ಯುವಕರಿಗೆ ಭವಿಷ್ಯ ಕಟ್ಟುವ ಸರಳ ದಾರಿ: ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆಯ (PMKVY 4.0) ಸಂಪೂರ್ಣ ಮಾಹಿತಿ

Picsart 25 07 20 00 08 44 930

WhatsApp Group Telegram Group

ಭಾರತವು ಪ್ರಗತಿಪಥದಲ್ಲಿರುವ ದೇಶವಾಗಿದ್ದು, ಇದರ ಯುವ ಶಕ್ತಿಯೇ ದೇಶದ ಅತಿದೊಡ್ಡ ಸಂಪತ್ತು. ಆದಾಗ್ಯೂ, ಈ ಯುವ ಶಕ್ತಿಯನ್ನು ಸೂಕ್ತ ಮಾರ್ಗದಲ್ಲಿ ಬಳಸಬೇಕಾದರೆ ಅವರಿಗೆ ಉದ್ಯೋಗಪರ ಹಾಗೂ ವೃತ್ತಿಪರ ಕೌಶಲ್ಯ ತರಬೇತಿ(skills training) ನೀಡುವುದು ಅತ್ಯಗತ್ಯ. ಇತ್ತೀಚಿನ ವರ್ಷಗಳಲ್ಲಿ ಉದ್ಯೋಗದ ಬೇಡಿಕೆಗಳು ಸಂಪೂರ್ಣ ಬದಲಾಗಿದ್ದು, ಸೈದ್ಧಾಂತಿಕ ಶಿಕ್ಷಣಕ್ಕಿಂತಲೂ ಕಾರ್ಯಚಟುವಟಿಕೆಗೆ ಮಹತ್ವ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ “ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ (PMKVY)” ಯುವಕರಿಗೆ ಹೊಸ ಬಾಗಿಲುಗಳನ್ನು ತೆರೆದಿದೆ. ಹಾಗಿದ್ದರೆ PMKVY ಯೋಜನೆ ಎಂದರೇನು? ಇದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? PMKVY ತರಬೇತಿಯ ವಿಧಗಳು ಯಾವುವು ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

PMKVY ಯೋಜನೆ ಎಂದರೇನು?

ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ (PMKVY) 2015 ರಲ್ಲಿ ಆರಂಭಗೊಂಡ ಕೌಶಲ್ಯ ಅಭಿವೃದ್ಧಿ ಯೋಜನೆಯಾಗಿದ್ದು, ಇದು ಯುವಕರ ಉದ್ಯೋಗಾರ್ಹತೆಯನ್ನು ಹೆಚ್ಚಿಸಲು ಉಚಿತವಾಗಿ ವೃತ್ತಿಪರ ತರಬೇತಿಗಳನ್ನು ನೀಡುತ್ತದೆ. ಈ ಯೋಜನೆಯು “ಕೌಶಲ್ಯ ಭಾರತ ಮಿಷನ್” ಅಡಿಯಲ್ಲಿ ನಡಸಲಾಗುತ್ತದೆ ಮತ್ತು ಇತ್ತೀಚೆಗೆ ನೂತನ ಆವೃತ್ತಿಯಾದ PMKVY 4.0 ಜಾರಿಗೆ ಬಂದಿದೆ.

ಯೋಜನೆಯ ಉದ್ದೇಶ:

PMKVY ಯೋಜನೆಯ ಮೂಲ ಗುರಿಯೆಂದರೆ ದೇಶದ ಯುವಕರಿಗೆ ಉದ್ಯೋಗಕ್ಕೆ ತಯಾರಾಗುವಂತಹ ಕೌಶಲ್ಯ ತರಬೇತಿ ಒದಗಿಸಿ, ಅವರನ್ನು ಸ್ವಾವಲಂಬಿ ಮತ್ತು ಉದ್ಯೋಗಯೋಗ್ಯರಾಗಿಸಲು ಪ್ರೇರೇಪಿಸುವುದು. ಈ ಮೂಲಕ ದೇಶದ ಉದ್ಯೋಗ ಶಕ್ತಿಯ ಮಟ್ಟವನ್ನು ಉನ್ನತಗೊಳಿಸಿ, “ಸ್ಕಿಲ್ ಇಂಡಿಯಾ(Skill India)” ದೃಷ್ಟಿಕೋನವನ್ನು ಸಾಕಾರಗೊಳಿಸುವ ಪ್ರಯತ್ನ ಇದು.

PMKVY 4.0 ಯೋಜನೆಯ ಪ್ರಮುಖ ಹೈಲೈಟ್ಸ್ (2022–2026):

ನೂತನ ತಂತ್ರಜ್ಞಾನ ಹಾಗೂ ಉದ್ಯಮದ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ತರಬೇತಿ ರೂಪುಗಳನ್ನು ರೂಪಿಸಲಾಗಿದೆ.
ಫ್ಲೆಕ್ಸಿಬಲ್ ಹಾಗೂ ಸ್ಪಂದನಶೀಲ ತರಬೇತಿ ಮಾದರಿಗಳು ರೂಪುಗೊಂಡಿವೆ.
ಡೆಮಾಂಡ್-ಡ್ರಿವನ್ ಕೋರ್ಸ್‌ಗಳು, ಹೆಚ್ಚಿನ ಉದ್ಯೋಗದ ಸಾಧ್ಯತೆಗಳತ್ತ ದಾರಿ.

PMKVY ತರಬೇತಿಯ ವಿಧಗಳು ಹೀಗಿವೆ:

1. ಅಲ್ಪಾವಧಿ ತರಬೇತಿ (Short-Term Training):
300 ರಿಂದ 600 ಗಂಟೆಗಳವರೆಗೆ.
ಆಯಾ ವಲಯದ ಬೇಡಿಕೆಗೆ ಅನುಗುಣವಾಗಿ ಅವಧಿ ಬದಲಾಗಬಹುದು.
ತರಬೇತಿ ನಂತರ NSDC ಪ್ರಮಾಣಪತ್ರ.

2. ಪೂರ್ವ ಕಲಿಕೆ ಗುರುತಿಸುವಿಕೆ (Recognition of Prior Learning – RPL):
ಈಗಾಗಲೇ ಕೌಶಲ್ಯ ಹೊಂದಿರುವ ಅಭ್ಯರ್ಥಿಗಳಿಗೆ ಪ್ರಮಾಣೀಕರಣ.
ಅನುಭವದ ಮೇಲೆ ಮೌಲ್ಯಮಾಪನ.

3. ವಿಶೇಷ ಯೋಜನೆಗಳು (Special Projects):
ದುರ್ಬಲ, ಹಿಂದುಳಿದ, ವಿಕಲಚೇತನರ ಸಮುದಾಯಗಳಿಗೆ ವಿಶೇಷ ತರಬೇತಿ.
ಉದ್ಯೋಗಕ್ಕೆ ನೇರ ಸಂಬಂಧ ಇರುವ ತರಬೇತಿಗಳು.

ಲಭ್ಯವಿರುವ ಪ್ರಮುಖ ವಲಯ ಮತ್ತು ಕೋರ್ಸ್‌ಗಳು:

ಕೃಷಿವಲಯ(agricultural sector) : ಹೈನುಗಾರಿಕೆ, ಪುಷ್ಪಕೃಷಿ, ಟ್ರ್ಯಾಕ್ಟರ್ ಆಪರೇಟರ್ ಕೋರ್ಸ್‌ಗಳು.
ಆಟೋಮೋಟಿವ್ ವಲಯ(Automotive sector): ಜೂನಿಯರ್ ಮೆಕ್ಯಾನಿಕ್, ಮಾರಾಟ ಸಲಹೆಗಾರ ಕೋರ್ಸ್‌ಗಳು.
ಸೌಂದರ್ಯ ಮತ್ತು ಆರೈಕೆವಲಯ : ಕೇಶ ವಿನ್ಯಾಸ, ಮೇಕಪ್ ಆರ್ಟಿಸ್ಟ್ ಕೋರ್ಸ್‌ಗಳು.
ಐಟಿ / ಐಟಿಇಎಸ್ ವಲಯ : ಗ್ರಾಫಿಕ್ ಡಿಸೈನ್, ಕ್ಲೌಡ್ ಕಂಪ್ಯೂಟಿಂಗ್, ವೆಬ್ ಡೆವಲಪ್ಮೆಂಟ್ ಕೋರ್ಸ್‌ಗಳು.
ಮಾಧ್ಯಮ ಮತ್ತು ಮನರಂಜನೆ(Media and Entertainment): ನಟ, ಸಂಪಾದಕ, ಕ್ಯಾಮೆರಾಮನ್ ಕೋರ್ಸ್‌ಗಳು.
ಆರೋಗ್ಯ ರಕ್ಷಣೆ ವಲಯ(Health care sector): ಪ್ಯಾರಾಮೆಡಿಕಲ್ ಸಹಾಯಕ, ಫಾರ್ಮಸಿ ಸಹಾಯಕ ಕೋರ್ಸ್‌ಗಳು.
ಪ್ರವಾಸೋದ್ಯಮವಲಯ(Tourism sector) : ಹೋಟೆಲ್ ಹೌಸ್ ಕೀಪಿಂಗ್, ಮಾರ್ಗದರ್ಶಕ ಕೋರ್ಸ್‌ಗಳು.
ಇನ್ನೂ ಅನೇಕ ವಲಯಗಳಲ್ಲಿ ಕೋರ್ಸ್‌ಗಳು ಲಭ್ಯವಿದ್ದು, ಅಭ್ಯರ್ಥಿಯ ಆಸಕ್ತಿ ಹಾಗೂ ಅರ್ಹತೆ ಆಧಾರಿತವಾಗಿ ಆಯ್ಕೆ ಮಾಡಬಹುದು.

ಯೋಜನೆಯ ಪ್ರಮುಖ ಲಕ್ಷಣಗಳು:

ಉದ್ಯಮಾನುಗುಣ ತರಬೇತಿ ನೀಡಿ ಉದ್ಯೋಗಾರ್ಹತೆಯನ್ನೂ ಹಾಗೂ ಜೀವನೋಪಾಯವನ್ನೂ ಸುಧಾರಿಸುವುದು.
ಪೂರ್ವ ಕಲಿಕೆಯ ಮಾನ್ಯತೆ ನೀಡಿ ಅನುಭವಕ್ಕೆ ಮೌಲ್ಯ ನೀಡುವುದು.
ಸ್ವಯಂ ಉದ್ಯೋಗ ಹಾಗೂ ಉದ್ಯಮಶೀಲತೆಗೆ ಉತ್ತೇಜನೆ.
15–29 ವರ್ಷ ವಯಸ್ಸಿನ ನಿರುದ್ಯೋಗಿ ಯುವಕರಿಗೆ ವಿಶೇಷ ಅವಕಾಶ.

ಅರ್ಜಿ ಸಲ್ಲಿಸುವ ವಿಧಾನ:

ಅನ್‌ಲೈನ್ ವಿಧಾನ:
1. ಮೊದಲು PMKVY ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ https://www.skillindiadigital.gov.in
2. ನೋಂದಣಿ ಮಾಡಿ, KYC ಪ್ರಕ್ರಿಯೆ (ಆಧಾರ್ ಮೂಲಕ OTP ಪರಿಶೀಲನೆ).
3. ಆಸಕ್ತ ಕೋರ್ಸ್ ಆಯ್ಕೆ ಮಾಡಿ.
4. ಅರ್ಜಿ ನಮೂನೆ ಭರ್ತಿ ಮಾಡಿ ಹಾಗೂ ಸಲ್ಲಿಸಿ.
5. ಆಯ್ಕೆಯಾದ ಬಳಿಕ ತರಬೇತಿ ಅವಧಿಗೆ ಹಾಜರಾಗಬೇಕು.
6. ಕೋರ್ಸ್ ಮುಗಿಸಿ NSDC ಪ್ರಮಾಣಪತ್ರ ಪಡೆಯಿರಿ.

ಆಫ್‌ಲೈನ್ ವಿಧಾನ:

ಹತ್ತಿರದ ಮಾನ್ಯತೆ ಪಡೆದ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ.
ಕೋರ್ಸ್‌ಗಳ ಮಾಹಿತಿ ಪಡೆದು ಅರ್ಜಿ ಸಲ್ಲಿಸಿ.
ಅಗತ್ಯ ದಾಖಲೆಗಳು: ಆಧಾರ್ ಕಾರ್ಡ್(Adhar card), ವಿಳಾಸ ಪುರಾವೆ, ಪಾಸ್‌ಪೋರ್ಟ್ ಗಾತ್ರದ ಫೋಟೋ, ಶೈಕ್ಷಣಿಕ ದಾಖಲೆಗಳು ಅಗತ್ಯ.
ತರಬೇತಿಗೆ ಹಾಜರಾಗಿದ ಬಳಿಕ ಪ್ರಮಾಣಪತ್ರ ನೀಡಲಾಗುತ್ತದೆ.

PMKVY ಯೋಜನೆಯ ಪ್ರಯೋಜನಗಳು:

ಉಚಿತ ತರಬೇತಿ :  ಸರ್ಕಾರದಿಂದ ಸಂಪೂರ್ಣವಾಗಿ ಪ್ರಾಯೋಜಿತ.
ಪ್ರಮಾಣೀಕೃತ NSDC ಪ್ರಮಾಣಪತ್ರ : ರಾಷ್ಟ್ರವ್ಯಾಪಿ ಮಾನ್ಯತೆ.
ಉದ್ಯೋಗ ಮೇಳಗಳು : ತರಬೇತಿಯ ಬಳಿಕ ಉದ್ಯೋಗದ ಅವಕಾಶ.
ಆಧುನಿಕ ತರಬೇತಿ ವಿಧಾನಗಳು : ಆನ್‌ಲೈನ್ ತರಬೇತಿಗೂ ಅವಕಾಶ.
ಸ್ವಯಂ ಉದ್ಯೋಗಕ್ಕೂ ಉತ್ತೇಜನೆ.

ಒಟ್ಟಾರೆಯಾಗಿ, ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ ಯುವಕರಿಗೆ ಕೇವಲ ತರಬೇತಿಯನ್ನು ನೀಡುವುದಷ್ಟೇ ಅಲ್ಲದೇ, ಭವಿಷ್ಯದ ಭದ್ರತೆಗೆ ದಾರಿ ತೋರಿಸುವ ದಿಟ್ಟ ಹೆಜ್ಜೆ. ಉಚಿತವಾಗಿ ಪ್ರಾಯೋಗಿಕ ತರಬೇತಿ ಪಡೆದು ಉದ್ಯೋಗ ಅಥವಾ ಉದ್ಯಮ ಆರಂಭಿಸಲು ಇದು ಅಪೂರ್ವ ಅವಕಾಶ. ಈ ಯೋಜನೆಯ ಸದುಪಯೋಗ ಪಡೆಯುವುದು ಯುವಕರ ಕೈಯಲ್ಲಿದೆ. ಇಂದೇ ಅರ್ಜಿ ಸಲ್ಲಿಸಿ, ನಿಮ್ಮ ಕನಸಿನ ವೃತ್ತಿಯತ್ತ ಹೆಜ್ಜೆ ಹಾಕಿ!

ಹೆಚ್ಚಿನ ಮಾಹಿತಿಗೆ ಮತ್ತು ಅರ್ಜಿ ಸಲ್ಲಿಸಲು ಕೆಳಗಿನ ವೆಬ್ಸೈಟ್ ಗೆ ಭೇಟಿ ನೀಡಿ:  https://www.skillindiadigital.gov.in

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!