ಸ್ವಂತ ಮನೆ ( Own Home ) ಕಟ್ಟುವುದು ಹಾಗೂ ಅದರಲ್ಲಿ ವಾಸ ಮಾಡುವುದು ಪ್ರತಿಯೊಬ್ಬರ ಕನಸು, ಆದರೆ ಆ ಕನಸನ್ನು ನನಸು ಮಾಡಿಕೊಳ್ಳಲು ಪ್ರತಿಯೊಬ್ಬರೂ ಕಷ್ಟ ಪಡುತ್ತಲೇ ಇರುತ್ತಾರೆ. ಅದಕ್ಕಾಗಿ ಹಗಲು ರಾತ್ರಿ ಶ್ರಮಿಸಿದರೂ ಕೂಡ ಸ್ವಂತ ಮನೆ ನಿರ್ಮಾಣ ಮಾಡಲು ಕಷ್ಟ ಆದ್ದರಿಂದ ದೇಶದಲ್ಲಿ ವಾಸಿಸುತ್ತಿರುವ ಬಡವರಿಗೆ ಬಹಳ ಮುಖ್ಯವಾಗಿ ಹಳ್ಳಿಯಲ್ಲಿ ವಾಸ ಮಾಡುತ್ತಿರುವ ಸೂರು ಇಲ್ಲದ ಬಡವರಿಗೆ ಸಹಾಯ ಮಾಡಲು ವಸತಿ ಯೋಜನೆಯನ್ನು ಜಾರಿಗೊಳಿಸಿದೆ.
ಇನ್ನು ಈ ಒಂದು ಯೋಜನೆಯಲ್ಲಿ ಬಹಳಷ್ಟು ಅನುಕೂಲವಾಗಲಿದ್ದು, ಆ ಪ್ರಯೋಜನವನ್ನು ಪಡೆದುಕೊಂಡು ಎಲ್ಲರೂ ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳಲು ಬಹಳ ಅನುಕೂಲವಾಗಲಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಪ್ರಧಾನ ಮಂತ್ರಿ ಆವಾಸ್ ಯೋಜನೆ ( Pradhan Manthri Avas Scheme ) ಎಂದು ಬದಲಾಯ್ತು ಹೆಸರು :

2016ರಲ್ಲಿ ಈ ಯೋಜನೆಗೆ ಇಂದಿರಾಗಾಂಧಿ ಆವಾಸ್ ಯೋಜನೆ ( Indhira Gandhi Avas Scheme ) ಎಂದು ಹೆಸರಿತ್ತು ನಂತರ ಭಾರತದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಆವಾಸ್ ಯೋಜನೆ ಎಂದು ಮರುನಾಮಕರಣ ಮಾಡಿ ಇದೀಗ ಅದೇ ಹೆಸರಿನಲ್ಲಿ ಈ ಯೋಜನೆ ಜಾರಿಯಲ್ಲಿದೆ.
ಇನ್ನೊಂದು ಮುಖ್ಯ ವಿಚಾರ ಎಂದರೆ ಈ ಹಿಂದೆ ಈ ಯೋಜನೆಯ ಅಡಿಯಲ್ಲಿ 2.6 ಕೋಟಿ ಮನೆಗಳನ್ನು ಜಾರಿಗೆಗೊಳಿಸಲಾಗಿತ್ತು. ಸದ್ಯಕ್ಕೆ ಈಗ 2.5 ಕೋಟಿ ಮನೆಗಳು ಇವೆ. ಈಗಾಗಲೇ ಇನ್ನು ಉಳಿದ ಮನೆಗಳು ಮಾರ್ಚ್ ಒಳಗಡೆ ಸ್ಯಾಂಕ್ಷನ್ ( Sanction ) ಆಗಲಿವೆ ಎಂದು ತಿಳಿಸಿದ್ದಾರೆ. ಹಾಗಾಗಿ ನೀವು ಕೂಡ ಅರ್ಜಿ ಸಲ್ಲಿಸಿ ಮನೆಯನ್ನು ಪಡೆದುಕೊಳ್ಳಬಹುದು.

ಪ್ರಧಾನಮಂತ್ರಿ ಆವಾಸ್ ಯೋಜನೆ ವಿವರ
| ಅಧಿಕೃತ ವೆಬ್‌ಸೈಟ್ | https://pmaymis.gov.in/ |
| ಪ್ರಾರಂಭ ದಿನಾಂಕ | 2015ರ ಜೂನ್ 25 |
| ಟೋಲ್ ಫ್ರೀ ಸಂಖ್ಯೆಗಳು | 1800-11-6163 – ಹುಡ್ಕೋ1800 11 3377, 1800 11 3388 – NHB |
| ಸಲಹೆಗಳು, ದೂರುಗಳಿಗಾಗಿ | [email protected] |
| ಕಚೇರಿ ವಿಳಾಸ | ವಸತಿ, ನಗರ ವ್ಯವಹಾರಗಳ ಸಚಿವಾಲಯ, ನಿರ್ಮಾಣ್ ಭವನ, ನವದೆಹಲಿ – 110011 |
| ಸಂಪರ್ಕ ಸಂಖ್ಯೆ | 011 2306 3285, 011 2306 0484 |
| ಇಮೇಲ್ | [email protected] |
| ಗುರಿ | ಬಡವರಿಗೆ ಕೈಗೆಟುಕುವ ದರದಲ್ಲಿ ವಸತಿ ಒದಗಿಸುವುದು |
ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಎರಡು ವಿಧ
– ಪ್ರಧಾನ ಮಂತ್ರಿ ಆವಾಸ್ ಯೋಜನೆ ನಗರ
– ಪ್ರಧಾನ ಮಂತ್ರಿ ಆವಾಸ್ ಯೋಜನೆ ಗ್ರಾಮೀಣ.
ಪ್ರಧಾನ ಮಂತ್ರಿ ಆವಾಸ್ ಯೋಜನೆ ಗ್ರಾಮೀಣ ಯೋಜನೆಯನ್ನು ಈ ಹಿಂದೆ ಇಂದಿರಾ ಗಾಂಧಿ ಆವಾಸ್ ಯೋಜನೆ ಎಂದು ಕರೆಯಲಾಗುತ್ತಿತ್ತು. ಮಾರ್ಚ್ 2016 ರಲ್ಲಿ ಹೆಸರು ಬದಲಾಯಿಸಲಾಯಿತು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಯೋಜನೆಯಿಂದ ಅನುಕೂಲಗಳು :
ಈ ಯೋಜನೆಯ ಉಪಯೋಗವೇನೆಂದರೆ, ಗ್ರಾಮೀಣ ಪ್ರದೇಶದಲ್ಲಿ ಮನೆ ಕಟ್ಟಿಕೊಳ್ಳಲು 1.2 ಲಕ್ಷ ಸಹಾಯಧನವನ್ನು ನೀಡಲಾಗುತ್ತದೆ. ಮತ್ತು ಗುಡ್ಡಗಾಡು ಪ್ರದೇಶದಲ್ಲಿ ಮನೆಗಳನ್ನು ಕಟ್ಟಿಕೊಡಲು 1.3 ಲಕ್ಷ ಹಣವನ್ನು ನೀಡಲಾಗುತ್ತದೆ. ಈ ಮೊತ್ತವನ್ನು ಪಡೆದುಕೊಂಡು ಬಡವರು ಮನೆಗಳನ್ನು ಕಟ್ಟಿಕೊಳ್ಳಬೇಕು. ಇದು ಈ ಯೋಜನೆಯ ಒಂದು ಮುಖ್ಯ ಉದ್ದೇಶ.

ರಾಜ್ಯ ಮತ್ತು ಕೇಂದ್ರಾಡಳಿತಗಳಲ್ಲಿ ಮನೆ ನಿರ್ಮಾಣ ಮಾಡಲು ಮುಂದಾದ ಸರ್ಕಾರ :
ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಂದು ಘಟಕವಾಗಿ ನಿರ್ಧರಿಸಿ ಈ ಭಾಗದಲ್ಲಿ ಮನೆ ನಿರ್ಮಾಣ ಮಾಡುವುದಾಗಿ ಸರ್ಕಾರ ನಿರ್ಧರಿಸದೆ. ಮತ್ತು ಆಯಾ ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಆಡಳಿತದಿಂದ ಈ ಯೋಜನೆಗೆ ಹಣ ವರ್ಗಾವಣೆ ಮಾಡಲಾಗುತ್ತಿದ್ದು ಆಯಾ ಗ್ರಾಮ ಪಂಚಾಯತ್ ಫಲಾನುಭವಿಗಳಿಗೆ ಹಣ ವರ್ಗಾವಣೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಅರ್ಜಿ ಸಲ್ಲಿಸುವ ವಿಧಾನ :
ಪ್ರಧಾನ ಮಂತ್ರಿ ಆವಾಸ್ ಯೋಜನೆ ಅರ್ಜಿ ಸಲ್ಲಿಸಲು ಈ ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು :
https://pmay-urban.gov.in/
ಈ ಮೇಲೆ ನೀಡಿರುವ ವೆಬ್ ಸೈಟನ್ನು ಬಳಸಿಕೊಂಡು ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು. ಇನ್ನು ನೀವು ಕೂಡ ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಿಲ್ಲ ಅಂದರೆ ಈ ಮೇಲೆ ಕೊಟ್ಟಿರುವ ಲಿಂಕ್ ಅನ್ನು ಬಳಸಿಕೊಂಡು ಅರ್ಜಿ ಸಲ್ಲಿಸಿ.
ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಲು ಕೆಳಗೆ ತಿಳಿಸಲಾದ ಹಂತಗಳನ್ನು ಅನುಸರಿಸಿ
ಹಂತ: 1 – PMAY ವೆಬ್‌ಸೈಟ್ pmaymis.gov.in ಗೆ ಲಾಗಿನ್ ಮಾಡಿ.
ಹಂತ: 2 – ‘ ನಾಗರಿಕರ ಮೌಲ್ಯಮಾಪನ ‘ ಆಯ್ಕೆಯನ್ನು ಆರಿಸಿ ಮತ್ತು ಅನ್ವಯಿಸುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ: 3 – ಆಧಾರ್ ಕಾರ್ಡ್ ವಿವರಗಳನ್ನು ನಮೂದಿಸಿ.
ಹಂತ: 4 – ಇದು ನಿಮ್ಮನ್ನು ಅಪ್ಲಿಕೇಶನ್ ಪುಟಕ್ಕೆ ಮರುನಿರ್ದೇಶಿಸುತ್ತದೆ, ಅಲ್ಲಿ ನೀವು ಎಲ್ಲಾ ವಿವರಗಳನ್ನು ನಿಖರವಾಗಿ ಭರ್ತಿ ಮಾಡಬೇಕಾಗುತ್ತದೆ.
ಹಂತ: 5 – ಭರ್ತಿ ಮಾಡಬೇಕಾದ ವಿವರಗಳು ಹೆಸರು, ಸಂಪರ್ಕ ಸಂಖ್ಯೆ, ಇತರ ವೈಯಕ್ತಿಕ ವಿವರಗಳು, ಬ್ಯಾಂಕ್ ಖಾತೆ ಮತ್ತು ಆದಾಯದ ವಿವರಗಳನ್ನು ಒಳಗೊಂಡಿರುತ್ತವೆ
ಹಂತ: 6 – ಇದನ್ನು ಮಾಡಿದ ನಂತರ, ‘ಉಳಿಸು’ ಆಯ್ಕೆಯನ್ನು ಆರಿಸಿ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ.
ಹಂತ: 7 – ನಂತರ, ‘ ಉಳಿಸು ‘ ಬಟನ್ ಮೇಲೆ ಕ್ಲಿಕ್ ಮಾಡಿ. ಅಪ್ಲಿಕೇಶನ್ ಈಗ ಪೂರ್ಣಗೊಂಡಿದೆ ಮತ್ತು ಈ ಹಂತದಲ್ಲಿ ಪ್ರಿಂಟ್ ಔಟ್ ತೆಗೆದುಕೊಳ್ಳಬಹುದು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




