ಇಪಿಎಫ್ ಸದಸ್ಯರು ಕಾಯುತ್ತಿದ್ದ 2023 – 24 ರ ಬಡ್ಡಿದರ(Interest rate) ಯಾವಾಗ ಕ್ರೆಡಿಟ್ ಮಾಡುತ್ತಾರೆ? ಈ ಕುರಿತ ಮಾಹಿತಿ ನಿಮ್ಮ ಮುಂದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಉದ್ಯೋಗಿಗಳ ಭವಿಷ್ಯ ನಿಧಿ (EPF), ಇದನ್ನು ಸಾಮಾನ್ಯವಾಗಿ ಪಿಎಫ್/ಪ್ರಾವಿಡೆಂಟ್ ಫಂಡ್ (PF/provident fund ) ಎಂದು ಕರೆಯಲಾಗುತ್ತದೆ. ನಿರಂತರವಾಗಿ ತಮ್ಮ ಸೇವೆಯನ್ನು ಸಲ್ಲಿಸುತ್ತಿರುವ ಉದ್ಯೋಗಿಗಳಿಗೆ ಕಡ್ಡಾಯ ಉಳಿತಾಯ ಮತ್ತು ನಿವೃತ್ತಿ ಯೋಜನೆ ಇದಾಗಿದೆ.
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಇಪಿಎಫ್‌ಒ ( Employees’ Provident Fund Organisation ) ಭವಿಷ್ಯ ನಿಧಿ ಠೇವಣಿಗಳಿಗೆ 2023-24 ರ ಆರ್ಥಿಕ ವರ್ಷದ ಬಡ್ಡಿ ದರವನ್ನು ಹೆಚ್ಚಿಸಿದೆ. EPF ತನ್ನ ಹಿಂದಿನ ವರ್ಷದ ದರ 8.15% ದಿಂದ 2023-24 ಕ್ಕೆ 8.25% ಗೆ ಬಡ್ಡಿ ದರವನ್ನು ಹೆಚ್ಚಿಸಿದೆ. ಆದರೆ ಇಪಿಎಫ್ ನ ಸದಸ್ಯರಿಗೆ ಬಡ್ಡಿದರ ಅವರ ಖಾತೆಗಳಿಗೆ ಕ್ರೆಡಿಟ್ ಆಗಿಲ್ಲ? ಇದಕ್ಕೆ ಕಾರಣ ಏನು? ಯಾವಾಗ ಕ್ರೆಡಿಟ್ ಆಗುತ್ತೆ ಹಾಗೂ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.
2023-2024 ರ EPF ಬಡ್ಡಿ ದರದ ಬಗ್ಗೆ ಮಾಹಿತಿ ನೀಡಿದ ಇಪಿಎಫ್ ಸಂಸ್ಥೆ :
ಇಪಿಎಫ್ ನ ಮಾಹಿತಿಯ ಪ್ರಕಾರ, ಈಗಾಗಲೇ ಈ ಬಡ್ಡಿ ದರದ ಕ್ರೆಡಿಟ್ ನ ಪ್ರಕ್ರಿಯೆಯನ್ನು ಆರಂಭಿಸಿದ್ದು. ಶೀಘ್ರದಲ್ಲೇ ಸದಸ್ಯರ ಖಾತೆಗೆ ಬಡ್ಡಿ ಕ್ರೆಡಿಟ್ ಆಗಲಿದೆ. ಹೌದು ಬಡ್ಡಿ ಕ್ರೆಡಿಟ್ ಆಗುವುದು ತಡವಾಗುತ್ತಿದೆ. ಆದರೆ ಈ ಕುರಿತು ಯಾರು ಹೆದರುವ ಹಾಗೂ ಗೊಂದಲ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಯಾಕೆಂದರೆ ಒಂದು ವೇಳೆ ಬಡ್ಡಿ ಕ್ರೆಡಿಟ್ ಆಗುವುದು ತಡವಾದರೂ ಅದನ್ನು ಪೂರ್ಣ ಪ್ರಮಾಣದಲ್ಲಿ ತಲಿಪಿಸುವ ನಿಟ್ಟಿನಲ್ಲಿ ಅದರ ಪ್ರಕ್ರಿಯೆ ಆರಂಭ ಮಾಡಲಾಗಿದೆ. ಇನ್ನು ಯಾವ ಸದಸ್ಯರಿಗೂ ಇದರಿಂದ ಯಾವುದೇ ರೀತಿಯ ನಷ್ಟ ಸಂಭವಿಸುವುದಿಲ್ಲ ಎಂದು ಇಪಿಎಫ್ ಈ ಕುರಿತಾಗಿ ತನ್ನ ನಿಲುವನ್ನು ತಿಳಿಸಿದೆ.
ಇಪಿಎಫ್ ಬ್ಯಾಲೆನ್ಸ್ ಪರಿಶೀಲಿಸುವುದು ( balance checking ) ಹೇಗೆ ಎಂಬುದರ ಬಗ್ಗೆ ತಿಳಿದು ಕೊಳ್ಳೋಣ ಬನ್ನಿ :
EPFO ನಿಂದ EPF ಖಾತೆಯನ್ನು ನಿರ್ವಹಿಸುವ ಉದ್ಯೋಗಿ ಈ ಕೆಳಗಿನ ನಾಲ್ಕು ವಿಧಾನಗಳನ್ನು ( 4 types ) ಬಳಸಿಕೊಂಡು ಖಾತೆಯ ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದು.
Umang ಅಪ್ಲಿಕೇಶನ್ ಬಳಸುವ ಮೂಲಕ
EPF ಸದಸ್ಯ ಇ-ಸೇವಾ ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ
ಮಿಸ್ ಕಾಲ್ ನೀಡುವ ಮೂಲಕ
SMS ಕಳುಹಿಸುವ ಮೂಲಕ
ಈ ನಾಲ್ಕೂ ವಿಧಾನಗಳಲ್ಲಿ ಇಪಿಎಫ್ ಬ್ಯಾಲೆನ್ಸ್ ಪರಿಶೀಲಿಸುವುದು ಹೇಗೆ ನೋಡೋಣ ಬನ್ನಿ.
UMANG ಅಪ್ಲಿಕೇಶನ್‌ನಲ್ಲಿ EPF ಬ್ಯಾಲೆನ್ಸ್ ಅನ್ನು ಹೇಗೆ ಪರಿಶೀಲಿಸುವುದು?
ಹಂತ 1: ಉಮಾಂಗ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.
ಹಂತ 2: ನಿಮ್ಮ ಮೊಬೈಲ್ ಸಂಖ್ಯೆಯಿಂದ ನೋಂದಾಯಿಸಿಕೊಳ್ಳಬೇಕು.
ಹಂತ 3: ಆಯ್ಕೆಗಳಿಂದ “EPFO” ಆಯ್ಕೆಮಾಡಿ
ಹಂತ 4: “ಪಾಸ್‌ಬುಕ್ ವೀಕ್ಷಿಸಿ” ( Passbook ) ಕ್ಲಿಕ್ ಮಾಡಿ.
ಹಂತ 5: ನಿಮ್ಮ UAN ಅನ್ನು ನಮೂದಿಸಿದ ನಂತರ, OTP ಪಡೆಯಲು ಕ್ಲಿಕ್ ಮಾಡಿ.
ಹಂತ 6: “ಲಾಗಿನ್” ( Login ) ಆಯ್ಕೆಮಾಡಿ. ನಿಮ್ಮ ಪಾಸ್‌ಬುಕ್ ಮತ್ತು ಇಪಿಎಫ್ ಬ್ಯಾಲೆನ್ಸ್ ಅನ್ನು ಪರದೆಯ ಮೇಲೆ ತೋರಿಸಲಾಗುತ್ತದೆ.
EPFO ಪೋರ್ಟಲ್ ಬಳಸಿಕೊಂಡು EPF ಬ್ಯಾಲೆನ್ಸ್ ಪರಿಶೀಲಿಸುವುದು ಹೇಗೆ :
ಹಂತ 1 : EPFO ವೆಬ್‌ಸೈಟ್‌ನ ಉದ್ಯೋಗಿ ವಿಭಾಗಕ್ಕೆ ಹೋಗಿ ಮತ್ತು “ಸದಸ್ಯ ಪಾಸ್‌ಬುಕ್” ಅನ್ನು ಕ್ಲಿಕ್ ಮಾಡಿ.
ಹಂತ 2 : ನಿಮ್ಮ UAN ಮತ್ತು ಪಾಸ್‌ವರ್ಡ್ ( password ) ನಮೂದಿಸುವ ಮೂಲಕ, ನೀವು PF ಪಾಸ್‌ಬುಕ್‌ಗೆ ಪ್ರವೇಶವನ್ನು ಪಡೆಯಬಹುದು.
ಹಂತ 3 : ಉದ್ಯೋಗಿ ಮತ್ತು ಉದ್ಯೋಗದಾತರ ಕೊಡುಗೆಗಳು, ಹಾಗೆಯೇ ಆರಂಭಿಕ ಮತ್ತು ಮುಕ್ತಾಯದ ಬಾಕಿಗಳನ್ನು ವಿವರಿಸಲಾಗುವುದು.
ಹಂತ 4 : ಯಾವುದೇ PF ವರ್ಗಾವಣೆಗಳ ಮೊತ್ತ, ಹಾಗೆಯೇ ರಚಿಸಲಾದ PF ಬಡ್ಡಿಯ ಮೊತ್ತವನ್ನು ತೋರಿಸಲಾಗುತ್ತದೆ. ಇಪಿಎಫ್ ಬ್ಯಾಲೆನ್ಸ್ ಪಾಸ್‌ಬುಕ್‌ನೊಂದಿಗೂ ಸಹ ವೀಕ್ಷಿಸಬಹುದು.
ಮಿಸ್ ಕಾಲ್ ನೀಡುವ ಮೂಲಕ
9966044425 ಸಂಖ್ಯೆಗೆ ಮಿಸ್ ಕಾಲ್ ನೀಡುವ ಮೂಲಕ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಬಹುದು. ಆದರೆ ಕರೆಯನ್ನು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಮಾತ್ರ ಮಾಡಬೇಕು. ಆಗ ಮಾತ್ರ ಮಾಹಿತಿ ದೊರೆಯುತ್ತದೆ. ಕರೆ ಮಾಡಿ ಎರೆಡು ರಿಂಗ್ ಆದ ಬಳಿಕ ಕಡಿತಗೊಳ್ಳುತ್ತದೆ.ಆ ಬಳಿಕ ನಿಮ್ಮ ಮೊಬೈಲ್ ಗೆ ಬ್ಯಾಲೆನ್ಸ್ ಮಾಹಿತಿ ಸಂದೇಶದ ಮೂಲಕ ಬರುತ್ತದೆ.
SMS ಕಳುಹಿಸುವ ಮೂಲಕ EPF ಬ್ಯಾಲೆನ್ಸ್ ಪರಿಶೀಲಿಸುವುದು ಹೇಗೆ?
ನಿಮ್ಮ UAN EPFO ನೊಂದಿಗೆ ನೋಂದಾಯಿಸಿದ್ದರೆ, 7738299899 ಗೆ SMS ಕಳುಹಿಸುವ ಮೂಲಕ ನಿಮ್ಮ ಇತ್ತೀಚಿನ ಕೊಡುಗೆ ಮತ್ತು PF ಬ್ಯಾಲೆನ್ಸ್ ( Balance ) ಕುರಿತು ನೀವು ಮಾಹಿತಿಯನ್ನು ಪಡೆಯಬಹುದು. ಒಂದು ವೇಳೆ ನಿಮಗೆ ಮಾಹಿತಿ ಕನ್ನದಲ್ಲಿ ಬೇಕಿದ್ದರೆ ENG ತೆಗೆದು KND ಎಂದು ಟೈಪ್ ಮಾಡಿ ಕಳುಹಿಸಿ ನಂತರ ನಿಮಗೆ ನಿಮ್ಮ ಇಪಿಎಫ್ ಬ್ಯಾಂಕ್ ಖಾತೆಯ ಮಾಹಿತಿ ದೊರೆಯುತ್ತದೆ.
UMANG ಅಪ್ಲಿಕೇಶನ್‌ನ ಮೂಲಕ ಚಂದಾದಾರರು ಈಗ ತಮ್ಮ PF ಬ್ಯಾಲೆನ್ಸ್ ಅನ್ನು ಮನೆಯಲ್ಲಿಯೇ ಸುಲಭವಾಗಿ ಪರಿಶೀಲಿಸಬಹುದು.ಇಪಿಎಫ್ ಒ (EPFO) ಅಧಿಕೃತ ವೆಬ್ ಸೈಟ್ epfindia.gov.in.
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿ
ಈ ಮಾಹಿತಿಗಳನ್ನು ಓದಿ
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




