಿಯಲ್ಲೇ ವಿವಿಧ ಶೈಕ್ಷಣಿಕೇತರ ಕಾರ್ಯಕ್ರಮಗಳಿಗೆ ಕರೆದೊಯ್ಯುವ ಘಟನೆಗಳು ಹೆಚ್ಚುತ್ತಿವೆ. ರಾಜಕೀಯ ಸಭೆಗಳು, ಜನಪ್ರತಿನಿಧಿಗಳ ಕಾರ್ಯಕ್ರಮಗಳು, ಸರ್ಕಾರೇತರ ಸಂಸ್ಥೆಗಳ ಕಾರ್ಯಕ್ರಮಗಳು, ಸಂಘಟನೆಗಳ ಸಮಾರಂಭಗಳು ಇತ್ಯಾದಿಗಳಲ್ಲಿ ವಿದ್ಯಾರ್ಥಿಗಳನ್ನು ‘ಪ್ರೇಕ್ಷಕರಾಗಿ’ ಹಾಜರು ಮಾಡುವ ಪ್ರವೃತ್ತಿ ಸಾಮಾನ್ಯವಾಗಿಬಿಟ್ಟಿದೆ. ಇದರಿಂದ ತರಗತಿ ವೇಳಾಪಟ್ಟಿ (Timetable) ವ್ಯತ್ಯಯಗೊಂಡು, ಪಾಠ-ಕಲಿಕೆಯ ಗುಣಮಟ್ಟ ಕುಸಿಯುವ ಆತಂಕ ವ್ಯಕ್ತವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈ ಹಿನ್ನೆಲೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (Department of School Education and Literacy) ಮಹತ್ವದ ತೀರ್ಮಾನ ಕೈಗೊಂಡಿದ್ದು, ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಶೈಕ್ಷಣಿಕ ಸಮಯವನ್ನು ಸಂರಕ್ಷಿಸುವ ಉದ್ದೇಶದಿಂದ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ. ರಶ್ಮಿ ಮಹೇಶ್ ಸಹಿ ಮಾಡಿದ ಈ ಆದೇಶವು, ತರಗತಿ ಅವಧಿಯಲ್ಲಿ ಯಾವುದೇ ಬಾಹ್ಯ ಚಟುವಟಿಕೆಗಳಿಗೆ ವಿದ್ಯಾರ್ಥಿ-ಶಿಕ್ಷಕರ ಬಳಕೆಗೆ ‘ಬ್ರೇಕ್’ ಹಾಕಿದೆ.
ವಿದ್ಯಾರ್ಥಿಗಳಿಗೆ ಸ್ಪಷ್ಟ ನಿರ್ಬಂಧ:
ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳನ್ನು ಹೊರಗಿನ ಯಾವುದೇ ಕಾರ್ಯಕ್ರಮಗಳಿಗೆ ‘ಪ್ರೇಕ್ಷಕರಾಗಿ’ ಕರೆದೊಯ್ಯುವುದಕ್ಕೆ ನಿರ್ಬಂಧ.
ಜನಪ್ರತಿನಿಧಿಗಳು, ರಾಜಕೀಯ ಮುಖಂಡರು, ಸರ್ಕಾರೇತರ ಸಂಘಟನೆಗಳ ಶೈಕ್ಷಣಿಕೇತರ ಕಾರ್ಯಕ್ರಮಗಳಿಗೆ ವಿದ್ಯಾರ್ಥಿಗಳನ್ನು ಕರೆದೊಯ್ಯುವಂತಿಲ್ಲ.
ಈ ನಿಯಮ ಉಲ್ಲಂಘಿಸಿದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು.
ಶಿಕ್ಷಕರ ಬಳಕೆಯ ಮೇಲೂ ನಿಯಂತ್ರಣ:
ಶಾಲಾ ಸಮಯದಲ್ಲಿ ಶಿಕ್ಷಕರನ್ನು ತರಬೇತಿ, ಕಾರ್ಯಾಗಾರ, ಸಭೆ ಮುಂತಾದಕ್ಕೆ ಕರೆದೊಯ್ಯಬಾರದು.
ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ (District Panchayath CEO) ಸೇರಿದಂತೆ ಯಾರೂ ಮೌಖಿಕ ಅಥವಾ ಲಿಖಿತ ಆದೇಶದ ಮೂಲಕ ಶಿಕ್ಷಕರನ್ನು ಕರ್ತವ್ಯದಿಂದ ದೂರ ಮಾಡಬಾರದು.
ತರಗತಿ ಅವಧಿಯಲ್ಲಿ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರನ್ನು ಸಭೆಗಳಿಗೆ ಕರೆಯುವುದು, ವಿಡಿಯೋ ಕಾನ್ಫರೆನ್ಸ್ ನಡೆಸುವುದು ನಿಷೇಧ.
ಅಧಿಕಾರಿಗಳು ಶಾಲೆಗೆ ಭೇಟಿ ನೀಡುವಾಗ, ಪಾಠಕ್ಕೆ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು.
ಬಾಹ್ಯ ಪರೀಕ್ಷೆಗಳಿಗೂ ಬ್ರೇಕ್:
ಶಾಲಾ ದಿನಗಳಲ್ಲಿ ಕೆಪಿಎಸ್‌ಸಿ, ಕೇಂದ್ರ/ರಾಜ್ಯ ಸರ್ಕಾರ, ಖಾಸಗಿ ಸಂಸ್ಥೆಗಳ ಬಾಹ್ಯ ಪರೀಕ್ಷೆಗಳನ್ನು ನಡೆಸಬಾರದು.
ಅಗತ್ಯವಿದ್ದರೆ, ಅದು ಸಾರ್ವಜನಿಕ ರಜೆ ಅಥವಾ ಬೇಸಿಗೆ ರಜೆಯಲ್ಲೇ ನಡೆಯಬೇಕು.
ಡೇಟಾ ಎಂಟ್ರಿ (Data entry) ಕೆಲಸಕ್ಕೂ ‘ನೋ’:
ಶಿಕ್ಷಕರು ಅಥವಾ ಮುಖ್ಯ ಶಿಕ್ಷಕರಿಗೆ ಸಾಫ್ಟ್‌ವೇರ್‌ಗಳಲ್ಲಿ ಡೇಟಾ ಎಂಟ್ರಿ ಮಾಡುವಂತೆ ಯಾವುದೇ ಅಧಿಕಾರಿಗಳು ಅಥವಾ ಖಾಸಗಿ ಜ್ಞಾನ ಪಾಲುದಾರರು ಸೂಚನೆ ನೀಡಬಾರದು.
ಆದೇಶದ ಉದ್ದೇಶ ಏನು?:
ಈ ನಿರ್ದೇಶನಗಳ ಪ್ರಮುಖ ಉದ್ದೇಶ,
ತರಗತಿ ವೇಳಾಪಟ್ಟಿಯನ್ನು ಅಡ್ಡಿಪಡಿಸದೆ ಬೋಧನೆ-ಕಲಿಕೆ ನಡೆಯುವಂತೆ ನೋಡಿಕೊಳ್ಳುವುದು.
ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ (For academic advancement) ಆದ್ಯತೆ ನೀಡುವುದು.
ಪಾಠದ ಗುಣಮಟ್ಟವನ್ನು ಸುಧಾರಿಸುವುದು ಮತ್ತು ಫಲಿತಾಂಶದಲ್ಲಿ ಹಿತಕರ ಬದಲಾವಣೆ ತರುವುದು.
“ಈ ಆದೇಶ ಖಾಸಗಿ ಶಾಲೆಗಳಿಗೂ ಅನ್ವಯಿಸಬೇಕು. ವಿದ್ಯಾರ್ಥಿಗಳನ್ನು ಹೊರಗಿನ ಶೈಕ್ಷಣಿಕೇತರ ಕಾರ್ಯಕ್ರಮಗಳಿಗೆ ಕರೆದೊಯ್ಯುವುದು ಸಾಮಾನ್ಯವಾಗಿದೆ, ಇದನ್ನು ತಡೆಯಲು ಕಟ್ಟುನಿಟ್ಟಾಗಿ ಕ್ರಮ ಜಾರಿಗೊಳಿಸಬೇಕು.”ಎಂದು ಪಟೇಲ್ ಸಿ. ರಾಜು, ಅನುದಾನರಹಿತ ಖಾಸಗಿ ಶಾಲಾ ಆಡಳಿತ ಮಂಡಳಿ ಒಕ್ಕೂಟದ ಬೆಂಗಳೂರು ದಕ್ಷಿಣ ಜಿಲ್ಲಾ ಮಾಜಿ ಅಧ್ಯಕ್ಷ ಅಭಿಪ್ರಾಯ ಪಟ್ಟಿದ್ದಾರೆ.
“ವಿದ್ಯಾರ್ಥಿಗಳನ್ನು ಪ್ರೇಕ್ಷಕರಾಗಿ ಕರೆದೊಯ್ಯುವ, ಶೈಕ್ಷಣಿಕೇತರ ಕೆಲಸಗಳಿಗೆ ಶಿಕ್ಷಕರ ಬಳಕೆಯ ಕುರಿತು ಹಲವು ದೂರುಗಳು ಬಂದಿದ್ದವು. ಆ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ.”ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ. ರಶ್ಮಿ ಮಹೇಶ್ ತಿಳಿಸಿದ್ದಾರೆ.
ಒಟ್ಟಾರೆಯಾಗಿ, ಈ ಆದೇಶವು ಶಾಲಾ ಶಿಕ್ಷಣ ಕ್ಷೇತ್ರದಲ್ಲಿ ಶಿಸ್ತಿನ ಮತ್ತು ಶೈಕ್ಷಣಿಕ ಸಮಯದ ಮಹತ್ವವನ್ನು (The importance of discipline and academic time in the field of school education) ಬಲಪಡಿಸುತ್ತದೆ. ಪಾಠದ ಸಮಯದಲ್ಲಿ ಬಾಹ್ಯ ಚಟುವಟಿಕೆಗಳ ಆಕರ್ಷಣೆಗೂ, ಒತ್ತಡಕ್ಕೂ ವಿದ್ಯಾರ್ಥಿ-ಶಿಕ್ಷಕರನ್ನು ಒಳಪಡಿಸದಂತೆ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದಲ್ಲಿ, ತರಗತಿ-ಮಟ್ಟದ ಬೋಧನೆ-ಕಲಿಕೆ ಗುಣಮಟ್ಟದಲ್ಲಿ ದೊಡ್ಡ ಬದಲಾವಣೆ ಕಾಣಬಹುದು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.