ನಿಮ್ಮ ‘ಗ್ರಾಮ ಪಂಚಾಯತಿಯಲ್ಲಿ ನೀಡಲಾಗುವ ‘ಸೇವೆ’ಗಳ ಸಂಪೂರ್ಣ ಪಟ್ಟಿ ಇಲ್ಲಿದೆ.

gram panchayati schemes

ಇದೀಗ ರಾಜ್ಯದ ಗ್ರಾಮೀಣ ಜನತೆಗೆ ( Rural People ) ಅನುಕೂಲವಾಗುವಂತೆ, ವಿವಿಧ ಸೇವಾ ಸೌಲಭ್ಯಗಳನ್ನು ಸರ್ಕಾರ ಜಾರಿಗೊಳಿಸಿದೆ. ಮುಖ್ಯವಾಗಿ ಸ್ಥಳೀಯರಿಗೆ ಮತ್ತು ಅವರ ಆರ್ಥಿಕ ಪರಿಸ್ಥಿಯನ್ನು ಸದೃಢ ಗೊಳಿಸಬೇಕು ಎಂಬ ಉದ್ದೇಶದಿಂದ ಈ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಗ್ರಾಮ ಪಂಚಾಯ್ತಿ ವತಿಯಿಂದ ( Gram Panchayath ) ನೀಡಲಾಗುವ ಸೇವೆಗಳು ಯಾವುವು ? ಮತ್ತು ಅವುಗಳ ಮುಖ್ಯ ಉದ್ದೇಶಗಳ ಬಗ್ಗೆ ತಿಳಿದು ಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಬಾಪೂಜಿ ಸೇವಾ ಕೇಂದ್ರ (ಬಿ.ಎಸ್.ಕೆ.) (bsk.karnataka.gov.in) :

ಗ್ರಾಮೀಣದ ಜನರು ಸ್ವಂತ ಉದ್ಯೋಗ ಕೈಗೊಳ್ಳಬೇಕು. ಅವರು ತಮ್ಮ ಸಾಮಾಜಿಕ, ಶೈಕ್ಷಣಿಕ, ವಾಣಿಜ್ಯ ಹಾಗೂ ಕೃಷಿ ಚಟುವಟಿಕೆಗಳಗಾಗಿ ಸಾಲ ಸೌಲಭ್ಯ ಸರ್ಕಾರ ಒದಗಿಸುತ್ತದೆ. ಇವುಗಳನ್ನು ತ್ವರಿತವಾಗಿ ಒಂದೇ ಸೂರಿನಡಿ ಪಡೆದುಕೊಳ್ಳಲು ಅನುಕೂಲವಾಗುವಂತೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ಥಾಪಿಸಿರುವ ಕೇಂದ್ರವೇ ಬಾಪೂಜಿ ಸೇವಾ ಕೇಂದ್ರವಾಗಿದೆ.

ಈ ಯೋಜನೆಗಳಲ್ಲಿ ಪಂಚತಂತ್ರ, ನಾಡಕಛೇರಿ ತಂತ್ರಾಂಶ ಹಾಗೂ ಭೂಮಿ ತಂತ್ರಾಂಶಗಳನ್ನು ಒಂದು ಗೂಡಿಸಿ ಗ್ರಾಮ ಪಂಚಾಯಿತಿಗಳು ಈ ಸೇವೆಯನ್ನು ನೀಡುತ್ತಿವೆ. ಈಗ ನೀಡುತ್ತಿರುವ 19 ಸೇವೆಗಳ ಜೊತೆಗೆ ಕಂದಾಯ ಇಲಾಖೆಯಿಂದ ಪಹಣಿ ಪತ್ರ ಒಳಗೊಂಡಂತೆ 40 ಸೇವೆಗಳನ್ನು ಒಂದೇ ಸೂರಿನಡಿ ಒದಗಿಸಲಾಗುತ್ತದೆ. ಇದರಿಂದ ಸಾರ್ವಜನಿಕರು ತಮ್ಮ ದಾಖಲೆಗಳಗಾಗಿ ಕಛೇರಿಯಿಂದ ಕಛೇರಿಗೆ ಅಲೆಯುವುದು ತಪ್ಪುತ್ತದೆ.

ಬಾಪೂಜಿ ಸೇವಾ ಕೇಂದ್ರ ದಿಂದ ( Bapuji Seva Kendra ದೊರೆಯುವ ಸೇವೆಗಳು ಈ ಕೆಳಕಂಡಂತೆ ಇವೆ:

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ 19 ಸೇವೆಗಳು :
ಕಟ್ಟಡಪರವಾನಗಿ
ತೆರಿಗೆನಿರ್ಧರಣಾಪಟ್ಟವಿತರಣೆ
ಕಟ್ಟಡ ಸ್ವಾಧೀನ ಪತ್ರ
ಹೊಸನೀರಿನಸಂಪರ್ಕಕ್ಕಾಗಿಅರ್ಜಿ
ವ್ಯಾಪಾರಪರವಾನಗಿವಿತರಣೆ (ಹೊಟೇಲ್‌ಮತ್ತುಅಂಗಡಿ)
ಕಾರ್ಖಾನೆಗೆಅನುಮತಿ ಪತ್ರ
ಜಾಹೀರಾತುಪರವಾನಗಿ
ನೀರಿನಸಂಪರ್ಕಕಡಿತ
ಕುಡಿಯುವನೀರಿನನಿರ್ವಹಣೆ(ಸಣ್ಣ ರಿಪೇರಿ)
ಬೀದಿ ದೀಪಗಳ ನಿರ್ವಹಣೆ
ಗ್ರಾಮನೈರ್ಮಲ್ಯನಿರ್ವಹಣೆ
ದಾಖಲೆಗಳ ವಿತರಣೆ (ಜನಸಂಖ್ಯೆ, ಬೆಳೆ, ಜಾನುವಾರು ಗಣತಿ, ಬಿಪಿಎಲ್ ಪಟ್ಟಿ)
ESCOMS ನಿರಾಕ್ಷೇಪಣಿಪತ್ರ
ಮನರಂಜನಾ ಪರವಾನಗಿ ನೀಡಿಕೆ ( ಹೊಸ/ಹೆಚ್ಚುವರಿ/ಬದಲಾವಣೆ)
aus 9/11 A-Form 9/11A
9/11 B-Form 9/11B
ರಸ್ತೆ ಅಗೆಯುವುದಕ್ಕಾಗಿ ಅನುಮತಿ
ಅಕುಶಲ ಕಾರ್ಮಿಕರಿಗೆ ಉದ್ಯೋಗ ಚೀಟಿಯನ್ನು ಒದಗಿಸುವುದು (ಎಂ.ಜಿ.ಎನ್.ಆರ್.ಇ.ಜಿ.ಎಸ್)
ಅಕುಶಲ ಕಾರ್ಮಿಕರಿಗೆ ಉದ್ಯೋಗವನ್ನು ಒದಗಿಸುವುದು (ಎಂ.ಜಿ.ಎನ್.ಆರ್.ಇ.ಜಿ.ಎಸ್)

tel share transformed

 

ಕಂದಾಯ ಇಲಾಖೆಯ 40 ಸೇವೆಗಳು :

ಜನಸಂಖ್ಯೆ ದೃಢೀಕರಣ ಪತ್ರ
ಜಾತಿ ಮತ್ತು ಆದಾಯ ದೃಢೀಕರಣ ಪತ್ರ
ಹಿಂದುಳಿದ ವರ್ಗಗಳ ಪ್ರಮಾಣ ಪತ್ರ (ಪ್ರವರ್ಗ-1)
ಅನುಸೂಚಿತ ಜಾತಿ ಅಥವಾ ಅನುಸೂಚಿತ ಪಂಗಡಗಳ ಪ್ರಮಾಣ ಪತ್ರ (ಪ.ಜಾ/ಪ.ಪಂ)
ಇತರೆ ಹಿಂದುಳಿದ ವರ್ಗಗಳ ದೃಢೀಕರಣ ಪತ್ರ (ಕೇಂದ್ರ)
ವಾಸಸ್ಥಳ ದೃಢೀಕರಣ ಪತ್ರ
ಆದಾಯ ದೃಢೀಕರಣ ಪತ್ರ 8. ಗೇಣಿ ರಹಿತ ದೃಢೀಕರಣ ಪತ್ರ 9. ವಿಧವಾ ದೃಢೀಕರಣ ಪತ್ರ
ಜೀವಂತ ದೃಢೀಕರಣ ಪತ್ರ
ವ್ಯವಸಾಯಗಾರರ ಕುಟುಂಬದ ಸದಸ್ಯ ದೃಢೀಕರಣ ಪತ್ರ
ಮರು ವಿವಾಹವಾಗದಿರುವ ದೃಢೀಕರಣ ಪತ್ರ
ಜಮೀನು ಇಲ್ಲದಿರುವ ದೃಢೀಕರಣ ಪತ್ರ
ಮೃತರ ಕುಟುಂಬದ ಜೀವಂತ ಸದಸ್ಯರ ದೃಢೀಕರಣ ಪತ್ರ
ನಿರುದ್ಯೋಗಿ ದೃಢೀಕರಣ ಪತ್ರ
ಸರ್ಕಾರಿ ನೌಕರಿಯಲ್ಲಿ ಇಲ್ಲದಿರುವ ದೃಢೀಕರಣ ಪತ್ರ
ವ್ಯವಸಾಯಗಾರರ ದೃಢೀಕರಣ ಪತ್ರ

ಆರೋಗ್ಯ ಕರ್ನಾಟಕ ಕಾರ್ಡ್ ವಿತರಣೆ.

ಎಲ್ಲರೂ ಉತ್ತಮ ಆರೋಗ್ಯವನ್ನು ಹೊಂದಬೇಕು. ಮತ್ತು ಅವರ ಆರ್ಥಿಕ ಪರಿಸ್ಥಿಯನ್ನು ದೂರ ಮಾಡಬೇಕು ಎಂಬ ನಿಟ್ಟಿನಲ್ಲಿ ಸರ್ಕಾರವು “ಆರೋಗ್ಯ ಕರ್ನಾಟಕ” ಯೋಜನೆಯನ್ನು ಆರಂಭಿಸಿದೆ.ಇದರಲ್ಲಿ ವಿವಿಧ ಆರೋಗ್ಯ ಯೋಜನೆಗಳ ಸಂಪನ್ಮೂಲವನ್ನು ಕ್ರೋಡೀಕರಿಸಲಾಗಿದೆ.ಅವುಗಳೆಂದರೆ, ವಾಜಪೇಯಿ ಆರೋಗ್ಯಶ್ರೀ, ಯಶಸ್ವಿನಿ ಯೋಜನೆ, ರಾಜೀವ್ ಆರೋಗ್ಯ ಭಾಗ್ಯ ಯೋಜನೆ, ರಾಷ್ಟ್ರೀಯ ಸ್ವಾಸ್ಥ್ಯ ಭೀಮ ಯೋಜನೆ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ, ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆ, ಇಂದಿರಾ ಸುರಕ್ಷಾ ಯೋಜನೆ ಇತ್ಯಾದಿಗಳು.

ಈ ಯೋಜನೆಗೆ ಇರಬೇಕಾದ ಅರ್ಹತೆ ಹಾಗೂ ಚಿಕಿತ್ಸೆಗೆ ದೊರೆಯುವ ಮೊತ್ತದ ವಿವರ ಹೀಗಿದೆ :

ಬಿಪಿಎಲ್ ಪಡಿತರ ಕಾರ್ಡು ಹೊಂದಿರುವ ಫಲಾನುಭವಿಗಳಿಗೆ ಒಂದು ವರ್ಷಕ್ಕೆ ರೂ.5 ಲಕ್ಷಗಳವರೆಗೆ ಉಚಿತ ಚಿಕಿತ್ಸೆ ದೊರೆಯುತ್ತದೆ.

ಹಾಗೆಯೇ ಎಪಿಎಲ್ ಕಾರ್ಡುದಾರರು ಆಥವಾ ಬಿಪಿಎಲ್ ಕಾರ್ಡು ಹೊಂದಿಲ್ಲದವರಿಗೆ ಸಹ-ಪಾವತಿ ಆಧಾರದ ಮೇಲೆ ಸರ್ಕಾರಿ ಪ್ಯಾಕೇಜ್‌ ದರದ 30% ರಷ್ಟು ಚಿಕಿತ್ಸಾ ವೆಚ್ಚ ದೊರೆಯುತ್ತದೆ.

ವಾರ್ಷಿಕ ಮಿತಿ ಪ್ರತಿ ಕುಟುಂಬಕ್ಕೆ ರೂ.1.50 ಲಕ್ಷ ಇರುತ್ತದೆ. ಹಾಗೆಯೇ ಈ ಯೋಜನೆಗೆ ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ನೀಡಿ ಚಿಕಿತ್ಸೆ ಪಡೆದುಕೊಳ್ಳಬಹುದು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಹಾಗೆಯೇ ಮುಖ್ಯವಾಗಿ ಈ ಯೋಜನೆಯಲ್ಲಿ ಇರುವ ಚಿಕಿತ್ಸೆಗಳು ಅಂದರೆ :

ಸಾಮಾನ್ಯ ದ್ವಿತೀಯ ಹಂತದ 291 ಚಿಕಿತ್ಸಾ ವಿಧಾನಗಳು
ಕ್ಲಿಷ್ಟಕರ ದ್ವಿತೀಯ ಹಂತದ 254 ಚಿಕಿತ್ಸಾ ವಿಧಾನಗಳು
ಮಾರಣಾಂತಿಕ ಕಾಯಿಲೆಗಳಾದ ಹೃದಯರೋಗ ಕ್ಯಾನ್ಸರ್, ನರರೋಗ, ಮೂತ್ರಪಿಂಡದ ಕಾಯಿಲೆ, ನವಜಾತ ಶಿಶುಗಳ ಕಾಯಿಲೆ ಮುಂತಾದ ತೃತೀಯ ಹಂತದ 900 ಚಿಕಿತ್ಸಾ ವಿಧಾನಗಳು 169 ತುರ್ತು ಚಿಕಿತ್ಸೆಗಳು ಮತ್ತು 36 ಉಪಚಿಕಿತ್ಸಾ ವಿಧಾನಗಳು ಸೇರಿ ಒಟ್ಟು 1650 ಚಿಕಿತ್ಸೆಗಳು ಈ ಯೋಜನೆಯಲ್ಲಿ ಲಭ್ಯವಿದೆ.
169 ತುರ್ತು ಚಿಕಿತ್ಸೆಗಳಿಗೆ ಯಾವುದೇ ರೆಫರಲ್ ಇಲ್ಲದೆ ನೇರವಾಗಿ ನೋಂದಾಯಿತ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬಹುದು.

ಆರೋಗ್ಯ ಕಾರ್ಡ್ ಎಲ್ಲಿ ಮತ್ತು ಎಷ್ಟು ಬೆಲೆಗೆ ನೀಡಲಾಗುತ್ತದೆ ?

ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ’ ಯೋಜನೆಯ ಅಡಿಯಲ್ಲಿ ಕಾರ್ಡ್‌ನ್ನು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ರೂ.10/- ಶುಲ್ಕ ನೀಡಿ ಪಡೆಯಬಹುದು.

ಹಾಗೆಯೇ ಬೆಂಗಳೂರು ಒನ್, ಕರ್ನಾಟಕ ಒನ್ ಮತ್ತು ಸೇವಾ ಸಿಂಧು ಕೇಂದ್ರಗಳಲ್ಲಿ ರೂ.35/- ಶುಲ್ಕ ನೀಡಿ ಪಡೆಯಬಹುದು.

ಈ ಆಯುಷ್ಮಾನ್ ಕಾರ್ಡ್ ಪಡೆಯಲು ಆಧಾರ್ ಕಾರ್ಡ್ ಮತ್ತು ಪಡಿತರ ಕಾರ್ಡ್‌ಗಳನ್ನು ನೀಡಿ ಆರೋಗ್ಯ ಕಾರ್ಡ್ ಪಡೆಯಬಹುದಾಗಿದೆ.

whatss

ನೋಂದಾಯಿತ ಆಸ್ಪತ್ರೆಗಳ ಮಾಹಿತಿಯ ಬಗ್ಗೆ ವಿವರ ಪಡೆಯಬೇಕೆಂದರೆ :

104 ರ ಕರೆ ಕೇಂದ್ರವನ್ನು ಸಂಪರ್ಕಿಸಿ ಸಹ ಮಾಹಿತಿ ನಿಮಗೆ ಬೇಕಾದ ಮಾಹಿತಿಯನ್ನು ಪಡೆಯಬಹುದು. ಅಷ್ಟೆ ಅಲ್ಲದೆ ಟೋಲ್ ಫ್ರೀ ಸಂಖ್ಯೆ: 1800 425 8330 ಗೆ ಕರೆ ಮಾಡಿ ತಿಳಿದುಕೊಳ್ಳಬಹುದು.

ಈ ಯೋಜನೆಯಲ್ಲಿ ಮುಖ್ಯವಾಗಿ ವಿಕಲಚೇತನರಿಗೂ ಕೂಡ ಗುರುತಿನ ಕಾರ್ಡ್ ವಿತರಣೆ ಮಾಡಲಾಗುತ್ತದೆ :

ವಿಶಿಷ್ಟ ಗುರುತಿನ ಚೀಟಿಯು ವಿಕಲಚೇತನ ವ್ಯಕ್ತಿಗಳಿಗೆ ಮಾತ್ರ ಸೀಮಿತವಾಗಿದೆ.
ವಿಕಲಚೇತನರ ರಾಷ್ಟ್ರ ಮಟ್ಟದ ಡ್ಯಾಟಾಬೇಸ್ ಸೃಜಿಸುವ ಆಶಯ ಹೊಂದಿದೆ.
ನಕಲು ಪ್ರತಿಗಳನ್ನು ವಿಶಿಷ್ಟ ಗುರುತಿನ ಚೀಟಿಯನ್ನು ಪಡೆಯುವುದರಿಂದ ವಿಕಲಚೇತನರು ಬಹುದಾಖಲೆಗಳನ್ನು ನಿರ್ವಹಿಸುವುದಾಗಲಿ, ಕೊಂಡ್ಯೂಯುವುದಾಗಲಿ ಮತ್ತು ಅದರ ಮಾಡಿಸುವುದಾಗಲಿ ಅಗತ್ಯವಿರುವುದಿಲ್ಲ. ಇದನ್ನು ಬಾಪೂಜಿ ಸೇವಾ ಕೇಂದ್ರಗಳ ಮೂಲಕ ಪಡೆಯಬಹುದು.
ವಿಕಲಚೇತರನರು ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಆನ್‌ಲೈನ್‌ನಲ್ಲಿ ಸಲ್ಲಿಸಿದ ಅರ್ಜಿಗಳನ್ನು ತುರ್ತಾಗಿ ವೈದ್ಯಕೀಯ ಪರೀಕ್ಷೆ ನಡೆಸುವುದು.

ಇದಕ್ಕಾಗಿ ನೀಡಬೇಕಾದ ಮುಖ್ಯ ಒದಗಿಸಬೇಕಾದ ದಾಖಲೆಗಳು ಈ ಕೇಳಗಿನಿಂತಿದೆ :

ಪಈಗಿನ ವರ್ಣಛಾಯಚಿತ್ರ (ಕಲರ್ ಫೋಟೋ) ಸ್ಕ್ಯಾನ್ ಪ್ರತಿ
ಹಸ್ತಾಕ್ಷರದ ಸ್ಕ್ಯಾನ್ ಪ್ರತಿ (ಕಡ್ಡಾಯವಿಲ್ಲ)
ವಿಳಾಸದ ಗುರುತಿನ ದಾಖಲೆ (Proof of Address)ಯ ಸ್ಕ್ಯಾನ್ ಪ್ರತಿ (ಆಧಾರ್/ವಾಹನಚಾಲನ ಪರವಾನಗಿ / ವಾಸ ದೃಢೀಕರಣ ಪತ್ರ, ಇತ್ಯಾದಿ)
ವ್ಯಕ್ತಿಗಳ ಗುರುತಿನ ದಾಖಲೆ (Proof of Identity) ಯ ಸ್ಕ್ಯಾನ್ ಪ್ರತಿ (ಆಧಾರ್ ಕಾರ್ಡ್ /ಪ್ಯಾನ್ ಕಾರ್ಡ್/ ವಾಹನಚಾಲನ ಪರವಾನಗಿ, ಇತ್ಯಾದಿ),
ವಿಕಲಚೇತನತೆಯ ದೃಢೀಕರಣ ಪತ್ರದ ಸ್ಕ್ಯಾನ್ ಪ್ರತಿ (ನಿಗದಿಪಡಿಸಿರುವ ವೈದ್ಯಕೀಯ ಪ್ರಾಧಿಕಾರದವರಿಂದ)
ಅರ್ಜಿ ಸಲ್ಲಿಸಿದ ನಾಲ್ಕು ವಾರದಲ್ಲಿ ವಿಕಲಚೇತನರುಗಳಿಗೆ ವಿಶಿಷ್ಟ ಗುರುತಿನ ಚೀಟಿಯನ್ನು ವಿತರಿಸಲು ಅಗತ್ಯ ಕ್ರಮ ಕೈಗೊಳ್ಳುವುದು.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!