ಅಂಚೆ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ – 10ನೇ ಕ್ಲಾಸ್ ಪಾಸಾದವರು ಹೀಗೆ ಅರ್ಜಿ ಸಲ್ಲಿಸಿ

post office recruitment sports kota 2023

ಭಾರತ ಪೋಸ್ಟ್ ನೇಮಕಾತಿ(Indian Post Office Recuriments) 2023 ಕ್ರೀಡಾ ಕೋಟಾದ ಅಡಿಯಲ್ಲಿ ಪೋಸ್ಟ್‌ಮ್ಯಾನ್, ಪೋಸ್ಟಲ್/ಸಾರ್ಟಿಂಗ್ ಅಸಿಸ್ಟೆಂಟ್, ಮೇಲ್ ಗಾರ್ಡ್ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್ (Multi tasking staff)(MTS) ನಂತಹ ಈ ಮೇಲೆ ಸೂಚಿಸಿಲಾದ ಗ್ರೂಪ್ ‘ಸಿ'(Group C posts) ಹುದ್ದೆಗಳಾದ ಪೋಸ್ಟ್‌ಗಳಲ್ಲಿ ಒಟ್ಟು 1899 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ ಆದರಿಂದ ಈ ಮೇಲಿನ ನೇಮಕಾತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ (Official website) ಆದ dopsqr.cept.gov.in ನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಭಾರತೀಯ ಅಂಚೆ ಇಲಾಖೆಯಲ್ಲಿ ನೇಮಕಾತಿ :

ಹೌದು, ಇಂದಿನ ವರದಿಯಲ್ಲಿ ನಿಮಗೆ ತಿಳಿಸುವುದೇನೆದರೆ ಭಾರತೀಯ ಅಂಚೆ ಇಲಾಖೆಯಲ್ಲಿ 10, 12 ಮತ್ತು ಬಿಎ ತೇರ್ಗಡೆಯಾದ ಯುವಕರಿಗೆ ಉದ್ಯೋಗಾವಕಾಶವನ್ನು ನೀಡುತ್ತಿದೆ. ಭಾರತ ಪೋಸ್ಟ್ ನೇಮಕಾತಿ 2023 ಕ್ರೀಡಾ ಕೋಟಾದ ಅಡಿಯಲ್ಲಿ ಪೋಸ್ಟಲ್ ಅಸಿಸ್ಟೆಂಟ್ ಸೇರಿದಂತೆ
ವಿವಿಧ ಹುದ್ದೆಗಳಿಗೆ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.(Notification Out). ಈ ನೇಮಕಾತಿಯಲ್ಲಿ 1899 ಹುದ್ದೆಗಳು ಖಾಲಿ ಇವೆ. ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 9 ಡಿಸೆಂಬರ್ 2023 ರವರೆಗೆ ಆಗಿರುತ್ತದೆ. ಆಸಕ್ತಿ ಹೊಂದಿದ ಅಭ್ಯರ್ಥಿಗಳು ತಡ ಮಾಡದೆ ಇಂದೆ ಅರ್ಜಿ ಸಲ್ಲಿಸಿರಿ ಮತ್ತು ಅರ್ಹತೆ, ಅರ್ಜಿ ಶುಲ್ಕಗಳು ಮತ್ತು ಸಂಬಳದ ವಿವರಗಳ ಕುರಿತು ಪ್ರಮುಖ ಮಾಹಿತಿಯ ಬಗ್ಗೆ ನಾವು ನಿಮಗೆ ತಿಳಿಸಿ ಕೊಡುತ್ತೇವೆ.

ಭಾರತ ಪೋಸ್ಟ್ ನೇಮಕಾತಿ 2023 ಅವಲೋಕನ :

ಸಂಸ್ಥೆಯ ಹೆಸರು: ಭಾರತ ಸರ್ಕಾರದ ಅಂಚೆ ಇಲಾಖೆ (DOP)
ಪೋಸ್ಟ್ ಹೆಸರು: ಅಂಚೆ ಸಹಾಯಕ, ವಿಂಗಡಣೆ ಸಹಾಯಕ, ಪೋಸ್ಟ್‌ಮ್ಯಾನ್, ಮೇಲ್ ಗಾರ್ಡ್ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS)
ಖಾಲಿ ಹುದ್ದೆಗಳು : 1899
ಉದ್ಯೋಗ ಸ್ಥಳ: ಭಾರತ
ಅರ್ಜಿಯ ಪ್ರಾರಂಭ ದಿನಾಂಕ : ನವೆಂಬರ್ 10
ಅರ್ಜಿಸಲ್ಲಿಸಲು ಕೊನೆಯ ದಿನಾಂಕ : ಡಿಸೆಂಬರ್ 9
ಅಪ್ಲಿಕೇಶನ್ ಮಾದರಿ: ಆನ್ಲೈನ್ (Online).

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಭಾರತದ ಪೋಸ್ಟ್ ಆಫೀಸ್ ನೇಮಖಾತಿಯ ಅರ್ಹತಾ ಮಾನದಂಡ 2023 :

ಪೋಸ್ಟಲ್ ಅಸಿಸ್ಟೆಂಟ್/ಸಾರ್ಟಿಂಗ್ ಅಸಿಸ್ಟೆಂಟ್ ಹುದ್ದೆಗಳಿಗೆ:ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿರಬೇಕು.
ಕಂಪ್ಯೂಟರ ಜ್ಞಾನ ಹೊಂದಿರಬೇಕು.

ಪೋಸ್ಟ್‌ಮ್ಯಾನ್ / ಮೇಲ್ ಗಾರ್ಡ್ ಹುದ್ದೆಗಳಿಗೆ:
ಮಾನ್ಯತೆ ಪಡೆದ ಮಂಡಳಿಯಿಂದ 12 ನೇ ತರಗತಿ ಪಾಸ್ ಆಗಿರಬೇಕು.
ಸಂಬಂಧಪಟ್ಟ ಪೋಸ್ಟಲ್ ಸರ್ಕಲ್ ಅಥವಾ ವಿಭಾಗದ ಸ್ಥಳೀಯ ಭಾಷೆಯಲ್ಲಿ 10ನೇ ತರಗತಿ ಅಥವಾ ಅದಕ್ಕಿಂತ ಹೆಚ್ಚಿನ ವಿಷಯಗಳಲ್ಲಿ ಒಂದಾಗಿ ಉತ್ತೀರ್ಣರಾಗಿರಬೇಕು.
ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ದ್ವಿಚಕ್ರ ವಾಹನ ಅಥವಾ ಲಘು ಮೋಟಾರು ವಾಹನ ಚಲಾಯಿಸಲು ಮಾನ್ಯ ಪರವಾನಗಿ(Licence) (ಪೋಸ್ಟ್‌ಮ್ಯಾನ್ ಹುದ್ದೆಗೆ ಮಾತ್ರ) ಹೊಂದಿರಬೇಕು.

ವಿಶೇಷ ಸೂಚನೆ:ಮಾನದಂಡದ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ ಪರವಾನಗಿಯ ಸ್ವಾಧೀನದಿಂದ ವಿನಾಯಿತಿ ನೀಡಲಾಗುತ್ತದೆ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಮಲ್ಟಿ ಟಾಸ್ಕಿಂಗ್ ಸ್ಟಾಫ್(MTS) ಹುದ್ದೆಗಳಿಗೆ : ಮಾನ್ಯತೆ ಪಡೆದ ಮಂಡಳಿಯಿಂದ 10 ನೇ ತರಗತಿ ಪಾಸ್ ಆಗಿರಬೇಕು.

ಗಮನದಲ್ಲಿ ಇರಿಸಿಕೊಳ್ಳಿ, ಇನ್ನು ಈ ನೇಮಖಾತಿ ಕ್ರೀಡಾ ಕೂಟದ ಅಡಿಯಲ್ಲಿ ಬರುವುದರಿಂದ, ಕ್ರೀಡಾ ಅರ್ಹತೆ ಮುಖ್ಯವಾಗಿರುತ್ತದೆ. ಆದರಿಂದ ಅಧಿಸೂಚನೆಯ ಆದೇಶದಂತೆ ಉಲ್ಲೇಖಿಸಲಾದ ಯಾವುದೇ ಕ್ರೀಡೆ / ಆಟಗಳಲ್ಲಿ ರಾಷ್ಟ್ರೀಯ (National)ಅಥವಾ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ (International ಲೆವೆಲ್) ರಾಜ್ಯ ಅಥವಾ ದೇಶವನ್ನು ಪ್ರತಿನಿಧಿಸಿರುವ ಕ್ರೀಡಾಪಟುಗಳು ಆಗಿರಬೇಕು.(The participent should be Represented state and nation)
ಯಾವುದೇ ಕ್ರೀಡೆ / ಆಟಗಳಲ್ಲಿ ಅಂತರ ವಿಶ್ವವಿದ್ಯಾನಿಲಯ ಕ್ರೀಡಾ ಮಂಡಳಿಯು ನಡೆಸಿದ ಅಂತರ ವಿಶ್ವವಿದ್ಯಾಲಯ ಪಂದ್ಯಾವಳಿಗಳಲ್ಲಿ ತಮ್ಮ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿರುವ ಕ್ರೀಡಾಪಟುಗಳು ಆಗಿರಬೇಕು.
ಯಾವುದೇ ಕ್ರೀಡೆ / ಆಟಗಳಲ್ಲಿ ಅಖಿಲ ಭಾರತ ಸ್ಕೂಲ್ ಗೇಮ್ಸ್ ಫೆಡರೇಶನ್ (Akila bharatha school games Fedration,(ABSGF) ನಡೆಸಿದ ಶಾಲೆಗಳಿಗೆ ರಾಷ್ಟ್ರೀಯ ಕ್ರೀಡೆ/ ಕ್ರೀಡಾಕೂಟದಲ್ಲಿ ರಾಜ್ಯ ಶಾಲಾ ತಂಡಗಳನ್ನು ಪ್ರತಿನಿಧಿಸಿರುವ ಕ್ರೀಡಾಪಟುಗಳು ಆಗಿರಬೇಕು.
ರಾಷ್ಟ್ರೀಯ ಶಾರೀರಿಕ ದಕ್ಷತೆಯ ಡ್ರೈವ್ ಅಡಿಯಲ್ಲಿ ದೈಹಿಕ ದಕ್ಷತೆಯಲ್ಲಿ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದ ಕ್ರೀಡಾಪಟುಗಳು ಆಗಿರಬೇಕು.

ಈ ನೇಮಖಾತಿಗೆ ವಯಸ್ಸಿನ ಮಾಹಿತಿ :

ಅಂಚೆ ಸಹಾಯಕ, ವಿಂಗಡಣೆ ಸಹಾಯಕ , ಪೋಸ್ಟ್ ಮ್ಯಾನ್ ,ಮೇಲ್ ಗಾರ್ಡ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18-27 ವರ್ಷಗಳ ಒಳಗೆ ಇರಬೇಕು. ಮತ್ತು ಮಲ್ಟಿ ಟಾಸ್ಕಿಂಗ್ ಸಿಬ್ಬಂದಿ (MTS) ಹುದ್ದೆಗೆ 18-25 ವರ್ಷಗಳ ವಯಸ್ಸಿನವರು ಇರಬೇಕು.
ಇದರ ಜೊತೆಗೆ ಎಸ್‌ಸಿ (SC)ಮತ್ತು ಎಸ್‌ಟಿ (ST)ವರ್ಗದ ಅಭ್ಯರ್ಥಿಗಳಿಗೂ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆ ನೀಡಲಾಗಿದೆ.

ಅರ್ಜಿ ಶುಲ್ಕದ ಮಾಹಿತಿ :

ಎಸ್‌ಸಿ (SC)ಮತ್ತು ಎಸ್‌ಟಿ (ST)ವರ್ಗಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದ್ದು, ಇತರೆ ಹುದ್ದೆಗಳಿಗೆ ಅರ್ಜಿ ಶುಲ್ಕವನ್ನು 100 ರೂ.ಗೆ ನಿಗದಿಪಡಿಸಲಾಗಿದೆ.

ಆಯ್ಕೆ ಪ್ರಕ್ರಿಯೆ :

ಈ ಹುದ್ದೆಗಳಿಗೆ ಅರ್ಜಿದಾರರನ್ನು ಮೆರಿಟ್ ಆಧಾರದ ಪಟ್ಟಿ ಮೇಲೆ ಮತ್ತು ಇತ್ಯಾದಿ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.

ಸಂಬಳದ ವಿವರ :

ಭಾರತದ ಪೋಸ್ಟ್ ಆಫೀಸ್ ನೇಮಖಾತಿಯ ವಿವಿಧ ಹುದ್ದೆಗಳಿಗೆ ವಿವಿಧ ಸಂಬಳ ವನ್ನು ನಿಗದಿಪಡಿಸಲಾಗಿದೆ.
ಪೋಸ್ಟಲ್ ಅಸಿಸ್ಟೆಂಟ್ – ರೂ 25,500 – ರೂ.81,100)
ವಿಂಗಡಣೆ ಸಹಾಯಕ – ರೂ 25,500 – ರೂ.81,100)
ಪೋಸ್ಟ್‌ಮ್ಯಾನ್ – ರೂ 21,700 – ರೂ.69,100)
ಮೇಲ್ ಗಾರ್ಡ್ -ರೂ. 21,700 – ರೂ.69,100)
ಮಲ್ಟಿ ಟಾಸ್ಕಿಂಗ್ ಸ್ಟಾಫ್(MTS) – ರೂ 18,000 – ರೂ.56,900)

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಪ್ರಮುಖ ದಿನಾಂಕಗಳು:

ಅರ್ಜಿಯ ಸಲ್ಲಿಸಲು ಇದೆ ನವೆಂಬರ್ 10 ರಿಂದ ಪ್ರಾರಂಭ ವಾಗಿದೆ.
ಅರ್ಜಿಸಲ್ಲಿಸಲು ಕೊನೆಯ ದಿನಾಂಕ : ಮುಂಬರುವ ಡಿಸೆಂಬರ್ 9 ಆಗಿರುತ್ತದೆ.

ಅಧಿಕೃತ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರ್ಜಿಯನ್ನು ಸಲ್ಲಿಸುವ ವಿಧಾನ:

ಹಂತ 1: https://dopsqr.cept.gov.in/Reg_validation.aspx ನಲ್ಲಿ ಭಾರತ ಪೋಸ್ಟ್, ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

ಹಂತ 2: ಮುಖಪುಟದಲ್ಲಿ ಅಪ್ಲಿಕೇಶನ್ ಹಂತ 1 ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಹೆಸರು, ತಂದೆಯ ಹೆಸರು, ವರ್ಗ, ಜನ್ಮ ದಿನಾಂಕ ಮಾನ್ಯವಾದ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ಭರ್ತಿ ಮಾಡಿ ಮತ್ತು ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ.

ಹಂತ 3: ನಿಮ್ಮ ವೈಯಕ್ತಿಕ ವಿವರಗಳು ಮತ್ತು ಶಿಕ್ಷಣ ಅರ್ಹತೆಯನ್ನು ಭರ್ತಿ ಮಾಡಿ ಮತ್ತು ಎರಡೂ ಸಿಬ್ಬಂದಿಗಳಿಗೆ ಆದ್ಯತೆಯ ಕ್ರಮವನ್ನು ನೀಡಿ (ಅಂದರೆ ಪೋಸ್ಟಲ್ ಅಸಿಸ್ಟೆಂಟ್, ಸಾರ್ಟಿಂಗ್ ಅಸಿಸ್ಟೆಂಟ್, ಪೋಸ್ಟ್‌ಮ್ಯಾನ್, ಮೇಲ್ ಗಾರ್ಡ್ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್)

ಹಂತ 4: ನಿಮಗೆ ಅಗತ್ಯವಿರುವ ದಾಖಲೆಗಳನ್ನು ನಿಗದಿತ ಸ್ವರೂಪದಲ್ಲಿ ಅಪ್‌ಲೋಡ್ ಮಾಡಿ.

ಹಂತ 5: ಆನ್‌ಲೈನ್ ಮೋಡ್‌ನಲ್ಲಿ ಅನ್ವಯಿಸಿದರೆ ಅರ್ಜಿ ಶುಲ್ಕವನ್ನು ಪಾವತಿಸಿ.

ಹಂತ 6: ಆನ್‌ಲೈನ್ ಅರ್ಜಿಯನ್ನು ಸಲ್ಲಿಸುವ ಮೊದಲು, ಅಭ್ಯರ್ಥಿಗಳು ಫಾರ್ಮ್‌ನ ಪ್ರತಿಯೊಂದು ಕ್ಷೇತ್ರದಲ್ಲಿ ಸರಿಯಾದ ವಿವರಗಳನ್ನು ಭರ್ತಿ ಮಾಡಿದ್ದಾರೆಯೇ ಎಂಬುದನ್ನು ಪೂರ್ವವೀಕ್ಷಣೆ/ಮುದ್ರಣ ಆಯ್ಕೆಯ ಮೂಲಕ ಕ್ರಾಸ್-ಚೆಕ್ ಮಾಡಬೇಕು.

ಹಂತ 7: ಭವಿಷ್ಯದ ಉಲ್ಲೇಖಕ್ಕಾಗಿ ಇಂಡಿಯಾ ಪೋಸ್ಟ್ ಅಪ್ಲಿಕೇಶನ್ ಫಾರ್ಮ್‌ಗಳನ್ನು ಡೌನ್‌ಲೋಡ್ ಮಾಡಿ ಮತ್ತು ಪ್ರಿಂಟ್‌ಔಟ್ ತೆಗೆದುಕೊಳ್ಳಿ

 

ಇದು ಒಂದು ಉತ್ತಮ ನೇಮಕಾತಿ ಎಂದು ಹೇಳಬಹುದಾಗಿದೆ . ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಮೇಲೆ ಮಾಹಿತಿಯನ್ನು ತಿಲಿಸಿರುವದನ್ನು ಪರಿಶೀಲಿಸಿಕೊಂಡು ಅಭ್ಯರ್ಥಿಗಳು ಕೊನೆಯ ದಿನಾಂಕದ ವರೆಗೆ ಕಾಯದೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ನೇಮಕಾತಿಯ ಅಧಿಸೂಚನೆಗಳಿಗಾಗಿ ಪ್ರತಿದಿನ ಅಧಿಕೃತ ಜಾಲತಾಣಕ್ಕೆ ತೆರಳಿ ಪರಿಶೀಲಿಸಿ.ಮತ್ತು ಈ ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ ಎಂದು ಆಶಿಸುತ್ತೇವೆಮತ್ತು ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ, ಧನ್ಯವಾದಗಳು.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

3 thoughts on “ಅಂಚೆ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ – 10ನೇ ಕ್ಲಾಸ್ ಪಾಸಾದವರು ಹೀಗೆ ಅರ್ಜಿ ಸಲ್ಲಿಸಿ

Leave a Reply

Your email address will not be published. Required fields are marked *

error: Content is protected !!