ಪೋಸ್ಟ್ ಆಫೀಸ್ ನಲ್ಲಿ ( Post Office ) ಹೊಸ ಯೋಜನೆ(new scheme)ಯೊಂದು ಶುರುವಾಗಿದೆ. ಈ ಯೋಜನೆಯು ಹಣ ಉಳಿತಾಯ ( Investment ) ಮಾಡುವವರಿಗೆ ಸಂತಸ ತರಲಿದೆ ಯಾಕೆಂದರೆ ಯೋಜನೆ ಅಡಿಯಲ್ಲಿ ಅಲ್ಪ ಹಣ ಉಳಿತಾಯ ಮಾಡಿದರೆ ಅದು ದುಪ್ಪಟ್ಟಾಗುತ್ತದೆ. ಏನಿದು ಸುದ್ದಿ ಇದರ ಬಗ್ಗೆ ಪೂರ್ಣ ಮಾಹಿತಿಬೇಕೇ ಹಾಗಿದ್ದಲ್ಲಿ ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಪೋಸ್ಟ್ ಆಫೀಸ್ ನ ಹೊಸ ಯೋಜನೆ :
ಹಾಗಾದ್ರೆ ಈ ಯೋಜನೆ ಏನು ಇದರಿಂದ ಏನೆಲ್ಲ ಲಾಭವಿದೆ ನೋಡೋಣ ಬನ್ನಿ.
ಪೋಸ್ಟ್ ಆಫೀಸ್ ನಲ್ಲಿ ಮಂತ್ಲಿ ಇನ್ಕಮ್ ಸ್ಕೀಮ್( Monthly Income Scheme ) ಎಂಬ ಯೋಜನೆ ರೆಡಿಯಾಗಿದೆ. ಇದರಲ್ಲಿ ವಾರ್ಷಿಕ ಬಡ್ಡಿ(interest ) ದರ ಶೇ. 7.4ರಷ್ಟಿದೆ. ಗರಿಷ್ಠ 9,250 ರೂವರೆಗೆ ಮಾಸಿಕ ಆದಾಯ ಪಡೆಯಲು ಅವಕಾಶ ಇದೆ. ಒಬ್ಬ ವ್ಯಕ್ತಿ 9 ಲಕ್ಷ ರೂವರೆಗೂ ಹೂಡಿಕೆ ಮಾಡಬಹುದು.
ನೀವೇನಾದರೂ ಜಂಟಿಯಾಗಿ ಯೋಜನೆ ಪಡೆಯುವುದಾದರೆ 15 ಲಕ್ಷ ರೂವರೆಗೂ ಹೂಡಿಕೆ( Investment ) ಮಾಡಬಹುದು. ನೀವು ಜಂಟಿ ಖಾತೆ(Joint account) ಸೃಷ್ಟಿಸಿ 15 ಲಕ್ಷ ರೂ ಹೂಡಿಕೆ ಮಾಡಿದರೆ ಒಂದು ವರ್ಷಕ್ಕೆ 1.11 ಲಕ್ಷ ರೂ ಮೊತ್ತದಷ್ಟು ಬಡ್ಡಿಯೇ ಸಿಗುತ್ತದೆ. ತಿಂಗಳಿಗೆ 9,250 ರೂ ಅನ್ನು ಪಿಂಚಣಿ ರೀತಿಯಲ್ಲಿ ಪಡೆಯಬಹುದು.
ಇಷ್ಟೇ ಅಲ್ಲದೆ ಪೋಸ್ಟ್ ಆಫೀಸ್ ನಲ್ಲಿ ಇನ್ನು ಹಲವು ಉಳಿತಾಯ ಮತ್ತು ಹೂಡಿಕೆ ಯೋಜನೆಗಳಿವೆ. ಇವೆಲ್ಲವೂ ಸರ್ಕಾರಿ ಬೆಂಬಲಿತ ಸ್ಕೀಮ್ ಗಳಾದ್ದರಿಂದ ವಿಶ್ವಾಸಾರ್ಹ ಮತ್ತು ಸುರಕ್ಷಿತ ಸ್ಕೀಮ್ ಗಳು ಆಗಿವೆ. ಇನ್ನೂ ಕೆಲವು ದೀರ್ಘಕಾಲದ ಹೂಡಿಕೆಗಳೂ ಇವೆ. ಈ ಮಧ್ಯೆ ಮಾಸಿಕ ಆದಾಯ ( Monthly Inconme ) ಸೃಷ್ಟಿಸುವ ಒಂದು ಸ್ಕೀಮ್ ಅನ್ನು ಇಲ್ಲಿ ಗಮನಿಸಬಹುದು. ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ ಅಥವಾ ಮಂತ್ಲಿ ಇನ್ಕಮ್ ಸ್ಕೀಮ್ (Post Office Monthly Income scheme) ಇದು. ಫಿಕ್ಸೆಡ್ ಡೆಪಾಸಿಟ್ ರೀತಿಯಲ್ಲಿ ಒಮ್ಮೆಗೇ ಹಣ ಠೇವಣಿ ಇಟ್ಟು, ನಿಗದಿತ ವರ್ಷಗಳ ಬಳಿಕ ನಿಗದಿತ ಮಾಸಿಕ ಆದಾಯ ತರುತ್ತದೆ.
ಇದನ್ನೂ ಓದಿ – Solar Pumpset Scheme – ಬರೋಬ್ಬರಿ 1.5 ಲಕ್ಷ ಸಬ್ಸಿಡಿ ಸಿಗುವ ಸೋಲಾರ್ ಪಂಪ್ ಸೆಟ್ ಗೆ ಅರ್ಜಿ ಆಹ್ವಾನ – ಮೊಬೈಲ್ ನಲ್ಲೆ ಅರ್ಜಿ ಹಾಕಿ
ಪೋಸ್ಟ್ ಆಫೀಸ್ ಮಾಸಿಕ ಪಿಂಚಣಿ ಯೋಜನೆ :
ನೀವು ಈ ಮಾಸಿಕ ಆದಾಯ ಯೋಜನೆಯಲ್ಲಿ 5 ಲಕ್ಷ ರೂ ಹಣವನ್ನು ಠೇವಣಿ ಇಟ್ಟರೆ, ಸುಮಾರು 3,000 ರೂನಷ್ಟು ಮಾಸಿಕ ಆದಾಯ ಸಿಗುತ್ತದೆ.
ಎಷ್ಟು ಅವಧಿಯವರೆಗೆ ಈ ಪೋಸ್ಟ್ ಆಫೀಸ್ ಯೋಜನೆ?
ಈ ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ 5 ವರ್ಷದ ಅವಧಿಯದ್ದಾಗಿರುತ್ತದೆ. ಇದರಲ್ಲಿ ಸಿಗುವ ಬಡ್ಡಿ ಹಣವನ್ನು ಪ್ರತೀ ತಿಂಗಳು ಗ್ರಾಹಕರಿಗೆ ಕೊಡಲಾಗುತ್ತದೆ. ಐದು ವರ್ಷದ ಮೆಚ್ಯೂರಿಟಿ ಬಳಿಕ ನಿಮ್ಮ ಠೇವಣಿ ಹಿಂಪಡೆಯಬಹುದು. ನಿಮಗೆ ಬೇಕೆಂದರೆ ಇನ್ನೂ 5 ವರ್ಷ ಈ ಸ್ಕೀಮ್ ಮುಂದುವರಿಸಬಹುದು. ಹಣ ಉಳಿತಾಯ ಮಾಡಲು ಇದು ಒಂದು ಉತ್ತಮ ಯೋಜನೆಯಾಗಿದೆ.
ಇದನ್ನೂ ಓದಿ – 15 ಸಾವಿರ ರೂ. ಒಳಗೆ ಸಿಗುವ ಬೆಸ್ಟ್ 5G ಸ್ಮಾರ್ಟ್ಫೋನ್ಗಳ ಪಟ್ಟಿ ಇಲ್ಲಿದೆ ನೋಡಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group






