ಪಿಎಂ ಸ್ವನಿಧಿ ಯೋಜನೆ: ಬೀದಿ ವ್ಯಾಪಾರಿಗಳಿಗೆ ಸ್ವಾವಲಂಬನೆಯ ಹೆಜ್ಜೆ!, ಈ ಯೋಜನೆಗೆ ಸಂಬಂಧಿಸಿದ ಮಹಿತಿಯನ್ನು ತಿಳಿದುಕೊಳ್ಳಲು ವರದಿಯನ್ನು ಸಂಪೂರ್ಣವಾಗಿ ಓದಿ.
ಹೌದು, ಪ್ರಧಾನ ಮಂತ್ರಿ ಸ್ಟ್ರೀಟ್ ವೆಂಡರ್ಸ್ ಆತ್ಮನಿರ್ಭರ್ ನಿಧಿ (PM Street vendors Vendors Atmanirbhar Nidhi scheme) ಯೋಜನೆಯು ನಿಮ್ಮ ಕನಸುಗಳನ್ನು ಸಾಕಾರಗೊಳಿಸಲು 50,000 ರೂ.ಗಳವರೆಗೆ ಕಡಿಮೆ ಬಡ್ಡಿ ದರ(low interest rate)ದಲ್ಲಿ ಸಾಲ(loan) ನೀಡುವ ಒಂದು ಅದ್ಭುತ ಅವಕಾಶವಾಗಿದೆ. ಈ ಯೋಜನೆಯು ಕೇಂದ್ರ ಸರ್ಕಾರದಿಂದ ಬೆಂಬಲಿತವಾಗಿದೆ ಮತ್ತು ಬೀದಿ ಬದಿಯ ಸಣ್ಣ ವ್ಯಾಪಾರಿಗಳಿಗೆ ಅವರ ವ್ಯವಹಾರಗಳನ್ನು ವಿಸ್ತರಿಸಲು ಮತ್ತು ಸ್ವಯಂ ನಿರ್ಭರರಾಗಲು ಸಹಾಯ ಮಾಡುವ ಉದ್ದೇಶವನ್ನು ಹೊಂದಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ (PM SVANidhi schem):
ಪ್ರಧಾನ ಮಂತ್ರಿ ಸ್ವನಿಧಿ (PM SVANidhi) ಯೋಜನೆಯು ಭಾರತ ಸರ್ಕಾರದ ಒಂದು ಪ್ರಮುಖ ಉಪಕ್ರಮವಾಗಿದ್ದು, ಇದು ಬೀದಿ ಬದಿ ವ್ಯಾಪಾರಿಗಳಿಗೆ ಸ್ವಾವಲಂಬನೆಯತ್ತ ಒಂದು ಭದ್ರ ಹೆಜ್ಜೆಯನ್ನು ಒದಗಿಸುತ್ತದೆ. ಲಾಕ್‌ಡೌನ್‌ನಂತಹ ಸಂಕಷ್ಟಕರ ಸಂದರ್ಭಗಳಲ್ಲಿ ಈ ವ್ಯಾಪಾರಿಗಳಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಈ ಯೋಜನೆಯನ್ನು 2020ರಲ್ಲಿ ಪ್ರಾರಂಭಿಸಲಾಯಿತು.
ಈ ಯೋಜನೆಯು 2020ರಲ್ಲಿ ಪ್ರಾರಂಭವಾಯಿತು ಮತ್ತು ಈಗಾಗಲೇ ಗಮನಾರ್ಹ ಯಶಸ್ಸನ್ನು ಕಂಡಿದೆ. ಇದುವರೆಗೆ 76,78,830 ಅರ್ಹ ಅರ್ಜಿಗಳನ್ನು ಸ್ವೀಕರಿಸಲಾಗಿದೆ ಮತ್ತು 60,03,816 ಪ್ರಕರಣಗಳಲ್ಲಿ ಸಾಲ ಮಂಜೂರಿ
ಮಾಡಲಾಗಿದೆ. ಈ ಯೋಜನೆಯು ಸ್ವಯಂ ಉದ್ಯೋಗಿಗಳಿಗೆ ತಮ್ಮ ವ್ಯವಹಾರಗಳನ್ನು ಉತ್ತಮಗೊಳಿಸಲು ಮತ್ತು
ಅಭಿವೃದ್ಧಿಪಡಿಸಲು ಅಗತ್ಯವಿರುವ ಹಣಕಾಸಿನ ನೆರವು ನೀಡುತ್ತದೆ.
ಸ್ವನಿಧಿ ಯೋಜನೆಯ ಪ್ರಮುಖ ಅಂಶಗಳು:
ಸಾಲದ ಮೊತ್ತ: ಆರಂಭಿಕ ಹಂತದಲ್ಲಿ ಸಾಲದ ಮೊತ್ತ ₹10,000 ಆಗಿರುತ್ತದೆ. ಸಕಾಲಕ್ಕೆ ಮರುಪಾವತಿಸಿದರೆ ₹20,000 ಮತ್ತು ₹50,000 ವರೆಗೆ ಸಾಲದ ಮೊತ್ತವನ್ನು ಹೆಚ್ಚಿಸಬಹುದು.
ಬಡ್ಡಿ ದರ(Interset): ಈ ಯೋಜನೆಯಲ್ಲಿ ಫಲನುಭವಿಗಳು 7% ವರೆಗೂ ಬಡ್ಡಿದರವನ್ನು ಪಡೆಯುತ್ತಾರೆ.
ಮರುಪಾವತಿ ಅವಧಿ: ₹10,000 ಸಾಲಕ್ಕೆ ಒಂದು ವರ್ಷ ಮತ್ತು ₹20,000 ಮತ್ತು ₹50,000 ಸಾಲಗಳಿಗೆ 2 ವರ್ಷ
ಅರ್ಹತೆ(Eligibility):
ಈ ಯೋಜನೆಯಡಿ ಸಾಲವನ್ನು ಪಡೆಯಲು ಅರ್ಜಿದಾರರು ಸ್ಥಳೀಯ ಆಡಳಿತ ಸಂಸ್ಥೆಗಳಿಂದ ನೀಡಲಾದ ಗುರುತಿನ ಚೀಟಿ(ID card)ಯನ್ನು ಹೊಂದಿರಬೇಕು ಮತ್ತು ಸ್ಥಳೀಯಾಡಳಿತದ ಸರ್ವೇನಲ್ಲಿ ಗುರುತಿಸಿಕೊಂಡಿರಬೇಕು
ಯಾರು ಸಾಲ ಪಡೆಯಬಹುದು:
ತರಕಾರಿ, ಹಣ್ಣು, ದಿನೋಪಯೋಗಿ ವಸ್ತುಗಳು, ಆಟಿಕೆಗಳು, ಬಟ್ಟೆ, ಪುಸ್ತಕ, ಪೆನ್ನು ಮುಂತಾದ ವಸ್ತುಗಳನ್ನು ಮಾರಾಟ ಮಾಡುವವರು
ತಳ್ಳುವ ಗಾಡಿ, ಪಾನ್ ಶಾಪ್, ರಸ್ತೆ ಬದಿಯ ಸಲೂನ್, ಇಸ್ತ್ರಿ ಅಂಗಡಿ ನಡೆಸುವವರು ಈ ಯೋಜನೆಯಡಿ ಸಾಲವನ್ನು ಪಡೆಯಲು ಅರ್ಹರಾಗಿರುತ್ತಾರೆ.
ಸಾಲ ನೀಡುವ ಸಂಸ್ಥೆಗಳು:
ಸಾರ್ವಜನಿಕ-ಖಾಸಗಿ ಬ್ಯಾಂಕ್‌ಗಳು
ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು
ಕಿರು ಹಣಕಾಸು ಬ್ಯಾಂಕ್‌ಗಳು
ಕೋಪರೇಟಿವ್ ಬ್ಯಾಂಕ್‌ಗಳು
ಎನ್‌ಬಿಎಫ್‌ಸಿಗಳು
ಎಸ್‌ಹೆಚ್‌ಜಿ ಬ್ಯಾಂಕ್‌ಗಳು
ಅಗತ್ಯ ದಾಖಲೆಗಳು(Required Documents):
ಆಧಾರ್ ಕಾರ್ಡ್ (Aadhar Card)(ಕಡ್ಡಾಯ)
ಮತದಾರರ ಗುರುತಿನ ಚೀಟಿ(Voter ID card)(ಕಡ್ಡಾಯ)
ವಾಹನ ಚಾಲನಾ ತರಬೇತಿ ಪರವಾನಗಿ
ನರೇಗಾ ಕಾರ್ಡ್(Narega Card)
ಪ್ಯಾನ್ ಕಾರ್ಡ್(PAN card)
ಈ ಸಾಲಕ್ಕೆ ಅರ್ಜಿಯನ್ನು ಸಲ್ಲಿಸುವ ವಿಧಾನ :
ಈ ಯೋಜನೆಗೆ ಅರ್ಜಿ ಸಲ್ಲಿಸಲು, ನೀವು ಸರ್ಕಾರಿ ಬ್ಯಾಂಕ್‌ಗೆ ಹೋಗಬೇಕು. ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆ ಫಾರ್ಮ್ ಅನ್ನು ಭರ್ತಿ ಮಾಡಿದ ನಂತರ, ಅದನ್ನು ಆಧಾರ್ ಕಾರ್ಡ್ ಜೊತೆಗೆ ಸಲ್ಲಿಸಬೇಕು. ಬ್ಯಾಂಕ್ ಸಾಮಾನ್ಯವಾಗಿ ಕಡಿಮೆ ಪರಿಶ್ರಮದ ನಂತರ ಸಾಲವನ್ನು ಅನುಮೋದಿಸುತ್ತದೆ. ಈ ಯೋಜನೆಯ ಹಣವು ಕಂತುಗಳಲ್ಲಿ ಲಭ್ಯವಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ಕೇಂದ್ರ ಸರ್ಕಾರದಿಂದ ಯಾವುದೇ ಗ್ಯಾರಂಟಿ ಇಲ್ಲದೇ 10 ಲಕ್ಷ ರೂ.ವರೆಗೆ ಸಾಲ ಸೌಲಭ್ಯ
- ಸಾಲಕ್ಕೆ ಅರ್ಜಿ ಸಲ್ಲಿಸುವಾಗ, ಸಿಬಿಲ್ ಸ್ಕೋರ್ ಹೆಚ್ಚು ಮಾಡುವ ಸೀಕ್ರೆಟ್ ಟ್ರಿಕ್ಸ್ ಇಲ್ಲಿದೆ
- ‘RBI’ ನಿಂದ ‘ಪೇಟಿಎಂ ಬ್ಯಾಂಕ್’ಗೆ ನಿರ್ಬಂಧ, ಫೆ.29 ರಿಂದ ಬಂದ್ ಆಗುತ್ತಾ?
- ಯಾವುದೇ ಗ್ಯಾರಂಟಿ ಇಲ್ಲದೇ ಸಿಗಲಿದೆ 2 ಲಕ್ಷ ರೂ.ವರೆಗೆ ಸಾಲ..! ಮೋದಿ ಸರ್ಕಾರದ ಹೊಸ ಯೋಜನೆ
- ರಾಜ್ಯಾದ್ಯಂತ ರೈತರ ಜಮೀನಿನ ಪಹಣಿಯಲ್ಲಿನ ಲೋಪದೋಷ ಸರಿಪಡಿಸಲು ಕಂದಾಯ ಅದಾಲತ್
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group






