Ola e-Scooty: ಓಲಾ ಸ್ಕೂಟರ್ಗಳ ಮೇಲೆ ಭರ್ಜರಿ ಡಿಸ್ಕೌಂಟ್! ಕಂಪ್ಲೀಟ್ ಮಾಹಿತಿ  ಇಲ್ಲಿದೆ!

IMG 20240623 WA0001

ನಿವೇನಾದರೂ ಓಲಾ ಸ್ಕೂಟರ್ ಗಳನ್ನು (Ola scooter) ಖರಿದಿಸಬೇಕೆಂದರೆ, ಇದು ಉತ್ತಮ ಸಮಯವಾಗಿದೆ. ಯಾಕೆಂದರೆ ಓಲಾ ನೀಡುತ್ತಿದೆ 15,000 ಸಾವಿರ ರೂಗಳ ರಿಯಾಯಿತಿ (Discount).

ಇಂದು ವಾಹನ ತಯಾರಿಕಾ ಕಂಪನಿಗಳ ನಡುವೆ ಪೈಪೋಟಿ ಇದ್ದು, ಇಂಧನ ಚಾಲಿತ ವಾಹನಗಳಿಗಿಂತ ಎಲೆಕ್ಟ್ರಿಕ್ ವಾಹನಗಳು ಹೆಚ್ಚು ಪ್ರಚಲಿತದಲ್ಲಿದೆ. ಅದರಲ್ಲೂ ಇಂದು ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು (electric scooter) ಕೊಂಡುಕೊಳ್ಳುವವರು ಹೆಚ್ಚಾಗಿದ್ದಾರೆ.ಯಾಕೆಂದರೆ ಆಕರ್ಷಕ ಶೈಲಿಯಲ್ಲಿ ಮತ್ತು ವಿವಿಧ ರಿಯಾಯಿತಿಯಲ್ಲಿ ಓಲಾ ಸ್ಕೂಟರ್ ಅಥವಾ ವಿವಿಧ ಎಲೆಕ್ಟ್ರಿಕ್ ಸ್ಕೂಟರ್ ಗಳ ಮೇಲೆ ರಿಯಾಯಿತಿ ನೀಡುತ್ತಿದೆ. ಇದೀಗ ಓಲಾ ಕಂಪನಿಯೊಂದು 15000 ರೂ. ಗಳಿಗೆ ರಿಯಾಯಿತಿ ನೀಡುತ್ತಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಭಾರೀ ಮಾರಾಟದೊಂದಿಗೆ (Big Sale) ಮುನ್ನುಗ್ಗುತ್ತಿರುವ ಓಲಾ :

ಓಲಾ ಎಲೆಕ್ಟ್ರಿಕ್ ಕಳೆದ ಮೇ ತಿಂಗಳಲ್ಲಿ ಬರೋಬ್ಬರಿ 37,191 ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ. ಅದೇ 2023ರ ಮೇ ತಿಂಗಳಿಗೆ ಹೋಲಿಕೆ ಮಾಡಿದರೆ (35,000 ಯುನಿಟ್) ಶೇಕಡ 6.26% ಬೆಳವಣಿಗೆ ಸಾಧಿಸಿದ್ದು, ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಒಟ್ಟಾರೆ ಶೇ49 ರಷ್ಟು ಪಾಲನ್ನು ಹೊಂದುವ ಮೂಲಕ ಮೊದಲ ಸ್ಥಾನದಲ್ಲಿ ಮುಂದುವರಿದಿದೆ.

ಇದೀಗ 15,000 ರೂ ಗಳ ವಿಶೇಷ ರಿಯಾಯಿತಿ (special discount) ನೀಡಿದ ಓಲಾ :

ಓಲಾ ಎಲೆಕ್ಟ್ರಿಕ್ ಸೀಮಿತ ಅವಧಿಗೆ ಇದೀಗ 15,000 ರೂ.ಗಳವರೆಗೆ ರಿಯಾಯಿತಿ ಘೋಷಿಸಿದೆ. ಜೂನ್ 20 ರಿಂದ 26 ರ ನಡುವೆ ಮಾನ್ಯವಾಗಿರುವ ಈ ಆಫರ್‌ಗಳು ಓಲಾ ಎಸ್ 1 ಶ್ರೇಣಿಯ (ola s1 range) ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೇಲೆ ನೀಡುತ್ತಿದೆ.

ರಿಯಾಯಿತಿ ವಿವರಗಳ (discount information) ಮಾಹಿತಿ ಹೀಗಿದೆ :

ಓಲಾ ಎಸ್ 1 ಎಕ್ಸ್ + ಮೇಲೆ 5,000 ರೂ.ಗಳ ಫ್ಲಾಟ್ ರಿಯಾಯಿತಿಯೊಂದಿಗೆ ಖರೀದಿಸಬಹುದಾಗಿದೆ. ಹಾಗೆಯೇ 5,000 ರೂ.ಗಳವರೆಗೆ ವಿನಿಮಯ ಬೋನಸ್ (exchange bonus) ಅನ್ನು ಸಹ ಪಡೆಯಬಹುದು. ಕಂಪನಿಯು ಜನಪ್ರಿಯ ಎಸ್ 1 ಏರ್ ಮತ್ತು ಇತ್ತೀಚಿನ ಎಸ್ 1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೇಲೆ 5,000 ರೂ.ಗಳವರೆಗೆ ಹೆಚ್ಚುವರಿ ರಿಯಾಯಿತಿ ಮತ್ತು 2,999 ರೂ.ಗಳ ಮೌಲ್ಯದ ಉಚಿತ ಓಲಾ ಕೇರ್ + ಅನ್ನು ಸಹ ನೀಡುತ್ತಿದ್ದು, ಇದು ಓಲಾ ಗ್ರಾಹಕರಿಗೆ ಗುಡ್ ನ್ಯೂಸ್ ಎನ್ನಬಹುದು.

ಓಲಾ ಎಸ್ 1 ಎಕ್ಸ್ ಸ್ಕೂಟರ್ ವಿತರಣೆ (marketing) ವಿವರ ಹೀಗಿದೆ :

ಹೊಸದಾಗಿ ಬಿಡುಗಡೆ ಮಾಡಿದ,  ಓಲಾ ಎಸ್ 1 ಎಕ್ಸ್ ಸ್ಕೂಟರ್ ವಿತರಣೆಗಳು ಕಳೆದ ತಿಂಗಳು ಪ್ರಾರಂಭವಾಗಿದ್ದು, ಇದನ್ನು 2 ಕಿಲೋವ್ಯಾಟ್, 3 ಕಿಲೋವ್ಯಾಟ್ ಮತ್ತು 4 ಕಿಲೋವ್ಯಾಟ್ ಎಂಬ ಮೂರು ಬ್ಯಾಟರಿ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರ ಬೆಲೆಗಳು 2 ಕಿಲೋವ್ಯಾಟ್ ರೂಪಾಂತರಕ್ಕೆ 74,999 ರೂ. ಆಗಿರುತ್ತದೆ. ಮತ್ತು ಟಾಪ್-ಸ್ಪೆಕ್ ಮಾದರಿಗೆ 99,999 ರೂ. ಬೆಲೆ ಇರುತ್ತದೆ.

ಹೊಸ ಓಲಾ ಸ್ಕೂಟರ್ ಗಳ ಬೆಲೆ (price) ಹೀಗಿದೆ :

ಓಲಾ ಎಸ್ 1 ಪ್ರೊ ಬೆಲೆ 1,29,999 ರೂ, ಎಸ್ 1 ಏರ್ ಬೆಲೆ 1,04,999 ರೂ, ಹಾಗೂ ಎಸ್ 1 ಎಕ್ಸ್ + ಬೆಲೆ 89,999 ರೂ. ಆಗಿರುತ್ತದೆ. ಓಲಾ ಎಲೆಕ್ಟ್ರಿಕ್ ತನ್ನ ಸಂಪೂರ್ಣ ಸ್ಕೂಟರ್‌ಗಳ ಬ್ಯಾಟರಿಗಳ ಮೇಲೆ ಎಂಟು ವರ್ಷಗಳ ಅಥವಾ 80,000 ಕಿ.ಮೀ ವಾರಂಟಿಯನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ನೀಡುತ್ತಿದೆ.

ಓಲಾ ಎಸ್ 1 ಶ್ರೇಣಿಯ ಸ್ಕೂಟರ್ ಖರೀದಿ ದಾರರರು ಗಮನಿಸಬೇಕಾದ ಅಂಶಗಳು :

ಓಲಾ ಎಸ್ 1 ಶ್ರೇಣಿಯ ಗ್ರಾಹಕರು 4,999 ರೂ.ಗಳಿಗೆ ಒಂದು ಲಕ್ಷ ಕಿ.ಮೀ.ವರೆಗೆ ಮತ್ತು 12,999 ರೂ. ಪಾವತಿಸುವ ಮೂಲಕ 1.25 ಲಕ್ಷ ಕಿ.ಮೀ.ವರೆಗೆ ವಾರಂಟಿಯನ್ನು ವಿಸ್ತರಿಸಿಕೊಳ್ಳಬಹುದಾಗಿದೆ. ಅಷ್ಟೇ ಅಲ್ಲದೆ, ಓಲಾ ಎಲೆಕ್ಟ್ರಿಕ್ 3 ಕಿಲೋವ್ಯಾಟ್ ಫಾಸ್ಟ್ ಚಾರ್ಜರ್ ಅನ್ನು ಅಕ್ಸೆಸೊರಿಯಾಗಿ ಮಾರಾಟ ಮಾಡುತ್ತಿದ್ದು, ಇದನ್ನು 29,999 ರೂ.ಗೆ ಖರೀದಿಸಬಹುದಾಗಿದೆ.

ಓಲಾ ಎಸ್ 1 ಬ್ಯಾಟರಿಯ ಕಾರ್ಯಕ್ಷಮತೆ (battery performance) :

ಓಲಾ ಎಸ್1 ಎಕ್ಸ್‌ನ 3 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಹೊಂದಿರುವ ಮಾದರಿಯು ಪೂರ್ತಿ ಚಾರ್ಜ್ ನಲ್ಲಿ 151 ಕಿ.ಮೀ ಓಡಲಿದ್ದು, 90 ಕೆಎಂಪಿಹೆಚ್ ಟಾಪ್ ಸ್ಪೀಡ್ ಹೊಂದಿದೆ. 4 ಕೆಡಬ್ಲ್ಯೂಹೆಚ್ ಬ್ಯಾಟರಿ ಒಳಗೊಂಡಿರುವ ಆವೃತ್ತಿಯು ಪೂರ್ತಿ ಚಾರ್ಜ್‌ನಲ್ಲಿ 190 ಕಿಲೋಮೀಟರ್ ಕ್ರಮಿಸುತ್ತದೆ.

3 ಕೆಡಬ್ಲ್ಯೂಹೆಚ್ (kWh) ಬ್ಯಾಟರಿ ಪ್ಯಾಕ್ ಹೊಂದಿರುವ ಮಿಡ್ ಲೆವೆಲ್ ಮಾಡೆಲ್  ಓಲಾ ಎಸ್1 ಏರ್ (Ola S1 Air) ಎಲೆಕ್ಟ್ರಿಕ್ ಸ್ಕೂಟರ್, ಸಂಪೂರ್ಣ ಚಾರ್ಜ್ ನಲ್ಲಿ 151 ಕಿ.ಮೀ ರೇಂಜ್ ನೀಡುತ್ತದೆ. 90 ಕಿ.ಮೀ ಟಾಪ್ ಸ್ವೀಡ್ ಹೊಂದಿದೆ.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!