ಈಗಾಗಲೇ ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 10 ( Big Boss) ಅದ್ದೂರಿಯಾಗಿ ನಡೆಯುತ್ತಿದ್ದು. 5 ವಾರಗಳನ್ನು ಯಶಸ್ವಿಯಾಗಿ ಕಳೆದಿದೆ.ಆದರೆ ಈ ಐದು ವಾರಗಳಲ್ಲಿ ಕಿಚ್ಚ ಸುದೀಪ್ ( Kicha Sudeep ) ಅವರು ಎರಡು ಸಲ ಮನ ಮೆಚ್ಚಿ ಚಪ್ಪಾಳೆ ನೀಡಿದ್ದಾರೆ. ಹೌದು ಈ ಹಿಂದೆ ಬಳೆ ವಿಚಾರದ ಬಗ್ಗೆ ಮಾತನಾಡಿ ಸುದೀಪ್ ಚಪ್ಪಾಳೆ ( Clap ) ಮೂಲಕ ಮೆಚ್ಚುಗೆ ಸಲ್ಲಿಸಿದ್ದರು. ಹಾಗೆಯೇ ಈ ವಾರ ಕೂಡ ಸುದೀಪ್ ಚಪ್ಪಾಳೆ ನೀಡಿ ಮೆಚ್ಚುಗೆ ನೀಡಿದ್ದಾರೆ.ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಫಾಲೋ (Follow) ಮಾಡಿ.
ಈ ಹಿಂದೆ ಕಿಚ್ಚ ಸುದೀಪ್ ಅವರು ನನಗೆ ಇಷ್ಟು ವಾರಗಳಲ್ಲಿ ಮನೆಯೊಳಗೆ ಯಾರ ವ್ಯಕ್ತಿತ್ವವೂ ( Character ) ಇಷ್ಟ ಆಗಿಲ್ಲ ಎಂದು ಹೇಳಿದ್ದರು. ಆದರೆ ಈ ವಾರ ಕಿಚ್ಚ ಸುದೀಪ್ ಅವರು ಡ್ರೋನ್ ಪ್ರತಾಪ್ ( Drone Prathap ) ಅವರ ವ್ಯಕ್ತಿತ್ವವನ್ನು ಮೆಚ್ಚಿ ಅವರಿಗೆ ಚಪ್ಪಾಳೆ ನೀಡಿದ್ದಾರೆ. ಹೌದು, ಡ್ರೋಣ್ ಪ್ರತಾಪ್ ಅವರು ಈ ವಾರ ಅತ್ಯುತ್ತಮವಾಗಿ ಆಟವಾಡಿದ್ದಾರೆ. ಅಷ್ಟೇ ಅಲ್ಲದೆ ಇಡೀ ತಂಡವೇ ಎದುರಾದರೂ ಪ್ರಾಮಾಣಿಕವಾಗಿ ಆಟವಾಡಿದ್ದಾರೆ ಮತ್ತು ತಮ್ಮ ತಂಡವನ್ನು ಮುನ್ನಡುಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ಕಾರಣಕ್ಕೆ ಅವರನ್ನು ಮನಸಾರೆ ಮೆಚ್ಚಿ ಕಿಚ್ಚ ಸುದೀಪ್ ಮೆಚ್ಚುಗೆಯ ಚಪ್ಪಾಳೆ’ಯನ್ನು ನೀಡಿದ್ದಾರೆ.

ಕಿಚ್ಚನ ಈ ಮಾತುಗಳನ್ನು ಕೇಳಿ ಡ್ರೋಣ್ ಪ್ರತಾಪ್ ಅವರು ಭಾವುಕರಾಗಿದ್ದಾರೆ ( Emotional ). ಮತ್ತು ಅವರು ಕಿಚ್ಚ ಸುದೀಪ್ ಅವರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ. ಆ ಸಂದರ್ಭದಲ್ಲಿ ಅವರು ಇದು ನನ್ನ ಜೀವನದ ಅತಿದೊಡ್ಡ ಕ್ಷಣ. ಹೌದು ನಾನು ಕೆಲವು ತಪ್ಪುಗಳನ್ನು ಮಾಡಿದ್ದೇನೆ. ಅದನ್ನು ಹೇಳಿಕೊಳ್ಳೋಕೆ ಯಾವುದೇ ಮುಜುಗರ ಇಲ್ಲ ಸರ್, ಆದ್ರೆ ನನ್ನನ್ನು ಕಳ್ಳ ಅಂದವರು, ಸುಳ್ಳ ಅಂದವರು, ನನ್ನ ಬಗ್ಗೆ ಹೀಯಾಳಿಸಿದವರು… ಈಗ ನೆನಪಿಸಿಕೊಂಡ್ರೆ ಮನಸು ತುಂಬಾ ಹಗುರ ಅನಿಸ್ತಿದೆ ಎಂದು ಮನಸ್ಸು ಬಿಚ್ಚಿ ಕಿಚ್ಚನ ಮುಂದೆ ಮಾತನಾಡಿದ್ದಾರೆ.
ಇನ್ನು ನೋಡುವುದಾದರೆ ಕಳೆದ ವಾರ ನಡೆದ ಕಿಚ್ಚನ ವಿಕೇಂಡ್ ಶೋ ನಲ್ಲಿ ಬಳೆ ವಿಚಾರ ಕ್ಕೆ ಬಿಗ್ ಬಾಸ್ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಕರ ಮನಸ್ಸನ್ನು ಗೆದ್ದಿತ್ತು. ಹಾಗೆಯೇ ಈ ವಾರ ಕೂಡ ಬಿಗ್ ಬಾಸ್ ನ ಎಲ್ಲ ಕಡೆಗಳಲ್ಲೂ ಮಿಂಚುತ್ತಿದೆ. ಮತ್ತು ಅತ್ಯಂತ ಹೆಚ್ಚು ರೇಟಿಂಗ್ ಅನ್ನು ಈ ಒಂದು ರಿಯಾಲಿಟಿ ಶೋ ಪಡೆದುಕೊಂಡಿದೆ. ಅದಕ್ಕೆ ಕಾರಣ ಪ್ರಾತಾಪ್ ಅವರು ಆಗಿದ್ದಾರೆ.
ಕಿಚ್ಚ ಸುದೀಪ್ ಅವರು ಮೆಚ್ಚುಗೆಯ ಚಪ್ಪಾಳೆ ನೀಡಿದ್ದು ಈಗಾಗಲೇ ಸೋಷಿಯಲ್ ಮೀಡಿಯಾ( Social Media ) ಗಳಲ್ಲಿ ಹರಿದಾಡುತ್ತಿದೆ. ಮತ್ತು ವೀಕ್ಷಕರು ಇದಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಹಾಗೆಯೇ ಡ್ರೋಣ್ ಪ್ರತಾಪ್ ಅವರಿಗೆ ಕಿಚ್ಚ ಮೆಚ್ಚುಗೆಯ ಚಪ್ಪಾಳೆ ನೀಡಿದ್ದು ಅವರ ತಡ ಮತ್ತು ಅಭಿಮಾನಿಗಳು ಸಂತಸದಲ್ಲಿ ಕುಣಿದಾಡಿದ್ದಾರೆ. ಪ್ರತಾಪ್ ಗೆದ್ದಷ್ಟೇ ಖುಷಿಯಾಯ್ತು, ಹಾಗೆಯೇ ಈ ಸೀಸನ್ ಅನ್ನು ಪ್ರತಾಪ್ ಅವರು ಗೆಲ್ಲಬೇಕು ಎಂದು ಅಭಿಮಾನಿಗಳು ಕಾಮೆಂಟ್ ಮೂಲಕ ತಿಳಿಸುತ್ತಿದ್ದಾರೆ.
ಪ್ರತಿದಿನದ ಬಿಗ್ ಬಾಸ್ ಅಪ್ಡೇಟ್ ಗಳಿಗಾಗಿ ಮತ್ತು ಎಲ್ಲ ಎಪಿಸೋಡ್ ಗಳ ಸಂಪೂರ್ಣ ವರದಿಗಳಿಗೆ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಬಿಗ್ ಬಾಸ್ ಅಪ್ಡೇಟ್ ವಾಟ್ಸಪ್ ಗ್ರೂಪ್ ಲಿಂಕ್ – https://chat.whatsapp.com/DlYwWeN4Xp65JbybcTOPYo
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group





