E-khata: ಆಸ್ತಿ  ಇ-ಖಾತಾ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್ ?

IMG 20241123 WA0002 1

ಕಂದಾಯ ಇಲಾಖೆ (Revenue Department)  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ನಗರಾಭಿವೃದ್ಧಿ-ಪೌರಾಡಳಿತ ಇಲಾಖೆಯ ಸಮನ್ವಯದಿಂದ ಭೂಮಿಯ ಇ-ಖಾತಾ (e- khata) ವ್ಯವಸ್ಥೆ ಮತ್ತು ಭೂಪರಿವರ್ತಿತ ಜಮೀನುಗಳ ನೋಂದಣೆ(property registration)ಗೆ ಸಂಬಂಧಿಸಿದ ಗೊಂದಲಗಳಿಗೆ ಪ್ರಮುಖ ಪರಿಹಾರಗಳನ್ನು ಒದಗಿಸಲಾಗಿದೆ. ಈ ಕ್ರಮಗಳು, ಭೂಮಿಯ ಶ್ರೇಣೀಕರಣ ಮತ್ತು ಪಟ್ಟಣಾಭಿವೃದ್ಧಿ ಪ್ರಕ್ರಿಯೆಗಳಲ್ಲಿ ತಾಂತ್ರಿಕ ಸುಧಾರಣೆಯನ್ನೂ ಬೇರೋನೇಯಾಗಿವೆ.

ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಭೂಪರಿವರ್ತಿತ ಜಮೀನುಗಳಿಗೆ ಇ-ಖಾತಾ ಮತ್ತು ನೋಂದಣಿ (E-accounting and registration for land converted lands) :

ಭೂಪರಿವರ್ತನೆಗೊಂಡ ಜಮೀನುಗಳಿಗೆ ಆಸ್ತಿ ಗುರುತಿನ ಸಂಖ್ಯೆ (ಇ-ಖಾತಾ) ನೀಡುವುದು ಕಡ್ಡಾಯ ಎಂದು ಇಲಾಖೆ ತಿಳಿಸಿದೆ. ಭೂಪರಿವರ್ತಿತ ಜಮೀನುಗಳಲ್ಲಿ ಅಭಿವೃದ್ಧಿ ಕಾರ್ಯ ನಡೆಯದೆ ಇದ್ದಲ್ಲಿ, ಇ-ಖಾತಾ (e- khata) ಆಧಾರದ ಮೇಲೆ ಮಾತ್ರ ವಹಿವಾಟು ನಡೆಯಲು ಅವಕಾಶ ನೀಡಲಾಗುತ್ತದೆ. ಆದರೆ, ಇ-ಖಾತಾ ಪ್ರಕ್ರಿಯೆ ಅವಧಿ ಅನುಸರಿಸದಿದ್ದಲ್ಲಿ, ಇಂತಹ ಜಮೀನುಗಳನ್ನು ಕೃಷಿಯೇತರ ಅಭಿವೃದ್ಧಿಯಾಗದ ಜಮೀನುಗಳೆಂದು ಪರಿಗಣಿಸಲಾಗುವುದು.

ಭೂಮಿ ತಂತ್ರಾಂಶದಲ್ಲಿ ತಾಂತ್ರಿಕ ಸುಧಾರಣೆ (Technological improvement in land software) :

ಭೂಮಿ ತಂತ್ರಾಂಶದಲ್ಲಿ ಅಗತ್ಯ ತಾಂತ್ರಿಕ ಪರಿಷ್ಕರಣೆಗಳನ್ನು ಮಾಡಲಾಗಿದ್ದು, ಭೂಪರಿವರ್ತನೆಯಾದ ಜಮೀನುಗಳಿಗೆ ಮಾರುಕಟ್ಟೆ ಮೌಲ್ಯ ಆಧಾರಿತ ನಿಗಮಣೆಯನ್ನು ಮಾಡಲಾಗುತ್ತದೆ. ಇದರಿಂದ ಜಮೀನುಗಳ ನೋಂದಣಿ(Land registration) ಮತ್ತು ಮುದ್ರಾಂಕ ಶುಲ್ಕ ಪಾವತಿಯಲ್ಲಿ (Stamp duty payment ) ಸ್ಪಷ್ಟತೆಯನ್ನು ತರಲಾಗಿದೆ.

ಯೋಜನಾ ಪ್ರಾಧಿಕಾರಗಳಿಂದ ಅನುಮೋದನೆ ಪಡೆದ ಬಡಾವಣೆಗಳಲ್ಲಿ ವಿವರಣೆ (Description of plots approved by planning authorities):

ಅನುಮೋದಿತ ಬಡಾವಣೆಗಳಲ್ಲಿ ರಸ್ತೆ, ಪಾರ್ಕ್, ಆಟದ ಮೈದಾನಗಳನ್ನು ಸ್ಥಳೀಯ ಸಂಸ್ಥೆಗಳಿಗೆ ಪರಿತ್ಯಾಗ ಮಾಡುವುದು ಕಡ್ಡಾಯ. ಈ ಅಂಶದಲ್ಲಿ ಇರುವ ಗೊಂದಲಗಳನ್ನು ಪರಿಹರಿಸಿ, ಬಡಾವಣೆಗಳ ಅಂಗೀಕಾರ ಮತ್ತು ನಿವೇಶನ ಮಾರಾಟದ ಪ್ರಕ್ರಿಯೆ ಸುಗಮಗೊಳಿಸಲಾಗಿದೆ.

ಇ-ಸ್ವತ್ತು ಮತ್ತು ಇ-ಆಸ್ತಿ ತಂತ್ರಾಂಶಗಳ ಸಂಯೋಜನೆ (Integration of e-asset and e-asset software ):

ಭೂಪರಿವರ್ತನೆಗೊಂಡ ಭೂಮಿಯ ಪಹಣಿಗಳನ್ನು ಇ-ಸ್ವತ್ತು ಮತ್ತು ಇ-ಆಸ್ತಿ ತಂತ್ರಾಂಶದೊಂದಿಗೆ ಸಿಂಕ್ರೊನೈಸ್ (Synchronize) ಮಾಡಲಾಗುತ್ತಿದ್ದು, ಇ-ಖಾತಾ ಮೂಲದ ನೋಂದಣಿ ಮಾತ್ರ ಅನುಮತಿಸಲಾಗುತ್ತಿದೆ. ಇದರಿಂದ ಭೂಮಿಯ ದಾಖಲೆ ಮತ್ತು ವಹಿವಾಟುಗಳಲ್ಲಿ ಸುಧಾರಣೆ ಮತ್ತು ದೃಢತೆಯನ್ನು ತರಲು ಬದ್ಧತೆಯನ್ನು ತೋರಿಸಲಾಗಿದೆ.

ಕೊನೆಯದಾಗಿ,ಈ ತೀರ್ಮಾನಗಳು ಕೇವಲ ಆಡಳಿತ ಸುಧಾರಣೆ ಮಾತ್ರವಲ್ಲ, ಭೂಮಿಯ ಪ್ರಾಮಾಣಿಕತೆ, ವಹಿವಾಟುಗಳಲ್ಲಿ ಸ್ಪಷ್ಟತೆ ಮತ್ತು ಸಾರ್ವಜನಿಕರ ಹಿತಾಸಕ್ತಿಗಳ ಅನುಕೂಲತೆಗಳಿಗೆ ಕೂಡ ಮಾರ್ಗದರ್ಶಕವಾಗಿದೆ. ಇ-ಖಾತಾ ವ್ಯವಸ್ಥೆಯ ಮೂಲಕ ಭೂಪರಿವರ್ತನೆ ಮತ್ತು ಭೂಮಿಯ ಉದ್ದೇಶದ ಪರಿಷ್ಕರಣೆ ಪ್ರಕ್ರಿಯೆ ಹೆಚ್ಚು ಜವಾಬ್ದಾರಿತನವನ್ನು ಹೊತ್ತಿದೆ. ಇದರಿಂದ ಭೂಮಿಯ ಬಳಕೆ ಮತ್ತು ನಗರಾಭಿವೃದ್ಧಿಯ ಪ್ರಗತಿಗೆ ಬಿಗಿ ನಡುಕಟ್ಟಾಗಿ ಕಾರ್ಯನಿರ್ವಹಿಸಲಾಗುತ್ತಿದೆ. ಮತ್ತು ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ವರದಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!